ವೈರಲ್ ಸ್ಟೋರಿ...ಗೂಗಲ್‌ಗೆ ಈ ವಿಷಯ ಗೊತ್ತಿಲ್ಲಾ ಅಂತ ವಿಶ್ವವೇ ನಗುತ್ತಿದೆ!!

    ಕಳೆದ ಮೂರು ದಿನಗಳ ಹಿಂದಷ್ಟೆ ಗೂಗಲ್ ಎಂಬ ಮಾತ್ರಿಕ ಹುಟ್ಟಿ 20 ವರ್ಷ ಕಳೆದ ಸುದ್ದಿ ನಿಮ್ಮ ಕಿವಿಗೆ ಬಿದ್ದಿರಬಹುದು. ಸೆಪ್ಟೆಂಬರ್ 4 1998 ರಂದು ಗೂಗಲ್ ಹುಟ್ಟಿದ್ದ ಗೂಗಲ್ ಸಹ ಇದೇ ಮಾಹಿತಿಯನ್ನು ನೀಡಿದ್ದರಿಂದ ನಾವೆಲ್ಲರೂ ಇದೇ ವಿಷಯವನ್ನು ತಿಳಿದಿದ್ದೆವು. ಆದರೆ, ಜನ್ಮ ದಿನಾಚರಣೆಯ ನಿಖರ ದಿನವನ್ನು ತಾನೂ ಹುಡುಕಾಡುತ್ತಿರುವುದಾಗಿ ಗೂಗಲ್ ಹೇಳಿದೆ.

    ಹೌದು, ಇದು ಜೋಕ್ ಅಲ್ಲ.. ಆದರೆ, ಈ ಸುದ್ದಿ ನಿಮ್ಮ ಕಿವಿಗೆ ಬಿದ್ದರೆ ನೀವು ಖಂಡಿತಾ ಬಿದ್ದು ಬಿದ್ದು ನಗುತ್ತೀರಾ. ಏಕೆಂದರೆ, ನಮ್ಮ ಯಾವುದೇ ಪ್ರಶ್ನೆಗೂ ಕ್ಷಣಾರ್ಧದಲ್ಲಿ ಉತ್ತರಿಸುವ ಗೂಗಲ್‌ಗೆ ತನ್ನ ಜನ್ಮ ದಿನಾಚರಣೆಯ ನಿಖರ ದಿನಾಂಕ ಯಾವುದು ಎಂಬುದೇ ತಿಳಿದಿಲ್ಲ. ಈ ಬಗ್ಗೆ ಸ್ವತಃ ಗೂಗಲ್ ಸಂಸ್ಥೆ ತನ್ನ ಅಧಿಕೃತ ಬ್ಲಾಗ್ ನಲ್ಲಿ ಬರೆದುಕೊಂಡಿರುವುದು ಈಗ ವೈರಲ್ ಆಗಿದೆ.

    ವೈರಲ್ ಸ್ಟೋರಿ...ಗೂಗಲ್‌ಗೆ ಈ ವಿಷಯ ಗೊತ್ತಿಲ್ಲಾ ಅಂತ ವಿಶ್ವವೇ ನಗುತ್ತಿದೆ!!

    20ನೇ ವರ್ಷದ ಸಂಭ್ರಮದ ನಿಮಿತ್ತ ತನ್ನ ಬ್ಲಾಗ್ ನಲ್ಲಿ ಗೂಗಲ್ ಲೇಖನ ಪ್ರಕಟಿಸಿದೆ. ಈ ಲೇಖನದಲ್ಲಿ ಹಲವು ಅಚ್ಚರಿದಾಯಕ ಅಂಶಗಳನ್ನು ಹೇಳಿಕೊಂಡಿರುವ ಗೂಗಲ್, ಸೆಪ್ಟೆಂಬರ್ 4ರಂದು ಅಧಿಕೃತವಾಗಿ ಗೂಗಲ್ ಜನ್ಮ ದಿನಾಚರಣೆಯನ್ನು ಆಚರಿಸುತ್ತದೆಯಾದರೂ, ಇಂದಿಗೂ ತಾನು ಜನ್ಮ ತಾಳಿದ ನಿಖರ ದಿನಕ್ಕಾಗಿ ಶೋಧ ನಡೆಯುತ್ತಿದೆ ಎಂದು ಲೇಖನದಲ್ಲಿ ಪ್ರಕಟಿಸಿದೆ.

    ಇದಕ್ಕಿಂತ ಮತ್ತೊಂದು ಆಶ್ಚರ್ಯಕರ ವಿಷಯವೆಂದರೆ, ದಶಕಗಳ ಹಿಂದೆ ಸೆಪ್ಟೆಂಬರ್ 27ರಂದು ಜನ್ಮ ದಿನಾಚರಣೆ ಆಚರಿಸಲಾಗುತ್ತಿತ್ತು ಎಂದು ಗೂಗಲ್ ಸಂಸ್ಥೆ ತಿಳಿಸಿದೆ. ಗೂಗಲ್ ಇದೀಗ ಆಲ್ಫಾಬೆಟ್ ಭಾಗವಾಗಿದ್ದು, 2015ರಲ್ಲಿ ನಮ್ಮ ಮಾತೃಸಂಸ್ಥೆ ಅಸ್ತಿತ್ವಕ್ಕೆ ಬಂದಿತ್ತು. ಈಗಷ್ಟೇ ನಾವು ಜನ್ಮ ದಿನಾಚರಣೆ ಆಚರಿಸಿದ್ದು, ನಮ್ಮ ಬೆಳವಣಿಗೆ ಖುಷಿ ತಂದಿದೆ ಎಂದು ಹೇಳಿಕೊಂಡಿದೆ.

    ನಮ್ಮ ನೂತನ ತಂತ್ರಜ್ಞಾನ ಶೋಧ ಹೀಗೆ ಮುಂದುವರೆಯಲಿದ್ದು, ಪ್ರಮುಖವಾಗಿ ಕೃತಕ ಬುದ್ದಿಮತ್ತೆಯನ್ನು ಮತ್ತಷ್ಟು ಪ್ರಬಲಗೊಳಿಸುವ ಕಾರ್ಯ ನಿರಂತರವಾಗಲಿದೆ ಎಂದು ಗೂಗಲ್ ತನ್ನ ಗ್ರಾಹಕರಿಗೆ ಹೇಳಿದೆ. ಗೂಗಲ್ ಹುಟ್ಟಿನಿಂದ ಇಲ್ಲಿಯವರೆಗೂ ಗೂಗಲ್ ಇಂತಹ ಹಲವು ಸೀಕ್ರೇಟ್ ವಿಷಯಗಳನ್ನು ಹೊಂದಿದ್ದು, ಅವುಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    ಗೂಗಲ್ ಹುಟ್ಟಿದ್ದು ಹೇಗೆ?

    ಅಮೆರಿಕದ ಪ್ರತಿಷ್ಠಿತ ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್‌ ಹಾಗೂ ಸೆರ್ಗಿ ಬ್ರಿನ್‌ ಅವರು ಗೂಗಲ್ ಎಂಬ ಮಾಯೆಯನ್ನು ಸೆಪ್ಟೆಂಬರ್ 4 1998 ರಂದು ಹುಟ್ಟುಹಾಕಿದರು. ಇಂಟರ್ನೆಟ್ ಜಾಲದಲ್ಲಿನ ಮಾಹಿತಿಯನ್ನು ಸುಲಭವಾಗಿ ವರ್ಗೀಕರಿಸಿಕೊಳ್ಳುವ ಸೌಲಭ್ಯ ನಿರ್ಮಿಸುವ ಹಂಬಲದೊಂದಿಗೆ ಗೂಗಲ್ ಜನ್ಮತಾಳಿತ್ತು. "ಗೂಗಲ್‌' ಎಂದು ಪ್ರಖ್ಯಾತವಾಗುವ ಮುನ್ನ 'ಬ್ಯಾಕ್‌ ರಬ್' ಎಂಬ ವ್ಯವಸ್ಥೆ ಗೂಗಲ್‌ನ ಮೂಲಾಧಾರವಾಗಿತ್ತು.

    ಗೂಗಲ್ ಎಂಬ ಹೆಸರೇಕೆ ಬಂತು?

    ನಿಮಗೆ ಅಕ್ಷಯಪಾತ್ರಯಲ್ಲಿ ಎಂದಿಗೂ ಮುಗಿಯದೇ ಇರುವ ಇಂಕನ್ನು ಕೊಟ್ಟು, ಅಪರಿಮಿತ ಶಕ್ತಿ, ಆಯುಷ್ಯಗಳೆಲ್ಲವನ್ನು ವರವನ್ನು ನೀಡಿ ಸಾಮಾನ್ಯ ಸಂಖ್ಯೆ 1ರ ಮುಂದೆ ಎಷ್ಟು ಸೊನ್ನೆಯಗಳನ್ನು ಬರೆಯುತ್ತಿದ್ದರೆ, ಅಂದರೆ ನಮ್ಮ ಬ್ರಹ್ಮಾಂಡ ಹುಟ್ಟಿ ಸಾಯುವವರೆಗೂ ಬರೆದರೂ ಅದಕ್ಕಿಂತಲೂ ಹೆಚ್ಚು ಪಟ್ಟನ್ನು ಗೂಗಲ್ ಎನ್ನುತ್ತಾರೆ. ಸಿಂಪಲ್ ಆಗಿ `1' ರ ನಂತರ ಸೊನ್ನೆಗಳನ್ನು ಹಾಕುತ್ತಲೇ ಹೋದರೆ ಯಾವ ಸಂಖ್ಯೆ ಸಿಗುತ್ತದೆ? ಇಷ್ಟು ದೊಡ್ಡ ಸಂಖ್ಯೆಗೆ ಹೆಸರಿದೆಯೆ ಎನ್ನುತ್ತೀರಾ? ಇದೆ. ಅದೇ `ಗೂಗಲ್'!

    ಭವಿಷ್ಯಗಳ ಜನಕ ಗೂಗಲ್!

    ಮಾನವನಿಗೆ ಭವಿಷ್ಯದಲ್ಲಿ ಏನು ಬೇಕು ಎಂದು ಯಾವಾಗಲೂ ಹುಡುಕುವ ಯತ್ನದಲ್ಲಿಯೇ ಗೂಗಲ್ ಗಮನಹರಿಸುತ್ತಿದೆ. ಗೂಗಲ್‌ ಮ್ಯಾಪ್ಸ್, ಗೂಗಲ್ ಕ್ಲೌಡ್, ಗೂಗಲ್ ಡಾಕ್ಟ್, ಜಿಮೇಲ್, ಗೂಗಲ್ ತೇಜ್, ಗೂಗಲ್ ಹೋಸ್ಟ್, ಗೂಗಲ್, ಗೂಗಲ್ ಪ್ಲೇ, ಯೂಟ್ಯೂಬ್, ಗೂಗಲ್ ಡ್ರೈವ್...ಹೀಗೆ ಹತ್ತಾರು ಭವಿಷ್ಯದ ಸೇವೆಗಳನ್ನು ಗೂಗಲ್ ಒದಗಿತ್ತಿದೆ. ಪ್ರಯಾಣಿಸುವ ಸಮಯದಲ್ಲಿ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಇದೆ ಎಂದು ಹೇಳುವಷ್ಟು ಗೂಗಲ್ ಬೆಳೆದುನಿಂತಿದೆ. ನಿಮಗೆ ಬೇಕಾದ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಒದಗಿಸುತ್ತಿದೆ.

    ಗೂಗಲ್ ಶಕ್ತಿಯೇ ಅದರ ಬುದ್ದಿವಂತಿಕೆ.!

    ಇಂದು ನಾವೆಲ್ಲಾ ಕೇಳುತ್ತಿರುವ ಕೃತಕಬುದ್ದಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ಪ್ರಪಂಚಕ್ಕೆ ಗೂಗಲ್ ಹತ್ತಾರು ವರ್ಷಗಳ ಹಿಂದೆಯೇ ಕಾಲಿಟ್ಟಿದೆ. ಹುಡುಕಾಟಕ್ಕೆಂದೇ ನಿರ್ಮಿತವಾದ ವಿಶೇಷ ಆಲ್ಗಾರಿದಮ್ ಅನ್ನು ಗೂಗಲ್ ಹೊಂದಿದೆ. ಈ ವಿಶೇಷ ಆಲ್ಗಾರಿದಮ್ ಗೂಗಲ್‌ನ ಮೆದುಳಾಗಿದ್ದು, ಈ ಮಾಹಿತಿಯನ್ನು ಗೂಗಲ್ ಯಾವುದೇ ಕಾರಣಕ್ಕೂ ಇತರರಿಗೆ ಬಿಟ್ಟುಕೊಡುವುದಿಲ್ಲ. ಇದು ಯಕ್ಷಗುಟ್ಟಾಗಿದ್ದು, ಇದೇ ಇದರ ಶಕ್ತಿ. ಇಂತಹ ಕೃತಕ ಬುದ್ಧಿಮತ್ತೆ ಪ್ರೋಗ್ರಾಮ್‌ಗಳೇ ಜನರ ಬೇಡಿಕೆಯನ್ನು ಸರಾಗವಾಗಿ ಪೂರೈಸುತ್ತಿವೆ.

    ಇಂದು ವಿಶ್ವ ದಿಗ್ಗಜ ಗೂಗಲ್!

    ಬ್ರ್ಯಾಂಡ್ ಫೈನಾನ್ಸ್ ಎಂಬ ಫೈನಾನ್ಸ್ ಕನ್ಸಲ್ಟೆನ್ಸಿ ನೀಡಿರುವ ವರದಿ ಪ್ರಕಾರ ಇಂದು ಗೂಗಲ್ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಬೆಲೆಯನ್ನು ಹೊಂದಿರುವ ಮೂರನೇ ಅತಿದೊಡ್ಡ ಕಂಪೆನಿಯಾಗಿದೆ. ಅಂದಾಜೂ $ 120.9 ಬಿಲಿಯನ್‌ಗಿಂತಲೂ ಹೆಚ್ಚು ಒಟ್ಟು ಮೌಲ್ಯವನ್ನು ಗೂಗಲ್ ಒಡೆತನದ ಆಲ್ಫಾಬೀಟ್ ಸಂಸ್ಥೆ ಹೊಂದಿದೆ. ಕೇವಲ 20 ವರ್ಷಗಳಲ್ಲಿಯೇ ವಿಶ್ವದ ಇತರೆ ಕಂಪೆನಿಗಳನ್ನು ಮೀರಿ ಬೆಳೆದ ಗೂಗಲ್ ಭವಿಷ್ಯದಲ್ಲಿ ನಂ.1 ಟೆಕ್ ಕಂಪೆನಿಯಾಗುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಿವೆ ವರದಿಗಳು.

    ಆಗಲೇ ಮಾರಾಟಕ್ಕಿತ್ತು ಗೂಗಲ್!

    ಗೂಗಲ್ ಹುಟ್ಟಿ ಸ್ವಲ್ಪ ಮುನ್ನೆಲೆಗೆ ಬರುತ್ತಿರುವ ಸಮಯದಲ್ಲಿಯೇ ಗೂಗಲ್ ಅನ್ನು ಮಾರಾಟಕ್ಕೆ ಇಡಲಾಗಿತ್ತು. ಆದರೆ, ಗೂಗಲ್ ಬೆಲೆಯನ್ನು ಯಾಹೂ ತಿಳಿಯಲಿಲ್ಲ. 2002ರಲ್ಲಿ ಗೂಗಲ್ ಅನ್ನು ಯಾಹೂ ಖರೀದಿಸಲು ಪ್ರಯತ್ನಿಸಿದಾಗ, ಯಾಹೂ 20ಸಾವಿರ ಕೋಟಿ ರೂಪಾಯಿಗಳ ಪ್ರಸ್ತಾಪನೆ ಇಟ್ಟಿತ್ತು. ಆದರೆ ಗೂಗಲ್ ಕೇವಲ 33ಸಾವಿರ ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿತ್ತು. ನಿಮಗೆ ತಿಳಿದಿರಲಿ. ಒಂದು ಕಾಲದ ದಿಗ್ಗಜ ಯಾಹೂ 2018ರಲ್ಲಿ ಮಾರಾಟವಾಗಿದ್ದು, ಕೇವಲ 20ಸಾವಿರ ಕೋಟಿಗೆ.!

    ಗೂಗಲ್‌ ದಿಗ್ಗಜನಾಗಲು ಕಾರಣವೇನು?

    ಆಗ ಇದ್ದ ಸರ್ಚ್ ಎಂಜಿನ್‌ಗಳು ಕೇವಲ ಪಠ್ಯ ಪುಟಗಳನ್ನಷ್ಟೇ ನೀಡುತ್ತಿದ್ದ ಸಂದರ್ಭದಲ್ಲಿ, ಗೂಗಲ್‌ ಹೆಚ್ಚಿನದನ್ನು ನೀಡಿತು, ನಕಾಶೆಗಳು, ಸುದ್ದಿ ಲೇಖನಗಳು, ಪುಸ್ತಕಗಳಲ್ಲಿನ ಉಲ್ಲೇಖಗಳು, ವಿಡಿಯೋಗಳು, ಪ್ರಬಂಧಗಳು, ಬ್ಲಾಗ್‌ ಬರಹಗಳು, ಆಂಡ್ರಾಯ್ಡ್ ಹೀಗೆ ಹತ್ತಾರು ಸೇವೆಗಳನ್ನು ನೀಡಿತು. ಆಂಡ್ರಾಯ್ಡ್ ಮೂಲಕ ಮಾರುಕಟ್ಟೆ ತಂತ್ರವನ್ನು ಹೆಣೆದು ಪ್ರತಿಯೋರ್ವರ ಕೈಯಲ್ಲೂ ಸೇರಿಕೊಂಡಿತು. ಜಿಮೇಲ್, ಮ್ಯಾಪ್ಸ್, ಯೂಟ್ಯೂಬ್ ಮೂಲಕ ಜನರ ಅವಿಭಾಜ್ಯ ಅಂಗವಾಗಿ, ಅಂತರ್ಜಾಲ ಜಗತ್ತಿನ ದಿಗ್ಗಜನಾಗಿ ಬೆಳೆದುನಿಂತಿತು.

    ಭಾರತದಲ್ಲಿ ಗೂಗಲ್!

    ಭಾರತವು ಅಂತರಾಷ್ಟ್ರೀಯ ಪ್ರಪಂಚಕ್ಕೆ ತೆರೆದುಕೊಂಡ ನಂತರ ಗೂಗಲ್ ಸೇವೆಯನ್ನು ಹೆಚ್ಚಾಗಿಯೇ ಬಳಸಿಕೊಂಡಿದೆ. ಇದಕ್ಕೆ ಪ್ರತಿಫಲವಾಗಿ ಗೂಗಲ್ ಕೂಡ ಸಾವಿರಾರು ಕೊಟಿಗಳಷ್ಟು ಹಣವನ್ನು ದುಡಿದುಕೊಂಡಿದೆ. ಭಾರತದಲ್ಲಿ 2004ರಿಂದ ಕಾರ್ಯನಿರ್ವಹಿಸುತ್ತಿರುವ ಗೂಗಲ್ ಭಾರತ ಸರ್ಕಾರದೊಂದಿಗೆ ಸಾಮರಸ್ಯ ಕಾಪಾಡಿಕೊಂಡು ಬಂದಿದೆ.

    ಗೂಗಲ್ ಮೇಲೆ ಅಪನಂಬಿಕೆ ಸಹ ಇದೆ.!

    ಗೂಗಲ್ ತನ್ನ ಸರ್ಚ್ ಎಂಜಿನ್ ಸೇವೆ ಬಳಸಿದವರ ಅನುಭವವನ್ನು ನೆನಪಿಟ್ಟುಕೊಂಡು ಎಲ್ಲಾ ಮಾಹಿತಿಯನ್ನು ಶೇಖರಿಸಿಟ್ಟುಕೊಂಡಿರುತ್ತದೆ. ಅದರ ಆಧಾರದ ಮೇಲೆ ಪ್ರತೀ ಬಾರಿ ಸುಧಾರಿತ ಫ‌ಲಿತಾಂಶವನ್ನು ಗೂಗಲ್‌ಗೆ ನೀಡಲು ಸಾಧ್ಯವಾಗುತ್ತದೆ ಎನ್ನಲಾಗುತ್ತದೆ. ಆದರೆ, ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಗೂಗಲ್ ಅವರ ಒಪ್ಪಿಗೆ ಇಲ್ಲದಿದ್ದರೂ ಪಡೆದುಕೊಳ್ಳುತ್ತದೆ ಮತ್ತು ಗೂಗಲ್ ಜಾಹಿರಾತುಗಳನ್ನು ತೋರಿಸುವಾಗ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದೆ ಎನ್ನುವ ಮಾತುಗಳಿವೆ. ಇವು ಸಾಬೀತಾಗಿವೆ ಕೂಡ.

    ಹಣ ಗಳಿಕೆಯಲ್ಲೂ ಮುಂದು ಗೂಗಲ್!

    ಬಹುತೇಕ ತನ್ನೆಲ್ಲಾ ಸೇವೆ, ಸೌಲಭ್ಯಗಳನ್ನು ಉಚಿತವಾಗಿ ನೀಡುವ ಗೂಗಲ್‌ ಹಣವನ್ನು ಹೇಗೆ ಗಳಿಸುತ್ತದೆ ಎಂದು ಈವರೆಗೂ ಹಲವರಿಗೆ ತಿಳಿದಿಲ್ಲ. ತನ್ನ ಸೇವೆಗಳಲ್ಲಿ ಪ್ರೀಮಿಯಂ ಸೇವೆಗಳನ್ನು ಬಳಕೆ ಮಾಡಲು ಗೂಗಲ್ ಶುಲ್ಕ ವಿಧಿಸುತ್ತದೆ. ಇದು ಸಾಮಾನ್ಯರಿಗೆ ಹೊರೆಯಾಗುವುದಿಲ್ಲ. ಆದರೆ, ಸಾಮಾನ್ಯರಿಗೆ ಜಾಹಿರಾತುಗಳನ್ನು ತೋರಿಸುವ ಮೂಲಕ ಗೂಗಲ್ ಹಣಗಳಿಸುತ್ತದೆ. ಅದು ಕೂಡ ಸಾಮಾನ್ಯರಿಗೆ ಏನು ಬೇಕಾಗಿದೆಯೋ ಅದೇ ಜಾಹಿರಾತನ್ನು ಗೂಗಲ್ ಅವರಿಗೆ ತೋರಿಸುತ್ತದೆ. ಇವೆಲ್ಲವೂ ಸಾಮಾನ್ಯ ವಿಷಯಗಳಲ್ಲ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    English summary
    But the company itself doesn't count as its 20th birthday....The exact datewhen we celebrate our birthday has. to know more visit to kannada.gizbot.com
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more