Home
ಸುದ್ದಿಜಾಲ

ಆನ್‌ಲೈನ್ ಕ್ಲಾಸ್‌ ಸುರಕ್ಷತೆಗಾಗಿ ಗೂಗಲ್ ಮೀಟ್ ನಿಂದ ಹೊಸ ಫೀಚರ್ಸ್‌!

ಸದ್ಯ ಕೊರೋನಾ ಹಾವಳಿ ಶುರುವಾದ ನಂತರ ಜಗತ್ತಿನ ಎಲ್ಲೆಡೆ ವಿಡಿಯೋ ಕಾನ್ಫೆರೆನ್ಸಿಂಗ್‌ ಅಪ್ಲಿಕೇಶನ್‌ಗಳಿಗೆ ಭಾರಿ ಜನಪ್ರಿಯತೆ ಇದೆ. ಇದೇ ಜನಪ್ರಿಯತೆಯನ್ನ ಉಪಯೋಗಿಸಿಕೊಂಡು ಹಲವು ಕಂಪೆನಿಗಳು ಸಹ ಹೊಸ ಮಾದರಿಯ ವಿಡಿಯೋ ಕಾನ್ಪರೆನ್ಸಿಂಗ್‌ ಅಪ್‌ಗಳನ್ನ ಪರಿಚಯಿಸಿವೆ. ಸದ್ಯ ಇದಕ್ಕೆ ಗೂಗಲ್‌ ಕೂಡ ಹೊರತಾಗಿಲ್ಲ. ಈಗಾಗಲೇ ಗೂಗಲ್‌ ಮೀಟ್‌ ವಿಡಿಯೋ ಕಾನ್ಪರೆನ್ಸಿಂಗ್‌ ಆಪ್‌ ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಳ್ಳುತ್ತಿದ್ದು, ಬಳಕೆದಾರರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ. ಇನ್ನು ಈಗಾಗಲೇ ಎಲ್ಲಾ ಕಡೆ ಆನ್‌ಲೈನ್‌ ಶಿಕ್ಷಣ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಗೂಗಲ್‌ ಮೀಟ್‌ ಹೊಸ ಮಾದರಿಯ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಗೂಗಲ್‌

ಹೌದು, ಗೂಗಲ್‌ ಆನ್‌ಲೈನ್‌ ಶಿಕ್ಷಣ ಚಂದಾದಾರರು ನಡೆಸುವ ಸಭೆಗಳಿಗಾಗಿ ತನ್ನ ಗೂಗಲ್ ಮೀಟ್ ವಿಡಿಯೋ ಚಾಟ್ ಸೇವೆಯಲ್ಲಿ ಹೊಸ ಸೆಕ್ಯುರಿಟಿ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಆನ್‌ಲೈನ್‌ ಶಿಕ್ಷಣದ ಭದ್ರತೆ ಕುರಿತಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಲು ಉತ್ಸುಕರಾಗಿದ್ದೇವೆ ಎಂದು ಗೂಗಲ್‌ ಕಂಪನಿ ಪ್ರಕಟಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ 15 ದಿನಗಳಲ್ಲಿ ಹಲವು ಬದಲಾವಣೆಗಳು ಗೂಗಲ್‌ ಮಿಟ್‌ ಅಪ್ಲಿಕೇಶನ್‌ನಲ್ಲಿ ಕಂಡು ಬರಲಿದೆ ಎನ್ನಲಾಗ್ತಿದೆ. ಇನ್ನು ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌

ಗೂಗಲ್‌ ಮಿಟ್‌ ಪರಿಚಯಿಸಲಿರುವ ಹೊಸ ಫೀಚರ್ಸ್‌ ಅನ್ವಯ ಶಿಕ್ಷಣ ಚಂದಾದಾರರಿಗಾಗಿ ಜಿ ಸೂಟ್ ಎಂಟರ್‌ಪ್ರೈಸ್ ಆಯೋಜಿಸಿರುವ ಸಭೆಗಳನ್ನ ಹ್ಯಾಕಿಂಗ್‌ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಲಾಗಿದೆ. ಈ ಅನಾಮಧೇಯ ಬಳಕೆದಾರರು ಹ್ಯಾಕಿಂಗ್‌ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ವ್ಯಕ್ತಿಗಳಿಗೆ Google ಖಾತೆಗೆ ಸೈನ್ ಇನ್ ಆಗಲು ಸಾದ್ಯವಾಗುವುದಿಲ್ಲ ಎಂದು ಗೂಗಲ್‌ ಹೇಳಿದೆ. ಇದಲ್ಲದೆ ಈ ಹೊಸ ಫೀಚರ್ಸ್‌ಗಳನ್ನು "zoombombing'' ತಡೆಗಟ್ಟಲು ವಿನ್ಯಾಸಗೊಳಿಸಲಾಗಿದೆ, ಇಲ್ಲಿ ಅನಧಿಕೃತ ಬಳಕೆದಾರರು ಬಳಕೆದಾರರಿಗೆ ತೊಂದರೆ ಉಂಟುಮಾಡುವುದನ್ನು ತಪ್ಪಿಸಬ

ಗೂಗಲ್‌

ಅನಧಿಕೃತ ವ್ಯಕ್ತಿಗಳ ಅನದಿಕೃತ ಪ್ರವೇಶದಿಂದಾಗಿ ಗೂಗಲ್‌ ಮಿಟ್‌ನಲ್ಲಿ ನಡೆಯುವ ಬಳಕೆದಾರರ ಸಭೆಗಳಿಗೆ ತೊಂದರೆ ಆಗಬಾರದೆಂದು ಹಾಗೂ ಇಂತಹ ಅನಧಿಕೃತ ವ್ಯಕ್ತಿಗಳಿಂದ ದಕ್ಕೆ ತರುವ ವಿಡಿಯೋ ಪ್ರಸಾರವಾದರೆ ಅಥವಾ ಅವಮಾನಗಳನ್ನು ಎಸೆಯುವ ಘಟನೆಗಳು ನಡೆದರೆ ಅದನ್ನು ತಡೆಯುವುದಕ್ಕಾಗಿಯೇ ಈ ಫಿಚರ್ಸ್‌ ಅನ್ನು ಪರಿಚಯಿಸಲಾಗಿದೆ. ಅಂದರೆ ಈ ಫಿಚರ್ಸ್‌ನಿಂದಾಗಿ ಗೂಗಲ್‌ ಮಿಟ್‌ನಲ್ಲಿ ಆನ್‌ಲೈನ್‌ ಶಿಕ್ಷಣ ಸಂಬಂದಿಸಿದ ಮಿಟಿಂಗ್‌ ನಡೆಯುವಾಗ ಯಾವುದೇ ಅನಾಮಿಕ ವ್ಯಕ್ತಿಗೆ ಎಂಟ್ರಿಗೆ ಅವಕಾಶವಿರುವುದಿಲ್ಲ. ಅಂತಹ ಅನಾಮಿಕ ಬಳಕೆದಾರರನ್ನ ಇದು ತಡೆಯಲಿದೆ ಎಂದು ಹೇಳಲಾಗ್ತಿದೆ.

ಗೂಗಲ್‌

ಈಗಾಗಲೇ ಈ ಮಾದರಿಯ ಘಟೆನಗಳು ಜೂಮ್‌ ವೀಡಿಯೋ ಕಾನ್ಪರೆನ್ಸಿಂಗ್‌ ಅಪ್ಲಿಕೇಶನ್‌ನಲ್ಲಿ ನಡೆದಿದೆ, ಇದೇ ಕಾರಣಕ್ಕೆ ಗೂಗಲ್‌ ಮೀಟ್‌ ಎಚ್ಚೆತ್ತು ಕೊಂಡಿದೆ. ಸದ್ಯ ಕೊರೊನಾ ಹಾವಳಿ ಇರುವುದರಿಂದ ಆನ್‌ಲೈನ್‌ ಶಿಕ್ಷಣದತ್ತ ಎಲ್ಲರೂ ಚಿತ್ತ ಹರಿಸಿದ್ದಾರೆ. ಬಹುತೇಕ ಶಾಲಾ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ವಿಡಿಯೊ ಕಾನ್ಪೆರೆನ್ಸಿಂಗ್‌ ಆಪ್‌ಗಳ ಮೂಲಕ ತರಗತಿಗಳಖ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ಹೊಸ ಭದ್ರತೆ ಮತ್ತು ಗೌಪ್ಯತೆ ಸುಧಾರಣೆಗಳನ್ನು ಪರಿಚಯಿಸುವುದ ಸೂಕ್ತವಾಗಿದ್ದು, ಇದೇ ಕಾರಣಕ್ಕೆ ಗೂಗಲ್‌ ಮಿಟ್‌ ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದೆ.

Best Mobiles in India

English summary
Google is turning on new security features in its Google Meet video chat service for meetings held by education subscribers, the company has announced.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+