Home
ಸುದ್ದಿಜಾಲ

ಲೊಕೇಷನ್ ಅಷ್ಟೇ ಅಲ್ಲದೇ ಬ್ಯಾಟರಿ ಲೆವೆಲ್ ಹಂಚಿಕೆಗೆ ಗೂಗಲ್ ಮ್ಯಾಪ್‌ನಲ್ಲಿ ಅವಕಾಶ..!

By Gizbot Bureau

ಗೂಗಲ್ ತನ್ನ ನೇವಿಗೇಷನ್ ಆಪ್ ಗೂಗಲ್ ಮ್ಯಾಪ್ ಅನ್ನು ದಿನದಿಂದ ದಿನಕ್ಕೆ ಅಭಿವೃದ್ಧಿ ಪಡಿಸುವುದಕ್ಕೆ ಕೆಲಸ ಮಾಡುತ್ತಿದೆ. ಈಗ ಆಂಡ್ರಾಯ್ಡ್ ಬಳಕೆದಾರರಿಗಾಗಿ ಕಂಪೆನಿಯು ಮತ್ತೊಂದು ವೈಶಿಷ್ಟ್ಯತೆಯನ್ನು ಪರಿಚಯಿಸುತ್ತಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಡಿವೈಸ್ ನಲ್ಲಿರುವ ಶೇಕಡಾ ಬ್ಯಾಟರಿ ಚಾರ್ಜ್ ಇರುವ ಪ್ರಮಾಣವನ್ನು ತಿಳಿಯುವುದಕ್ಕೆ ನೆರವು ನೀಡುತ್ತದೆ. ಈ ಹೊಸ ವೈಶಿಷ್ಟ್ಯತೆಯು ಗೂಗಲ್ ನಕ್ಷೆಗಳ ಸ್ಥಳ ಹಂಚಿಕೆ ವೈಶಿಷ್ಟ್ಯತೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ.

ಲೊಕೇಷನ್ ಅಷ್ಟೇ ಅಲ್ಲದೇ ಬ್ಯಾಟರಿ ಲೆವೆಲ್ ಹಂಚಿಕೆಗೆ ಗೂಗಲ್ ಮ್ಯಾಪ್‌ನಲ್ಲಿ ಅವಕಾಶ!

ಬಳಕೆದಾರರು ತಮ್ಮ ಲೋಕೇಷನ್ ನ್ನು ಇತರರೊಡನೆ ಹಂಚಿಕೊಂಡಾಗ ಅವರ ಮೊಬೈಲಿನ ಬ್ಯಾಟರಿ ಲೆವೆಲ್ ನ್ನು ಕೂಡ ಹಂಚಿಕೊಳ್ಳಬಹುದು. ಆ ಮೂಲಕ ನೀವು ಎಲ್ಲಿದ್ದೀರಿ, ನಿಮ್ಮ ಬ್ಯಾಟರಿ ಲೆವೆಲ್ ಎಷ್ಟಿದೆ ಎಂಬ ಮಾಹಿತಿಯು ನೀವು ಹಂಚಿಕೊಂಡ ವ್ಯಕ್ತಿಗೆ ತಿಳಿಯುತ್ತದೆ.ಆಂಡ್ರಾಯ್ಡ್ ಪೋಲೀಸರ ವರದಿಯಂತೆ, ಈ ಬ್ಯಾಟರಿ ಶೇರಿಂಗ್ ಅವಕಾಶವು ಕಳೆದ ಹಲವು ದಿನಗಳಿಂದ ಲಭ್ಯವಿದೆ ಆದರೆ ಅದು ಇಷ್ಟು ದಿನ ವಿಸಿಬಲ್ ಆಗಿರಲಿಲ್ಲ. ಆದರೆ ಈ ವೈಶಿಷ್ಟ್ಯವು ಇದುವರೆಗೂ ಸರಿಯಾದ ಬ್ಯಾಟರಿ ಪರ್ಸಟೇಂಜ್ ನ್ನು ತೋರಿಸಿಲ್ಲ ಎಂಬ ಮಾತೂ ಇದೆ.

ಒಂದು ವರದಿಯಲ್ಲಿ ಅವರು ಹೇಳಿರುವಂತೆ ಜಾನ್ ಎಂಬುವವರ ಬ್ಯಾಟರಿ ಲೆವೆಲ್ 15 ಶೇಕಡಾಕ್ಕಿಂತ ಕಡಿಮೆ ಇತ್ತಂತೆ. ಆದರೆ ಮ್ಯಾಪ್ ಜಾನ್ ಬ್ಯಾಟರಿ ಪರ್ಸಟೇಂಜ್ 50 ರಿಂದ 75 ಶೇಕಡಾ ಇದೆ ಎಂದು ತೋರಿಸುತ್ತಿತ್ತಂತೆ. ಆದರೆ ಈಗ ಕಂಪೆನಿಯು ಈ ವೈಶಿಷ್ಟ್ಯತೆಯ ಬಗ್ಗೆ ಹೆಚ್ಚಿನ ಕೆಲಸ ನಿರ್ವಹಿಸಿದೆ ಎಂದು ಕಾಣುತ್ತದೆ ಮತ್ತು ಅದನ್ನು ಈಗ ಎಲ್ಲರಿಗೂ ಪರಿಚಯಿಸಲು ಮುಂದಾಗಿರುವ ಸೂಚನೆ ಕಾಣುತ್ತದೆ.

ಈ ವೈಶಿಷ್ಟ್ಯವು ಯಾವ ಬಳಕೆದಾರರು ಲೊಕೇಷನ್ ಶೇರಿಂಗ್ ವೈಶಿಷ್ಟ್ಯತೆಯನ್ನು ಬಳಸುವುದಿಲ್ಲವೋ ಅವರಿಗೆ ಪ್ರಯೋಜನಕ್ಕೆ ಬರುವುದಿಲ್ಲ. ಆದರೆ, ಯಾರು ತಮ್ಮ ಸ್ಥಳವನ್ನು ಇತರರೊಡನೆ ಪ್ರವಾಸ ಅಥವಾ ಇತರೆ ಸಂದರ್ಬಗಳಲ್ಲಿ ಹಂಚಿಕೊಳ್ಳುತ್ತಾರೋ ಅವರಿಗೆ ಬಹಳವಾಗಿ ನೆರವಾಗುತ್ತದೆ ಮತ್ತು ಅವರು ಯಾರಿಗೆ ತಮ್ಮ ಲೊಕೇಷನ್ ನ್ನು ಹಂಚಿಕೊಂಡಿರುತ್ತಾರೋ ಅವರಿಗೆ ಇವರ ಬ್ಯಾಟರಿ ವಿವರವೂ ಲಭ್ಯವಾಗುತ್ತದೆ.

ಕಳೆದ ತಿಂಗಳು, ಗೂಗಲ್ ಜಾಗತಿಕವಾಗಿ 'two wheeler’ವೈಶಿಷ್ಟ್ಯತೆಯನ್ನು ಭಾರತದಲ್ಲೇ ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ನಂತರ ಕಂಪೆನಿಯು ಹಾಂಗ್ ಕಾಂಗ್, ಇಂಡೋನೇಷಿಯಾ, ಮಲೇಷಿಯಾ, ಮಾಯನ್ಮಾರ್, ಫಿಲಿಫೈನ್ಸ್, ಸಿಂಗಾಪುರ, ತೈವಾನ್, ಥೈಲ್ಯಾಂಡ್ ಮತ್ತು ವಿಯೆಟ್ನಾಂಗಳಲ್ಲಿ ಬಿಡುಗಡೆಗೊಳಿಸಿತು.

ಈ ಟು ವೀಲರ್ ಮೋಡ್ ದ್ವಿಚಕ್ರ ವಾಹನ ಸವಾರರಿಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಲು ಸುಲಭದ ಮಾರ್ಗವನ್ನು ಸೂಚಿಸುತ್ತದೆ.ಗೂಗಲ್ ಮ್ಯಾಪ್ ನ ಪ್ರೊಡಕ್ಟ್ ಹೆಡ್ ಆಗಿರುವ ಕ್ರಿಷ್ ವಿಠ್ಠಲ್ ದೇವರಾ “ ದ್ವಿಚಕ್ರ ವಾಹನ ಸವಾರರಿಗೆ ತಾವು ಡ್ರೈವಿಂಗ್ ಆರಂಭಿಸುವುದಕ್ಕೂ ಮುನ್ನವೇ ತಲುಪಬೇಕಾದ ಸ್ಥಳದ ಮಾಹಿತಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸುಲಭವಾಗುವಂತ ವೈಶಿಷ್ಟ್ಯತೆ ಇದಾಗಿದ್ದು, ರಸ್ತೆಗಳು ಮತ್ತು ದಾರಿಗಳ ಹೆಸರುಗಳು ಸರಿಯಾಗಿ ಇರದ ಭಾರತದಂತ ದೇಶದಲ್ಲಿ ಇದು ಹೆಚ್ಚು ನೆರವಿಗೆ ಬರುತ್ತದೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Best Mobiles in India

English summary
Google Maps' new feature can help others 'track' your smartphone's battery. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+