Subscribe to Gizbot

2011ರ ಸ್ಪರ್ಧೆಯಲ್ಲಿ ಫೇಸ್ ಬುಕ್ ಹಿಂದಿಕ್ಕಿದ ಗೂಗಲ್

Posted By:
2011ರ ಸ್ಪರ್ಧೆಯಲ್ಲಿ ಫೇಸ್ ಬುಕ್ ಹಿಂದಿಕ್ಕಿದ ಗೂಗಲ್

ಮಾಹಿತಿಗಾಗಿ ಜನರು ಗೂಗಲ್, ವಿಕಿಪೀಡಿಯ, ಹೀಗೆ ಅನೇಕ ವೆಬ್ ಸೈಟ್ ಗಳಿಗೆ ಭೇಟಿಕೊಡುತ್ತಾರೆ. 2011ರಲ್ಲಿ ಜನರು ಅತಿ ಹೆಚ್ಚಾಗಿ ಬಳಕೆಮಾಡುತ್ತಿರುವ ವೆಬ್ ಸೈಟ್ ಗಳ ಬಗ್ಗೆ ನೀಲ್ ಸೆನ್ ಎಂಬುವರು ನಡೆಸಿದ ಅಧ್ಯಯನದಲ್ಲಿ ಗೂಗಲ್ ಸಾಮಾಜಿಕ ತಾಣ ಫೇಸ್ ಬುಕ್ ಹಿಂದಿಕ್ಕಿ ಪ್ರಥಮ ಸ್ಥಾನ ಗಳಿಸಿದೆ ಎಂದು ತಿಳಿದು ಬಂದಿದೆ.

ನೀಲ್ ಸೆನ್ ಅಧ್ಯಯನದ ಪ್ರಕಾರ ತಿಂಗಳಿಗೆ 153 ಮಿಲಿಯನ್ ಜನರು ಗೂಗಲ್ ಗೆ ಭೇಟಿ ಕೊಟ್ಟರೆ, ಫೇಸ್ ಬುಕ್ ಗೆ 138 ಮಿಲಿಯನ್ ಜನರು ಭೇಟಿ ಕೊಡುತ್ತಾರೆ. ಯಾಹೂ 3ನೇ ಸ್ಥಾನವನ್ನು ಗಳಿಸಿದ್ದು ತಿಂಗಳಿಗೆ ಭೇಟಿ ನೀಡುವವರ ಸಂಖ್ಯೆ 130 ಮಿಲಿಯನ್ ಆಗಿದೆ.

ಗೂಗಲ್ ಪ್ರಥಮ ಸ್ಥಾನವನ್ನು ಗಳಿಸಿದ್ದರೂ ಅದರದೆ ಆದ ಸಾಮಾಜಿಕ ತಾಣ ಗೂಗಲ್+ ಗೆ ಪ್ರತಿ ತಿಂಗಳು ಭೇಟಿ ನೀಡುವವರ ಸಂಖ್ಯೆ 8.02 ಮಿಲಿಯನ್ ಆಗಿದ್ದು 8ನೇ ಸ್ಥಾನಕ್ಕಿಳಿದಿದೆ.

ಇತರ ಮ್ಯೂಸಿಕ್ ವೀಡಿಯೊ ಸರ್ವೀಸ್ ಅಥವಾ ವೇವೊಗೆ ಹೋಲಿಸಿದರೆ ಗೂಗಲ್ ನ ವೀಡಿಯೊ ಸಾಮಾಜಿಕ ತಾಣವಾದ ಯೂ ಟ್ಯೂಬ್ ಗೆ ಭೇಟಿ ನೀಡುವವರ ಸಂಖ್ಯೆ ದುಪ್ಪಟಾಗಿದೆ.

Read In English

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot