Home
ಸುದ್ದಿಜಾಲ

ಪಿಕ್ಸೆಲ್ ಫೋನ್ ಬಳಕೆದಾರರಿಗೆ ಉಚಿತವಾಗಿ 8,500 ರೂ. ವಾಪಸ್!

ಗೂಗಲ್ ತನ್ನ Pixel 6a ಸ್ಮಾರ್ಟ್‌ಫೋನ್ ಬಳಕೆದಾರರು ಎದುರಿಸುತ್ತಿರುವ ಬ್ಯಾಟರಿ ಡ್ರೈನ್ ಮತ್ತು ಅಧಿಕ ತಾಪನ ಸಮಸ್ಯೆಗಳನ್ನು ಪರಿಹರಿಸಲು ಮಹತ್ವದ ಕ್ರಮಗಳನ್ನು ಘೋಷಿಸಿದೆ. ಭಾರತ ಸೇರಿದಂತೆ ಜಾಗತಿಕವಾಗಿ ಅನೇಕ ಬಳಕೆದಾರರು ಈ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದಾರೆ. ಈ ಸಮಸ್ಯೆಗೆ ಪರಿಹಾರವಾಗಿ, ಗೂಗಲ್ ಉಚಿತ ಬ್ಯಾಟರಿ ಬದಲಿ ಅಥವಾ $100 (ಸುಮಾರು ₹8,500) ಪರಿಹಾರವನ್ನು ನೀಡುತ್ತಿದೆ. ಇದರ ಜೊತೆಗೆ, ಕಂಪನಿಯು ಎಲ್ಲಾ Pixel 6a ಸಾಧನಗಳಿಗೆ ಕಡ್ಡಾಯವಾದ Android 16 ಅಪ್‌ಡೇಟ್ ಅನ್ನು ಜಾರಿಗೊಳಿಸಲಿದೆ.

ಗೂಗಲ್‌ನ ಅಧಿಕೃತ ಹೇಳಿಕೆಯ ಪ್ರಕಾರ, ಎಲ್ಲಾ ಅರ್ಹ Pixel 6a ಬಳಕೆದಾರರು ಅಧಿಕೃತ ಸೇವಾ ಕೇಂದ್ರಗಳಲ್ಲಿ ತಮ್ಮ ಬ್ಯಾಟರಿಗಳನ್ನು ಉಚಿತವಾಗಿ ಬದಲಾಯಿಸಿಕೊಳ್ಳಬಹುದು ಎಂದು ಗೂಗಲ್ ಸ್ಪಷ್ಟಪಡಿಸಿದೆ. ಬ್ಯಾಟರಿ ಬದಲಿಯೊಂದಿಗೆ, ಬಳಕೆದಾರರಿಗೆ ನಗದು ಪರಿಹಾರವನ್ನು ಆಯ್ಕೆ ಮಾಡುವ ಅವಕಾಶವೂ ಇದೆದ್ದು,Payoneer ಮೂಲಕ ಸುಮಾರು ₹8,500 ($100) ಅಥವಾ ಗೂಗಲ್ ಸ್ಟೋರ್ ಕ್ರೆಡಿಟ್‌ನಲ್ಲಿ ಸುಮಾರು ₹12,700 ($150) ಪಡೆಯುವ ಆಯ್ಕೆ ಇದೆ. ಗ್ರಾಹಕರು ಇದನ್ನು ತಮ್ಮಿಷ್ಟದಂತೆ ಉಪಯೋಗಿಸಿಕೊಳ್ಳಲು ಅರ್ಹರಾಗಿದ್ದಾರೆ.

ಬ್ಯಾಟರಿ ಬದಲಿ ಸೇವೆಗಳು ಜುಲೈ 21, 2025 ರಿಂದ ಯುನೈಟೆಡ್ ಸ್ಟೇಟ್ಸ್, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಸಿಂಗಾಪುರ್, ಜಪಾನ್ ಮತ್ತು ಭಾರತದಲ್ಲಿನ ವಾಕ್-ಇನ್ ರಿಪೇರಿ ಕೇಂದ್ರಗಳಲ್ಲಿ ಲಭ್ಯವಿರುತ್ತವೆ. US ಮತ್ತು ಭಾರತದ ಗ್ರಾಹಕರಿಗೆ ಮೇಲ್-ಇನ್ ರಿಪೇರಿ ಸೇವೆಯ ಮೂಲಕವೂ ಈ ಸೌಲಭ್ಯ ದೊರೆಯಲಿದೆ. ಜಪಾನ್, ಫ್ರಾನ್ಸ್, ಯುರೋಪಿನ ಇತರ ಕೆಲವು ಭಾಗಗಳು ಮತ್ತು ಆಸ್ಟ್ರೇಲಿಯಾದಲ್ಲಿ ಶೀಘ್ರದಲ್ಲೇ ಹೆಚ್ಚುವರಿ ಬ್ಯಾಟರಿ ಬದಲಿ ಸಾಮರ್ಥ್ಯಗಳನ್ನು ನಿರೀಕ್ಷಿಸಲಾಗಿದೆ. ಇದು ಜಾಗತಿಕವಾಗಿ ಅನೇಕ Pixel 6a ಬಳಕೆದಾರರಿಗೆ ಅನುಕೂಲವಾಗಲಿದೆ.

ಪಿಕ್ಸೆಲ್ ಫೋನ್ ಬಳಕೆದಾರರಿಗೆ ಉಚಿತವಾಗಿ 8,500 ರೂ. ವಾಪಸ್!

ಷರತ್ತುಗಳು ಮತ್ತು ನಿಯಮಗಳು
ಈ ಬ್ಯಾಟರಿ ಬದಲಿ ಕಾರ್ಯಕ್ರಮವು ಅರ್ಹ Pixel 6a ಸಾಧನಗಳಿಗೆ ನಿಮ್ಮ ಸಾಧನದ ಆರಂಭಿಕ ಅರ್ಹತಾ ಪರಿಶೀಲನೆ ಮತ್ತು ಭೌತಿಕ ತಪಾಸಣೆಯ ನಂತರ ಯಾವುದೇ ಶುಲ್ಕವಿಲ್ಲದೆ ಒಂದು ಬ್ಯಾಟರಿ ಬದಲಿಯನ್ನು ಒದಗಿಸುತ್ತದೆ."ಆದರೆ. ಈ ಉಚಿತ ಬ್ಯಾಟರಿ ಬದಲಿ ಕಾರ್ಯಕ್ರಮಕ್ಕೆ ಕೆಲವು ಷರತ್ತುಗಳು ಅನ್ವಯಿಸುತ್ತವೆ. ಗೂಗಲ್ ಸ್ಪಷ್ಟಪಡಿಸಿದಂತೆ, ದ್ರವ ಹಾನಿ ಅಥವಾ ಗಮನಾರ್ಹ ಭೌತಿಕ ಹಾನಿಯನ್ನು ಹೊಂದಿರುವ ಸಾಧನಗಳು ಉಚಿತ ಬ್ಯಾಟರಿ ಸೇವೆಗೆ ಅರ್ಹತೆ ಪಡೆಯದಿರಬಹುದು. ಅಲ್ಲದೆ, ಮುರಿದ ಡಿಸ್‌ಪ್ಲೇಯಂತಹ ಖಾತರಿಯಿಲ್ಲದ ಸಮಸ್ಯೆಗಳಿಗೆ ಸೇವಾ ಶುಲ್ಕವನ್ನು ವಿಧಿಸಬಹುದು.

ಗೂಗಲ್ ಹೇಳಿರುವಂತೆಯೇ, "ನಾವು ಯಾವುದೇ ರಿಪೇರಿ ಪ್ರಾರಂಭಿಸುವ ಮೊದಲು, ನಾವು ವೆಚ್ಚದ ಅಂದಾಜನ್ನು ಒದಗಿಸುತ್ತೇವೆ. ನಂತರ ದುರಸ್ತಿಗೆ ಮುಂದುವರಿಯಲು ಅಥವಾ ನಿಮ್ಮ ಸಾಧನವನ್ನು ನಿಮಗೆ ಹಿಂತಿರುಗಿಸಲು ನಿಮಗೆ ಆಯ್ಕೆ ಇರುತ್ತದೆ" ಎಂದು ಗೂಗಲ್ ತಿಳಿಸಿದೆ. ಇನ್ನು ನಗದು ಪರಿಹಾರದ ಕುರಿತು, "ಪಾವತಿಗಳನ್ನು ನಿಮ್ಮ ಸ್ಥಳೀಯ ಕರೆನ್ಸಿಗೆ ಪರಿವರ್ತಿಸಲಾಗುತ್ತದೆ ಮತ್ತು ನೀವು ನಿಮ್ಮ ಬೆಂಬಲ ಆಯ್ಕೆಯನ್ನು ಆಯ್ಕೆ ಮಾಡುವ ಸಮಯದಲ್ಲಿ ಜಾರಿಯಲ್ಲಿರುವ ವಿನಿಮಯ ದರವನ್ನು ಬಳಸಿಕೊಂಡು ಅಂತಿಮ ಮೊತ್ತವನ್ನು ಲೆಕ್ಕಹಾಕಲಾಗುತ್ತದೆ" ಎಂದು ಗೂಗಲ್ ಹೇಳಿದೆ.

ಕಡ್ಡಾಯವಾದ Android 16 ಅಪ್‌ಡೇಟ್ ಏಕೆ?
Android 16 ಅಪ್‌ಡೇಟ್ ಪಿಕ್ಸೆಲ್ ಫೋನ್‌ಗಳಲ್ಲಿ ಬ್ಯಾಟರಿ ದಕ್ಷತೆಯನ್ನು ಸುಧಾರಿಸಲು ಮತ್ತು ಅಧಿಕ ತಾಪನ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ, ಕಡ್ಡಾಯವಾದ Android 16 ಅಪ್‌ಡೇಟ್ ಬಗ್ಗೆ ತಿಳಿಸಿದೆ. ಈ ಅಪ್‌ಡೇಟ್ ಜುಲೈ 8, 2025 ರಿಂದ ಲಭ್ಯವಿರುತ್ತದೆ. ಒಟ್ಟಾರೆಯಾಗಿ, ಗೂಗಲ್ ತನ್ನ ಗ್ರಾಹಕರ ವಿಶ್ವಾಸವನ್ನು ಮರಳಿ ಗಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎನನ್ಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Google is providing a complimentary battery replacement or a payment of Rs 8,500 for certain Pixel phone users in India. Find out if you qualify and get more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+