Home
ಸುದ್ದಿಜಾಲ

ಭಾರತದಲ್ಲಿ ಗೂಗಲ್ ಎಮರ್ಜೆನ್ಸಿ ELS ಸೇವೆ ಪ್ರಾರಂಭ!..ಏನಿದು ಅತ್ಯಗತ್ಯ ಫೀಚರ್?

ಗೂಗಲ್ ಭಾರತದಲ್ಲಿ ತನ್ನ ಎಮರ್ಜೆನ್ಸಿ ಲೊಕೇಶನ್ ಸರ್ವಿಸ್ (Emergency Location Service - ELS) ಸೇವೆಯನ್ನು ಮಂಗಳವಾರದಿಂದ ಅಧಿಕೃತವಾಗಿ ಆರಂಭಿಸಿದೆ. ಆಂಡ್ರಾಯ್ಡ್ ಬಳಕೆದಾರರ ಭದ್ರತೆಯ ದೃಷ್ಟಿಯಿಂದ ಇದೊಂದು ಮಹತ್ವದ ಬೆಳವಣಿಗೆಯಾಗಿದ್ದ, ತುರ್ತು ಪರಿಸ್ಥಿತಿಯಲ್ಲಿ ಪೊಲೀಸ್‌, ಆಂಬ್ಯುಲೆನ್ಸ್ ಅಥವಾ ಅಗ್ನಿಶಾಮಕ ಸೇವೆಗೆ ಕರೆ ಮಾಡಿದ ಕ್ಷಣದಲ್ಲೇ, ಬಳಕೆದಾರರ ನಿಖರ ಸ್ಥಳ ಮಾಹಿತಿ ತಾನಾಗಿಯೇ ತುರ್ತು ಸೇವಾ ಕೇಂದ್ರಗಳಿಗೆ ತಲುಪುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಭಾರತದಲ್ಲಿ ಈ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿದ ಮೊದಲ ರಾಜ್ಯವಾಗಿ ಉತ್ತರ ಪ್ರದೇಶ ಗುರುತಿಸಿಕೊಂಡಿದೆ. ರಾಜ್ಯದ ಪೊಲೀಸ್ ಇಲಾಖೆ ತುರ್ತು ಸಂಖ್ಯೆ 112 ಜತೆಗೆ ELS ವ್ಯವಸ್ಥೆಯನ್ನು ಸಂಯೋಜಿಸಿದ್ದು, ಇದರಿಂದ ಆಂಡ್ರಾಯ್ಡ್ ಫೋನ್‌ನಿಂದ ಮಾಡಿದ ತುರ್ತು ಕರೆಗಳಿಗೆ ತಕ್ಷಣ ಸ್ಪಂದನೆ ನೀಡಲು ಸಾಧ್ಯವಾಗುತ್ತಿದೆ. ಸ್ಥಳ ಮಾಹಿತಿ ತಲುಪುವುದರಿಂದ ರಕ್ಷಣಾ ತಂಡಗಳು ವಿಳಂಬವಿಲ್ಲದೆ ಸರಿಯಾದ ಸ್ಥಳಕ್ಕೆ ತಲುಪಲು ಸಹಕಾರಿಯಾಗುತ್ತದೆ. ಸಮಯವೇ ಜೀವ ಉಳಿಸುವಂತಹ ಸಂದರ್ಭಗಳಲ್ಲಿ ಈ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ.

ಗೂಗಲ್ ತಿಳಿಸಿರುವಂತೆ, ELS ತಂತ್ರಜ್ಞಾನವು ಫೋನ್‌ನ GPS, ವೈ-ಫೈ ಮತ್ತು ಮೊಬೈಲ್ ನೆಟ್ವರ್ಕ್ ಮಾಹಿತಿಯನ್ನು ಒಟ್ಟಾಗಿ ಬಳಸಿ ಬಳಕೆದಾರರ ಸ್ಥಳವನ್ನು ಗುರುತಿಸುತ್ತದೆ. ಈ ವ್ಯವಸ್ಥೆ ಸುಮಾರು 50 ಮೀಟರ್ ವ್ಯಾಪ್ತಿಯೊಳಗಿನ ನಿಖರತೆಯೊಂದಿಗೆ ಸ್ಥಳ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಕರೆ ಕೆಲವೇ ಕ್ಷಣಗಳಲ್ಲಿ ಕಡಿತವಾದರೂ ಸಹ, ಅಗತ್ಯ ಸ್ಥಳ ಮಾಹಿತಿ ತುರ್ತು ಸೇವಾ ಕೇಂದ್ರಗಳಿಗೆ ತಲುಪುವಂತೆ ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿ ಗೂಗಲ್ ಎಮರ್ಜೆನ್ಸಿ ELS ಸೇವೆ ಪ್ರಾರಂಭ!..ಏನಿದು ಅತ್ಯಗತ್ಯ ಫೀಚರ್?

ಈ ಸೇವೆಯ ಪ್ರಮುಖ ಅಂಶವೆಂದರೆ, ಇದು ಸಂಪೂರ್ಣವಾಗಿ ಉಚಿತವಾಗಿದ್ದು, ಬಳಕೆದಾರರ ಗೌಪ್ಯತೆಯ ಮೇಲೂ ಹೆಚ್ಚಿನ ಒತ್ತು ನೀಡಲಾಗಿದೆ. 112 ಸಂಖ್ಯೆಗೆ ಕರೆ ಮಾಡಿದಾಗ ಮಾತ್ರ ಈ ವ್ಯವಸ್ಥೆ ಸಕ್ರಿಯವಾಗುತ್ತದೆ ಮತ್ತು ಸಾಮಾನ್ಯ ಬಳಕೆಯಲ್ಲಿ ಯಾವುದೇ ರೀತಿಯ ಟ್ರ್ಯಾಕಿಂಗ್ ನಡೆಯುವುದಿಲ್ಲ. ಗೂಗಲ್ ಸ್ಪಷ್ಟಪಡಿಸಿದಂತೆ, ಸ್ಥಳ ಮಾಹಿತಿ ಕಂಪನಿಯ ಬಳಿ ಸಂಗ್ರಹವಾಗುವುದಿಲ್ಲ. ಅದು ನೇರವಾಗಿ ಸಂಬಂಧಿಸಿದ ತುರ್ತು ಸೇವಾ ಅಧಿಕಾರಿಗಳಿಗೆ ಮಾತ್ರ ತಲುಪುತ್ತದೆ.

ELS ಸೌಲಭ್ಯವು ಈಗಾಗಲೇ ಆಂಡ್ರಾಯ್ಡ್ 6.0 ಮತ್ತು ನಂತರದ ಆವೃತ್ತಿಗಳನ್ನು ಬಳಸುವ ಎಲ್ಲಾ ಹೊಂದಾಣಿಕೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ. ಜಾಗತಿಕ ಮಟ್ಟದಲ್ಲಿ ಈ ತಂತ್ರಜ್ಞಾನವು ಈಗಾಗಲೇ ಲಕ್ಷಾಂತರ ತುರ್ತು ಕರೆಗಳು ಮತ್ತು ಸಂದೇಶಗಳಿಗೆ ಸಹಾಯ ಮಾಡಿದ್ದು, ಅದರ ಪರಿಣಾಮಕಾರಿತ್ವವನ್ನು ತೋರಿಸಿದೆ. ಈ ಸೇವೆ ಗೂಗಲ್‌ನ ಮಶಿನ್ ಲರ್ನಿಂಗ್ ಆಧಾರಿತ Android Fused Location Provider ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುತ್ತದೆ.

ಇದಕ್ಕೆ ಜೊತೆಗೆ, ಗೂಗಲ್ ಇತ್ತೀಚೆಗೆ ಪರಿಚಯಿಸಿರುವ ಎಮರ್ಜೆನ್ಸಿ ಲೈವ್ ವೀಡಿಯೋ ವೈಶಿಷ್ಟ್ಯವೂ ಗಮನ ಸೆಳೆಯುತ್ತಿದೆ. ತುರ್ತು ಸಂದರ್ಭಗಳಲ್ಲಿ ಪ್ರತಿಕ್ರಿಯೆ ನೀಡುವ ಅಧಿಕಾರಿಗಳು ವಿನಂತಿಸಿದರೆ, ಬಳಕೆದಾರರು ತಮ್ಮ ಫೋನ್ ಕ್ಯಾಮೆರಾದ ಲೈವ್ ದೃಶ್ಯವನ್ನು ಹಂಚಿಕೊಳ್ಳಬಹುದು. ಇದರಿಂದ ಪರಿಸ್ಥಿತಿಯ ಗಂಭೀರತೆಯನ್ನು ಅಧಿಕಾರಿಗಳು ನೇರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ನೆರವು ಇನ್ನಷ್ಟು ಪರಿಣಾಮಕಾರಿಯಾಗುತ್ತದೆ.

ಒಟ್ಟಾರೆಯಾಗಿ, ಗೂಗಲ್‌ನ ಈ ಹೊಸ ತುರ್ತು ಸೇವೆಗಳು ಭಾರತದಲ್ಲಿ ಡಿಜಿಟಲ್ ಸುರಕ್ಷತೆ ಮತ್ತು ಸಾರ್ವಜನಿಕ ರಕ್ಷಣೆಯ ದಿಕ್ಕಿನಲ್ಲಿ ದೊಡ್ಡ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಲ್ಲಿಯೂ ಈ ವ್ಯವಸ್ಥೆ ಜಾರಿಯಾದರೆ, ತುರ್ತು ಸಂದರ್ಭಗಳಲ್ಲಿ ತ್ವರಿತ ಸ್ಪಂದನೆ ಮತ್ತು ಜೀವ ರಕ್ಷಣೆ ಇನ್ನಷ್ಟು ಸಾಧ್ಯ. ಈ ಹೊಸ ಸೇವೆ ಕುರಿತಂತೆ ನಿಮ್ಮ ಅನಿಸಿಕೆ ಏನು?., ಕರ್ನಾಟಕದಲ್ಲೂ ಸಹ ಈ ಹೊಸ ಸೇವೆ ಬಹುಬೇಗ ಆರಂಭವಾದರೆ ಉತ್ತಮವೇ ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Google has launched its Emergency Location Service (ELS) in India to enhance public safety for Android users. The service automatically shares a caller’s precise location with emergency services like police and ambulances during distress calls, enabling faster and more accurate response.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+