ಬಳಕೆದಾರರಿಗಾಗಿ ಯುಟ್ಯೂಬ್ ವಿಡಿಯೋ ಬಿಲ್ಡರ್ ಟೂಲ್ ಪರಿಚಯಿಸಿದ ಗೂಗಲ್ !
ಕಳೆದ ಕೆಲ ತಿಂಗಳುಗಳಿಂದ ಇಡೀ ಜಗತ್ತು ಕೊರೊನಾ ವೈರಸ್‌ನಿಂದ ಬಳಲುತ್ತಿದೆ. ಸಾಂಕ್ರಾಮಿಕವಾಗಿ ಹಬ್ಬುತ್ತಿರುವ ಕೋವಿಡ್-19 ನಿಯಂತ್ರಣಕ್ಕಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಮೊರ ಹೋಗಿವೆ. ಇದರಿಂದಾಗಿ ಬಹುತೇಕ ಮಂದಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇ ನಡುವೆ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ಜನರಿಗೆ ಬೇಸರವಾಗದಂತೆ ಮಾಡಲು ಬಹುತೇಕ ವಲಯಗಳು ತಮ್ಮಿಂದ ಆಗಬಹುದಾದ ಪ್ರಯತ್ನಗಳನ್ನ ಮಾಡುತ್ತಿವೆ. ಸೋಶಿಯಲ್ ಮಿಡಿಯಾದಲ್ಲಿ ಮನರಂಜನೆಯ ವಿಚಾರಗಳು ಹೆಚ್ಚಾಗಿ ಬರುತ್ತಿವೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್,ನಂತಹ ವೀಡಿಯೋ ಸ್ಟ್ರೀಮಿಂಗ್ ಸೇವೆಗಳಲ್ಲಿ ಸಹ ಭಾರಿ ಬದಲಾವಣೆ ಆಗಿದೆ. ಅಷ್ಟೇ ಯಾಕೆ ಗೂಗಲ್, ಫೇಸ್‌ಬುಕ್, ಯುಟ್ಯೂಬ್ ತನ್ನ ಬಳಕೆದಾರರಿಗೆ ಹೊಸಹೊಸ ಫೀಚರ್ಸ್‌ಗಳನ್ನ ಪರಿಚಯಿಸುತ್ತಿವೆ.

ಹೌದು, ಕೋವಿಡ್-19 ಕಾರಣದಿಂದಾಗಿ ಲಾಕ್‌ಡೌನ್‌ಗೆ ಸಿಲುಕಿ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ತಮ್ಮ ಬಳಕೆದಾರರ ಮನರಂಜನೆಗಾಗಿ ಸೊಶೀಯಲ್ ಮೀಡಿಯಾ ಆಪ್‌ಗಳು ಹೊಸ ಫೀಚರ್ಸ್‌ಗಳನ್ನ ಪರಿಚಯಿಸುತ್ತವೆ. ಇ ಮೂಲಕ ಬಳಕೆದಾರರ ಮನಸ್ಥಿತಿ ಬೇಸರವಾಗದಿರದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಇದೀಗ ಇದೇ ಸಾಲಿಗೆ ಗೂಗಲ್ ಕೂಡ ಸೇರಿಕೊಂಡಿದೆ. ಪ್ರತಿ ಬಾರಿಯು ತನ್ನ ಬಳಕೆದಾರರ ಹಿತಕಾಯುವ ಗೂಗಲ್ ಈ ಬಾರಿಯು ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್ ಪರಿಚಯಿಸಿದೆ. ಅಷ್ಟಕ್ಕೂ ಗೂಗಲ್ ಪರಿಚಯಿಸಿರುವ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಸದ್ಯ ಕೋವಿಡ್-19 ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಗೂಗಲ್ ಹೋಸ ಬೀಟಾ ಡಿವೈಸ್ ಅನ್ನು ಬಿಡುಗಡೆ ಮಾಡಿದೆ. ಇದೀಗ ಎಲ್ಲಾ ಕಡೆ ಬಿಕ್ಕಟ್ಟಿನ ಪರಿಸ್ಥಿತಿಗಳಿರುವುದರಿಂದ ಎಲ್ಲಾ ಮಾದರಿಯ ವ್ಯವಹಾರಗಳು ಡಿಜಿಟಲ್ ವ್ಯವಹಾರಕ್ಕೆ ಮಾರ್ಪಾಡಾಗಲು ಪ್ರಯತ್ನಿಸುತ್ತಿವೆ. ಇದೆ ಸಂದರ್ಭದಲ್ಲಿ ಈ ಹೊಸ ಬೀಟಾ ಡಿವೈಸ್ ಬಿಡುಗಡೆ ಆಗಿದೆ. ಇನ್ನು ಈ ಬೀಟಾ ಡಿವೈಸ್ ನಿಮಗೆ ಕಿರು ಮಾದರಿಯ ಯೂಟ್ಯೂಬ್ ವೀಡಿಯೊಗಳನ್ನು ಕ್ರಿಯೆಟ್ ಮಾಡಲು ಅನುವು ಮಾಡಿಕೊಡಲಿದೆ.

ಇನ್ನು ಗೂಗಲ್ ನ ಈ ಹೊಸ ಡಿವೈಸ್ ಯೂಟ್ಯೂಬ್ ವಿಡಿಯೋ ಬಿಲ್ಡರ್ ಎಂದೇ ಪರಿಗಣಿಸಲಾಗಿದ್ದು, ಇದು ಆನಿಮೇಟಿಕ್ ಸ್ಟ್ಯಾಟಿಕ್ ಇಮೇಜ್‌ಗಳು, ಪಠ್ಯ, ಲೋಗೊಗಳನ್ನು ಕ್ರಿಯೆಟ್ ಮಾಡುತ್ತದೆ. ಅಲ್ಲದೆ ಗೂಗಲ್‌ನ ಸ್ವಂತ ಲೈಬ್ರರಿಯ ಮ್ಯೂಸಿಕ್ ನೊಂದಿಗೆ ಅನಿಮೇಟ್ ಮಾಡುತ್ತದೆ ಎಂದು ಗೂಗಲ್‌ನ ಅಧಿಕೃತ ಬ್ಲಾಗ್ ನಲ್ಲಿ ಹೇಳಲಾಗಿದೆ. ಇನ್ನು ಈ ಡಿವೈಸ್ ಮೂಲಕ 6 ಸೆಕೆಂಡುಗಳು ಅಥವಾ 15 ಸೆಕೆಂಡುಗಳ ವೀಡಿಯೊಗಳನ್ನು ಕ್ರಿಯೆಟ್ ಮಾಡಬಹುದಾಗಿದ್ದು, ನಿಮ್ಮ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಸಂದೇಶ ಮತ್ತು ನಿಮ್ಮ ವ್ಯಾಪಾರವನ್ನ ವೃದ್ಧಿಸಿಕೊಳ್ಳಲು ನೀವು ಅನುಸರಿಸುವ ವಿಚಾರಗಳನ್ನ ಹಂಚಿಕೊಳ್ಳಲು ಇದು ಸುಲಭ ಆಯ್ಕೆ ಆಗಿದೆ.

ಪ್ರಸ್ತುತದಲ್ಲಿ ಇರುವ ಸನ್ನಿವೇಶದಲ್ಲಿ ವ್ಯಾಪಾರ ಮಾಲಡು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ನಿಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳು ಅವುಗಲ ಅಗತ್ಯತೆ ಹಾಗೂ ನಿವು ಇರುವ ಸ್ಥಳ ಇತ್ಯಾದಿ ಮಾಹಿತಿಗಳನ್ನ ವಿಡಿಯೋ ಮೂಲಕ ಹಂಚಿಕೊಳ್ಳಬಹುದು. ಈ ಮೂಲಕ ಗ್ರಾಹಕರ ಜೊತೆಗೆ ಸಂಪರ್ಕ ಸಾಧಿಸಲು ಸಾದ್ಯವಾಗಲಿದೆ. ಆಸಕ್ತ ಬಳಕೆದಾರರು ಈ ಡಿವೈಸ್‌ನ ಪ್ರವೇಶವನ್ನು ಪಡೆಯಲು ವೀಡಿಯೊ ಬಿಲ್ಡರ್ ಬೀಟಾ ಸಾಧನಕ್ಕಾಗಿ ಸೈನ್ ಅಪ್ ಮಾಡಬಹುದು. ಇನ್ನು ಇದರಲ್ಲಿ ವೈಯಕ್ತಿಕ ವೀಡಿಯೊಗಳಿಗೂ ಅವಕಾಶ ಇರುವುದರಿಂದ ವೀಡಿಯೊ ಬಿಲ್ಡರ್ ಲಭ್ಯತೆಯ ಮುಂದಿನ ಹಂತವನ್ನು ವೇಗಗೊಳಿಸುತ್ತಿದ್ದೇವೆ ಎಂದು ಕಂಪೆನಿ ಹೇಳಿಕೊಂಡಿದೆ.


Click it and Unblock the Notifications








