Free AI Course: ಉಚಿತವಾಗಿ ಎಐ ಕಲಿಯುವಿರಾ? ಗೂಗಲ್ ನೀಡುವ ಫ್ರೀ ಕೋರ್ಸ್ ಬಗ್ಗೆ ತಿಳಿಯಿರಿ
ಈಗ ಎಲ್ಲರೂ ಎಐ (Artificial Intelligence) ಬಗ್ಗೆ ಮಾತನಾಡುತ್ತಿದ್ದಾರೆ. ನೋಡುನೋಡುತ್ತಿದ್ದಂತೆ AI ತಂತ್ರಜ್ಞಾನ ಕ್ಷೇತ್ರದ ಒಂದು ಭಾಗವಾಗಿಬಿಟ್ಟಿದೆ. ಚಾಟ್‌ಜಿಪಿಟಿ ಬಂದ ಬಳಿಕ ಎಲ್ಲೆಲ್ಲೂ AI ಕಾಣಿಸುತ್ತಿದೆ. ಇದೀಗ ವಿದ್ಯಾರ್ಥಿಗಳು, ಟೆಕ್ನಾಲಜಿ ಹುದ್ದೆಯಲ್ಲಿರುವವರು ಅಥವಾ ಆಸಕ್ತರು ಎಐ ಕೋರ್ಸ್ ಕಲಿಯಲು ಒಂದು ಸುವರ್ಣಾವಕಾಶ ಒದಗಿಬಂದಿದೆ. AI ಬಗ್ಗೆ ತಿಳಿಯುವ ಅಥವಾ ಕಲಿಯುವ ಆಸಕ್ತಿ ಇದ್ದರೆ, ಗೂಗಲ್ ಸಂಸ್ಥೆ ನೀಡುವ ಉಚಿತ AI ಕೋರ್ಸ್‌ನ ಪ್ರಯೋಜನ ಪಡೆಯಬಹುದಾಗಿದೆ. ಹಾಗಿದ್ರೆ, AI ಕೋರ್ಸ್‌ನಲ್ಲಿ ಏನು ಕಲಿಸಲಾಗುತ್ತದೆ? ಈ ಕೋರ್ಸ್ ಪೂರ್ಣಗೊಳಿಸಲು ಎಷ್ಟು ಸಮಯ ಬೇಕು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಇತ್ತೀಚಿನ ದಿನಗಳಲ್ಲಿ AI (ಕೃತಕ ಬುದ್ಧಿಮತ್ತೆ) ಹೊಸ ಕ್ರಾಂತಿ ಸೃಷ್ಟಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಗೂಗಲ್ AIನಲ್ಲಿ ಉಚಿತ ಕೋರ್ಸ್‌ಗಳನ್ನು ಪ್ರಾರಂಭಿಸಿದೆ. ಕೋರ್ಸ್ ಮುಗಿದ ತಕ್ಷಣ, ನಿಮಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ನೀವು Google AI ಕೋರ್ಸ್ ಪ್ರಮಾಣಪತ್ರವನ್ನು ನಿಮ್ಮ ರೆಸ್ಯೂಮ್‌ಗೆ ಮತ್ತು ಲಿಂಕ್ಡ್‌ಇನ್‌ನಲ್ಲಿ ಲಗತ್ತಿಸಬಹುದು. ನೀವು ಈ AI ಉಚಿತ ಕೋರ್ಸ್‌ಗಳಿಗೆ ಸೈನ್ (https://www.cloudskillsboost.google/) ಅಪ್ ಮಾಡಬಹುದು.

Google AI ಕೋರ್ಸ್ ಸಂಪೂರ್ಣ 'ಫ್ರೀ'
ಜನರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ AI ಅನ್ನು ವ್ಯಾಪಕವಾಗಿ ಬಳಸಲು ಆರಂಭಿಸಿದ್ದಾರೆ. AI ಇದ್ದಕ್ಕಿದ್ದಂತೆ ಪ್ರತಿಯೊಬ್ಬರ ಜೀವನದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ಶಾಲಾ-ಕಾಲೇಜುಗಳಲ್ಲಿಯೂ AI ಮೂಲಕ ಅಧ್ಯಯನಕ್ಕೆ ಒತ್ತು ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಮಕ್ಕಳಿಗೆ ಎಐ ಕಲಿಸಲು ಹಲವು ಕೋರ್ಸ್‌ಗಳನ್ನೂ ಆರಂಭಿಸಲಾಗಿದೆ. ಗೂಗಲ್ ಸಹ ಹೊಸ ಎಐ ಕೋರ್ಸ್ ಆರಂಭಿಸಿದೆ. 10 ಗಂಟೆಗಳಲ್ಲಿ ನಿಮಗೆ ಪ್ರಮಾಣಪತ್ರ (certification course) ಸಿಗಲಿದ್ದು, ಒಂದು ರೂಪಾಯಿ ಶುಲ್ಕ ಕೂಡ ಪಾವತಿಸಬೇಕಾಗಿಲ್ಲ.
AI ಕೋರ್ಸ್‌ಗೆ ಹೆಚ್ಚಿದ ಬೇಡಿಕೆ
ಭವಿಷ್ಯದ ದೃಷ್ಟಿಯಿಂದ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಕಲಿಕೆಗೆ ಇದು ಸೂಕ್ತವಾದ ಸಮಯವಾಗಿದೆ. ವಿದ್ಯಾರ್ಥಿಗಳು(ಮಕ್ಕಳು), ವಯಸ್ಕರು, ಎಲ್ಲರೂ ಅರಿವಿಲ್ಲದೆಯೇ AIನ ಫಾಲೋವರ್ಸ್ ಆಗುತ್ತಿದ್ದಾರೆ. ಅದಕ್ಕಾಗಿಯೇ ಗೂಗಲ್ ಉಚಿತ AI ಕೋರ್ಸ್‌ಗಳನ್ನು ಪ್ರಾರಂಭಿಸಿದೆ. ಆರಂಭಿಕ ಹಂತದ ಕೋರ್ಸ್‌ಗಳಿಗೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಈ ಕೋರ್ಸ್‌ಗಳ ಮುಂದುವರಿದ ಹಂತಕ್ಕೆ ನೀವು ಶುಲ್ಕವನ್ನು ಪಾವತಿಸಬೇಕಾಗಬಹುದು. Google AI ಕೋರ್ಸ್ ಅನ್ನು 8 ರಿಂದ 10 ಗಂಟೆಗಳಲ್ಲಿ ಪೂರ್ಣಗೊಳಿಸಿದ ನಂತರ, ನೀವು ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
AI ಕೋರ್ಸ್‌ನಲ್ಲಿ ಏನೆಲ್ಲಾ ಕಲಿಯಬಹುದು?
Google AI ಉಚಿತ ಕೋರ್ಸ್‌ನಲ್ಲಿ 5 ಮಾಡ್ಯೂಲ್‌ಗಳಿವೆ. Google ಉಚಿತ ಕೋರ್ಸ್‌ಗೆ ಸೇರಲು, ನೀವು ಅದಕ್ಕೆ ಸಂಬಂಧಿಸಿದ ಯಾವುದೇ ಪದವಿಯನ್ನು ಹೊಂದಿರುವುದು ಅನಿವಾರ್ಯವಲ್ಲ. ನಿಮ್ಮ ಸಮಯಕ್ಕೆ ಅನುಗುಣವಾಗಿ ನೀವು ಅದನ್ನು ಪೂರ್ಣಗೊಳಿಸಬಹುದು. ಇದು ಸಾಮಾನ್ಯವಾಗಿ 8 ರಿಂದ 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಅದಕ್ಕಿಂತ ಮೊದಲು Google AI ಉಚಿತ ಕೋರ್ಸ್‌ನಿಂದ ನೀವು ಏನನ್ನು ಕಲಿಯಬಹುದು ಎಂಬುದನ್ನು ತಿಳಿದುಕೊಳ್ಳಿ. ಇದಕ್ಕೆ ಮುಂದೆ ಓದಿ.
ದೈನಂದಿನ ಕೆಲಸದ ವೇಗವೂ ಹೆಚ್ಚಾಗುತ್ತೆ!
AI ಪರಿಕರಗಳು, ಆಲೋಚನೆಗಳು ಮತ್ತು ವಿಷಯವನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುತ್ತವೆ. ನೀವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಮತ್ತು ದೈನಂದಿನ ಕೆಲಸದ ವೇಗವೂ ಹೆಚ್ಚಾಗುತ್ತದೆ. ಈ ಕೋರ್ಸ್‌ನಲ್ಲಿ AIಗೆ ಸ್ಪಷ್ಟ ಸೂಚನೆಗಳನ್ನು ಬರೆಯುವುದು ಹೇಗೆ ಎಂದು ಕಲಿಸುತ್ತಾರೆ. ಇದರೊಂದಿಗೆ ನೀವು ಸಾರಾಂಶವನ್ನು ಬರೆಯುವ ತಂತ್ರವನ್ನು ಕಲಿಯುವಿರಿ ಮತ್ತು ಟ್ಯಾಗ್ ಲೈನ್‌ಗಳನ್ನು ರಚಿಸಲು ಸಹ ಸಾಧ್ಯವಾಗುತ್ತದೆ. AIನ ಅನಾನುಕೂಲಗಳು ಮತ್ತು ಅಡ್ಡ ಪರಿಣಾಮಗಳನ್ನು ವಿವರಿಸುವುದು ಮತ್ತು ಅದನ್ನು ಜವಾಬ್ದಾರಿಯುತವಾಗಿ ಬಳಸುವುದನ್ನು ಕೋರ್ಸ್ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ.
AI ಕೋರ್ಸ್‌ನ 5 ಮಾಡ್ಯೂಲ್‌ಗಳು ಯಾವುವು?
AI ಕ್ಷೇತ್ರದಲ್ಲಿಯೂ ನಿರಂತರ ಬದಲಾವಣೆಗಳು ನಡೆಯುತ್ತಿವೆ. ಪ್ರಸ್ತುತ ಆರಂಭಿಕವಾಗಿ Google AI ಉಚಿತ ಕೋರ್ಸ್‌ನಲ್ಲಿ 5 ಮಾಡ್ಯೂಲ್‌ಗಳನ್ನು ಕಲಿಸಲಾಗುತ್ತದೆ. ಇವುಗಳನ್ನು Coursera ನೊಂದಿಗೆ ಲಿಂಕ್ ಮಾಡಲಾಗಿದೆ. ನೀವು ಇದನ್ನು ಈ ನೇರ https://www.coursera.org/google-learn/ai-essentials. ಲಿಂಕ್‌ನಿಂದ ಪ್ರವೇಶಿಸಬಹುದು. ಇದಲ್ಲದೇ, Google AI ಉಚಿತ ಕೋರ್ಸ್‌ನ 5 ಮಾಡ್ಯೂಲ್‌ಗಳನ್ನು ಹೇಗೆ ವಿಂಗಡಿಸಲಾಗಿದೆ ಎನ್ನುವುದನ್ನು ತಿಳಿಯಿರಿ.
- AI ಬಗ್ಗೆ ಪರಿಚಯ (ಸಮಯ : 1 ಗಂಟೆ)
- AI ಪರಿಕರಗಳೊಂದಿಗೆ ಉತ್ಪಾದಕತೆಯನ್ನು ಗರಿಷ್ಠಗೊಳಿಸುವುದು (ಸಮಯ : 2 ಗಂಟೆಗಳು)
- ಪ್ರಾಂಪ್ಟ್ ಇಂಜಿನಿಯರಿಂಗ್ ಕಲೆಯ ಅನ್ವೇಷಣೆ (ಸಮಯ : 2 ಗಂಟೆಗಳು)
- AI ಜವಾಬ್ದಾರಿಯುತ ಬಳಕೆ (ಸಮಯ : 1 ಗಂಟೆ)
- AI ಕರ್ವ್‌ನ ಮುಂದೆ ಇರಿ (ಸಮಯ : 2 ಗಂಟೆಗಳು)
ಇಲ್ಲಿದೆ 10 AI ಕೋರ್ಸ್‌ಗಳ ಪಟ್ಟಿ
- Introduction to Generative AI
- ntroduction to Large Language Models
- Introduction to Responsible AI
- Generative AI Fundamentals
- Introduction to Image Generation
- Encoder-Decoder Architecture
- Attention Mechanism
- Transformer Models and BERT Model
- Create Image Captioning Models
- Introduction to Generative AI Studio


Click it and Unblock the Notifications








