Google Maps ನಲ್ಲಿ ಬ್ಯಾಟರಿ ಸೇವ್ ಮಾಡುವ ಹೊಸ ಫೀಚರ್!
ಇತ್ತೀಚಿಗೆ ಗೂಗಲ್ ಮ್ಯಾಪ್ಸ್ ಇಲ್ಲದಿದ್ದರೆ ಯಾರ ಪ್ರಯಾಣವು ಸರಳವಾಗಿರುವದಿಲ್ಲ ಎಂಬ ಮಾತಿದೆ. ಆದರೆ, ಸ್ಮಾರ್ಟ್‌ಫೋನ್‌ನಲ್ಲಿ Google Maps ನ್ಯಾವಿಗೇಶನ್ ಬಳಸುವವರು ಬ್ಯಾಟರಿ ಬೇಗ ಖಾಲಿಯಾಗುವ ಸಮಸ್ಯೆಯನ್ನು ಚೆನ್ನಾಗಿ ತಿಳಿದಿರುತ್ತಾರೆ. ಡಿಸ್‌ಪ್ಲೇ ನಿರಂತರವಾಗಿ ಆನ್ ಆಗಿರಬೇಕು, GPS ಸದಾ ಸಕ್ರಿಯ ಮತ್ತು ಡೇಟಾ ಸಂಪರ್ಕವೂ ಇರುತ್ತದೆ. ಇವುಗಳಿಂದಾಗಿ ಸ್ಮಾರ್ಟ್‌ಫೋನ್ ಬ್ಯಾಟರಿ ಬಹುಬೇಗ ಖಾಲಿಯಾಗುತ್ತದೆ.
ಇದರಿಂದಾಗಿ, ಹಲವರು ಸ್ಮಾರ್ಟ್‌ಫೋನನ್ನು ಯಾವಾಗಲೂ ಚಾರ್ಜ್‌ಗೆ ಹಾಕಿಕೊಂಡೇ ಬಳಸುತ್ತಾರೆ. ಈ ಸಮಸ್ಯೆಯನ್ನು ಸುಧಾರಿಸಲು ಗೂಗಲ್ ಈಗ ಹೊಸ Power Saving Mode ಅನ್ನು ಪರಿಚಯಿಸಿದೆ. ಆರಂಭಿಕ ಹಂತದಲ್ಲಿ ಇದು Pixel 10 ಸರಣಿಗೆ ಮಾತ್ರ ಲಭ್ಯ. ಆದರೆ ವೈಶಿಷ್ಟ್ಯದ ಉಪಯುಕ್ತತೆಯನ್ನು ಗಮನಿಸಿದರೆ, ಇತರೆ ಪಿಕ್ಸೆಲ್ ಮಾದರಿಗಳು ಮತ್ತು ಆಂಡ್ರಾಯ್ಡ್ ಫೋನ್‌ಗಳಿಗೂ ಶೀಘ್ರದಲ್ಲೇ ಲಭ್ಯವಾಗುವ ಸಾಧ್ಯತೆ ಹೆಚ್ಚು.
ಏನಿದು ಪವರ್ ಸೇವಿಂಗ್ ಮೋಡ್?..ಇದು ಹೇಗೆ ಕೆಲಸ ಮಾಡುತ್ತದೆ?
Google Maps ತರೆದಾಗ ಸೆಟ್ಟಂಗ್ಸ್‌ನಲ್ಲಿ ಹೊಸದಾಗಿ Power Saving Mode ಮೋಡ್ ಕಾಣಿಸುತ್ತದೆ. ಪ್ರಸ್ತುತ ಇದು Google Pixel ಸಾಧನಗಳ Always-On Display Min Mode ಅನ್ನು ಬಳಸುತ್ತದೆ. ಇದರ ಮೂಲಕ ಮ್ಯಾಪ್ ಬಣ್ಣದ ಬದಲು ಮೋನೊಕ್ರೋಮ್ ರೂಪದಲ್ಲಿ ಕೆಲಸ ಮಾಡುತ್ತದೆ. ಇದರಿಂದ ಕಡಿಮೆ refresh rate ಮತ್ತು ಕಡಿಮೆ brightness ಬಳಕೆಯಾಗುತ್ತದೆ. ಇದರಿಂದ ಬ್ಯಾಟರಿ ಬಳಕೆ ಗಮನಾರ್ಹವಾಗಿ ಕುಗ್ಗುತ್ತದೆ.

ಈ ವೈಶಿಷ್ಟ್ಯವನ್ನು ಹೇಗೆ ಆನ್ ಮಾಡಬೇಕು? (Pixel 10 ಸರಣಿ ಗೈಡ್)
Google Mapsನಲ್ಲಿ ಪವರ್ ಸೇವಿಂಗ್ ಮೋಡ್ ಸಕ್ರಿಯಗೊಳಲು, Google Maps ತೆರೆಯಿರಿ, ಮೇಲಿನ ಬಲಭಾಗದ ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ Settings ನಲ್ಲಿ Navigation ತೆರೆಯಿರಿDriving Options ವಿಭಾಗದಲ್ಲಿ Power Saving Mode ಟಾಗಲ್ ಆನ್ ಮಾಡಿ
ನವಿಗೇಶನ್ ಪ್ರಾರಂಭಿಸಿ. ನಂತರ ನಂತರ ಪವರ್ ಬಟನ್ ಒತ್ತಿ, ಆಗ ಲಾಕ್‌ಸ್ಕ್ರೀನ್‌ನಲ್ಲಿ ಪವರ್ ಸೇವಿಂಗ್ ಮ್ಯಾಪ್ ಕಾಣಿಸುತ್ತದೆ
ಗಮನಿಸಬೇಕಾದ ಎರಡು ಅಂಶಗಳಿವೆ
ಈ ಸೆಟ್ಟಿಂಗ್ಸ್ ನಂತರ Google Maps ನಿಮಗೆ ಸರಳ, ಕಡಿಮೆ ವಿದ್ಯುತ್ ಬಳಕೆಯ ಮ್ಯಾಪ್ ಅನ್ನು ಮಾತ್ರ ತೋರಿಸುತ್ತದೆ - ಮುಂದಿನ ತಿರುವು, ದಿಕ್ಕು ಮತ್ತು ಪ್ರಮುಖ ಸೂಚನೆಗಳು ಮಾತ್ರ ಇರುತ್ತದೆ, ಆದರೆ, ಇದು Portrait mode ಗೆ ಮಾತ್ರ ಬೆಂಬಲ ನೀಡುತ್ತದೆ. Landscapeಗೆ ತಿರುಗಿಸಿದರೆ "ಈ ಮೋಡ್‌ನ್ನು landscapeನಲ್ಲಿ ಬಳಸಲಾಗುವುದಿಲ್ಲ" ಎಂಬ ಎಚ್ಚರಿಕೆ ಕಾಣಿಸುತ್ತದೆ. ಹಾಗೆಯೇ, ಇದು Driving navigation ಗಷ್ಟೇ ಲಭ್ಯವಿದೆ.
ಒಟ್ಟಾರೆ ಸಾರಾಂಶವಾಗಿ, Google Maps ನಲ್ಲಿ ಕಾಣಿಸಿರುವ Power Saving Mode ವೈಶಿಷ್ಟ್ಯವು ಸರಳ, ಕಡಿಮೆ ಬ್ಯಾಟರಿ ಬಳಕೆಯ ಮತ್ತು ದೀರ್ಘ ಪ್ರಯಾಣ ಸ್ನೇಹಿಯಾಗಿ ಮಾಡುತ್ತದೆ. Pixel 10 ಬಳಕೆದಾರರು ಇದನ್ನು ಈಗಲೇ ಪ್ರಯತ್ನಿಸಬಹುದು. ಮುಂದಿನ ಅಪ್‌ಡೇಟ್‌ಗಳಲ್ಲಿ ಇತರೆ Android ಫೋನ್‌ಗಳಿಗೂ ಬರಬಹುದೆಂಬ ನಿರೀಕ್ಷೆ ಬಳಕೆದಾರರಲ್ಲಿ ಹೆಚ್ಚಾಗಿದೆ. Jogging, walking ಅಥವಾ biking navigationಗೂ ಬ್ಯಾಟರಿ ಉಳಿಸುವ ಅಗತ್ಯವಿದೆ. ಆದ್ದರಿಂದ ಗೂಗಲ್ ಭವಿಷ್ಯದಲ್ಲಿ ಎಲ್ಲಾ ಮೋಡ್‌ಗಳಿಗೆ ಬೆಂಬಲ ನೀಡಬಹುದು ಎಂದು ಬಳಕೆದಾರರು ನಿರೀಕ್ಷಿಸುತ್ತಿದ್ದಾರೆ.


Click it and Unblock the Notifications








