Home
ಸುದ್ದಿಜಾಲ

ಬರಲಿದೆ 5G ಬೆಂಬಲಿಸುವ ಗೂಗಲ್‌ ಪಿಕ್ಸೆಲ್‌ 4a ಆವೃತ್ತಿಯ ಸ್ಮಾರ್ಟ್‌ಫೋನ್‌!

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಈಗಾಗ್ಲೆ ವೈವಿದ್ಯ ಬಗೆಯ ಫೀಚರ್ಸ್‌ಗಳ ಸ್ಮಾರ್ಟ್‌ಫೋನ್‌ ಪರಿಚಯಿಸಿ ಸ್ಮಾರ್ಟ್‌ಫೋನ್‌ ಪ್ರಿಯರ ಮನಗೆದ್ದಿರೋ ಗೂಗಲ್‌ ಕಂಪನಿ. ಇದೀಗ ತನ್ನ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳ ಹೊಸ ಆವೃತ್ತಿಯ ಫೋನ್‌ಗಳನ್ನ ಲಾಂಚ್‌ ಮಾಡಲು ಸಿದ್ದತೆ ನಡೆಸಿದೆ. ಸದ್ಯ ಲೀಕ್‌ ಮಾಹಿತಿ ಪ್ರಕಾರ ಗೂಗಲ್‌ ಪಿಕ್ಸೆಲ್‌ 4a ಆವೃತ್ತಿಯ ಸರಣಿಯಲ್ಲಿ ಮೂರು ಮಾದರಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ ಎನ್ನಲಾಗ್ತಿದೆ.

ಹೌದು

ಹೌದು, ಗೂಗಲ್‌ ಕಂಪೆನಿಯ ಹೊಸ ಆವೃತ್ತಿಯ ಪಿಕ್ಸೆಲ್‌ 4a ಸರಣಿಯ ಸ್ಮಾರ್ಟ್‌ಫೋನ್‌ಗಳನ್ನ ಸನ್‌ಫಿಶ್, ರೆಡ್‌ಫಿನ್ ಮತ್ತು ಬ್ರಾಂಬಲ್, ಎಂಬ ಹೆಸರಿನ ಮೂರು ಮಾದರಿಗಳಲ್ಲಿ ಬಿಡುಗಡೆ ಮಾಡಲಿದೆ ಎಂದು ಹೇಳಲಾಗ್ತಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಮಧ್ಯಮ ಶ್ರೇಣಿಯ ಬೆಲೆಯನ್ನ ಹೊಂದಿರಲಿದ್ದು, ಇವುಗಳಲ್ಲಿ 5G ನೆಟ್‌ವರ್ಕ್‌ ಬೆಂಬಲಿಸುವ ಸ್ಮಾರ್ಟ್‌ಫೋನ್‌ ಕೂಡ ಇರಲಿದೆ ಎಂದು ಹೇಳಲಾಗ್ತಿದೆ.

ಗೂಗಲ್‌

ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ ಆವೃತ್ತಿಯ ಪಿಕ್ಸೆಲ್‌ 4a ಸರಣಿಯ ಈ ಸ್ಮಾರ್ಟ್‌ಫೋನ್‌ಗಳಿಗೆ ಕಂಪೆನಿಯು ಜಲಚರವಾದ ಮೀನಿಗೆ ಸಂಬಂಧಿಸಿದ ಹೆಸರುಗಳನ್ನ ಇಟ್ಟಿರೋದು ಕೂಡ ತುಂಬಾನೇ ವಿಶೇಷವಾಗಿದ್ದು, ಸನ್‌ಫಿಶ್, ರೆಡ್‌ಫಿನ್ ಮತ್ತು ಬ್ರಾಂಬಲ್ ಮೂರು ಸ್ಮಾರ್ಟ್‌ಫೋನ್‌ಗಳಿಉ ಕೂಡ ಹೆಚ್ಚು ಕಡಿಮೆ ಒಂದೇ ಮಾದರಿಯಾದರೂ ವೈವಿದ್ಯಮಯವಾದ ಫೀಚರ್ಸ್‌ಗಳನ್ನ ಹೊಂದಿವೆ ಎಂದು ಅಂದಾಜಿಸಲಾಗಿದೆ.

ಪಿಕ್ಸೆಲ್‌

ಗೂಗಲ್‌ ಪಿಕ್ಸೆಲ್‌ 4a ಆವೃತ್ತಿಯ ಮೂರು ಸ್ಮಾರ್ಟ್‌ಫೋನ್‌ಗಳು ಕೂಡ ಬೆಝೆಲ್‌ ಲೆಸ್‌ ಡಿಸ್‌ಪ್ಲೇಯನ್ನ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಇವುಗಳಲ್ಲಿ ಮೊದಲನೇ ಸ್ಮಾರ್ಟ್‌ಫೋನ್‌ ಆದ 'ಸನ್ ಫಿಶ್' ಪಿಕ್ಸೆಲ್ 4a ಕ್ವಾಲ್ಕಾಮ್ನ ಸ್ನಾಪ್ಡ್ರಾಗನ್ 730 ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿರಲಿದ್ದು, ಇದು 4 ಜಿ ನೆಟ್‌ವರ್ಕ್‌ ಸಂಪರ್ಕವನ್ನ ಬೆಂಬಲಿಸಲಿದೆ. ಇನ್ನು ಎರಡನೇ ಸ್ಮಾರ್ಟ್‌ಫೋನ್‌ ರೆಡ್‌ಫಿನ್, ಸ್ವಲ್ಪ ಹೆಚ್ಚು ಶಕ್ತಿಶಾಲಿಯಾದ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 765ಪ್ರೊಸೆಸರ್‌ ಅನ್ನು ಹೊಂದಿರಲಿದ್ದು, 5G ನೆಟ್‌ವರ್ಕ್‌ ಅನ್ನ ಬೆಂಬಲಿಸಲಿದೆ ಎಂದು ಹೇಳಲಾಗ್ತಿದೆ.

ಆವೃತ್ತಿ

ಇನ್ನು ಪಿಕ್ಸೆಲ್‌ 4A ಆವೃತ್ತಿಯ ಬ್ರಾಂಬಲ್ ಸ್ಮಾರ್ಟ್‌ ಫೋನ್ ಸ್ನ್ಯಾಪ್‌ಡ್ರಾಗನ್ 765 ಪ್ರೊಸೆಸರ್‌ ಹೊಂದಿರಲಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಇದು ಸನ್‌ಫಿಶ್‌ ಮತ್ತು ರೆಡ್‌ಫಿನ್‌ ಸ್ಮಾರ್ಟ್‌ಫೋನ್‌ಗಳಿಗಿಂತ ಹೇಗೆ ಭಿನ್ನವಾಗಿರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಈ ಸ್ಮಾರ್ಟ್‌ಫೋನ್‌ಗಳು ಪಿಕ್ಸೆಲ್ 3A ಮತ್ತು 3A XL ಸ್ಮಾರ್ಟ್‌ಫೋನ್‌ ಆವೃತ್ತಿಯ ಆಪ್‌ಗ್ರೇಡ್‌ ಆವೃತ್ತಿಯಾಗಿದ್ದು, ಪಿಕ್ಸೆಲ್ 4A ಸರಣಿಯ ಸ್ಮಾರ್ಟ್‌ಫೋನ್‌ಗಳ ಬೆಲೆ ಸುಮಾರು $ 400 (₹ 28,400) ಇರಬಹುದು ಎಂದು ಅಂದಾಜಿಸಲಾಗಿದೆ.

Best Mobiles in India

English summary
Google, like most manufacturers, is gearing up for the next variant of its smartphone lineup. The rumored Google Pixel 4A has been widely speculated and the latest leak shows a CAD-based render of the smartphone. Another leaked info claims that the Google smartphone would roll out in three variants, one of which would support 5G.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+