ಗೂಗಲ್ ನೆಕ್ಸಸ್ 6 ಅತಿ ಶೀಘ್ರದಲ್ಲಿ ಭಾರತಕ್ಕೂ
ಗೂಗಲ್‌ನ ಅತ್ಯಾಧುನಿಕ ನೆಕ್ಸಸ್ ಶ್ರೇಣಿಯ ಸ್ಮಾರ್ಟ್‌ಫೋನ್ ನೆಕ್ಸಸ್ 6, GOSF 2014 ಬುಧವಾರ ಭಾರತವನ್ನು ಪ್ರವೇಶಿಸಿದ ನಂತರ ಭಾರತದಲ್ಲಿ ದೊರೆಯಲಿದೆ.
ಇದನ್ನೂ ಓದಿ: ಫೋನ್‌ನ ವೇಗವನ್ನು ವರ್ಧಿಸುವ ಸರಳ ಸಲಹೆಗಳು
ಗೂಗಲ್‌ನ ಶಾಪಿಂಗ್ ಫೆಸ್ಟಿವಲ್‌ನಲ್ಲಿ ನೆಕ್ಸಸ್ 6 ನ ಅತಿ ವಿಶೇಷ ಲಾಂಚಿಂಗ್ ನಡೆಯಲಿದೆ ಎಂಬ ಸುದ್ದಿ ತಿಳಿದು ಬಂದಿದೆ. ಲೆನೆವೊ - ಮಾಲೀಕತ್ವದ ಕಂಪೆನಿ ಹೇಳುವಂತೆ ಗೂಗಲ್ ನೆಕ್ಸಸ್ 6 ನ 32 ಜಿಬಿ ಆವೃತ್ತಿಯು ಭಾರತದಲ್ಲಿ ರೂ 43,999 ಕ್ಕೆ ದೊರೆಯುತ್ತಿದೆ ಹಾಗೂ 64 ಜಿಬಿ ಆವೃತ್ತಿಯ ಬೆಲೆ ರೂ 48,999 ಆಗಿದೆ. ಇದೇ ಸಮಯದಲ್ಲಿ ಮೋಟೋರೋಲಾ ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಕೂಡ ಘೋಷಿಸಿದೆ ಅಂದರೆ ಮೊದಲ ಮೂರು ತಿಂಗಳ ಉಚಿತ ಚಂದಾದಾರಿಕೆ; ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್ ಕೊಡುಗೆಯಲ್ಲಿ ರೂ 10,000 ದವರೆಗೆ ವಿನಾಯಿತಿ ಮುಂತಾದವು.

ಮೋಟೋರೋಲಾ ಭಾರತದ ಜನರಲ್ ಮ್ಯಾನೇಜರ್ ಅಮಿತ್ ಬೋನಿ ಹೇಳುವಂತೆ, ಮೋಟೋ ಎಕ್ಸ್‌ಗಾಗಿ ಭಾರತದಲ್ಲಿ ನಾವು ಪಡೆದುಕೊಂಡ ಪ್ರತಿಕ್ರಿಯೆಗೆ ನಿಜಕ್ಕೂ ಅಭಾರಿಯಾಗಿರುವೆವು. ಅದೇ ರೀತಿಯ ಇನ್ನಷ್ಟು ಉತ್ತಮ ಪ್ರತಿಕ್ರಿಯೆಯನ್ನು ನಾವು ನೆಕ್ಸಸ್ 6 ಗೂ ಭಾರತದಲ್ಲಿ ಪಡೆಯುತ್ತೇವೆ. ಹೆಚ್ಚಿನ ಬಹುಕಾರ್ಯ ಸಾಮರ್ಥ್ಯ, ಸಹಕಾರಿ ಅಧಿಸೂಚನೆಗಳು ಮತ್ತು ಸುಂದರ ವಿನ್ಯಾಸವನ್ನು ವರ್ಧಿಸುವ ಗುಣಗಳನ್ನು ನೆಕ್ಸಸ್ 6 ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ನಮ್ಮ ಅತ್ಯಾಧುನಿಕ ಕೊಡುಗೆಗಳನ್ನು ಭಾರತೀಯ ಗ್ರಾಹಕರು ಆನಂದಿಸುವುದು ಖಂಡಿತ ಎಂದು ಕಂಪೆನಿ ತಿಳಿಸಿದೆ.
ಇದನ್ನೂ ಓದಿ: ವಾಟ್ಸಾಪ್ ಸಮಸ್ಯೆಯೇ ಇಲ್ಲಿದೆ ಪರಿಹಾರ
ಗ್ರೇಟ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್‌ನ ಮೂರನೇ ಭಾಗವಾಗಿ ಗೂಗಲ್‌ನ ಪ್ಲೇಸ್ ಡಿವೈಸ್ ಸೆಕ್ಷನ್‌ನಲ್ಲಿ ನೆಕ್ಸಸ್ 6 ಸ್ಮಾರ್ಟ್‌ಫೋನ್‌ನ ಪೂರ್ವ ಆರ್ಡರ್ ಪ್ರಕ್ರಿಯೆ ಪ್ರಾರಂಭಗೊಂಡಿದೆ.
ನೆಕ್ಸಸ್ 6 ಗೂಗಲ್‌ನ ಅತ್ಯಾಧುನಿಕ 5.0 ಲಾಲಿಪಪ್ ಆವೃತ್ತಿಯೊಂದಿಗೆ ಬರುತ್ತಿದ್ದು ನಿಜಕ್ಕೂ ಇದರ ನೋಟ ಅತಿಗಂಭೀರವಾಗಿದೆ. ಫೋನ್‌ನ ವಿಶೇಷತೆಗಳೂ ಕೂಡ ಗಮನ ಸೆಳೆಯುವಂತಿದ್ದು ಫೋನ್‌ನ ಮೆಟೀರಿಯಲ್ ವಿನ್ಯಾಸ ಕಣ್ಣುಕುಕ್ಕುವಂತಿದೆ.


Click it and Unblock the Notifications








