Home
ಸುದ್ದಿಜಾಲ

Googleನಿಂದ ಹೊಸ ಫೀಚರ್‌ : ನಿಮ್ಮ ಆಪ್ತರಿಗೂ ಗೂಗಲ್ ಪಾಸ್‌ವರ್ಡ್‌ ಶೇರ್‌ ಮಾಡಬಹುದು!

ಇದು ಪಾಸ್‌ವರ್ಡ್‌ಗಳ (Password)ಯುಗ. ಸಾಕಷ್ಟು ಆನ್‌ಲೈನ್‌ ಅಕೌಂಟ್‌ಗಳು (Online Account), ಸಾಕಷ್ಟು ಪಾಸ್‌ವರ್ಡ್‌ಗಳು ಅಲ್ಲವೇ? ಒಬ್ಬ ವ್ಯಕ್ತಿ ಕನಿಷ್ಠ ಮೂರು ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯ. ಆದರೆ, ಐದಾರು ಪಾಸ್‌ವರ್ಡ್‌ ಹೇಗೆ ನೆನಪಿಟ್ಟುಕೊಳ್ಳಲು ಆಗುತ್ತೆ ಹೇಳಿ? ಅಂತವರಿಗೆ ಗೂಗಲ್ (Google) ಗುಡ್‌ನ್ಯೂಸ್‌ ಒಂದನ್ನು ಕೊಟ್ಟಿದೆ.

ಇಂಟರ್‌ನೆಟ್‌ ಬ್ರೌಸ್‌ ಮಾಡುವವರಿಗೆ ತಕ್ಷಣ ನೆನಪಾಗುವುದೇ ಗೂಗಲ್‌ ಕ್ರೋಮ್‌. ಅಷ್ಟರ ಮಟ್ಟಿಗೆ ಗೂಗಲ್‌ ಕ್ರೋಮ್‌ ತನ್ನ ಜಾಲವನ್ನು ವ್ಯಾಪಿಸಿಕೊಂಡಿದೆ. ಇದೀಗ ಗೂಗಲ್‌ ತನ್ನ ಕ್ರೋಮ್‌ ಬ್ರೌಸರ್‌ನಲ್ಲಿ ಹೊಸ ಫೀಚರ್ಸ್‌ವೊಂದನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಗೂಗಲ್‌ ತನ್ನ ಕ್ರೋಮ್‌ನಲ್ಲಿ ಸೇರ್ಪಡೆ ಮಾಡಿರುವ ವಿನೂತನ ಫೀಚರ್ಸ್‌ ಬಗ್ಗೆ ನಾವು ತಿಳಿಸಿಕೊಡ್ತೀವಿ. ಮುಂದೆ ಓದಿ.

Googleನಲ್ಲಿ ಪಾರ್ಸ್‌ವರ್ಡ್‌ ಶೇರ್‌ ಮಾಡಲು ಬಂತು ಹೊಸ ಫೀಚರ್!

ಹೌದು, ಅಂತೂ ಇಂತೂ ಗೂಗಲ್‌ ಮ್ಯಾನೇಜರ್, ಬಳಕೆದಾರರಿಗೆ ತಮ್ಮ ಕುಟುಂಬ ಸದಸ್ಯರು ಅಥವಾ ಅತೀ ಆಪ್ತರಿಗೆ ಗೂಗಲ್ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುವ ಅವಕಾಶ ನೀಡಿದೆ. ಗೂಗಲ್‌ ಕ್ರೋಮ್‌ ಬಳಕೆದಾರರಿಗೆ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗೂಗಲ್‌ ಈ ಹೊಸ ಫೀಚರ್ಸ್‌ ಅನ್ನು ಸೇರ್ಪಡೆ ಮಾಡಿದೆ. ನಿಮ್ಮ ಫ್ಯಾಮಿಲಿ ಗ್ರೂಪ್‌ನ ಸದಸ್ಯರೊಂದಿಗೆ ಮಾತ್ರ ನೀವು, ಪಾಸ್‌ವರ್ಡ್‌ಗಳನ್ನು ಶೇರ್‌ ಮಾಡಿಕೊಳ್ಳಬಹುದು.

ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಆಧ್ಯತೆ

ಪಾಸ್‌ವರ್ಡ್ ಶೇರ್‌ ಮಾಡಿಕೊಳ್ಳುವ ಸೌಲಭ್ಯ ಈಗ ತನ್ನ ಗೂಗಲ್ ಪಾಸ್‌ವರ್ಡ್‌ನಲ್ಲಿ ಲಭ್ಯವಿದೆ ಎಂದು ಗೂಗಲ್ ಖಚಿತಪಡಿಸಿದೆ. ಮೇ 2024 Play ಸೇವೆಗಳ ನವೀಕರಣದ ಭಾಗವಾಗಿ ಈ ಫೀಚರ್ಸ್‌ ಬಂದಿದೆ. ನಿಮ್ಮ ಕುಟುಂಬದ ಗ್ರೂಪ್‌ನ ಸದಸ್ಯರೊಂದಿಗೆ ಪಾಸ್‌ವರ್ಡ್‌ಗಳನ್ನು ಶೇರ್‌ ಮಾಡಿಕೊಳ್ಳಲು ಮಾತ್ರ ನಿಮಗೆ ಅನುಮತಿ ನೀಡುತ್ತದೆ. ಕಾರಣ, ಬಳಕೆದಾರರ ಸುರಕ್ಷತೆಗೆ ಗೂಗಲ್ ಹೆಚ್ಚಿನ ಆಧ್ಯತೆ ನೀಡುತ್ತಿದೆ.

ಬಳಕೆದಾರರು ಗೂಗಲ್‌ ಪಾಸ್‌ವರ್ಡ್‌ ಅನ್ನು ಹಂಚಿಕೊಂಡಾಗ, ನಿಮ್ಮ ಆಪ್ತರು (ಕುಟುಂಬದ ಸದಸ್ಯರು) ಅದರ ನಕಲನ್ನು ತಮ್ಮ ಗೂಗಲ್‌ ಪಾಸ್‌ವರ್ಡ್‌ ಮ್ಯಾನೇಜರ್‌ನಲ್ಲಿ ಸ್ವೀಕರಿಸಬಹುದು. ಆಗ, ನಿಮ್ಮ ಪಾಸ್‌ವರ್ಡ್‌ ಅವರಿಗೆ ಬಳಸಲು ರೆಡಿಯಾಗಿದೆ ಎಂದು ಗೂಗಲ್‌ ತನ್ನ ಪೇಜ್‌ನಲ್ಲಿ ತಿಳಿಸಿದೆ.

ಈ ಹೊಸ ಫೀಚರ್‌ ಬಳಕೆದಾರರಿಗೆ ಸುಲಭವೇ?

ಈ ಪಾಸ್‌ವರ್ಡ್‌ ಶೇರ್‌ ಮಾಡುವ ಹೊಸ ಫೀಚರ್‌ ಬಳಕೆದಾರರಿಗೆ ಹೇಗೆ ಸುಲಭವಾಗುತ್ತದೆ ಎಂಬುದಕ್ಕೆ ಗೂಗಲ್‌, ತನ್ನ ಹಿಂದಿನ ಉದಾಹರಣೆಗಳನ್ನು ಇಲ್ಲಿ ಪ್ರಸ್ತಾಪಿಸಿದೆ. ಇದು ಒಂದೇ ಅಕೌಂಟ್‌ ಮೂಲಕ ಡೇಕೇರ್‌ ಅನ್ನು ನಿರ್ವಹಿಸುವುದು ಅಥವಾ ತಮ್ಮ ಕುಟುಂಬದ ಸದಸ್ಯರಿಗೆ ಶಾಲಾ ಕಾರ್ಯಕ್ರಮಗಳಿಗೆ ಎಂಟ್ರಿ (ಪ್ರವೇಶ) ನೀಡುವುದನ್ನು ಒಳಗೊಂಡಿದೆ. ಆದರೆ, ಸ್ಟ್ರೀಮಿಂಗ್ ಸೇವೆಗಳು, ವಿಮೆ ಪಾಸ್‌ವರ್ಡ್‌, ಯುಪಿಎನ್‌ (VPN) ಹಾಗೂ ಇತ್ಯಾದಿಗಳಿಗೆ ಪಾಸ್‌ವರ್ಡ್‌ ಶೇರ್ ಮಾಡಿಕೊಳ್ಳಲು ಈ ಹೊಸ ಫೀಚರ್‌ ಸೂಕ್ತವಾಗಿದೆ ಎನ್ನಬಹುದು.

ಈ ಫೀಚರ್‌ ಪಡೆದಿರುವ ಬಗ್ಗೆ ಕನ್ಫರ್ಮ್‌ ಮಾಡಿಕೊಳ್ಳಿ

ಗೂಗಲ್‌ ಮ್ಯಾನೇಜರ್ ಈ ತಿಂಗಳ (ಮೇ, 2024) Google Play ಸೇವೆಗಳ ನವೀಕರಣದ (v24.20) ಭಾಗವಾಗಿ ಗೂಗಲ್ ಪಾಸ್‌ವರ್ಡ್ ಮ್ಯಾನೇಜರ್‌ನಲ್ಲಿ ಪಾಸ್‌ವರ್ಡ ಶೇರ್‌ ಮಾಡಿಕೊಳ್ಳುವ ಫೀಚರ್ ಘೋಷಿಸಿದೆ. ಬಳಕೆದಾರರು ಸ್ಮಾಟ್‌ಫೋನ್‌ಗಳಲ್ಲಿ ನಾವು ಈ ಫೀಚರ್‌ ಅನ್ನು ಪಡೆದುಕೊಂಡಿದ್ದೇವೆ ಎಂದು ಕನ್ಫರ್ಮ್‌ ಮಾಡಿಕೊಳ್ಳಬಹುದು.

ಬಳಕೆದಾರರು ವಿಶೇಷವಾಗಿ ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು ಗೂಗಲ್ ಅಕೌಂಟ್‌ ಹೊಂದಿರುವ ಯಾರಿಗಾದರೂ (ಪ್ಯಾಮಿಲಿ ಗ್ರೂಪ್‌ನ ಮೆಂಬರ್‌ಗಳಿಗೆ ಮಾತ್ರ) ನಿಮ್ಮ ಪಾಸ್‌ವರ್ಡ್ ಅನ್ನು ಶೇರ್‌ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸುತ್ತದೆ. ಪೋಷಕರು ತಮ್ಮ ಮಕ್ಕಳ ಅಪ್ಲಿಕೇಶನ್ ಬಳೆಕೆ ಬಗ್ಗೆ ಪರಿಶೀಲಿಸಬಹುದು. ಹಾಗಿದ್ರೆ, ಇನ್ನೇಕೆ ತಡ ಮಾಡ್ತೀರಿ. ನೀವು ಒಮ್ಮೆ ಈ ಫೀಚರ್‌ ಅನ್ನು ಬಳಕೆ ಮಾಡಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು.

Best Mobiles in India

English summary
Google Introduces Password Sharing for saved passwords with the May 2024 update to Google Play services
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+