Home
ಸುದ್ದಿಜಾಲ

Google Meet: ಗೂಗಲ್‌ ಮೀಟ್‌ ಕರೆಗಳಲ್ಲಿ ಬದಲಾವಣೆ ತರಲು ಗೂಗಲ್‌ ಚಿಂತನೆ!

ಇಡೀ ಜಗತ್ತೇ ಕೋವಿಡ್ -19 ನಿಂದಾಗಿ ಬಳಲುತ್ತಿದೆ. ಚೀನಾದ ವ್ಯೂಹನ್‌ ನಗರದಲ್ಲಿ ಹುಟ್ಟಿ ಇದೀಗ ಇಡೀ ಜಗತ್ತಿಗೆ ವ್ಯಾಪಿಸಿರುವ ಕೊರೋನಾ ದಿಂದಾಗಿ ಇಡೀ ಜಗತ್ತೇ ಪರಿತಪಿಸುತ್ತಿದೆ. ಇದೇ ಕಾರಣಕ್ಕೇ ಏಕಾಏಕಿ ಜಗತ್ತಿನಾದ್ಯಂತ ಜನರನ್ನು ಮನೆಯಿಂದ ಹೊರ ಬಾರದಂತೆ ಮಾಡಿದೆ. ದಿನನಿತ್ಯ ಕಚೇರಿ ಕೆಲಸ ಮಾಡಿ ಹೊರಡುತ್ತಿದ್ದವರೆಲ್ಲಾ ಮನೆಯಲ್ಲಿಯೇ ಕೆಲಸ ನಿರ್ವಹಿಸುವಂತೆ ಮಾಡಿ ಬಿಟ್ಟಿದೆ. ಇದರಿಂದಾಗಿ ಮನೆಯಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ತಮ್ಮ ಟೀಮ್‌ ಜೊತೆಗೆ ವ್ಯವಹರಿಸಲು ಗ್ರೂಪ್‌ ವೀಡಿಯೋ ಕರೆಗಳ ಮೊರೆ ಹೋಗುತ್ತಿದ್ದಾರೆ. ಇದೇ ಅವಕಾಶ ಬಳಸಿಕೊಂಡು ಹಲವು ಗ್ರೂಪ್‌ ವೀಡಿಯೋ ಆಪ್‌ಗಳು ಕೂಡ ಲಾಂಚ್‌ ಆಗಿವೆ. ಇದಕ್ಕೆ ಗೂಗಲ್‌ ಕೂಡ ಹೊರತಾಗಿಲ್ಲ.

ಹೌದು

ಹೌದು, ಇದೇ ಸನ್ನಿವೇಶದಲ್ಲಿ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಕೂಡ ತನ್ನ ಗೂಗಲ್‌ ಮೀಟ್‌ ಅನ್ನು ಪರಿಚಯಿಸಿದೆ. ಗೂಗಲ್ ತನ್ನ ವೀಡಿಯೊ-ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಗೂಗಲ್ ಮೀಟ್‌ಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುವ ಮೂಲಕ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗಿದೆ. ಅಷ್ಟೇ ಅಲ್ಲ ಇದು ಲಾಕ್‌ಡೌನ್ ಸಮಯದಲ್ಲಿ ತನ್ನ ಬಳಕೆದಾರರಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಇದಲ್ಲದೆ ಈ ವಾರದ ಆರಂಭದಲ್ಲಿ, ಎಲ್ಲಾ ಜಿಮೇಲ್ ಬಳಕೆದಾರರಿಗೆ ಗೂಗಲ್ ಮೀಟ್ ಅನ್ನು ಉಚಿತವಾಗಿ ನೀಡುವುದಾಗಿಯು ಸಹ ಗೂಗಲ್‌ ಹೇಳಿಕೊಂಡಿತ್ತು. ಇದೀಗ, ಗೂಗಲ್ ಗೂಗಲ್ ಮೀಟ್ ಕಾನ್ಫರೆನ್ಸ್ ಕರೆಗಳನ್ನ ಸೆಪ್ಟೆಂಬರ್ 30ರವರೆಗೆ ಉಚಿತವಾಗಿ ನೀಡಲಿದ್ದು, ನಂತರದ ದಿನಗಳಲ್ಲಿ ಪ್ರತಿ ಕರೆ 60 ನಿಮಿಷಗಳ ಮಿತಿಯನ್ನ ಹೊಂದಿರುತ್ತದೆ ಎಂದು ಹೇಳಿದೆ.

ಗೂಗಲ್‌

ಸದ್ಯ ಗೂಗಲ್‌ ತಮ್ಮ ಗೂಗಲ್‌ ಮೀಟ್‌ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಉಚಿತ ಕರೆಗಳನ್ನ ನಿಡುವುದಾಗಿ ಹೇಳಿತ್ತು. ಅದರಂತೆ ಸಂಪೂರ್ಣ ಫ್ರೀ ಕರೆಗಳನ್ನ ಮಾಡುವುದಕ್ಕೆ ಅವಕಾಶ ನೀಡಿದೆ. ಆದರೆ ಈ ಫ್ರೀ ಸರಣಿಯ ಕರೆಗಳ ಮಿತಿಯನ್ನ 60 ನಿಮಿಷಗಳ ಮಿತಿಗೆ ಸೀಮಿತಗೊಳಿಸಲಾಗಿದೆ. ಇದು ಸೆಪ್ಟೆಂಬರ್ 30 ರ ನಂತರ ಕರೆ ಮಾಡುವ ಬಳಕೆದಾರರ ಕರೆಗಳ ನಿಮಿಷಗಳ ಸಂಖ್ಯೆಯ ಬಳಕೆಯನ್ನು ಮಿತಿಗೊಳಿಸುತ್ತೇವೆ, ಎಂದು ಹೇಳಿದೆ. ಪ್ರಸ್ತುತ ಗೂಘಲ್‌ ಮೀಟ್‌ನಲ್ಲಿ ನೀವು ಅನಿಮಿಯತ ಫ್ರೀ ಕರೆಗಳನ್ನ ಆನಂಧಿಸಬಹುದು, ಸೆಪ್ಟೆಂಬರ್ 30 ರ ನಂತರ ಬಳಕೆದಾರರಿಗೆ 60 ನಿಮಿಷಗಳ ಮಿತಿ ಇರುತ್ತದೆ "ಎಂದು ಗೂಗಲ್ ಕ್ಲೌಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕರಣ್ ಬಜ್ವಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೀಡಿಯೋ

ಇನ್ನು ವೀಡಿಯೋ ಕರೆಗಳ ಸಂಖ್ಯೆಗೆ ಯಾವುದೇ ಮಿತಿಯನ್ನು ನೀಡದಿದ್ದರೂ, ತನ್ನ ಉಚಿತ ಸೇವೆಯ ಶ್ರೇಣಿಯಲ್ಲಿ ಮಾತ್ರ ಪ್ರತಿ ಕರೆಗೆ 60 ನಿಮಿಷಗಳ ಸಮಯ ಮಿತಿಯನ್ನು ಜಾರಿಗೊಳಿಸುತ್ತದೆ ಎಂದು ಗೂಗಲ್ ಹೇಳಿದೆ. ಉದ್ಯಮ ಗ್ರಾಹಕರು, ಇದರ ಅನುಕೂಲವನ್ನ ಪಡೆದುಕೊಳ್ಳಲಿದ್ದಾರೆ. ಇದಲ್ಲದೆ ಗೂಗಲ್ ಮೀಟ್‌ನಲ್ಲಿ ಎಂಟರ್‌ಪ್ರೈಸ್ ಬಳಕೆದಾರರು ಕರೆಯಲ್ಲಿ 250 ಬಳಕೆದಾರರನ್ನು ವೀಡಿಯೋ ಕಾನ್ಪರೆನ್ಸ್‌ಗೆ ಸೇರಿಸಬಹುದು, ಜೊತೆಗೆ ಉಚಿತ ಶ್ರೇಣಿ ಬಳಕೆದಾರರು 100 ಜನ ಬಳಕೆದಾರರನ್ನು ಒಂದೆಡೆ ಸೇರಿಸಬಹುದಾಗಿದೆ. ಅಲ್ಲದೆ ಉಚಿತ ಶ್ರೇಣಿಯ ಬಳಕೆದಾರರು ವೀಡಿಯೊ ಕರೆಯನ್ನು ರೆಕಾರ್ಡ್ ಮಾಡಲು ಸಾಧ್ಯವಿಲ್ಲ, ಆದರೆ ಎಂಟರ್‌ಪ್ರೈಸ್ ಬಳಕೆದಾರರು ವೀಡಿಯೋ ಕರೆಯನ್ನ ರೆಕಾರ್ಡ್‌ ಮಾಡಬಹುದಾಗಿದೆ.

ಗೂಗಲ್

ಇದಲ್ಲದೆ ಗೂಗಲ್ ತನ್ನ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗೆ ನಾಲ್ಕು ಹೊಸ ಫೀಚರ್ಸ್‌ಗಳನ್ನು ಹೊರತಂದಿದೆ. ಮೊದಲನೆಯ ಫೀಚರ್ಸ್‌ ಗೂಗಲ್‌ಮೀಟ್‌ನಲ್ಲಿ ಟೈಲ್ಡ್ ಫಾರ್ಮ್ಯಾಟ್‌ಗೆ ಬೆಂಬಲವನ್ನು ನೀಡುವುದಾಗಿದೆ. ಇದು ಬಳಕೆದಾರರು ತಮ್ಮ ಸ್ಕ್ರೀನ್‌ ಮೂಲಕ ಸಭೆಯಲ್ಲಿ ಭಾಗವಹಿಸುವವರನ್ನ ಏಕಕಾಲದಲ್ಲಿ 16 ಮಂದಿಯನ್ನ ನೋಡಲು ಅನುಮತಿಸುತ್ತದೆ. ಇದರ ಜೊತೆಗೆ, ಕಂಪನಿಯು ಕಡಿಮೆ-ಬೆಳಕಿನ ಮೋಡ್‌ಗೆ ಬೆಂಬಲವನ್ನು ನೀಡಲಿದೆ ಹಾಗೂ ಮೀಟ್‌ನಲ್ಲಿ ಹೊಸ ನಾಯ್ಸ್‌ ಕ್ಯಾನ್ಸೆಲಿಂಗ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಕೊನೆಯದಾಗಿ, ಕಂಪನಿಯು ತನ್ನ ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಕ್ರೋಮ್ ಟ್ಯಾಬ್ ವೈಶಿಷ್ಟ್ಯವನ್ನು ಪರಿಚಯಿಸಿದ್ದು, ಅದು ಸಭೆಯಲ್ಲಿ ಬಳಕೆದಾರರಿಗೆ ಉತ್ತಮ-ಗುಣಮಟ್ಟದ ಆಡಿಯೊ ಮತ್ತು ವೀಡಿಯೊ ವಿಷಯವನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.

Best Mobiles in India

English summary
Google says that it will enforce a 60 minute per call limit on the free tier of Google Meet conference calls post September 30, which is when the limit for the free tier ends.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+