Subscribe to Gizbot

ಗೂಗಲ್ ಯಶಸ್ಸಿನ ಕೀಲಿ ಕೈ ನೆಕ್ಸಸ್ 6 ಶೀಘ್ರ ತೆರೆಗೆ

Written By:

ಈ ತಿಂಗಳು ಗೂಗಲ್ ನೆಕ್ಸಸ್ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿದೆ. ಈಗಾಗಲೇ ಇದನ್ನು ಕುರಿತು ಕೆಲವು ಮಾಹಿತಿಯನ್ನು ಅರಿತುಕೊಂಡಿರುವ ಮೂವರು ವ್ಯಕ್ತಿಗಳನ್ನು ವಾಲ್ ಸ್ಟ್ರಿಟ್ ಜರ್ನಲ್ ಸಂಪರ್ಕಿಸಿದ್ದು ಇನ್ನೂ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಇನ್ನು ಈ ಸೆಟ್‌ ಅನ್ನು ನೆಕ್ಸಸ್ 6 ಆಗಿ ಬಿಡುಗಡೆ ಮಾಡುವುದೋ ಇಲ್ಲವೋ ಎಂಬುದು ಕೂಡ ತಿಳಿದು ಬರದೇ ಇದ್ದು ಇದರ ಆಂತರಿಕ ಕೋಡ್ ಹೆಸರು "ಶಾಮು" ಎಂಬುದು ಗೊತ್ತಾಗಿದೆ.

ಇನ್ನು ಮಾಹಿತಿಗಳ ಪ್ರಕಾರ ಹ್ಯಾಂಡ್‌ಸೆಟ್ 5.9 ಇಂಚಿನ ಹೈ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಹೊಂದಿದ್ದು ನೆಕ್ಸಸ್ ಬ್ರ್ಯಾಂಡ್ ಅಡಿಯಲ್ಲೇ ಇದನ್ನು ಮಾರಾಟ ಮಾಡಲಾಗುವುದು. ಗೂಗಲ್‌ನ ಪ್ರಥಮ ನೆಕ್ಸಸ್ ಬ್ರ್ಯಾಂಡ್ ಫ್ಯಾಬ್ಲೆಟ್‌ನ ವಿಶೇಷತೆಗಳನ್ನೇ ಈ ಡಿವೈಸ್ ಒಳಗೊಂಡಿದೆ ಎಂಬುದು ವದಂತಿಯಾಗಿದ್ದು ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್ ಪ್ರಥಮ ವಾರದಲ್ಲಿ ಸೆಟ್ ಬಿಡುಗಡೆಯಾಗಲಿದೆ ಎಂಬುದು ಹಳೆಯ ವರದಿಯಿಂದ ತಿಳಿದು ಬಂದ ಮಾಹಿತಿಯಾಗಿದೆ.

ಐಫೋನ್ 6 ಪ್ಲಸ್‌ ಗೆ ಹೊಡೆತ ನೀಡಲಿರುವ ನೆಕ್ಸಸ್ 6

ಇದನ್ನೂ ಓದಿ: ದೀಪಾವಳಿಗಾಗಿ ಕ್ಯಾಮೆರಾ ಫೋನ್‌ಗಳು ಭರ್ಜರಿ ದರ ಕಡಿತದೊಂದಿಗೆ

ಐಫೋನ್ 6 ಪ್ಲಸ್‌ನ ಡಿಸ್‌ಪ್ಲೇ ಗುಣಮಟ್ಟವನ್ನು ಕೆಳಗಿಳಿಸುವ ಶಕ್ತಿ ಕಡಿಮೆ ಬೆಲೆಯ ನೆಕ್ಸಸ್ 6 ಗಿದ್ದು ನಿಜಕ್ಕೂ ಗೂಗಲ್ ಇದನ್ನು ತನ್ನ ಯಶಸ್ಸಿನ ಮೆಟ್ಟಿಲು ಎಂದೇ ಪರಿಗಣಿಸಿದೆ. ಇನ್ನು ಐಫೋನ್ 6 ಪ್ಲಸ್‌ನ ಬೆಲೆ ರೂ 46003.58 ಆಗಿದ್ದು ಕಳೆದ ವರ್ಷ ಲಾಂಚ್ ಆಗಿರುವ ನೆಕ್ಸಸ್ 5 ಗಿಂತ ಇದರ ಬೆಲೆ ಅಧಿಕವಾಗಿದೆ.

ಇದಕ್ಕೆ ಹೋಲಿಸಿದಾಗ ನೆಕ್ಸಸ್ 5 ಅನ್ನು ಯುಕೆನಲ್ಲಿ ರೂ 29189.77 ಗೆ ಮಾರಾಟ ಮಾಡಲಾಗಿತ್ತು.

ಇನ್ನು ಹಿಂದಿನ ವರದಿಗಳ ಪ್ರಕಾರ ಹ್ಯಾಂಡ್‌ಸೆಟ್ ಅನ್ನು ನೆಕ್ಸಸ್ ಎಕ್ಸ್ ಎಂದು ಕರೆಯಲಾಗಿದ್ದು, ಗೂಗಲ್ ಕೆಲವೊಂದು ಟ್ರೇಡ್‌ಮಾರ್ಕ್ ಸಮಸ್ಯೆಗಳನ್ನು ನಿವಾರಿಸಲು ಕೆಲವೊಂದು ಹಂತಗಳನ್ನು ಕೈಗೊಳ್ಳಲಿದೆ. ಆದರೆ ಫೋನ್ ಹೆಚ್ಚು ಮೋಟೋ ಎಕ್ಸ್ ಅನ್ನು ಆಧರಿಸಿದೆ.

English summary
This Article tells about Google’s Nexus 6 release time frame has been confirmed.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot