Subscribe to Gizbot

'ಗೂಗಲ್ ಮ್ಯಾಪ್‌'ಗೆ ಬರಲಿದೆ ಮತ್ತೊಂದು ವಿಶಿಷ್ಟ ಫೀಚರ್!!..ನೀವು ಊಹೆ ಸಹ ಮಾಡಿರೊಲ್ಲ!!

Written By:

ಎಲ್ಲರ ಸಾಮಾನ್ಯ ಸಮಸ್ಯೆಗಳಿಗೆ ಇಂಟರ್‌ನೆಟ್ ಮೂಲಕ ಪರಿಹಾರವನ್ನು ಹುಡುಕಿ ಬೃಹದಾಕಾರವಾಗಿ ಬೆಳೆದ ಕಂಪೆನಿ ಎಂದರೆ ಅದು ಗೂಗಲ್.! ಇಂದು ಗೂಗಲ್ ಇಲ್ಲದೆಯೇ ನಾವಿಲ್ಲ ಎನ್ನುವಷ್ಟು ನಾವು ಗೂಗಲ್‌ಗೆ ಅಂಟಿಕೊಂಡಿದ್ದೇವೆ. ಅದಕ್ಕೆ ಕಾರಣ ಕೂಡ ಗೂಗಲ್ ನೀಡುತ್ತಿರುವ ಅತ್ಯುತ್ತಮ ಸೇವೆಗಳು.!!

ಗೂಗಲ್ ಇಷ್ಟೆಲ್ಲಾ ಸೇವೆ ನೀಡುತ್ತಿದ್ದರೂ ಸಹ ಈಗಲೂ ಹೊಸ ಹೊಸ ಸೇವೆಗಳನ್ನು ಮತ್ತೆ ತರುವುದನ್ನು ನಿಲ್ಲಿಸುತ್ತಿಲ್ಲ.! ಇದೀಗ 'ಗೂಗಲ್ ಮ್ಯಾಪ್‌' ಸೇವೆಗೆ ಮತ್ತೊಂದು ವಿಶಿಷ್ಟ ಫೀಚರ್ ಅನ್ನು ಗೂಗಲ್ ಸಂಸ್ಥೆ ತರಲು ಮುಂದಾಗಿದ್ದು, ಈ ಆಯ್ಕೆ ನಿಮ್ಮನ್ನು ಎದ್ದೇಳಿಸುವ ಕೆಲಸವನ್ನು ಮಾಡಲಿದೆ.! ಹಾಗಾದರೆ, ಏನಿದು ಫೀಚರ್? ಇದರ ಉಪಯೋಗ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎದ್ದೇಳಿಸುವ ಕೆಲಸ ಮಾಡಲಿದೆ ಗೂಗಲ್!!

ಎದ್ದೇಳಿಸುವ ಕೆಲಸ ಮಾಡಲಿದೆ ಗೂಗಲ್!!

ಬಸ್ಸಿನಲ್ಲಿಯೋ ಅಥವಾ ರೈಲಿನಲ್ಲಿಯೋ ಪ್ರಯಾಣಿಸುವಾಗ ಜನರು ನಿದ್ದೇ ಹೋದರೆ ಗೂಗಲ್ ನೋಟಿಫಿಕೇಷನ್‌ಗಳ ಮೂಲಕ ಅವರನ್ನು ಎಚ್ಚರಿಸುವ ಕೆಲಸ ಮಾಡಲು ಮುಂದಾಗಿದೆ.! ಇದರಿಂದಾಗಿ ಎಷ್ಟೋ ಜನರು ತಾವು ಇಳಿಯಬೇಕಾದ ಸ್ಥಳದಿಂದ ಮುಂದೆ ಪ್ರಯಾಣಿಸಿ ಆಗಬಹುದಾದ ತೊಂದರೆ ತಪ್ಪಲಿದೆ.!!

ಹೇಗೆ ಕೆಲಸ ಮಾಡಲಿದೆ ಫೀಚರ್!!

ಹೇಗೆ ಕೆಲಸ ಮಾಡಲಿದೆ ಫೀಚರ್!!

ನೀವು ಪ್ರಯಾಣಿಸಬೇಕಾದರೆ ಗುರುತಿಸಿರುವ ಜಾಗವನ್ನು ಗೂಗಲ್ ನೆನಪಿಟ್ಟುಕೊಳ್ಳುತ್ತದೆ. ಬಸ್ಸಿನಲ್ಲಿಯೋ ಅಥವಾ ರೈಲಿನಲ್ಲಿಯೋ ಪ್ರಯಾಣಿಸಿ ನೀವು ಆ ಸ್ಥಳವನ್ನು ತಲುಪಿದ ನಂತರ ನಂತರ ನಿಮ್ಮ ಮೊಬೈಲ್ ಲೊಕೇಷನ್ ಗುರುತಿಸಿ ನಿಮಗೆ ನೋಟಿಫಿಕೇಷನ್‌ಗಳ ಮೂಲಕ ಎಚ್ಚರಿಸುತ್ತದೆ.!!

ಸ್ಮಾರ್ಟ್‌ಫೋನ್ ಲಾಕ್ ಆಗಿದ್ದರೂ ಕೆಲಸ ಮಾಡುತ್ತೆ!!

ಸ್ಮಾರ್ಟ್‌ಫೋನ್ ಲಾಕ್ ಆಗಿದ್ದರೂ ಕೆಲಸ ಮಾಡುತ್ತೆ!!

ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್ ಲಾಕ್ ಆಗಿದ್ದರೂ ನೀವು ಇಳಿಯಬೇಕಾದ ಸ್ಥಳವನ್ನು ಗುರುತಿಸುವ ಕೆಲಸವನ್ನು ಗೂಗಲ್ ಮ್ಯಾಪ್ ಮಾಡಲಿದೆ. ನೆಟ್‌ವರ್ಕ್ ಮತ್ತು ಆಂಡ್ರಾಯ್ಡ್ ಸಾಧನ ಚಲಿಸುತ್ತಿರುವ ಆಧಾರದಲ್ಲಿ ಗೂಗಲ್ ಮ್ಯಾಪ್ ಕೆಲಸ ನಿರ್ವಹಿಸುತ್ತದೆ ಎನ್ನುತ್ತವೆ ವರದಿಗಳು.!!

ಸ್ಥಳ ತಲುಪದಿದ್ದರೆ?

ಸ್ಥಳ ತಲುಪದಿದ್ದರೆ?

ಒಂದು ವೇಳೆ ಪ್ರಯಾಣಿಸುವಾಗ ನಿರ್ದಿಷ್ಟಪಡಿಸಿದ ಸ್ಥಳವನ್ನು ನೀವು ತಲುಪದೆ ಇನ್ನಾವುದೇ ಸ್ಥಳವನ್ನು ತಲುಪಿದ್ದರೂ ಅದರ ಹತ್ತಿರದ ಪ್ರದೇಶಗಳನ್ನು ಕೂಡ ಸ್ವಯಂ ತಿಳಿದು ನಿಮಗೆ ಆಗಾಗ್ಗೆ ಎಚ್ಚರಿಸುತ್ತದೆ. ಒಂದು ವೇಳೆ ನೀವು ಹೋಗುತ್ತಿರುವ ಬಸ್ ಮಾರ್ಗ ಬದಲಾಗಿದ್ದರೂ ಕೂಡ ಗೂಗಲ್ ನಿಮ್ಮನ್ನು ಎಚ್ಚರಿಸುತ್ತದೆ.!!

ಶೀಘ್ರದಲ್ಲಿಯೇ ಬಳಕೆಗೆ!!

ಶೀಘ್ರದಲ್ಲಿಯೇ ಬಳಕೆಗೆ!!

ಪ್ರಯಾಣಿಸುವವರಿಗೆ ಹೆಚ್ಚು ಸಹಾಯಕವಾಗುವ ಗೂಗಲ್ ಮ್ಯಾಪ್ಸ್‌ನ ಈ ಸೇವೆ ಶೀಘ್ರದಲ್ಲಿಯೇ ಬಳಕೆಗೆ ಬರಲಿದೆ ಎನ್ನಲಾಗಿದೆ. ಆದರೆ, ಗೂಗಲ್ ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಈ ವರೆಗೂ ಬಿಡುಗಡೆ ಮಾಡಿಲ್ಲ.!!

ಓದಿರಿ:ಸ್ಮಾರ್ಟ್‌ಫೋನ್ ಲೋಕವೇ ಬೆಚ್ಚಿಬೀಳುವ ಸುದ್ದಿ!..18ಕೋಟಿ ಜನರು ಬಳಸುತ್ತಿರುವ ಆಪ್‌ಗಳು ಸೇಫ್ ಆಗಿಲ್ಲ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Google is bringing a range of significant features to Maps.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot