Subscribe to Gizbot

ಗೂಗಲ್‌, ಲೆನೊವೊ ಹೊರತರಲಿದೆ 3 ಡಿ ಸ್ಮಾರ್ಟ್‌ಫೋನ್ಸ್

Written By:

ಲಾಸ್ ವೇಗಸ್‌ನಲ್ಲಿ ನಡೆದ ಅತಿ ದೊಡ್ಡ ಇಲೆಕ್ಟ್ರಾನಿಕ್ ಪ್ರದರ್ಶನ ಸಿಇಎಸ್ ಭವಿಷ್ಯದ ಬೆರಗನ್ನು ಕಣ್ಣ ಮುಂದೆ ತರುವುದರಲ್ಲಿ ಅಪರಿಮಿತ ಚಾಕಚಕ್ಯತೆಯನ್ನು ಮೆರೆದಿದೆ. ಹೊಸ ಹೊಸ ಆವಿಷ್ಕಾರಗಳನ್ನು ಬಳಕೆದಾರರ ಕಣ್ಣೆದುರು ತರಲಿರುವ ಸಿಇಎಸ್ ತಂತ್ರಜ್ಞಾನ ಲೋಕದ ಅದ್ಭುತಗಳನ್ನು ತೆರೆದಿಡುತ್ತಿದೆ.

ಓದಿರಿ: ನಿಮ್ಮ ಫೋನ್ ಸುರಕ್ಷತೆ ನಿಮ್ಮ ಕೈಯಲ್ಲೇ!!!

ಹೆಚ್ಚಿನ ಬ್ರ್ಯಾಂಡ್ ಕಂಪೆನಿಗಳು ಅತ್ಯಮೂಲ್ಉ ಉತ್ಪನ್ನಗಳನ್ನು ಬಳಕೆದಾರರ ಮುಂದೆ ಇಡುವ ಕೆಲವೊಂದು ಸಂಕಲ್ಪಗಳನ್ನು ಈ ನಿಟ್ಟಿನಲ್ಲಿ ತಳೆದಿದ್ದು ಬಳಕೆದಾರರ ಆಸೆ ಆಕಾಂಕ್ಷೆಗಳನ್ನು ಇಲ್ಲಿ ಮುಖ್ಯವಾಗಿಸಿ ಅವರಿಗೆ ಪ್ರಿಯವಾದ ಉತ್ಪನ್ನಗಳನ್ನು ತರಲಾಗುತ್ತಿದೆ. ಗೂಗಲ್ ಮತ್ತು ಲೆನೊವೊ 3 ಡಿ ಸ್ಮಾರ್ಟ್‌ಫೋನ್‌ಗಳನ್ನು ಸಿಇಎಸ್‌ನಲ್ಲಿ ಪ್ರಸ್ತುತಪಡಿಸಿದ್ದು ಈ ಆವಿಷ್ಕಾರ ನಮ್ಮನ್ನು ಭವಿಷ್ಯದಲ್ಲಿ ಮುಂದಕ್ಕೆ ಕೊಂಡೊಯ್ಯುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಹು ಅಂತರ

ಸಾಮರ್ಥ್ಯ

ಬಹು ಅಂತರದಲ್ಲಿ ನೋಡಬಹುದಾದ ಈ ಫೋನ್‌ಗಳು ನಿಮ್ಮ ಕೋಣೆಯ ಅಳತೆ ಮತ್ತು ಛಾವಣೆಯ ಮಾಪನವನ್ನು ಮಾಡುವಂತಹ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಇದರ ಕ್ಯಾಮೆರಾವನ್ನು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸಬಹುದಾಗಿದೆ.

ಗೂಗಲ್‌

ಟ್ಯಾಂಗೊ ಪ್ರಾಜೆಕ್ಟ್

ಗೂಗಲ್‌ನ ಟ್ಯಾಂಗೊ ಪ್ರಾಜೆಕ್ಟ್ ಆಧರಿಸಿ ಈ ಡಿವೈಸ್ ಜಾಗತಿಕವಾಗಿ $500 ಮಾರಾಟವಾಗಲಿದ್ದು ಇದು 6.5 ಇಂಚುಗಳ ಮಾಪನವನ್ನು ಹೊಂದಿದೆ. ಇದು ಸಣ್ಣ ಟ್ಯಾಬ್ಲೆಟ್ ಆಕಾರದಲ್ಲಿದ್ದು ಬಳಕೆದಾರರಿಗೆ ಬಳಸಲು ಅನುಕೂಲಕರವಾಗಿದೆ.

ವರ್ಚುವಲ್ ಗೇಮ್

ಜೆಂಗಾ

ಜೆಂಗಾದಂತಹ ವರ್ಚುವಲ್ ಗೇಮ್ ಆಟವನ್ನು ಕಾಫಿ ಟೇಬಲ್‌ನಲ್ಲಿ ಆಡಬಹುದಾಗಿದೆ, ಫೋನ್‌ನಲ್ಲಿ ವರ್ಚುವಲ್ ಪ್ರಾಣಿಗಳ ಧ್ವನಿಯನ್ನು ನೇರವಾಗಿ ಆಲಿಸಬಹುದಾಗಿದೆ.

ಅನುಕೂಲ

ಅಪ್ಲಿಕೇಶನ್

ಕೊಠಡಿಗೆ ಅನುಕೂಲವಾದ ವಿಧಾನದಲ್ಲಿ ಪೀಠೋಪಕರಣಗಳನ್ನು ಇರಿಸುವುದಕ್ಕೆ ಅಪ್ಲಿಕೇಶನ್‌ಗಳನ್ನು ಬಳಸಲಾಗುತ್ತದೆ.

ಸ್ಥಾಪಿಸುವ ಯೋಜನೆ

ಪೂರ್ವ ಇನ್‌ಸ್ಟಾಲ್

ಇದು ಮಾರಾಟವಾದಾಗ ಡಿವೈಸ್‌ನಲ್ಲಿ ಪೂರ್ವ ಇನ್‌ಸ್ಟಾಲ್ ಮಾಡಿದ ರೀತಿಯಲ್ಲಿ ಅಪ್ಲಿಕೇಶನ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದು ಕಂಪೆನಿ ತಿಳಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The latest developments surrounding the consumer-electronics show in Las Vegas known as CES..
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot