ಯುವತಿಯ ಸಾವಿಗೆ ಕಂಬನಿ ಮಿಡಿದ ಗೂಗಲ್‌

Posted By: Staff

ದಿಲ್ಲಿ ಗ್ಯಾಂಗ್‌ರೇಪ್‌ ಯುವತಿಯ ಸಾವಿಗೆ ಇಡೀ ದೇಶವೇ ದುಃಖೀಸುತ್ತಿದ್ದಂತೆಯೇ ಇಂಟರ್‌ನೆಟ್ ಸರ್ಚ್ ಇಂಜಿನ್ ಗೂಗಲ್‌ ಇಂಡಿಯಾ ಸಹ ಶೃಂದ್ಧಾಜಲಿ ಸಲ್ಲಿಸಿದೆ. ತನ್ನ ಹೋಮ್‌ಪೇಜ್‌ನಲ್ಲಿ ಅವಳ ನೆನಪಿಗಾಗಿ ಒಂದು ಪುಟ್ಟ ಮೇಣದ ಬತ್ತಿ ಹೊತ್ತಿ ಉರಿಯುತ್ತಿರುವ ಚಿತ್ರವನ್ನು ಹಾಕಿ ತನ್ನ ಶೋಕ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ಕ್ರೂರವಾಗಿ ಸಾವನ್ನಪ್ಪಿದ ಯುವತಿಯ ನೆನಪಿಗಾಗಿ (In memory of the Delhi braveheart) ಎಂದು ಗೂಗಲ್ ಕಂಬನಿ ಮಿಡಿದಿದೆ.

ಯುವತಿಯ ಸಾವಿಗೆ ಕಂಬನಿ ಮಿಡಿದ ಗೂಗಲ್‌


ನಾಗರೀಕ ಸಮಾಜವೇ ತಲೆತಗ್ಗಿಸುವಂತಹ ಪೈಶಾಚಿಕ ಘಟನೆಯಲ್ಲಿ ಅತ್ಯಾಚಾರಕ್ಕೀಡಾಗಿದ್ದ ದೆಹಲಿಯ ಅರೆ ವೈದ್ಯಕೀಯ ವಿದ್ಯಾರ್ಥಿನಿ ಸಿಂಗಾಪುರದ ಆಸ್ಪತ್ರೆಯಲ್ಲಿ ಡಿ. 29 ಶನಿವಾರ ಬೆಳಗಿನ ಜಾವ ಮೃತಪಟ್ಟಿದ್ದಳು. ಪುನರ್ಜನ್ಮ ನೀಡುವ ಸ್ಥಳ ಎಂದೇ ಹೆಸರುವಾಸಿಯಾಗಿರುವ ಮೌಂಟ್ ಎಲಿಜಬೆತ್ ಆಸ್ಪತ್ರೆಯೂ ಆ ನೊಂದ ಜೀವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಬಹುಅಂಗ ವೈಫಲ್ಯದಿಂದ 23 ವರ್ಷದ ಯುವತಿಯ ದೇಹಸ್ಥಿತಿ ತುಂಬಾನೇ ಬಿಗಡಾಯಿಸಿದೆ ಎಂದು ಅಲ್ಲಿನ ವೈದ್ಯರು ಆರಂಭದಲ್ಲೇ ಸ್ಪಷ್ಟಪಡಿಸಿದ್ದರು. ಆದರೂ ಸತತ ಚಿಕಿತ್ಸೆ ನೀಡಿದ್ದರೂ ಅದು ಫಲಕಾರಿಯಾಗದೆ ಯುವತಿ ಇಹಲೋಕ ತ್ಯಜಿಸಿದ್ದಳು.

'ನಿರ್ಭಯ' (ಯುವತಿಗೆ ಮಾಧ್ಯಮಗಳು ನೀಡಿದ್ದ ಹೆಸರು) ಸಾವಿನ ಸುದ್ದಿ ಕೇಳಿ ಜನ ಮಮ್ಮಲಮರುಗಿದ್ದಾರೆ. ಅಲ್ಲಲ್ಲಿ ಸಭೆ ಸೇರಿ ಸಂತಾಪ ಸೂಚಿಸುತ್ತಿದ್ದಾರೆ. ಎಲ್ಲರ ಬಾಯಲ್ಲೂ ಯುವತಿಯ ಸಾವಿನ ಸುದ್ದಿಯೇ. 15 ದಿನಗಳ ಕಾಲ ಸಾವು ಬದುಕಿನ ಮಧ್ಯೆ ದಿಟ್ಟ ಹೋರಾಟ ನಡೆಸಿದರೂ ನತದೃಷ್ಟಳು ಬದುಕಲಿಲ್ಲವಲ್ಲಾ ಎಂದು ಜನ ಬೇಸರಿಸಿಕೊಳ್ಳುತ್ತಿದ್ದಾರೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot