'ಗೂಗಲ್ ಪೇ'ಗೆ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ!..ಬಳಸುತ್ತಿದ್ದರೆ ಇಲ್ಲಿ ನೋಡಿ!

|

ಭಾರತದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಡಿಜಿಟಲ್ ವಾಲೆಟ್ ಮತ್ತು ಜನಪ್ರಿಯ ಆನ್‌ಲೈನ್ ಪಾವತಿ ವ್ಯವಸ್ಥೆ 'ಗೂಗಲ್ ಪೇ' ಅಪ್ಲಿಕೇಶನ್‌ಗೆ ಇದೀಗ ಬಯೋಮೆಟ್ರಿಕ್ ಭದ್ರತೆಯನ್ನು ಪರಿಚಯಿಸಲಾಗಿದೆ. ಆಂಡ್ರಾಯ್ಡ್ 10 ನೊಂದಿಗೆ ಗೂಗಲ್ ಪರಿಚಯಿಸಿದ ಬಯೋಮೆಟ್ರಿಕ್ ಭದ್ರತೆ ವೈಶಿಷ್ಟ್ಯವನ್ನು ಗೂಗಲ್ ಪೇ ಅಪ್ಲಿಕೇಶನ್‌ನ ಇತ್ತೀಚಿನ 2.100 ಆವೃತ್ತಿಯಲ್ಲಿ ತರಲಾಗಿದ್ದು, ಇದು ಫಿಂಗರ್‌ಪ್ರಿಂಟ್ ಮತ್ತು ಮುಖ ಗುರುತಿಸುವಿಕೆ ವೈಶಿಷ್ಟ್ಯವನ್ನು ಬಳಸಿಕೊಂಡು ಬಳಕೆದಾರರು ತಮ್ಮ ಆನ್‌ಲೈನ್ ವಹಿವಾಟುಗಳನ್ನು ರಕ್ಷಿಸಲು ಅನುವು ಮಾಡಿಕೊಡಲಿದೆ.

ಗೂಗಲ್ ಪೇ

ಗೂಗಲ್ ಪೇ ಅಪ್ಲಿಕೇಶನ್‌ ಬಳಕೆದಾರರು ಈ ಹಿಂದೆ ತಮ್ಮ ವಹಿವಾಟುಗಳನ್ನು ಭದ್ರಪಡಿಸಿಕೊಳ್ಳಲು ಪಿನ್ ನಮೂದಿಸಬೇಕಾಗಿತ್ತು. ಆದರೆ, ಇತ್ತೀಚಿನ ನವೀಕರಣದೊಂದಿಗೆ ಇದು ಈಗ ಬದಲಾಗಿದ್ದು, ಗೂಗಲ್ ಈಗ ಬಯೋಮೆಟ್ರಿಕ್ಸ್ APIಗೆ ಬೆಂಬಲವನ್ನು ಸೇರಿಸಿರುವುದರಿಂದ ನಿಮ್ಮ ಹಣ ವರ್ಗಾವಣೆಯನ್ನು ದೃಢೀಕರಿಸಲು ನಿಮ್ಮ ಬೆರಳಚ್ಚುಗಳನ್ನು ಅಥವಾ ಮುಖವನ್ನು ಬಳಸಬಹುದು. ಈ ವೈಶಿಷ್ಟ್ಯವು ಪ್ರಸ್ತುತ ಆಂಡ್ರಾಯ್ಡ್ 10 ಸಾಧನಗಳಿಗೆ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಈ ವೈಶಿಷ್ಟ್ಯವು ಶೀಘ್ರದಲ್ಲೇ ಆಂಡ್ರಾಯ್ಡ್ 9 ಫೋನ್‌ಗಳಿಗೆ ಬರುತ್ತಿದೆ.

ಗೂಗಲ್ ಪೇ

ಗೂಗಲ್ ಪೇ ಬಳಕೆದಾರರು ವೈಶಿಷ್ಟ್ಯವನ್ನು ಅಪ್ಲಿಕೇಶನ್‌ನಲ್ಲಿ ಹಣ ಕಳುಹಿಸುವ ವಿಭಾಗದಲ್ಲಿ ಕಾಣಬಹುದಾಗಿದ್ದು, ಬಳಕೆದಾರರು ಪಿನ್‌ನಿಂದ ಬಯೋಮೆಟ್ರಿಕ್ ಭದ್ರತೆಗೆ ಬದಲಾಯಿಸಬಹುದು ಅಥವಾ ಅಪ್ಲಿಕೇಶನ್ ಮೂಲಕ ಮಾಡಿದ ಹಣ ವರ್ಗಾವಣೆಯನ್ನು ರಕ್ಷಿಸಲು ಎರಡೂ ಆಯ್ಕೆಗಳನ್ನು ಇರಿಸಿಕೊಳ್ಳಬಹುದು. ಆದಾಗ್ಯೂ, ಬಯೋಮೆಟ್ರಿಕ್ ಭದ್ರತಾ ವೈಶಿಷ್ಟ್ಯವು ಹಣ ವರ್ಗಾವಣೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಆದರೆ, ಇದು ಮಳಿಗೆಗಳಲ್ಲಿ ಎನ್‌ಎಫ್‌ಸಿ ಪಾವತಿಗಳಿಗೆ ಸಾಧ್ಯವಾಗುವುದಿಲ್ಲ ಅದಕ್ಕಾಗಿ, ನೀವು ನಿಮ್ಮ ಫೋನ್ ಅನ್ನು ಅನ್ಲಾಕ್ ಮಾಡಲೇಬೇಕು.

ಯುಪಿಐ ಆಧಾರಿತ

ಗೂಗಲ್ ಪೇ ಯುಪಿಐ ಆಧಾರಿತ ತೇಜ್ ಅಪ್ಲಿಕೇಶನ್‌ನ ರಿಬ್ರಾಂಡೆಡ್ ಆವೃತ್ತಿಯಾಗಿದ್ದು, ಇದು 2017 ರಲ್ಲಿ ಪ್ರಾರಂಭವಾಯಿತು. ಕಂಪನಿಯು ಇದನ್ನು 2018 ರಲ್ಲಿ ಗೂಗಲ್ ಪೇ ಎಂದು ಮರುಹೆಸರಿಸಿದೆ. ಈ ಅಪ್ಲಿಕೇಶನ್ ಇಂದು ಭಾರತದಲ್ಲಿ 67 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಗೂಗಲ್ ಪೇ ಇತ್ತೀಚೆಗೆ ತಮ್ಮ ವ್ಯವಹಾರಗಳ ಬಗ್ಗೆ ತಿಳಿಸುವ ಬಳಕೆದಾರರಿಗೆ ಅಪ್ಲಿಕೇಶನ್ ಅಧಿಸೂಚನೆಗಳು ಮತ್ತು SMS ಕಳುಹಿಸಲು ಪ್ರಾರಂಭಿಸಿದೆ. ಇದೀಗ ಪಿನ್ ಆಧಾರಿತ ಭದ್ರತೆಗಿಂತ ಬಯೋಮೆಟ್ರಿಕ್ ಭದ್ರತೆಗೆ ನೀಡಿ ಅನುಕೂಲ ಮಾಡಿಕೊಟ್ಟಿದೆ.

ಎಸ್‌ಎಂಎಸ್

ಗೂಗಲ್ ಪೇ ಬಳಕೆಯಲ್ಲಿನ ಪ್ರತಿಯೊಂದು ಹೆಜ್ಜೆಯನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಮ್ಮ ಬಳಕೆದಾರರಿಗೆ ಸಹಾಯ ಮಾಡಲು ನಾವು ಈಗ ಅಧಿಸೂಚನೆಗಳು ಮತ್ತು ಎಸ್‌ಎಂಎಸ್ ಎಚ್ಚರಿಕೆಗಳನ್ನು ಪ್ರಾರಂಭಿಸಿದ್ದೇವೆ. ಗೂಗಲ್ ಪೇ ಈಗ ಪ್ರತಿ ಬಾರಿ ಬಳಕೆದಾರರಿಗೆ ತಿಳಿಸಲು ಅಧಿಸೂಚನೆಗಳನ್ನು ಮತ್ತು ಎಸ್‌ಎಂಎಸ್ ಅನ್ನು ಕಳುಹಿಸುತ್ತದೆ. ವಿನಂತಿಯನ್ನು ಅಂಗೀಕರಿಸುವುದರಿಂದ ಬಳಕೆದಾರರ ಬ್ಯಾಂಕ್ ಖಾತೆಗಳಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ ಎಂದು ಗೂಗಲ್ ಪೇ ಉತ್ಪನ್ನ ನಿರ್ವಹಣೆಯ ನಿರ್ದೇಶಕ ಅಂಬರೀಶ್ ಅವರು ಹೇಳಿದ್ದಾರೆ.

Best Mobiles in India

English summary
Google Pay users previously had to enter a PIN to secure their transactions. This has changed now with the latest update. Google has now added support for biometrics API so that you can use your fingerprints or face to authenticate your money transfers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X