ದೀಪಾವಳಿ ವಿಶೇಷ: ಕೇವಲ 11 ರೂ.ಗೆ Google ನಿಂದ ಅತಿದೊಡ್ಡ ಉಡುಗೊರೆ!
ಈ ದೀಪಾವಳಿ ಹಬ್ಬದಲ್ಲಿ ನಿಮಗೆ ದೊರೆಯುತ್ತಿರುವ ಅತಿದೊಡ್ಡ ತಂತ್ರಜ್ಞಾನ ಉಡುಗೊರೆ ಎಂದರೆ ಇದೇ ಇರಬಹುದು. ಏಕೆಂದರೆ, ಟೆಕ್ ದೈತ್ಯ ಗೂಗಲ್ ಕೇವಲ ₹11 ರೂಪಾಯಿಗೆ ಮೂರು ತಿಂಗಳುಗಳ ಕಾಲ Google One ಕ್ಲೌಡ್ ಸ್ಟೋರೇಜ್ ಪ್ರೀಮಿಯಂ ಯೋಜನೆಗಳನ್ನು ಒದಗಿಸುವುದಾಗಿ ತಿಳಿಸಿದೆ.! ಹೌದು, ಈ ದೀಪಾವಳಿಗೆ ಗೂಗಲ್ ತನ್ನ ಬಳಕೆದಾರರಿಗೆ ನಂಬಲಾಗದಂತಹ ಈ ಅದ್ಭುತ ಉಡುಗೊರೆ ತಂದಿದ್ದು, Google One ಚಂದಾದಾರಿಕೆಯ Lite, Basic, Standard, ಮತ್ತು Premium ಎಲ್ಲ ಯೋಜನೆಗಳಿಗೂ ಕೇವಲ ₹11 ರೂಪಾಯಿಗೆ ಚಂದಾದಾರರಾಗಬಹುದು. ಇದು ಹೆಚ್ಚುವರಿ ಡಿಜಿಟಲ್ ಸ್ಟೋರೇಜ್ ಅಗತ್ಯವಿರುವ ಬಳಕೆದಾರರಿಗೆ ಸುಸಂಧರ್ಭವಾಗಿದೆ. ಹಾಗಾದರೆ, ಏನಿದು ಕೊಡುಗೆ?, ಹೇಗೆ ಉಪಯೋಗಿಸಿಕೊಳ್ಳುವುದು ಎಂಬುದನ್ನು ಸಹ ನೋಡೋಣ ಬನ್ನಿ.
ನಾವು ತಿಳಿದಿರುವಂತೆ, Google One ಚಂದಾದಾರಿಕೆಗಳು Google Drive, Gmail ಮತ್ತು Google Photos ನಲ್ಲಿ ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸಲು ಸಹಾಯ ಮಾಡುತ್ತವೆ. ನಾವು ಹೆಚ್ಚಿನ ಡೇಟಾ ಸಂಗ್ರಹಿಸಲು ಹೆಚ್ಚಿನ ಸ್ಟೋರೇಜ್ ಅನ್ನು ಖರೀದಿಸಬೇಕಾಗುತ್ತದೆ. ಆದರೆ, ಈ ದೀಪಾವಳಿ ಆಫರ್ Lite, Basic, Standard, ಮತ್ತು Premium ಎಲ್ಲ ಯೋಜನೆಗಳಿಗೂ ದೊಡ್ಡ ಪ್ರಮಾಣದ ರಿಯಾಯಿತಿ ತಂದಿದ್ದು, ಗ್ರಾಹಕರು ಮೊದಲ ಮೂರು ತಿಂಗಳು ಕೇವಲ ₹11 ರೂಪಾಯಿ ಪಾವತಿಸುವ ಮೂಲಕ ಈ ಮೇಲಿನ ಯಾವುದೇ ಯೋಜನೆಗಳಿಗೆ ಚಂದಾದಾರರಾಗಬಹುದು. ನೀವು ನನಗೆ 2TB (ಟೆರಾಬೈಟ್) ನಷ್ಟು ಸ್ಟೋರೇಜ್ ಬೇಕು ಎಂದಾದಾರೆ, ಅದಕ್ಕೂ ಕೂಡ ಮೂರು ತಿಂಗಳ ಕಾಲ ಕೇವಲ ₹11 ರೂಪಾಯಿ ಪಾವತಿಸಿದರೆ ಸಾಕಾಗುತ್ತದೆ. ಹಾಗಾಗಿ, ಇದೊಂದು ಐತಿಹಾಸಿಕ ಕೊಡುಗೆಯಾಗಿದೆ.
ದೀಪಾವಳಿ ವಿಶೇಷವಾಗಿ ಗೂಗಲ್ ಪರಿಚಯಿಸಿರುವ Google One ಚಂದಾದಾರಿಕೆ ಕೊಡುಗೆಗಳು ಹೇಗಿವೆ ಎಂಬುದನ್ನು ಈ ಕೆಳಗಿನ ಪಟ್ಟಿಯ ಮೂಲಕ ತಿಳಿಯೋಣ ಬನ್ನಿ.
ಮಾಸಿಕ ಚಂದಾದಾರಿಕೆಗಳಿಗೆ ಗೂಗಲ್ ವಿಶೇಷ ಬೆಲೆ
| ಯೋಜನೆ | ಸಾಮಾನ್ಯ ಮಾಸಿಕ ಬೆಲೆ | ದೀಪಾವಳಿ ಆಫರ್ ಬೆಲೆ (ಮೊದಲ 3 ತಿಂಗಳಿಗೆ) | ಒಟ್ಟು ಸ್ಟೋರೇಜ್ |
| Lite | ₹30 | ₹11 | 30GB |
| Basic | ₹130 | ₹11 | 100GB |
| Standard | ₹210 | ₹11 | 200GB |
| Premium | ₹650 | ₹11 | 2TB (2000GB) |
ಈ ಮೇಲಿನ ಯೋಜನೆಗಳಲ್ಲಿ 2TB ಸ್ಟೋರೇಜ್ ನೀಡುವ Premium ಯೋಜನೆಯು ಅತ್ಯಂತ ಮೌಲ್ಯಯುತವಾಗಿದೆ. ಆಫರ್ ಅವಧಿ ಮುಗಿದ ನಂತರ, ಬೆಲೆ ಸಾಮಾನ್ಯ ದರಕ್ಕೆ ಮರುಪರಿಶೀಲನೆಯಾಗುತ್ತದೆ.
ಮಾಸಿಕ ಯೋಜನೆಗಳಷ್ಟೇ ಅಲ್ಲದೆ, Google ವಾರ್ಷಿಕ ಚಂದಾದಾರಿಕೆಗಳ ಮೇಲೆ ಸಹ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ.
| ಯೋಜನೆ | ಸಾಮಾನ್ಯ ವಾರ್ಷಿಕ ಬೆಲೆ | ದೀಪಾವಳಿ ಆಫರ್ ಬೆಲೆ (1 ವರ್ಷಕ್ಕೆ) | ಉಳಿತಾಯ |
| Lite (30GB) | ₹708 | ₹479 | ₹229 |
| Basic (100GB) | ₹1,560 | ₹1,000 | ₹560 |
| Standard (200GB) | ₹2,520 | ₹1,600 | ₹920 |
| Premium (2TB) | ₹7,800 | ₹4,900 | ₹2,900 |
ಈ ರಿಯಾಯಿತಿಗಳು ನಿಮ್ಮ ಡಿಜಿಟಲ್ ಡೇಟಾವನ್ನು ಸುಲಭವಾಗಿ ನಿರ್ವಹಿಸಲು ಹಾಗೂ ಹಣದ ಉಳಿತಾಯ ಮಾಡುವುದಕ್ಕೂ ಸಹಾಯ ಮಾಡುತ್ತವೆ. ವಾರ್ಷಿಕ ಯೋಜನೆ ಖರೀದಿಸಿದರೆ ಬಳಕೆದಾರರು ಸಾಮಾನ್ಯ ಬೆಲೆಗೆ ಹೋಲಿಸಿದರೆ ಶೇ. 37 ರವರೆಗೆ ಉಳಿತಾಯ ಮಾಡಬಹುದು.

ಈ ಎಲ್ಲ Google One ದೀಪಾವಳಿ ಕೊಡುಗೆಯನ್ನು ಪಡೆಯಲು ಬಳಕೆದಾರರಿಗೆ ಕೇವಲ ಅಕ್ಟೋಬರ್ 31 ರವರೆಗೆ ಅವಕಾಶವಿದೆ. ನಿಮ್ಮ ಫೋಟೋಗಳು, ವೀಡಿಯೊಗಳು ಮತ್ತು ಫೈಲ್‌ಗಳಿಗೆ ಹೆಚ್ಚುವರಿ ಸ್ಟೋರೇಜ್ ಬೇಕಾದರೆ, ಈ ಸಮಯದಲ್ಲಿ ಚಂದಾದಾರರಾಗುವುದು ಅತ್ಯುತ್ತಮ ಆಯ್ಕೆ ಎಂಬುದು ನನ್ನ ಅಭಿಪ್ರಾಯ. ಇಲ್ಲಿ ನಾವು ಗಮನಿಸಬೇಕಿರುವ ಮತ್ತೊಂದು ಅಂಶವೆಂದರೆ, Basic, Standard ಮತ್ತು Premium ಯೋಜನೆಗಳಲ್ಲಿ ನಿಮ್ಮ ಸ್ಟೋರೇಜ್ ಇತರರೊಂದಿಗೆ ಹಂಚಿಕೊಳ್ಳುವ ಅವಕಾಶವೂ ಇದೆ. ಹಾಗಾಗಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬಂದವರು ಒಟ್ಟುಗೂಡಿ ಈ ಯೋಜನೆಗಳಿಗೆ ಚಂದಾದಾರಿಕೆ ಪಡೆಯಬಹುದು. ನನ್ನ ವಿಶ್ಲೇಷಣೆಯಂತೆ ನೊಡುವುದಾದರೆ, ಈ ಕೊಡುಗೆಗಳಿಂದ ಬ್ಯುಸಿನೆಸ್‌ದಾರರು ವಾರ್ಷಿಕ ಯೋಜನೆಗಳೊಂದಿಗೆ ದೊಡ್ಡ ಉಳಿತಾಯ ಪಡೆಯಬಹುದು. ಹಾಗೆಯೇ, ಸಾಮಾನ್ಯ ಬಳಕೆದಾರರು ಮಾಸಿಕ ಚಂದಾದಾರಿಕೆಗಳನ್ನು ಪರೀಕ್ಷಿಸಬಹುದು.


Click it and Unblock the Notifications








