Home
ಸುದ್ದಿಜಾಲ

'ಗೂಗಲ್ ಮ್ಯಾಪ್'ಗೆ ಬಂದಿರುವ ಮತ್ತೊಂದು ರೋಮಾಂಚನಕಾರಿ ಫೀಚರ್ ಅನ್ನು ನೀವು ನೋಡಿದ್ರಾ?

By Bhaskar N J

ಜೇಬಿನಿಂದ ಸ್ಮಾರ್ಟ್‌ಫೋನ್ ತೆಗೆದು ಜಿಪಿಎಸ್ ಆನ್ ಮಾಡಿ ಗೂಗಲ್ ಮ್ಯಾಪ್ ಅಪ್ಲಿಕೇಶನನ್ ಬೆರಳಿಂದ ಮುಟ್ತೀರಿ. ನಂತರ ನಿಮ್ಮ ಪರದೆಯಮೇಲೆ ನೀವಿರುವ ಜಾಗದ ಮ್ಯಾಪ್ ಮೂಡಲಾರಂಬಿಸುತ್ತದೆ. ಈಗ ಪರದೆಯಮೇಲೆ ಬಾಣದ ತುದಿಯ ಆಕಾರದ ಸಣ್ಣ ನೀಲಿ ಬಣ್ಣದ ಗುರುತು ಮೂಡುತ್ತದೆ. ಅದೇ ನಿಮ್ಮ ಸ್ಮಾರ್ಟ್ ಫೋನ್ (ಗುರುತು)!

ಮತ್ತೆ ನೀವು ಫೋನ್ ಹಿಡಿದುಕೊಂಡು ನೀವು ಗೇಟಿನತ್ತ ನಡೆಯುತ್ತಿದ್ದಂತೆ ಆ ಬಾಣದ ಗುರುತೂ ಸ್ಕ್ರೀನ್ ಮೇಲಿನ ಮ್ಯಾಪಿನಲ್ಲಿ ಚಲಿಸಲಾರಂಭಿಸುತ್ತದೆ.! ವೇಗವಾಗಿ ಹೋಗುತ್ತಿದ್ದರೆ ಪರದೆಯಲ್ಲಿ ಕಾಣುವ ರಸ್ತೆಯ ಮ್ಯಾಪಿನಲ್ಲಿ ಆ ಗುರುತೂ ಅಷ್ಟೇ ವೇಗವಾಗಿ ಚಲಿಸುತ್ತಿರುತ್ತದೆ. ಇಂತಹ ಗೂಗಲ್ ಮ್ಯಾಪ್ ವ್ಯವಸ್ಥೆಗೆ ನೀವು ಖಂಡಿತವಾಗಿ ಮನಸೋತಿದ್ದೀರಾ ಅಲ್ಲವೇ?

'ಗೂಗಲ್ ಮ್ಯಾಪ್'ಗೆ ಬಂದಿರುವ ಮತ್ತೊಂದು ರೋಮಾಂಚನಕಾರಿ ಫೀಚರ್ ಅನ್ನು ನೋಡಿದ್ರಾ?

ನೀವಿಷ್ಟು ತಿಳಿದಿದ್ದರೆ, ನಾವಿಂದು ಹೇಳುವ ಮತ್ತೊಂದು ವಿಷಯ ನಿಮಗೆ ಮತ್ತೆ ರೋಮಾಂಚನಕಾರಿ ಅನುಭವ ನೀಡಲಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈಗಾಗಲೇ ಬಳಕೆಯಿದ್ದ ವ್ಯವಸ್ಥೆಯೊಂದು ಈಗ ಭಾರತದಲ್ಲಿಯೂ ಅಪ್‌ಡೇಟ್ ಆಗಿ ಬಳಕೆಗೆ ಬಂದಿದೆ. ಹಾಗಾದರೆ, ಹೊಸದಾಗಿ ಅಪ್‌ಡೇಟ್ ಆಗಿರುವ ಈ ಗೂಗಲ್ ಮ್ಯಾಪ್ ವೈಶೀಷ್ಟ್ಯವೇನು ಎಂಬುನದನ್ನು ಮುಂದೆ ತಿಳಿಯಿರಿ.

ಗೂಗಲ್ ಮ್ಯಾಪ್ ಅಪ್‌ಡೇಟ್ ಆಗಿದೆ ನೋಡಿ!

ಗೂಗಲ್ ಮ್ಯಾಪ್ ಅಪ್‌ಡೇಟ್ ಆಗಿದೆ ನೋಡಿ!

ಗೂಗಲ್ ಕಂಪೆನಿಯ ಜನಪ್ರಿಯ ಸೇವೆ ಗೂಗಲ್ ಮ್ಯಾಪ್ ಮತ್ತೆ ಅಪ್‌ಡೇಟ್ ಆಗಿದೆ. ಗೂಗಲ್ ಮ್ಯಾಪ್ ಬಳಕೆದಾರರಿಗೆ ಮತ್ತಷ್ಟು ಸೇವೆಗಳನ್ನು ಗೂಗಲ್ ಮ್ಯಾಪ್ ಒದಗಿಸಿದೆ. ನೀವು ಗೂಗಲ್ ಮ್ಯಾಪಿನ ಇತ್ತೀಚಿನ ವರ್ಷನ್ ಅನ್ನು ಡೌನ್‌ಲೋಡ್ ಮಾಡಿಕೊಂಡರೆ ನಿಮಗೆ ಹತ್ತಾರು ಅಪ್‌ಡೇಟ್‌ಗಳು ಕಾಣಿಸುತ್ತವೆ.

ಟೈಮ್‌ಲೈನ್ ಟ್ರ್ಯಾಕಿಂಗ್!

ಟೈಮ್‌ಲೈನ್ ಟ್ರ್ಯಾಕಿಂಗ್!

ನಾವಿಂದು ಹೇಳುವ ಮತ್ತೊಂದು ವಿಷಯ ನಿಮಗೆ ಮತ್ತೆ ರೋಮಾಂಚನಕಾರಿ ಅನುಭವ ನೀಡಲಿದೆ ಎಂದು ನಾವು ಹೇಳಿದ ವಿಷಯವೇ ಗೂಗಲ್ ಮ್ಯಾಪ್ 'ಟೈಮ್‌ಲೈನ್ ಟ್ರ್ಯಾಕಿಂಗ್' ಗೂಗಲ್ ಮ್ಯಾಪ್ ತೆರೆದು ಮೂರು ಗೆರೆಗಳುಳ್ಳ ಹೋಮ್ ಬಟನ್ ಅನ್ನು ಕ್ಲಿಕ್ ಮಾಡಿದರೆ ಟೈಮ್‌ಲೈನ್ ಟ್ರ್ಯಾಕಿಂಗ್ ಕಾಣಿಸುತ್ತದೆ. ಇದು ರೂಮಾಂಚನಕಾರಿಯಾಗಿದೆ.

ಏನಿದು ಟ್ರ್ಯಾಕಿಂಗ್?

ಏನಿದು ಟ್ರ್ಯಾಕಿಂಗ್?

ಗೂಗಲ್ ಮ್ಯಾಪ್ ನಿಮ್ಮೆಲ್ಲಾ ದಿನಚರಿಗಳನ್ನು ನಿಮಗೆ ಗೊತ್ತಿಲ್ಲದಂತೆ ಟ್ರ್ಯಾಕ್ ಮಾಡುವ ಸೇವೆಗೆ "ಯುವರ್ ಟ್ರ್ಯಾಕಿಂಗ್ ಎಂದು ಹೆಸರನ್ನು ನೀಡಿದೆ, ನೀವು ಗೂಗಲ್ ಮ್ಯಾಪ್ ತೆರೆದು 'ಯುವರ್ ಟೈಮ್‌ಲೈನ್" ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಪ್ರತಿದಿನ ನೀವು ಸಂಚರಿಸಿದ ಎಲ್ಲಾ ಮಾರ್ಗಗಳನ್ನು ಈ ಟೈಮ್‌ಲೈನ್ ಸೇವ್ ಮಾಡಿಕೊಂಡಿರುತ್ತದೆ.!

ಕ್ಷಣ ಕ್ಷಣವೂ ಟ್ರ್ಯಾಕ್!

ಕ್ಷಣ ಕ್ಷಣವೂ ಟ್ರ್ಯಾಕ್!

ಗೂಗಲ್ ಮ್ಯಾಪ್ ನಿಮ್ಮೆಲ್ಲಾ ದಿನಚರಿಗಳನ್ನು ಕ್ಷಣ ಕ್ಷಣವೂ ಟ್ರ್ಯಾಕ್ ಮಾಡಿರುತ್ತದೆ. ನೀವು ಸಂಚರಿಸಿದ ಮಾರ್ಗ ಯಾವುವು ಮತ್ತು ಎಲ್ಲೆಲ್ಲಿ ಸಂಚರಿಸಿದ್ದೀರಾ ಎಂಬೆಲ್ಲಾ ಮಾಹಿತಿಗಳನ್ನು ನಿಖರವಾಗಿ ನೀಡುತ್ತಿದೆ. ನೀವು ಬೇಟಿ ನೀಡಿದ ಅಂಗಡಿಗಳ ಮಾಹಿತಿ, ರಸ್ತೆಗಳ ಮಾಹಿತಿ ಮತ್ತು ಎಷ್ಟು ದೂರ ಸಂಚರಿಸಿದ್ದೀರಾ ಎಂಬೆಲ್ಲಾ ಮಾಹಿತಿಗಳನ್ನು ಸಹ ತಿಳೀಸುತ್ತದೆ.

ಟ್ರ್ಯಾಕರ್ ಆಗಿಯೂ ಗೂಗಲ್ ಮ್ಯಾಪ್!!

ಟ್ರ್ಯಾಕರ್ ಆಗಿಯೂ ಗೂಗಲ್ ಮ್ಯಾಪ್!!

'ಯುವರ್ ಟೈಮ್‌ಲೈನ್" ಆಯ್ಕೆಯ ಮೂಲಕ ಗೂಗಲ್ ಮ್ಯಾಪ್ ವಾಕಿಂಗ್ ಟ್ರ್ಯಾಕರ್ ಆಗಿಯೂ ಬದಲಾಗಿದೆ. ನೀವು ಯಾವೆಲ್ಲಾ ಮಾರ್ಗದಲ್ಲಿ ಹೇಗೆ ಸಂಚರಿಸಿದ್ದೀರಾ ಎಂಬುದನ್ನು ಮ್ಯಾಪ್ ತನ್ನ ಕೃತಕ ಬುದ್ದಿಮತ್ತೆಯಿಂದ ತಿಳಿಯುತ್ತದೆ. ಒಂದು ವೇಳೆ ನೀವು ನಡೆದುಕೊಂಡು ಹೋಗಿದ್ದರೆ, ಎಷ್ಟು ದೂರ ನಡೆದುಹೋಗಿದ್ದೀರಾ ಎಂಬುದನ್ನು ನಿಖರವಾಗಿ ತೋರಿಸುತ್ತದೆ.

ನಿಖರ ಸಮಯವನ್ನು ಸಹ ತಿಳಿಯಬಹುದು!!

ನಿಖರ ಸಮಯವನ್ನು ಸಹ ತಿಳಿಯಬಹುದು!!

'ಯುವರ್ ಟೈಮ್‌ಲೈನ್" ಆಯ್ಕೆಯ ಮೂಲಕ ಗೂಗಲ್ ಮ್ಯಾಪಿನಲ್ಲಿ ನೀವು ಸಂಚಯಿಸಿದ ಸ್ಥಳಗಳ ನಿಖರವಾದ ಟೈಮ್‌ಲೈನ್ ಅನ್ನು ನೀವು ನೋಡಬಹುದಾಗಿದೆ. 10 ದಿನಗಳ ಹಿಂದೆ ನೀವು ಯಾವ ಸ್ಥಳಕ್ಕೆ ಎಷ್ಟು ಗಂಟೆಯಲ್ಲಿ, ಎಷ್ಟು ನಿಮಿಷದಲ್ಲಿ ಅಥವಾ ಎಷ್ಟನೇ ಸೆಕೆಂಡ್‌ನಲ್ಲಿ ಭೇಟಿ ನೀಡಿರುತ್ತೀರಾ ಎಂಬುದನ್ನು ಗೂಗಲ್ ಮ್ಯಾಪ್ಸ್ ಸೇವ್ ಮಾಡಿಕೊಂಡಿರುತ್ತದೆ.

ಜಿಪಿಎಸ್ ಮತ್ತು ಡೇಟಾ ಆನ್ ಇರಬೇಕು!

ಜಿಪಿಎಸ್ ಮತ್ತು ಡೇಟಾ ಆನ್ ಇರಬೇಕು!

ಗೂಗಲ್ ಮ್ಯಾಪಿನಲ್ಲಿ ನೀವು ಸಂಚಯಿಸಿದ ಸ್ಥಳಗಳ ನಿಖರವಾದ ಟೈಮ್‌ಲೈನ್ ದಾಖಲಾಗಲು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಜಿಪಿಎಸ್ ಮತ್ತು ಡೇಟಾ ಆನ್ ಇರಬೇಕಿದೆ. ಈ ಎರಡನ್ನು ನೀವು ಆನ್‌ ಮಾಡಿಬಿಟ್ಟರೆ, 'ಯುವರ್ ಟೈಮ್‌ಲೈನ್‌ನಲ್ಲಿ ಟ್ವೈಪ್ ಮಾಡುವ ಮೂಲಕ ಪ್ರತಿದಿನದ ನಿಮ್ಮ ಸಂಚಾರಿ ದಿನಚರಿಯನ್ನು ತಿಳಿದುಕೊಳ್ಳಬಹುದು.

ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬಗ್ಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ 10 ಸತ್ಯ ಸಂಗತಿಗಳಿವು!!

ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬಗ್ಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ 10 ಸತ್ಯ ಸಂಗತಿಗಳಿವು!!

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬಗ್ಗೆ ಯಾರಿಗೆ ಗೊತ್ತಿಲ್ಲಾ ಹೇಳಿ.? ಅದರಲ್ಲಿಯೂ ಟೆಲಿಕಾಂ ಕಂಪೆನಿ ಜಿಯೋ ವನ್ನು ಶುರುಮಾಡಿದ ನಂತರವಂತೂ, ಪ್ರತಿಯೋರ್ವ ಭಾರತೀಯನಿಗೂ ಅಂಬಾನಿ ಈಗ ದೇವರಾಗಿದ್ದಾರೆ. ಟೆಲಿಕಾಂ ಲೋಕದ ಆಧುನಿಕ ಡೇಟಾ ದೇವರು ಎಂದೆ ಹೆಸರಾಗಿರುವ ಅಂಬಾನಿಗೆ ಈಗ 61 ವರ್ಷ ತುಂಬಿದೆ.!

ಹೌದು, ಮಾರ್ಚ್ 2018 ರಲ್ಲಿ ಬಿಡುಗಡೆಯಾದ ಫೋರ್ಬ್ಸ್ ಮಾಹಿತಿಯ ಪ್ರಕಾರ, ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ವ್ಯಾಪಾರಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಇಂದು ವಿಶ್ವದ ಬೃಹತ್ ಉದ್ಯಮಿಗಳಲ್ಲಿ ಓರ್ವರಾಗಿ ಬೆಳೆದುನಿಂತಿದ್ದಾರೆ. ತಮ್ಮ 61 ವರ್ಷ ವಯಸ್ಸಿನಲ್ಲಿ ಅಭೂತಪೂರ್ವ ಸಾಧನೆ ಮಾಡಿ ವಿಶ್ವದ ಗಮನಸೆಳೆದಿದ್ದಾರೆ.

1957 ರ ಎಪ್ರಿಲ್ 19 ರಂದು ಜನಿಸಿದ ಮುಖೇಶ್ ಅಂಬಾನಿ, ಪ್ರಸ್ತುತ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಸಂಸ್ಥೆ ಸಿಇಒ ಮತ್ತು ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಹಾಗಾಗಿ, ವಿಶ್ವದಲ್ಲಿಯೇ ಹೆಸರುಗಳಿಸುವಂತೆ ಸಂಸ್ಥೆಯನ್ನು ಮುನ್ನಡೆಸಿದ ಮುಖೇಶ್ ಅಂಬಾನಿ ಅವರ ವಯಕ್ತಿಕ ಜೀವನದ ಬಗ್ಗೆ ಇರುವ 10 ಆಸಕ್ತಿದಾಯಕ ಸಂಗತಿಗಳು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಜಿಯೊ ಚಂಡಮಾರುತ!!

ಜಿಯೊ ಚಂಡಮಾರುತ!!

ಮುಖೇಶ್ ಅಂಬಾನಿ ಜಿಯೊವನ್ನು ಪ್ರಾರಂಭಿಸಿದಾಗ, ಭಾರತದ ಟೆಲಿಕಾಂ ವಲಯವು ಚಂಡಮಾರುತಕ್ಕೆ ಸಿಲುಕಿದಂತಾಯಿತು. ಜಿಯೋ ಶುರುವಾದ ಒಂದು ತಿಂಗಳೊಳಗೆ 16 ದಶಲಕ್ಷ ಚಂದಾದಾರರನ್ನು ಗಳಿಸಿ ದಾಖಲೆ ಸೃಷ್ಟಿಸಿತು. ಸ್ಪರ್ಧಾತ್ಮಕ ಟೆಲಿಕಾಂ ಬೆಲೆ ಯುದ್ಧವನ್ನು ಹೆಚ್ಚಿಸಿತು. ಅಂತಿಮವಾಗಿ ಗ್ರಾಹಕರಿಗೆ ಲಾಭದಾಯಕವಾಗಿರುವ ಜಿಯೋ ಈಗಲೂ ಗ್ರಾಹಕರ ಅತ್ಯುತ್ತಮ ಟೆಲಿಕಾಂ ಕಂಪೆನಿಯಾಗಿದೆ.

ಅಂಬಾನಿ ಫೇವರೇಟ್ ಗೇಮ್ ಕ್ರಿಕೆಟ್ ಅಲ್ಲ.!!

ಅಂಬಾನಿ ಫೇವರೇಟ್ ಗೇಮ್ ಕ್ರಿಕೆಟ್ ಅಲ್ಲ.!!

ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸ್ ಮಾಲಿಕತ್ವ ಹೊಂದಿರುವ ಅಂಬಾನಿ ಮುಂಬಯಿ ಇಂಡಿಯನ್ಸ್ ಕ್ರಿಕೆಟ್ ತಂಡವನ್ನು ಹೊಂದಿರುವುದು ನಿಮಗೆಲ್ಲಾ ತಿಳಿದಿದೆ. ಆದರೆ, ಮುಖೇಶ್ ಅಂಬಾನಿ ಅವರ ಶಾಲಾ ದಿನಗಳಲ್ಲಿ ಹೆಚ್ಚಾಗಿ ಹಾಕಿಯನ್ನು ಆಡುತ್ತಿದ್ದರು ಮತ್ತು ಹಾಕಿ ಆಟದ ಕಾರಣದಿಂದಾಗಿ ಅವರು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಂಡಿದ್ದರು.!!

ವಿಶ್ವದ ಅತಿ ದೊಡ್ಡ ಸಂಸ್ಕರಣಾಗಾರ!!

ವಿಶ್ವದ ಅತಿ ದೊಡ್ಡ ಸಂಸ್ಕರಣಾಗಾರ!!

ಐಟಿ ಉದ್ಯಮೇತರನಾಗಿ ಮುಖೇಶ್ ಅಂಬಾನಿ ಯಾವಾಗಲೂ ಒಳ್ಳೆಯ ಉದ್ಯಮಿ ಎನ್ನುತ್ತವೆ ವರದಿಗಳು. ಇದಕ್ಕೆ ಪೂರಕವೆಂಬಂತೆ ಮುಖೇಶ್ ಅಂಬಾನಿ ಅವರು ವಿಶ್ವದಲ್ಲಿಯೇ ಅತಿ ದೊಡ್ಡ ಸಂಸ್ಕರಣಾಗಾರವನ್ನು ಹೊಂದಿದ್ದಾರೆ. ಪ್ರಪಂಚದ ಅತಿದೊಡ್ಡ ಸಂಸ್ಕರಣಾಗಾರವಾದ ದಿನಕ್ಕೆ 6,68,000 ಬ್ಯಾರೆಲ್ ರಿಫೈನರಿ ನಡೆಯುತ್ತದಂತೆ.

ವಿಶ್ವದ ಅತ್ಯಂತ ದುಬಾರಿ ಮನೆ!!

ವಿಶ್ವದ ಅತ್ಯಂತ ದುಬಾರಿ ಮನೆ!!

ಮುಖೇಶ್ ಅಂಬಾನಿ ಅವರು ವಿಶ್ವದ ಅತ್ಯಂತ ದುಬಾರಿ ಮನೆಯ ಮಾಲಿಕತಾಗಿದ್ದಾರೆ. ದಕ್ಷಿಣ ಮುಂಬಯಿಯಲ್ಲಿ ಇರುವ ಅಂಟಿಲಿಯಾ ಮನೆಯ ಅಂದಾಜು ಮೌಲ್ಯ ಸುಮಾರು 1 ಬಿಲಿಯನ್ ಡಾಲರ್ ಎಂದು ವರದಿಯಾಗಿದೆ. ಈ ಮನೆ 27 ಅಂತಸ್ತುಗಳನ್ನು ಹೊಂದಿದ್ದು, 600 ಕ್ಕೂ ಹೆಚ್ಚಿನ ಸಿಬ್ಬಂದಿಗಳನ್ನು ಹೊಂದಿದೆ ಎನ್ನಲಾಗಿದೆ.

ಅಂಬಾನಿ ಸ್ನೇಹಿತರು ಯಾರು ಗೊತ್ತಾ?

ಅಂಬಾನಿ ಸ್ನೇಹಿತರು ಯಾರು ಗೊತ್ತಾ?

ಮುಖೇಶ್ ಅಂಬಾನಿ ಅವರ ಶಾಲಾ ದಿನಗಳಲ್ಲಿ ಹೊಂದಿದ್ದ ಬಾಲ್ಯ ಸ್ನೇಹಿತರನ್ನೇ ಮುಂದೆಯೂ ಸ್ನೇಹಿತರನ್ನಾಗಿಯೇ ಕಾಪಾಡಿಕೊಂಡುಬಂದಿದ್ದಾರೆ. ಉದ್ಯಮಿಗಳಾದ ಆದಿ ಗೋದ್ರೆಜ್ ಮತ್ತು ಆನಂದ್ ಮಹೀಂದ್ರಾ ಅವರು ಅಂಬಾನಿ ಅವರ ಶಾಲೆಯ ಸಹವರ್ತಿಗಳು ಮತ್ತು ಅವರು ಈಗಲೂ ಅತ್ಯುತ್ತಮ ಸ್ನೇಹಿತರು.

ಮದ್ಯಪಾನ ಮಾಡಲೇ ಇಲ್ಲ!!

ಮದ್ಯಪಾನ ಮಾಡಲೇ ಇಲ್ಲ!!

ಇಂದಿನ ಶ್ರೀಮಂತ ಮಕ್ಕಳಂತೆ ಮುಖೇಶ್ ಅಂಬಾನಿ ಎಂದಿಗೂ ಮದ್ಯಪಾನ ಮಾಡಲೇ ಇಲ್ಲವಂತೆ. ಕಾಲೇಜು ದಿನಗಳಿಂದಲೂ ಮದ್ಯಪಾನದಿಂದ ದೂರವೇ ಉಳಿದಿದ್ದ ಮುಖೇಶ್ ಅಂಬಾನಿ ಅವರು ಮಾಂಸವನ್ನು ತಿನ್ನುವುದಿಲ್ಲವಂತೆ. ಮೊಟ್ಟೆಯನ್ನು ತನ್ನದಂತಹ ಶುದ್ಧ ಸಸ್ಯಾಹಾರಿ ಅವರಂತೆ.!!

168 ಕ್ಕಿಂತಲೂ ಹೆಚ್ಚು ಕಾರಿವೆ.!!

168 ಕ್ಕಿಂತಲೂ ಹೆಚ್ಚು ಕಾರಿವೆ.!!

ಮುಖೇಶ್ ಅಂಬಾನಿ ಕಾರುಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅಂಬಾನಿ ಬಳಿಯಲ್ಲಿ 168 ಕ್ಕಿಂತಲೂ ಹೆಚ್ಚು ಕಾರುಗಳಿವೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸುತ್ತಿರುವ ಹಾಗೂ ಬಾಂಬ್ ಸ್ಫೋಟವನ್ನು ತಡೆಯುವಷ್ಟು ರಕ್ಷಾಕವಚ ಹೊಂದಿರುವ BMW 760LI ಕಾರು ಬಳಕೆಯಲ್ಲಿದೆ. ಮರ್ಸಿಡಿಸ್-ಮೇಬ್ಯಾಚ್ ಬೆಂಜ್ S660 ಗಾರ್ಡ್, ಆಯ್ಸ್ಟನ್ ಮಾರ್ಟಿನ್ ರ್ಯಾಪಿಡ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರುಗಳೂ ಕೂಡ ಅಂಬಾನಿ ಬತ್ತಳಿಕೆಯಲ್ಲಿವೆ.

15 ಕೋಟಿ ವಾರ್ಷಿಕ ವೇತನ!!

15 ಕೋಟಿ ವಾರ್ಷಿಕ ವೇತನ!!

ಇಷ್ಟೆಲ್ಲಾ ಸಂಪತ್ತಿಗೆ ಒಡೆಯನಾಗಿರುವ ಮುಖೇಶ್ ಅಂಬಾನಿ ಅವರು ವಾರ್ಷಿಕವಾಗಿ ಕೇವಲ 15 ಕೋಟಿ ರೂಪಾಯಿಗಳ ವೇತನ ಪಡೆಯುತ್ತಾರೆ. ಇದು ಕಳೆದ ಒಂಬತ್ತು ವರ್ಷಗಳಿಂದ ಬದಲಾಗದೆ ಉಳಿದಿರುವುದು ವಿಶೇಷವಾಗಿದೆ. ಅಂಬಾನಿಯ ಇನ್ನೆಲ್ಲಾ ಆದಾಯವು ಅವರ ಶೇರುಗಳಿಂದಲೇ ಅವರಿಗೆ ಬಂದು ಸೇರಲಿದೆ.

5% ಮಾತ್ರ ತೆರಿಗೆ ಕಟ್ಟುತ್ತಾರೆ.!!

5% ಮಾತ್ರ ತೆರಿಗೆ ಕಟ್ಟುತ್ತಾರೆ.!!

ಪ್ರಸ್ತುತ 40.1 ಬಿಲಿಯನ್ ಆಸ್ತಿಯನ್ನು ಹೊಂದಿರುವ ಮುಖೇಶ್ ಅಂಬಾನಿಯ ಅವರ ಕಂಪೆನಿಯು ಭಾರತದ ಒಟ್ಟು ತೆರಿಗೆ ಆದಾಯದ ಸುಮಾರು 5% ರಷ್ಟು ಕೊಡುಗೆಯನ್ನು ನಿಡುತ್ತಿದೆ.

Best Mobiles in India

English summary
Google Maps is rolling out a new feature for Android and desktop called Your Timeline that shows you location history. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+