ಗೂಗಲ್‌ ಮ್ಯಾಪ್‌ನಲ್ಲಿ "anti national" ಟೈಪಿಸಿದರೆ ಜೆಎನ್‌ಯು ಪ್ರದರ್ಶನ!!

By Suneel
|

ಭಾರತದಲ್ಲಿ ಕಳೆದ ಹಲವು ದಿನಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸುದ್ದಿಯಲ್ಲಿರುವ ವಿಷಯ ಅಂದ್ರೆ, ಅದು ದೆಹಲಿಯ ಜವಹರ್‌ ಲಾಲ್‌ ನೆಹರೂ ವಿಶ್ವವಿದ್ಯಾಲಯದ "ಕನ್ಹಯ್ಯಾ ಕುಮಾರ್‌" ರವರ ದೇಶ ವಿರೋಧಿ ಆರೋಪದ ವಿವಾದದಾತ್ಮಕ ಸುದ್ದಿ. ಅದು ಎಷ್ಟು ಪ್ರಖ್ಯಾತ ಎಂದರೇ ಕೇವಲ ನ್ಯೂಸ್‌ನಲ್ಲಿ ಮಾತ್ರ ಅಲ್ಲ, ಈಗ ಗೂಗಲ್‌ ಮ್ಯಾಪ್‌ನಲ್ಲೂ ಸಹ ವಿವಾದ ಹೆಸರುವಾಸಿಯಾಗಿದೆ. ಈ ಮಾಹಿತಿ ಸ್ವಲ್ಪ ಅರ್ಥ ಆಗ್ಲಿಲ್ಲ ಅಂತಿರಾ? ಅದು ಬೇರೇ ಏನು ಅಲ್ಲಾ.... ನೀವು ಗೂಗಲ್‌ ಮ್ಯಾಪ್‌'ನ ಸರ್ಚ್‌ ಬಾರ್‌ನಲ್ಲಿ anti national ಎಂದು ಟೈಪ್‌ ಮಾಡಿದರೆ ಸಾಕು ಗೂಗಲ್‌ ಮ್ಯಾಪ್‌ ನಿಮಗೆ ತೋರಿಸುವುದೇ 'ಜವಹರ್‌ ಲಾಲ್‌ ನೆಹರೂ ವಿಶ್ವವಿದ್ಯಾಲಯ' ಹಾಗೂ ಎಡಭಾಗದಲ್ಲಿ ನೆಹರೂ ವಿಶ್ವವಿದ್ಯಾಲಯದ ವಾರ್ಸಿಟಿಯ ಪ್ರವೇಶ ದ್ವಾರ.

ಗೂಗಲ್‌ ಮ್ಯಾಪ್‌ನಲ್ಲಿ

ಹೌದು, ಇದು ನಿಜ ಬೇಕಾದ್ರೆ ನೀವು ಸಹ ಗೂಗಲ್‌ ಮ್ಯಾಪ್‌ನ ಸರ್ಚ್‌ ಬಾರ್‌ನಲ್ಲಿ anti national ಎಂದು ಟೈಪ್‌ ಮಾಡಿ ಒಮ್ಮೆ ನೋಡಿ. ಆದ್ರೆ ಪ್ರಪಂಚದ ಬೃಹತ್‌ ಸರ್ಚ್‌ ಇಂಜಿನ್‌ ಗೂಗಲ್‌ ಏಕೆ ಈ ರೀತಿ ತೋರಿಸುತ್ತಿದೆ ಎಂದು ಮಾತ್ರ ಗೊತ್ತಿಲ್ಲ. ಈ ಬಗ್ಗೆ ಕೆಲವು ವಿದ್ಯಾರ್ಥಿಗಳು ಮತ್ತು ಅಲ್ಲಿನ ಸಿಬ್ಬಂದಿಗಳು 'ಗೂಗಲ್‌ ಇಂಡಿಯಾಗೆ ಈ ಸಮಸ್ಯೆ ಬಗ್ಗೆ ಹೇಳುತ್ತೇವೆ' ಎಂಬುದನ್ನು ಮಾಧ್ಯಮಗಳು ವರದಿಮಾಡಿದೆ.

ಅಂದಹಾಗೆ ಜೆಎನ್‌ಯು(ಜವಹರ್ ಲಾಲ್‌ ನೆಹರೂ ವಿಶ್ವವಿದ್ಯಾಲಯ) ಕಳೆದ ಹಲವು ವಾರಗಳಿಂದ ದೇಶ ವಿರೋಧಿ ಪದಗಳ ಬಳಕೆ, ಕಾರ್ಯಗಳ ವಿವಾದದಲ್ಲಿದೆ ಎಂದು ಎಲ್ಲರಿಗೂ ತಿಳಿದಿರುವ ವಿಷಯ.

ಗೂಗಲ್‌ ಮ್ಯಾಪ್‌ನಲ್ಲಿ

ಜೆಎನ್‌ಯು' ವಿನ ವಿದ್ಯಾರ್ಥಿ ಪ್ರತಿನಿಧಿ ಕನ್ಹಯ್ಯಾ ಕುಮಾರ್‌ ಮತ್ತು ಇತರೆ ಇಬ್ಬರು ವಿದ್ಯಾರ್ಥಿಗಳನ್ನು ದೇಶದ್ರೋಹ ಆರೋಪದ ಮೇಲೆ ಬಂಧಿಸಲಾಗಿತ್ತು ಅಲ್ಲದೇ ಅವರಿಗೆ ಈ ತಿಂಗಳಲ್ಲಿ (ಮಾರ್ಚ್) ಜಾಮೀನು ನೀಡಲಾಗಿದೆ. ಇವರ ಮೇಲೆ "ಫೆಬ್ರವರಿ 9 ರಂದು ವಿಶ್ವವಿದ್ಯಾಲಯದಲ್ಲಿ 'ಸಂಸತ್ತು ದಾಳಿಯ ಅಪರಾಧಿ ಅಫ್ಜಲ್ ಗುರು ಮರಣದಂಡನೆ ಮೂರನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ' ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದ್ದರು"ಎಂದು ಆರೋಪಿಸಲಾಗಿತ್ತು.

ಓದಿರಿ:'ಗೂಗಲ್‌ ಕ್ರೋಮ್‌' ತೆಗೆದುಹಾಕುತ್ತಿದೆ ಗೂಗಲ್‌! ಕಾರಣ ಏನು?
ಓದಿರಿ:ಬಿಲ್‌ ಗೇಟ್ಸ್‌ ತಂದರು ಕ್ರಾಂತಿಕಾರಿ "ವಾಟರ್‌ಲೆಸ್‌ ಟಾಯ್ಲೆಟ್"

Best Mobiles in India

English summary
Google Maps shows JNU if you type 'anti-national'. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X