ಆನ್‌ಲೈನ್ ಡೇಟಾ ಸಂಗ್ರಹಣೆಯನ್ನ ಮಿತಿಗೊಳಿಸಿದ ಗೂಗಲ್!
ಇತ್ತೀಚಿನ ದಿನಗಳಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗೋದೆ ಸರ್ಚ್ ಇಂಜನ್ ಗೂಗಲ್. ಅಷ್ಟರ ಮಟ್ಟಿಗೆ ಗೂಗಲ್ ಇಂದು ತನ್ನ ಪ್ರಖ್ಯಾತಿಯನ್ನ ವಿಸ್ತರಿಸಿಕೊಂಡಿದೆ. ಸದ್ಯ ಜಾಗತಿಕವಾಗಿ ಪ್ರಸಿದ್ದಿಯಾಗಿರುವ ಗೂಗಲ್ ತನ್ನ ಸರ್ಚ್ ಹಿಸ್ಟರಿಯಲ್ಲಿ ಬಳಕೆದಾರರ ಡೇಟಾವನ್ನು ಎಷ್ಟು ಸಮಯದವರೆಗೆ ಸಂಗ್ರಹಿಸುತ್ತದೆ ಅನ್ನೊದನ್ನ ಗೂಗಲ್ ಇದೀಗ ನಿಗದಿಪಡಿಸಿದೆ. ಸದ್ಯ ಗೂಗಲ್ ಬಳಕೆದಾರರ ಹಿತದೃಷ್ಟಿಯಿಂದ ಈ ನಿರ್ಧಾರೆ ತೆಗೆದುಕೊಂಡಿದ್ದು, ಕೆಲವು ತಿಂಗಳುಗಳ ನಂತರ ಸ್ವಯಂಚಾಲಿತವಾಗಿ ಡೇಟಾ ಹಿಸ್ಟರಿ ಡಿಲೀಟ್ ಆಗಲಿದೆ ಎನ್ನಲಾಗ್ತಿದೆ.

ಹೌದು, ಗೂಗಲ್ ತನ್ನ ಹೊಸ ಬಳಕೆದಾರರಿಗಾಗಿ 18 ತಿಂಗಳ ನಂತರ ಕೆಲವು ಪ್ಲೇಸ್ ಹಿಸ್ಟರಿಯನ್ನು ಸ್ವಯಂಚಾಲಿತವಾಗಿ ಅಳಿಸುತ್ತದೆ. ಅಲ್ಲದೆ ಟ್ರ್ಯಾಕ್ ಮಾಡದೆಯೇ ಪ್ರತಿಯೊಬ್ಬರಿಗೂ ಅದರ ಹುಡುಕಾಟ, ನಕ್ಷೆಗಳು ಮತ್ತು ಯು-ಟ್ಯೂಬ್ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಸುಲಭವಾಗಿಸುತ್ತದೆ ಎಂದು ಆಲ್ಫಾಬೆಟ್ ಇಂಕ್ ಹೇಳಿದೆ. ಜೊತೆಗೆ ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಗೂಗಲ್ ತನ್ನ ಡೇಟಾ ಸಂಗ್ರಹಣಾ ಅಭ್ಯಾಸಗಳ ಬಗ್ಗೆ ಹೆಚ್ಚಿನ ಪರಿಶೀಲನೆಯನ್ನು ಎದುರಿಸುತ್ತಿರುವುದರಿಂದ ಗೌಪ್ಯತೆ ನಿಯಂತ್ರಣಗಳ ನವೀಕರಣಗಳು ಮಾಡಲಾಗುತ್ತಿದೆ ಎಂದು ಗೂಗಲ್ ಹೇಳಿದೆ. ಅಷ್ಟಕ್ಕೂ ಗೂಗಲ್ ತನ್ನ ಡೇಟಾ ಸಂಗ್ರಹದ ಮಿತಿಯ ಬಗ್ಗೆ ಏನ್ ಹೇಳುತ್ತದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸದ್ಯ ಗೂಗಲ್‌ನ ನವೀಕರಿಸಿದ ಸೆಟ್ಟಿಂಗ್‌ಗಳ ಅಡಿಯಲ್ಲಿ, ಹೊಸ ಬಳಕೆದಾರರ YouTube ಹಿಸ್ಟರಿ 36 ತಿಂಗಳ ನಂತರ ಕಣ್ಮರೆಯಾಗುತ್ತದೆ. ಅಲ್ಲದೆ ಪ್ಲೇಸ್ ಟ್ರ್ಯಾಕಿಂಗ್ ಮತ್ತು ವೆಬ್ ಬ್ರೌಸಿಂಗ್ ಹಿಸ್ಟರಿಯನ್ನು 18 ತಿಂಗಳ ನಂತರ ಕೈಬಿಡಲಾಗುತ್ತದೆ ಎಂದು ಗೂಗಲ್ ಹೇಳಿದೆ. ಇದಲ್ಲದೆ ಕಡಿಮೆ ಅಥವಾ ಹೆಚ್ಚಿನ ಸಮಯ ಫ್ರೇಮ್‌ಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ಬಳಕೆದಾರರು ಹೊಂದಿದ್ದು, ಉತ್ಪನ್ನಗಳು ನಿಮ್ಮ ಮಾಹಿತಿಯನ್ನು ನಿಮಗೆ ಉಪಯುಕ್ತ ಮತ್ತು ಸಹಾಯಕವಾಗುವವರೆಗೆ ಮಾತ್ರ ಇಟ್ಟುಕೊಳ್ಳಬೇಕು ಎಂದು ನಾವು ನಂಬುತ್ತೇವೆ" ಎಂದು ಗೂಗಲ್ ಹೇಳಿಕೊಂಡಿದೆ.

ಹಾಗೇ ನೋಡಿದ್ರೆ ಜನರು ಆನ್‌ಲೈನ್‌ನಲ್ಲಿ ಏನು ಮಾಡುತ್ತಾರೆ ಎಂಬುದರ ದಾಖಲೆಯನ್ನು ಗೂಗಲ್ ಹೇಗೆ ಸಂಗ್ರಹಿಸುತ್ತದೆ ಅನ್ನೊ ಟೀಕೆ ಕೇಳಿಬರುತ್ತಿತ್ತ. ಇದೇ ಕಾರಣಕ್ಕೆ ಗೂಗಲ್ ಇದು ಸ್ಥಳ ಇತಿಹಾಸ ಮತ್ತು ವೆಬ್ ಮತ್ತು ಅಪ್ಲಿಕೇಶನ್ ಚಟುವಟಿಕೆಯ ದಾಖಲೆಗಳನ್ನು ಮತ್ತು 18 ತಿಂಗಳ ನಂತರ ಹೊಸ ಖಾತೆಗಳಲ್ಲಿನ ಧ್ವನಿ ರೆಕಾರ್ಡಿಂಗ್‌ಗಳನ್ನು ಸ್ವಯಂಚಾಲಿತವಾಗಿ ಡಿಲಿಟ್ ಮಾಡಲಿದೆ ಎನ್ನಲಾಗ್ತಿದೆ. ಬಳಕೆದಾರರು ತಮ್ಮ ವೆಬ್ ಹುಡುಕಾಟಗಳು, ಕಂಪನಿಯ ವರ್ಚುವಲ್ ಅಸಿಸ್ಟೆಂಟ್‌ನೊಂದಿಗೆ ಮಾಡಿದ ವಿನಂತಿಗಳು ಮತ್ತು ಅವರ ಸ್ಥಳ ಇತಿಹಾಸಕ್ಕೆ ಸಂಬಂಧಿಸಿದ ಡೇಟಾವನ್ನು ಸ್ವಯಂಚಾಲಿತವಾಗಿ ಅಳಿಸಲು ಬಳಕೆದಾರರಿಗೆ ಅನುಮತಿಸಲು ಗೂಗಲ್ ಕಳೆದ ವರ್ಷ ಆಯ್ಕೆಯನ್ನು ಪರಿಚಯಿಸಿದ ನಂತರ ಇದೀಗ ಸೀಮಿತ ಬದಲಾವಣೆ ಮಾಡಲಾಗಿದೆ.

ಇನ್ನು ಹೊಸ ಖಾತೆಗಳಲ್ಲಿ ಪೂರ್ವನಿಯೋಜಿತವಾಗಿ ಆ ಡೇಟಾವನ್ನು ಅಳಿಸಲು ನೀತಿಯು Google ಖಾತೆಗಳನ್ನು ಹೊಂದಿಸುತ್ತದೆ, ಬದಲಿಗೆ ಅಳಿಸುವ ಆಯ್ಕೆಗೆ ಬದಲಾಯಿಸಲು ಬಳಕೆದಾರರು ಉತ್ಪನ್ನದ ಸೆಟ್ಟಿಂಗ್‌ಗಳಿಗೆ ಹೋಗಬೇಕಾಗುತ್ತದೆ. ಅಸ್ತಿತ್ವದಲ್ಲಿರುವ ಖಾತೆಗಳಲ್ಲಿನ ಸೆಟ್ಟಿಂಗ್‌ಗಳು ಬದಲಾಗದೆ ಉಳಿಯುತ್ತವೆ. ಅಲ್ಲದೆ ಅಸ್ತಿತ್ವದಲ್ಲಿರುವ ಖಾತೆಗಳ ಸೆಟ್ಟಿಂಗ್‌ಗಳನ್ನು ಬದಲಾಯಿಸಿಲ್ಲ ಅನ್ನೊದನ್ನ ಸಹ ನಾವಿಲ್ಲಿ ಗಮನಿಸಬೇಕಾಗುತ್ತದೆ.


Click it and Unblock the Notifications