ಗೂಗಲ್‌ನಿಂದ ಹೊಸ ಹೆಲ್ತ್ ಆಪ್ ಗೂಗಲ್ ಫಿಟ್

Written By:

ಕೇವಲ ಎರಡು ವಾರಗಳ ಹಿಂದೆಯಷ್ಟೇ ಆಪಲ್ ತನ್ನ ಮುಂಬರಲಿರುವ ಹೊಸ ಹೆಲ್ತ್ ಆಪ್ ಐಓಎಸ್ 8 ಅನ್ನು ಘೋಷಿಸಿದ್ದು ಗೂಗಲ್ ಕೂಡ ಇದುವೇ ಮಾದರಿಯ ಆಪ್ ಆದ ಗೂಗಲ್ ಫಿಟ್ ಅನ್ನು ಹೊರತರುವ ನಿರೀಕ್ಷೆಯಲ್ಲಿದೆ.

ಈ ಮಹತ್ವದ ಸಂಗತಿಯನ್ನು ಗೂಗಲ್ ತನ್ನ ಐ/ಒ ಕಾನ್ಫರೆನ್ಸ್‌ನಲ್ಲಿ ಘೋಷಿಸಲಿದ್ದು ಇತರ ಆರೋಗ್ಯಕ್ಕೆ ಸಂಬಂಧಿಸಿದ ಅಪ್ಲಿಕೇಶನ್‌ಗಳನ್ನು ಕೂಡ ಈ ಸಮಯದಲ್ಲಿ ಗೂಗಲ್ ಹೊರತರಲಿದೆ.

ಗೂಗಲ್‌ನಿಂದ ಹೊಸ ಹೆಲ್ತ್ ಆಪ್

ಗೂಗಲ್‌ನ ಈ ಹೊಸ ನಡೆ ಆಪಲ್‌ನ ಹೊಸ ಹೆಲ್ತ್ ಆಪ್‌ಗೆ ಪೈಪೋಟಿ ನೀಡಲಿರುವುದಂತೂ ಖಚಿತವಾಗಿದೆ. ಆಪಲ್‌ನ ಪಾಸ್‌ಬುಕ್ ಆಪ್‌ಗೆ ಸಮಾನಾಂತರವಾಗಿರುವ ಗೂಗಲ್ ಫಿಟ್ ಇತರ ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳಾದ ಅಂದರೆ ನೈಕ್‌ನಂತೆ ನಿಮ್ಮ ಎಲ್ಲಾ ಆರೋಗ್ಯಕಾರಿ ಅಂಶಗಳ ಡೇಟಾವನ್ನು ನಿಮಗೆ ನೀಡಲಿದೆ.

ಕಳೆದ ತಿಂಗಳು ಸ್ಯಾಮ್‌ಸಂಗ್ ಕೂಡ ಒಂದು ಹೆಲ್ತ್ ಆಪ್ ಆದ ಸಮಿಯನ್ನು ಲಾಂಚ್ ಮಾಡಿದ್ದು, ಇದು - ಆರೋಗ್ಯಕ್ಕೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸುತ್ತದೆ.

ಗೂಗಲ್ ವೇರೇಬಲ್ ಟೆಕ್ ಸಂಬಂಧಿಸಿದ ಸೆಶನ್‌ಗಳಲ್ಲಿ ಈ ಮಹತ್ವಕಾರಿ ಆರೋಗ್ಯ ಅಂಶಗಳ ಬಗೆಗೆ ಮಾಹಿತಿಯನ್ನು ನೀಡಲಿದೆ. ಇದು ಆಂಡ್ರಾಯ್ಡ್‌ನಲ್ಲೂ ಲಭ್ಯವಿದೆಯೇ ಎಂಬುದು ಇನ್ನೂ ತಿಳಿದು ಬರದೇ ಇದ್ದು ಇದರ ಬಿಡುಗಡೆಯ ನಂತರವೇ ಮುಖ್ಯ ಮಾಹಿತಿ ದೊರೆಯಲಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot