Home
ಸುದ್ದಿಜಾಲ

ಗೂಗಲ್‌ ಡ್ರೈವ್‌ ಸೇರಿದ ಕೂತುಹಲಕಾರಿ ಫೀಚರ್ಸ್‌!

ಪ್ರಸ್ತುತ ದಿನಗಳಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಾಪಾಗೋದೆ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌. ಬಳಕೆದಾರರ ನೆಚ್ಚಿನ ಸರ್ಚ್‌ ಇಂಜಿನ್‌ ಆಗಿರುವ ಗೂಗಲ್‌ ತನ್ನ ಹಲವು ಸೇವೆಗಳನ್ನು ಬಳಕೆದಾರರಿಗೆ ಪರಿಚಯಿಸಿದೆ. ಇದೀಗ ಬಳಕೆದಾರರು ಹೆಚ್ಚು ಪರಿಣಾಮಕಾರಿಯಾಗಿ ಸರ್ಚ್‌ ಮಾಡಲು ಸಹಾಯ ಮಾಡುವ ಸಲುವಾಗಿ ಗೂಗಲ್ ಡ್ರೈವ್ ಅಪ್ಲಿಕೇಶನ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಈ ಹೊಸ ಫೀಚರ್ಸ್‌ಗಳು ಆಂಡ್ರಾಯ್ಡ್ ಮತ್ತು ಐಒಎಸ್‌ ಎರಡು ಡಿವೈಸ್‌ಗಳಲ್ಲಿಯೂ ಲಭ್ಯವಾಗಲಿದೆ.

ಗೂಗಲ್

ಹೌದು, ಗೂಗಲ್ ತನ್ನ ಗೂಗಲ್‌ ಡ್ರೈವ್‌ ಅಪ್ಲಿಕೇಶನ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಈ ಫೀಚರ್ಸ್‌ಗಳು ಡೆಸ್ಕ್‌ಟಾಪ್ ಮತ್ತು ಮೊಬೈಲ್ ಸರ್ಚಿಂಗ್‌ ಅನ್ನು ನೋಡಲು ಮತ್ತು ರಿ ರನ್‌ ಮಾಡಲು ಅವಕಾಶವನ್ನು ನೀಡಲಿದೆ. ಅಪ್ಲಿಕೇಶನ್‌ನಲ್ಲಿ ಅದೇ ಹುಡುಕಾಟ ಪ್ರಶ್ನೆಗಳನ್ನು ಪುನರಾವರ್ತಿಸುವ ಅಗತ್ಯವನ್ನು ಇದು ನಿವಾರಿಸುತ್ತದೆ. ಇದಲ್ಲದೆ, ಬಳಕೆದಾರರು ಸರ್ಚಿಂಗ್‌ ಬಾಕ್ಸ್‌ನಲ್ಲಿ ಟೈಪ್ ಮಾಡುವಾಗ ‘ಬುದ್ಧಿವಂತ ಸಲಹೆಗಳನ್ನು' ವೀಕ್ಷಿಸಲು ಮತ್ತು ಆಯ್ಕೆ ಮಾಡಲು ಇದರಿಂದ ಸಾಧ್ಯವಾಗುತ್ತದೆ. ಇನ್ನುಳಿದಂತೆ ಈ ಫೀಚರ್ಸ್‌ ವಿಶೇಷತೆ ಏನು? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್ ಡ್ರೈವ್

ಸದ್ಯ ಗೂಗಲ್ ಡ್ರೈವ್ ಪರಿಚಯಿಸಿರುವ ಹೊಸ ಫೀಚರ್ಸ್‌ ಮೂಲಕ ಫೈಲ್‌ಗಳನ್ನು ಫೋನ್‌ನಲ್ಲಿ ತ್ವರಿತವಾಗಿ ಕಂಡುಹಿಡಿಯಬಹುದಾಗಿದೆ. ಇದರಿಂದ ಬಳಕೆದಾರರು ತಾವು ಎಲ್ಲಿದ್ದರೂ ಹಂಚಿಕೊಳ್ಳಬಹುದು, ಪರಿಶೀಲಿಸಬಹುದು, ಸಹಕರಿಸಬಹುದು ಮತ್ತು ರಚಿಸಬಹುದು ಎಂದು ಗೂಗಲ್‌ ಹೇಳಿದೆ. ಇನ್ನು ಗೂಗಲ್ ಡ್ರೈವ್ ಅಪ್ಲಿಕೇಶನ್‌ನಲ್ಲಿ ಹುಡುಕಾಟವನ್ನು ನಿರ್ವಹಿಸುವಾಗ ಬಳಕೆದಾರರು ವೀಕ್ಷಿಸಲು ಮತ್ತು ಆಯ್ಕೆ ಮಾಡಲು ಸಾಧ್ಯವಾಗುವಂತಹ ‘ಬುದ್ಧಿವಂತ ಸಲಹೆಗಳು' ಸಾಕಷ್ಟು ಉಪಯೋಗಕ್ಕೆ ಬರಲಿದೆ. ಇದರಿಂದ ಹಿಂದಿನ ಸರ್ಚ್‌ ಮತ್ತು ಕೀವರ್ಡ್‌ಗಳಿಗೆ ಸಲಹೆಗಳನ್ನು ಮತ್ತು ಇತ್ತೀಚೆಗೆ ಪ್ರವೇಶಿಸಿದ ಫೈಲ್‌ಗಳನ್ನು ಇದು ತೋರಿಸಲಿದೆ.

ಗೂಗಲ್

ಇನ್ನು ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನದಲ್ಲಿ ಡ್ರೈವ್‌ನ ಇತ್ತೀಚಿನ ಆವೃತ್ತಿಯನ್ನು ಹೊಂದಿರುವ ಬಳಕೆದಾರರಿಗೆ ಈ ಹೊಸ ಫೀಚರ್ಸ್‌ಗಳು ಲಭ್ಯವಿರುತ್ತವೆ. ಫೀಚರ್ಸ್‌ಗಳು ಕಾರ್ಯನಿರ್ವಹಿಸಲು ‘ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವಿಟಿ' ಯನ್ನು ಸಹ ಸಕ್ರಿಯಗೊಳಿಸಬೇಕು ಎಂದು ಗೂಗಲ್ ಹೇಳಿದೆ. ಇದನ್ನು ಸಕ್ರಿಯಗೊಳಿಸುವುದರಿಂದ Google ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ನಿಮ್ಮ ಚಟುವಟಿಕೆಗಳನ್ನು ಉಳಿಸುತ್ತದೆ. ಇದರಿಂದ Google ಸೇವೆಗಳಲ್ಲಿ ವೇಗವಾಗಿ ಸರ್ಚ್‌ ಮಾಡಲು ಸಾಧ್ಯವಾಗಲಿದೆ.

ಗೂಗಲ್

ಇದಲ್ಲದೆ ಬಳಕೆದಾರರು ತಮ್ಮ ಫೈಲ್‌ಗಳನ್ನು Google ಡ್ರೈವ್‌ನಲ್ಲಿ ಶೀರ್ಷಿಕೆ, ಫೈಲ್ ವಿಷಯಗಳು ಮತ್ತು ಚಿತ್ರಗಳು, ಪಿಡಿಎಫ್‌ಗಳು ಅಥವಾ ಡ್ರೈವ್‌ನಲ್ಲಿ ಸಂಗ್ರಹವಾಗಿರುವ ಇತರ ಫೈಲ್‌ಗಳಲ್ಲಿ ಹುಡುಕುವ ಮೂಲಕ ಹುಡುಕಬಹುದು. ಈ ಹೊಸ ಗೂಗಲ್ ಡ್ರೈವ್ ಅಪ್ಲಿಕೇಶನ್ ಫೀಚರ್ಸ್‌ಗಳು ಗೂಗಲ್ ವರ್ಕ್‌ಪೇಸ್ ಎಸೆನ್ಷಿಯಲ್ಸ್, ಬಿಸಿನೆಸ್ ಸ್ಟಾರ್ಟರ್, ಬಿಸಿನೆಸ್ ಸ್ಟ್ಯಾಂಡರ್ಡ್, ಬಿಸಿನೆಸ್ ಪ್ಲಸ್, ಎಂಟರ್‌ಪ್ರೈಸ್ ಎಸೆನ್ಷಿಯಲ್ಸ್, ಎಂಟರ್‌ಪ್ರೈಸ್ ಸ್ಟ್ಯಾಂಡರ್ಡ್ ಮತ್ತು ಎಂಟರ್‌ಪ್ರೈಸ್ ಪ್ಲಸ್, ಜೊತೆಗೆ ಜಿ ಸೂಟ್ ಬೇಸಿಕ್, ಬಿಸಿನೆಸ್, ಎಜುಕೇಶನ್, ಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Google is rolling out new features for the Google Drive app on Android and iOS in order to help users search more efficiently.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+