ಗೂಗಲ್ ಪಿಕ್ಸೆಲ್ ಫೋನ್ ಸೇರಿದ ಜನಪ್ರಿಯ ಫೀಚರ್ಸ್: ಹೊಸ ಅಪ್ಡೇಟ್‌ನಲ್ಲಿ ಏನಿದೆ
ಗೂಗಲ್ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಅಪ್ಡೇಟ್ ಮೂಲಕ ಪಿಕ್ಎಲ್ ಫೀಚರ್ ಡ್ರಾಪ್ ಫೀಚರ್ಸ್ ಪರಿಚಯಿಸಲು ಮುಂದಾಗಿದೆ. ಇದಲ್ಲದೆ ತನ್ನ ಇತ್ತೀಚಿನ ಅಪ್‌ಡೇಟ್‌ನಲ್ಲಿ ಹಳೆಯ Pixel 7 ಮತ್ತು Pixel 7 Pro ಸ್ಮಾರ್ಟ್‌ಫೋನ್‌ಗಳಿಗೆ ಸರ್ಕಲ್ ಟು ಸರ್ಚ್ ಫೀಚರ್ಸ್ ಹೊರತಂದಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಸರ್ಕಲ್ ಟು ಸರ್ಚ್ ಇದೀಗ ಗೂಗಲ್ ಪಿಕ್ಸೆಲ್ ಮೊಬೈಲ್‌ಗಳಲ್ಲಿ ಕೂಡ ಲಭ್ಯವಾಗಲಿದೆ. ಇಂದಿನಿಂದ ಆಂಡ್ರಾಯ್ಡ್ 14 ಚಾಲನೆಯಲ್ಲಿರುವ ಬೆಂಬಲಿತ ಸಾಧನಗಳು ಮತ್ತು ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೆ ಹೊಸ ಪಿಕ್ಸೆಲ್ ಫೀಚರ್ ಡ್ರಾಪ್ ಹೊರತರುತ್ತಿದೆ. ಹಾಗಾದ್ರೆ ಗೂಗಲ್ ಹೊಸ ಅಪ್ಡೇಟ್‌ನಲ್ಲಿ ಎನೆಲ್ಲಾ ಪರಿಚಯಿಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಇಂದಿನಿಂದ ಆಂಡ್ರಾಯ್ಡ್ 14 ಚಾಲನೆಯಲ್ಲಿರುವ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೆ ಹೊಸ ಪಿಕ್ಸೆಲ್ ಫೀಚರ್ ಡ್ರಾಪ್ ಹೊರತರುತ್ತಿದೆ. ಇದಲ್ಲದೆ Pixel 7 ಸರಣಿಯು ಬಹು ನಿರೀಕ್ಷಿತ ಸರ್ಚ್ ಟು ಸರ್ಕಲ್ ಫೀಚರ್ಸ್ ಅನ್ನು ಕೂಡ ಪಡೆಯುತ್ತದೆ. ಈ ಫೀಚರ್ಸ್ ಯಾವುದೇ ಚಿತ್ರ, ಪಠ್ಯ ಅಥವಾ ವೀಡಿಯೊದ ಬಗ್ಗೆ ಮಾಹಿತಿಯನ್ನು ಹುಡುಕುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಬಳಕೆದಾರರು ಇಂಟರ್‌ಫೇಸ್‌ನಲ್ಲಿ ಎಲ್ಲಿಯಾದರೂ ಪಿಕ್ಸೆಲ್ ಹೋಮ್ ಬಟನ್ ಅಥವಾ ನ್ಯಾವಿಗೇಷನ್ ಬಾರ್ ಅನ್ನು ದೀರ್ಘವಾಗಿ ಒತ್ತಿ ಮತ್ತು ಅವರು ಹೆಚ್ಚಿನ ಮಾಹಿತಿ ಬಯಸುವ ಅಂಶವನ್ನು ಸರಳವಾಗಿ ವೃತ್ತಿಸಬೇಕಾಗುತ್ತದೆ.
ಇನ್ನು ಹೊಸ ಅಪ್‌ಡೇಟ್ Android 14 ಚಾಲನೆಯಲ್ಲಿರುವ ಎಲ್ಲಾ Pixel ಫೋನ್‌ಗಳಿಗೆ ಸುಧಾರಿತ ಕಾಲ್ ಸ್ಕ್ರೀನ್ ಅನ್ನು ಸಹ ತರುತ್ತದೆ. ಕರೆ ಮಾಡಿದವರು ಮೌನವಾಗಿರುವಾಗ ಬಳಕೆದಾರರು ಕಾಲ್ ಸ್ಕ್ರೀನ್‌ನಲ್ಲಿ Hello ಕಾರ್ಡ್ ಅನ್ನು ಕಾಣಬಹುದಾಗಿದೆ. ಇದು ಕರೆ ಮಾಡುವವರನ್ನು ಮಾತನಾಡಲು ಪ್ರೇರೇಪಿಸಲಿದೆ. ಒಂದು ವೇಳೆ ಬಳಕೆದಾರರು ಸ್ಕ್ರೀನ್ ಕರೆಗೆ ತಕ್ಷಣವೇ ಉತ್ತರಿಸಲು ಸಾಧ್ಯವಾಗದಿದ್ದರೆ, ನೀವು ಕಾರ್ಯನಿರತರಾಗಿರುವಿರಿ ಎಂದು ಕರೆ ಮಾಡುವವರಿಗೆ ಗೂಗಲ್ ಅಸಿಸ್ಟೆಂಟ್ ತಿಳಿಸಲಿದೆ.

ಇನ್ನು ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸದಾಗಿ ಹೆಚ್ಚಿನ ರೆಸಲ್ಯೂಶನ್ ವೀಡಿಯೊಗಳು ಮತ್ತು ಚಿತ್ರಗಳನ್ನು ರೀಲ್‌ಗಳಾಗಿ ಪೋಸ್ಟ್ ಮಾಡುವ ಸಾಮರ್ಥ್ಯವನ್ನು ಸಹ ಸೇರ್ಪಡೆ ಮಾಡಲಾಗಿದೆ. Pixel ಫೋನ್ ಬಳಕೆದಾರರು ಇದೀಗ 10-ಬಿಟ್ HDR ವೀಡಿಯೊಗಳನ್ನು ನೇರವಾಗಿ Instagram ಗೆ Reels ಮತ್ತು ಅಲ್ಟ್ರಾ HDR ಫೋಟೋಗಳನ್ನು ಪೋಸ್ಟ್‌ಗಳಾಗಿ ಹಂಚಿಕೊಳ್ಳಬಹುದು.
ಪಿಕ್ಸೆಲ್ ವಾಚ್ ಸೇರಲಿದೆ ಹೊಸ ಫೀಚರ್ಸ್
ಹೊಸ ಪಿಕ್ಸೆಲ್ ಫೀಚರ್ ಡ್ರಾಪ್ ಫೀಚರ್ಸ್ ಇದೀಗ ಪಿಕ್ಸೆಲ್ ವಾಚ್ 2ನಲ್ಲಿ ಕೂಡ ಲಭ್ಯವಾಗಲಿದೆ. ಸುಧಾರಿತ ತಾಲೀಮು ಮಾರ್ಗದರ್ಶನಕ್ಕಾಗಿ Pixel Watch ಪೇಸ್ ಟ್ರೈನಿಂಗ್ ಮತ್ತು ಹಾರ್ಟ್ ಝೋನ್ ಟ್ರೈನಿಂಗ್ ವೈಶಿಷ್ಟ್ಯಗಳನ್ನು ಪಡೆಯುತ್ತಿದೆ. ಇದರಿಂದ ಬಳಕೆದಾರರು ವೈಯಕ್ತಿಕ ಗುರಿಗಳನ್ನು ಹೊಂದಿಸಬಹುದು ಮತ್ತು ಅಧಿಸೂಚನೆಗಳು ಮತ್ತು ಧ್ವನಿ ಎಚ್ಚರಿಕೆಗಳನ್ನು ಆನ್ ಮಾಡಬಹುದಾಗಿದೆ.
ಜೊತೆಗೆ ಹೊಸ ಅಪ್ಡೇಟ್‌ನಿಂದಾಗಿ ಸ್ವಯಂ ನಿಲುಗಡೆ, ಸ್ವಯಂ ಪ್ರಾರಂಭ ಮತ್ತು ತಾಲೀಮು ಟ್ರ್ಯಾಕಿಂಗ್‌ಗಾಗಿ ಹೊಸ ಇಂಟರ್ಫೇಸ್ ಅನ್ನು ಸಹ ತರುತ್ತದೆ. ಮೊದಲ-ತಲೆಮಾರಿನ ಪಿಕ್ಸೆಲ್ ವಾಚ್ ಈಗ ಸ್ವಯಂಚಾಲಿತವಾಗಿ ಓಟ, ವಾಕಿಂಗ್, ಎಲಿಪ್ಟಿಕಲ್, ಸ್ಪಿನ್ನಿಂಗ್, ಹೊರಾಂಗಣ ಬೈಕ್, ಟ್ರೆಡ್‌ಮಿಲ್ ಮತ್ತು ರೋಯಿಂಗ್‌ನಂತಹ ಚಟುವಟಿಕೆಗಳನ್ನು ಪತ್ತೆ ಮಾಡಲಿದೆ. ಪಿಕ್ಸೆಲ್ ವಾಚ್ ಬಳಕೆದಾರರಿಗೆ ಸಹಾಯ ಮಾಡಲು ಫಿಟ್‌ಬಿಟ್ ರಿಲ್ಯಾಕ್ಸ್ ಅಪ್ಲಿಕೇಶನ್ ಅನ್ನು ಸಹ ನೀಡಲಾಗಿದೆ.
ಇದರೊಂದಿಗೆ ಹೊಸ ಅಪ್ಡೇಟ್ ಮೂಲಕ ಪಿಕ್ಸೆಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಫೋಲ್ಡ್‌ನಲ್ಲಿ ವೀಡಿಯೊ ಕರೆ ಸಮಯದಲ್ಲಿ ಸಂಪೂರ್ಣ ಪರದೆಯ ಬದಲಿಗೆ ನಿರ್ದಿಷ್ಟ ಅಪ್ಲಿಕೇಶನ್ ಅನ್ನು ಹಂಚಿಕೊಳ್ಳುವ ಸಾಮರ್ಥ್ಯವನ್ನು ಸಹ ನೀಡಲಾಗಿದೆ.


Click it and Unblock the Notifications








