Home
ಸುದ್ದಿಜಾಲ

ಗೂಗಲ್‌ನಿಂದ SMS ಫಿಲ್ಟರಿಂಗ್‌ ಫೀಚರ್ಸ್‌ ಪರಿಚಯಿಸಲು ಸಿದ್ದತೆ!

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇದೀಗ ಗೂಗಲ್‌ ತನ್ನ ಮೆಸೇಜ್‌ ಅಪ್ಲಿಕೇಶನ್‌ನಲ್ಲಿ ಹೊಸ ಮಾದರಿಯ ಫೀಚರ್ಸ್‌ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಇನ್ನು ಈ ಹೊಸ ಫೀಚರ್ಸ್‌ ನೀವು ನಿಮ್ಮ ಮೆಸೇಜ್‌ ಅಪ್ಲಿಕೇಶನ್‌ನಲ್ಲಿ ಮಾಡಲಾದ SMSಗಳನ್ನು ಅಗತ್ಯಕ್ಕೆ ತಕ್ಕಂತೆ ವಿಭಾಗಿಸಲಿದೆ. ಅಂದರೆ ನೀವು ಮೆಸೇಜ್‌‌ನಲ್ಲಿ ಹಂಚಿಕೊಂಡಿರುವ ಫೋಟೋ ಮೆಸೇಜ್‌‌ಗಳು, ವಿಡಿಯೋ ಮೆಸೇಜ್‌ಗಳು, ಪರ್ಸನಲ್‌ ಮೆಸೇಜ್‌, ಆಲ್‌ ಮೆಸೇಜ್‌ ಹೀಗೆ ಹಲವು ವಿಧವಾಗಿ ವಿಭಾಗಿಸಲಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಮೆಸೇಜ್‌ ಅಪ್ಲಿಕೇಶನ್‌ನಲ್ಲಿ ಅದ್ಯತೆಗೆ ಅನುಗುಣವಾಗಿ SMSಗಳನ್ನ ವಿಭಾಗಿಸುವ ಹೊಸ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಸದ್ಯ ಲಭ್ಯ ಮಾಹಿತಿಯ ಪ್ರಕಾರ, ಬಳಕೆದಾರರು ಸ್ವೀಕರಿಸುವ ಟೆಕ್ಸ್ಟ್‌ಗಳ ಪ್ರಕಾರಗಳನ್ನು ಪ್ರತ್ಯೇಕಿಸಲು ಗೂಗಲ್ ಮೆಸೇಜ್‌ಗಳ ಅಪ್ಲಿಕೇಶನ್ ಸಿದ್ದತೆ ನಡೆಸಿದೆ. ಇದು ಶೀಘ್ರದಲ್ಲೇ ವೈಯಕ್ತಿಕ, ವಹಿವಾಟು, ಒಟಿಪಿ ನಂತಹ ವಿಭಾಗಗಳನ್ನು ಪರಿಚಯಿಸಲಿದೆ. ವಿಷಯದ ಆಧಾರದ ಮೇಲೆ ಸಂದೇಶಗಳನ್ನು ವಿಂಗಡಿಸುವುದು ಈ ಫೀಚರ್ಸ್‌ನ ವಿಶೇಷತೆ ಆಗಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಮೆಸೇಜ್‌ ಅಪ್ಲಿಕೇಶನ್‌ ಪರಿಚಯಿಸಲಿರುವ ಫೀಚರ್ಸ್‌ ಬಳಕೆದಾರರ ಅನುಭವವನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿದೆ. ಅಲ್ಲದೆ ಇದು SMS ಅಪ್ಲಿಕೇಶನ್‌ನಲ್ಲಿ ಇನ್‌ಬಾಕ್ಸ್ ಅನ್ಲಾಕ್ ಮಾಡಲು 24 ಗಂಟೆಗಳ ನಂತರ ಸ್ವಯಂಚಾಲಿತವಾಗಿ ಒಟಿಪಿಗಳನ್ನು ಅಳಿಸುವಂತಹ ಫೀಚರ್ಸ್‌ ಹೊಂದಿದೆ. ಜೊತೆಗೆ ಗೂಗಲ್ ಮೆಸೇಜ್‌ ಅಪ್ಲಿಕೇಶನ್‌ನಲ್ಲಿ ವಿಷಯದ ಆಧಾರದ ಮೇಲೆ SMSಗಳನ್ನು ವಿಭಾಗಿಸಲು ಮುಂದಾಗಿದೆ. ಇದು ಆಲ್, ಪರ್ಸನಲ್, ಟ್ರಾನ್ಸಾಕ್ಷನಲ್, ಒಟಿಪಿ, ಆಫರ್‌ಗಳು ಮತ್ತು ಇನ್ನಷ್ಟು ಸೇರಿದಂತೆ ವಿವಿಧ ವಿಭಾಗಗಳನ್ನು ಒಳಗೊಂಡಿರಲಿದೆ.

ಗೂಗಲ್

ಇನ್ನು ಗೂಗಲ್ ಮೆಸೇಜಿಂಗ್‌ ಅಪ್ಲಿಕೇಶನ್‌ ಒಟಿಪಿಗಳನ್ನು ಸ್ವೀಕರಿಸಿದ 24 ಗಂಟೆಗಳ ನಂತರ ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಮಾಡಲಿದೆ. ಸಾಮಾನ್ಯವಾಗಿ, ಒಟಿಪಿಗಳು 30 ನಿಮಿಷಗಳವರೆಗೆ ಮಾತ್ರ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತವೆ. ಆದರೆ ನಂತರ ಅವು ಇನ್‌ಬಾಕ್ಸ್‌ನಲ್ಲಿ ಉಳಿಯುತ್ತವೆ. ಈ ಸಂದೇಶಗಳನ್ನ ಡಿಲೀಟ್‌ ಮಾಡಲು ಸಹ ಬಳಕೆದಾರರು ಕೆಲವೊಮ್ಮೆ ಮುಂದಾಗುವುದಿಲ್ಲ. ಇನ್ನು ಮೆಸೇಜ್‌ ಅಪ್ಲಿಕೇಶನ್‌ಗಳಲ್ಲಿ ಹಲವು ಮಾದರಿಯ ಮೆಸೇಜ್‌ಗಳನ್ನು ಹೊಂದಿರುವುದರಿಂದ ಈ ಫೀಚರ್ಸ್‌ ಬಳಕೆದಾರರಿಗೆ ತಮ್ಮ ಇನ್‌ಬಾಕ್ಸ್‌ಗಳಲ್ಲಿನ ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಗೂಗಲ್

ಇದಲ್ಲದೆ, ಭಾರತದಲ್ಲಿ ಬಳಕೆದಾರರು ಸಾಕಷ್ಟು ಸ್ಪ್ಯಾಮ್ ಸಂದೇಶಗಳನ್ನು ಸ್ವೀಕರಿಸುತ್ತಾರೆ. ಈ ಎರಡೂ ಫೀಚರ್ಸ್‌ಗಳು ಬಹುಶಃ ಅಪ್ಲಿಕೇಶನ್‌ನ ಒಟ್ಟಾರೆ ಅನುಭವವನ್ನು ಸಹ ಹೆಚ್ಚಿಸುತ್ತದೆ. ಪರಿಶೀಲಿಸಿದ ಎಸ್‌ಎಂಎಸ್ ಫೀಚರ್ಸ್‌ ಅನ್ನು ತರುವ ಮೂಲಕ ಗೂಗಲ್ ಈಗಾಗಲೇ ತನ್ನ ಸಂದೇಶಗಳ ಅಪ್ಲಿಕೇಶನ್ ಅನ್ನು ನವೀಕರಿಸಿದೆ. ಇದು ಸಂದೇಶಗಳನ್ನು ಕಳುಹಿಸುವ ವ್ಯವಹಾರಗಳ ನಿಜವಾದ ಗುರುತನ್ನು ಖಚಿತಪಡಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಈ ಹೊಸ ಫೀಚರ್ಸ್‌ ಮೆಸೇಜ್‌ಗಳ ಅಪ್ಲಿಕೇಶನ್‌ನಲ್ಲಿನ ವ್ಯವಹಾರಗಳ ದೃಡೀಕರಣವನ್ನು ಪ್ರತಿ ಸಂದೇಶದ ಆಧಾರದ ಮೇಲೆ ಪರಿಶೀಲಿಸುವ ಮೂಲಕ ತೋರಿಸುತ್ತದೆ.

Best Mobiles in India

English summary
Google Messages is testing categories like All, Personal, Transactional, OTP, Offers, and More.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+