Home
ಸುದ್ದಿಜಾಲ

ಗೂಗಲ್‌ಗೆ ದಾಖಲೆಯ ರೂ.1,90,55,71,31,205.00 ದಂಡ: ಒಮ್ಮೆಗೆ ಇದು ಎಷ್ಟು ರೂಪಾಯಿ ಅಂತ ಹೇಳಿ ನೋಡುವ..?

By Srinidhi

ಜಾಗತಿಕವಾಗಿ ಅತೀ ಬಳಕೆದಾರರನ್ನು ಹೊಂದಿರುವ ಸ್ಮಾರ್ಟ್ ಫೋನ್ OS ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಆಂಡ್ರಾಯ್ಡ್ ಮಾಲೀಕತ್ವವನ್ನು ಹೊಂದಿರುವ ಗೂಗಲ್‌ಗೆ ಸಂಕಷ್ಟವನ್ನು ಎದುರಾಗಿದೆ. ಯೂರೋಪಿಯನ್ ಮಾರುಕಟ್ಟೆಯಲ್ಲಿ ಆಪಲ್‌ಗೆ ಹೆಚ್ಚಿನ ಪ್ರಮಾಣದ ಸ್ಪರ್ಧೆಯನ್ನು ನೀಡುವ ಸಲುವಾಗಿ ಆಂಡ್ರಾಯ್ಡ್ OS ಅನ್ನು ಉಚಿತ ಬಳಕೆಗೆ ನೀಡಲು ಮುಂದಾಗಿದ್ದ ಗೂಗಲ್ ತಂತ್ರದ ಹಿಂದಿನ ಗುಟ್ಟು ಬಯಲಾಗಿದ್ದು, ಇದರಿಂದಾಗಿ ದಾಖಲೆಯ ಪ್ರಮಾಣದ ದಂಡಕ್ಕೆ ಗುರಿಯಾಗುತ್ತಿದೆ.

ಗೂಗಲ್‌ಗೆ ದಾಖಲೆಯ ರೂ.1,90,55,71,31,205.00 ದಂಡ

ಗೂಗಲ್ ಗೆ ದೊಡ್ಡ ಪ್ರಮಾಣದ ದಂಡವನ್ನು ವಿಧಿಸಲು ಯೂರೋಪಿಯನ್ ಯೂನಿಯನ್ (EU) ತಯಾರಿಯನ್ನು ನಡೆಸಿದ್ದು, ಗೂಗಲ್ ವಿರುದ್ಧ ಕೇಳಿ ಬಂದಿರುವ ಆರೋಪದ ತನಿಖೆಯ ಸಂದರ್ಭದಲ್ಲಿ ಅನೇಕ ವಿಚಾರಗಳು ಹೊರಹೊಂದಿದ್ದು, ಇದರಿಂದಾಗಿದೆ ಗೂಗಲ್ ಗೆ 2.1 ಬಿಲಿಯನ್ ಪೌಂಡ್ ಪ್ರಮಾಣದ ದಂಡವನ್ನು ವಿಧಿಸುವ ಸಾಧ್ಯತೆ ಇದ್ದು, ಇದು ಇತಿಹಾಸದಲ್ಲಿಯೇ ವಿಧಿಸಲಾದ ಅತೀ ದೊಡ್ಡ ಪ್ರಮಾಣದ ದಂಡವಾಗಲಿದ್ದು, ಹಲವು ಕಂಪನಿಗಳಿಗೆ ಇದು ಪಾಠವಾಗಲಿದೆ.

ಲೆಕ್ಕ ಹಾಕಲಾದಷ್ಟು ದಂಡ:

ಲೆಕ್ಕ ಹಾಕಲಾದಷ್ಟು ದಂಡ:

ಗೂಗಲ್ ಮಾರುಕಟ್ಟೆಯಲ್ಲಿ ಉಚಿತವಾಗಿ ಆಂಡ್ರಾಯ್ಡ್ ಅನ್ನು ಬಿಡುಗಡೆ ಮಾಡಿದ್ದರೂ ಸಹ, ಅದನ್ನು ಬಳಕೆ ಮಾಡಿಕೊಳ್ಳುವ ಕಂಪನಿಗಳೊಂದಿಗೆ 'ಎಕ್ಸ್ ಕ್ಲೂಸಿವ್ ಆಗ್ರಿಮೆಂಟ್'ವೊಂದನ್ನು ಮಾಡಿಕೊಳ್ಳುತಿತ್ತು. ಇದರಿಂದಾಗಿ ತನ್ನ ಆಪ್ ಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಷರತ್ತು ವಿಧಿಸುತಿತ್ತು. ಇದು ಕಾನೂನಿನ ಉಲ್ಲಂಘನೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ರೂ. 1,90,55,71,31,205.00 ರಷ್ಟು ದಂಡವನ್ನು ವಿಧಿಸುವ ಸಾಧ್ಯತೆ ಇದೆ.

ಸರ್ಚ್ ಹೆಚ್ಚಿಸಿಕೊಳ್ಳಲು:

ಸರ್ಚ್ ಹೆಚ್ಚಿಸಿಕೊಳ್ಳಲು:

ಗೂಗಲ್ ತನ್ನ ಸರ್ಚ್ ಇಂಜಿನ್ ನ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಆಂಡ್ರಾಯ್ಡ್ ಸಾಫ್ಟ್ ವೇರ್ ಅನ್ನು ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕಾಗಿಯೇ ಗೂಗಲ್ ಸ್ಮಾರ್ಟ್‌ ಫೋನ್ ತಯಾರಕೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತಿದೆ ಎನ್ನುವ ಮಾಹಿತಿ ಲೀಕ್ ಆಗಿದ್ದು, ಇದನ್ನು ತಿಳಿದ ಯೂರೋಪಿಯನ್ ಯೂನಿಯನ್ (EU) ಗೂಗಲ್ ಮೇಲೆ ದಂಡಾಸ್ತ್ರವನ್ನು ಪ್ರಯೋಗಿಸುತ್ತಿದೆ.

ಗೂಗಲ್ ವೆಬ್ ಬ್ರೌಸರ್:

ಗೂಗಲ್ ವೆಬ್ ಬ್ರೌಸರ್:

ಆಂಡ್ರಾಯ್ಡ್ ಅನ್ನು ಬಳಕೆ ಮಾಡಿಕೊಳ್ಳುವ ಸಾರ್ಟ್ ಫೋನ್ ಗಳಲ್ಲಿ ಕಡ್ಡಾಯವಾಗಿ ಗೂಗಲ್ ವೆಬ್ ಬ್ರೌಸರ್ ಗಳನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕು ಮತ್ತು ಗೂಗಲ್ ನೀಡುವ ಆಪ್ ಗಳು ಕಡ್ಡಾಯವಾಗಿರಬೇಕು ಎನ್ನುವ ನಿಯಮವನ್ನು ವಿಧಿಸಿತ್ತು. ಇದು ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣ ಬದಲಾವಣೆಗೆ ಕಾರಣವಾಗಿತ್ತು.

ಮೂರು ವರ್ಷದಿಂದ ತನಿಖೆ:

ಮೂರು ವರ್ಷದಿಂದ ತನಿಖೆ:

ಯೂರೋಪಿಯನ್ ಯೂನಿಯನ್ (EU) ಗೂಗಲ್ ವಿರುದ್ಧ ಕೇಳಿ ಬಂದಿದ್ದ ಆರೋಪದ ವಿರುದ್ಧ ಮೂರು ವರ್ಷಗಳ ಕಾಲ ತನಿಖೆಯನ್ನು ನಡೆಸಿದೆ ಎನ್ನಲಾಗಿದೆ. ಮೂರು ವರ್ಷಗಳ ಕಾಲ ನಡೆದ ಸುದೀರ್ಘ ತನಿಖೆಯಲ್ಲಿ ಸಾಕಷ್ಟು ಪ್ರಮಾಣ ವಿಷಯಗಳು ಆಚೆ ಬಂದಿದೆ.

ಬೇರೆ ಬ್ರೌಸರ್ ಬೇಡಿಕೆ ಕುಸಿತ:

ಬೇರೆ ಬ್ರೌಸರ್ ಬೇಡಿಕೆ ಕುಸಿತ:

ಗೂಗಲ್ ಸ್ಮಾರ್ಟ್‌ಫೋನ್ ತಯಾರಕರೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಿಂದಾಗಿ ಮಾರುಕಟ್ಟೆಯಲ್ಲಿ ಗೂಗಲ್ ಬ್ರೌಸರ್ ಬೇಡಿಕೆಯೂ ಅಧಿಕವಾಗಿ, ಸಾಮಾನ್ಯ ಬ್ರೌಸರ್ ಅನ್ನು ಕೇಳುವವರು ಇರಲಿಲ್ಲ. ಇದರಿಂದಾಗಿ ಮಾರುಕಟ್ಟೆಯಲ್ಲಿ ಗೂಗಲ್ ಮೇಲುಗೈ ಸಾಧಿಸಿತ್ತು.

Best Mobiles in India

English summary
Google might face record fine in Android monopoly case. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+