11 ಸಾವಿರಕ್ಕೆ ಗೂಗಲ್ ನೆಕ್ಸಸ್ ಟ್ಯಾಬ್ಲೆಟ್ ಅನಾವರಣ

Posted By: Varun
11 ಸಾವಿರಕ್ಕೆ ಗೂಗಲ್ ನೆಕ್ಸಸ್ ಟ್ಯಾಬ್ಲೆಟ್ ಅನಾವರಣ

ಗೂಗಲ್ ನ ಡೆವಲಪರ್ ಗಳ ಕಾನ್ಫರೆನ್ಸ್ ಇವತ್ತು ಶುರುವಾಗಲಿದ್ದು, ಎಲ್ಲರ ಗಮನ ಅದರತ್ತ ಇದೆ. ಕಾರಣ ಏನೆಂದರೆ ಈ ವರ್ಷದ ಬಹು ನಿರೀಕ್ಷಿತ ಟ್ಯಾಬ್ಲೆಟ್, ಗೂಗಲ್ ನೆಕ್ಸಸ್ ಟ್ಯಾಬ್ಲೆಟ್ ಈ ದಿನ ಅನಾವರಣಗೊಳ್ಳಲಿದೆ.

ಒಂದು ಕಡೆ ಆಪಲ್ ನ ಐಪ್ಯಾಡ್, ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಶೇ.60 ಕ್ಕೂ ಹೆಚ್ಚು ಪಾಲುದಾರಿಕೆ ಹೊಂದಿದ್ದು ಹೈ ಎಂಡ್ ಗ್ರಾಹಕರಿಗೆ ಮುದ ನೀಡುತ್ತಿದ್ದರೆ, ಮತ್ತೊಂದು ಕಡೆ ಗೂಗಲ್ ನ ಆಂಡ್ರಾಯ್ಡ್ ತಂತ್ರಾಂಶ ಹೊಂದಿರುವ ಟ್ಯಾಬ್ಲೆಟ್ ಗಳು ಪರಸ್ಪರಹೋರಾಡುತ್ತಿದ್ದು, ಕಡಿಮೆ ಬಜೆಟ್ ಟ್ಯಾಬ್ಲೆಟ್ ನ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರಲು ಪ್ರಯತ್ನ ಮಾಡುತ್ತಿವೆ.

ಕಳೆದ ವಾರ ಮೈಕ್ರೋಸಾಫ್ಟ್ ಕೂಡ ತನ್ನದೇ ಆದ ವಿಂಡೋಸ್ 8 ತಂತ್ರಾಂಶ ಆಧಾರಿತ ಟ್ಯಾಬ್ಲೆಟ್ ಆದ ಸರ್ಫೇಸ್ ಅನ್ನು ಅನಾವರಣಗೊಳಿಸಿದ್ದು ಆಪಲ್ ಹಾಗು ಆಂಡ್ರಾಯ್ಡ್ ಟ್ಯಾಬ್ಲೆಟ್, ಎರಡಕ್ಕೂ ಸದ್ದು ಹೊಡೆಯುವ ನಿರೀಕ್ಷೆ ಇದೆ. ಹೀಗಾಗಿ ಗೂಗಲ್ ತನ್ನದೇ ಆದ ಆಂಡ್ರಾಯ್ಡ್ ತಂತ್ರಾಂಶ ಇಟ್ಟುಕೊಂಡು ಎರಡು ವರ್ಷಗಳಿಂದ ಬೇರೆ ಕಂಪನಿಗಳಿಗೆ ಟ್ಯಾಬ್ಲೆಟ್ ತಯಾರು ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟು, ಈಗ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲು ತೈವಾನ್ ಮೂಲದ ಅಸೂಸ್ ಜೊತೆ ಸೇರಿ ನೆಕ್ಸಸ್ ಹೆಸರಿನ ಟ್ಯಾಬ್ಲೆಟ್ ಬಿಡಲಿದೆ ಎಂಬ ಸುದ್ದಿ ಈ ವರ್ಷದ ಪ್ರಾರಂಭದಿಂದ ಇತ್ತು.

ಈಗ ಆ ಎಲ್ಲ ಸುದ್ದಿಗಳಿಗೆ ತೆರೆ ಬೀಳಲಿದ್ದು, ಗೂಗಲ್ ನೆಕ್ಸಸ್ ಟ್ಯಾಬ್ಲೆಟ್ ಅನಾವರಣಗೊಳ್ಳಲಿದೆ. ಈ ಸುದ್ದಿ ಯಾಕೆ ಇಷ್ಟು ಮಹತ್ವ ಪಡೆದುಕೊಂಡಿದೆ ಎಂದರೆ ಈ ಟ್ಯಾಬ್ಲೆಟ್ ಸುಮಾರು 11 ಸಾವಿರ ರೂಪಾಯಿಗೆ ಬರಲಿದ್ದು, ಆಂಡ್ರಾಯ್ಡ್ ನ ಹೊಚ್ಚ ಹೊಸ ಆವೃತ್ತಿ, ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಇರಲಿದೆಯಂತೆ.

ಖಚಿತವಾಗಿರುವ ಮತ್ತಷ್ಟು ಫೀಚರುಗಳು ಯಾವುವು ಎಂದರೆ

  • 7 ಇಂಚ್ ನ HD ಸ್ಕ್ರೀನ್

  • 1280 x 800 ಪಿಕ್ಸೆಲ್ IPS ಡಿಸ್ಪ್ಲೇ

  • 1.3 GHz ಕ್ವಾಡ್ ಕೋರ್ ಟೆಗ್ರಾ 3 ಪ್ರೋಸೆಸರ್

  • GeForce 12 ಕೋರ್ ಗ್ರಾಫಿಕ್ಸ್

  • 1 GB ರಾಮ್

  • 1.2 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ

  • 9 ಗಂಟೆ ಬ್ಯಾಟರಿ ಬ್ಯಾಕಪ್
 

ಇವಿಷ್ಟೂ ಫೀಚರುಗಳು ಇರುವ ಬೇರೆ ಟ್ಯಾಬ್ಲೆಟ್ಟುಗಳ ಬೆಲೆ ಸುಮಾರು 30 ಸಾವಿರ ಇದ್ದು, ಗೂಗಲ್ ನೆಕ್ಸಸ್ ಟ್ಯಾಬ್ಲೆಟ್ ನ 8 GB ಟ್ಯಾಬ್ಲೆಟ್ 11 ಸಾವಿರಕ್ಕೆ ಬರಲಿದ್ದು, 16 GB ಟ್ಯಾಬ್ಲೆಟ್ ಸುಮಾರು 14 ಸಾವಿರ ರೂಪಾಯಿಗೆ ಬರಲಿದೆ.

ಗೂಗಲ್ ನ ಈ ಟ್ಯಾಬ್ಲೆಟ್ ಮಾರುಕಟ್ಟೆಗೆ ಬಂದರೆ ಖಂಡಿತವಾಗಿಯೂ ಆಪಲ್ ಸೇರಿದಂತೆ ಬೇರೆ ಟ್ಯಾಬ್ಲೆಟ್ ಗಳ ಬುಡ ಶೇಕ್ ಆಗುವುದಂತೂ ಗ್ಯಾರಂಟಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot