Home
ಸುದ್ದಿಜಾಲ

ಗೂಗಲ್‌ ಪೇ ಬಳಕೆದಾರರೇ ಇಲ್ಲಿ ಗಮನಿಸಿ! ಹಣ ಕಳುಹಿಸಲು ಇಲ್ಲಿದೆ ಹೊಸ ಆಯ್ಕೆ!

ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ ತನ್ನ ಬಳಕೆದಾರರಿಗೆ ಗುಡ್‌ನ್ಯೂಸ್‌ ನೀಡಿದೆ. ಈಗಾಗಲೇ ಫೋನ್‌ಪೇ ಅಲ್ಲಿ ಜನಪ್ರಿಯತೆ ಪಡೆದಿರುವ UPI ಲೈಟ್ ಅನ್ನು ಗೂಗಲ್‌ ಪೇ ಕೂಡ ಪರಿಚಯಿಸಿದೆ. ಇದೀಗ ಗೂಗಲ್‌ ಪೇ ಅಲ್ಲಿಯೂ ಕೂಡ UPI ಲೈಟ್ ಅನ್ನು ಬಳಸಬಹುದಾಗಿದೆ. ಇದರಿಂದ ಸಣ್ಣಪಾವತಿಗಳನ್ನು ಸಿಂಗಲ್‌ ಟ್ಯಾಪ್‌ನಲ್ಲಿ ಮಾಡುವುದಕ್ಕೆ ಸಾಧ್ಯವಾಗಲಿದೆ.

ಹೌದು, ಗೂಗಲ್‌ ಪೇ UPI ಲೈಟ್ ಅನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯಿಸಿದೆ. UPI ಲೈಟ್ ಅನ್ನೊದು ಸಣ್ಣ ಪಾವತಿಗಳನ್ನು ಸುಲಭವಾಗಿ ಮಾಡುವ ಡಿಜಿಟಲ್‌ ಪಾವತಿ ಸೇವೆಯಾಗಿದೆ. ಇದರ ಮೂಲಕ ನೀವು ಸಿಂಗಲ್‌ ಟ್ಯಾಪ್‌ನಲ್ಲಿ 200ರೂ.ಗಳನ್ನು ಪಿನ್‌ ನಮೂದಿಸಿದೆ ಸೆಂಡ್‌ ಮಾಡಲು ಸಾಧ್ಯವಾಗಲಿದೆ. ಇದು ಕ್ಯಾಬ್, ತಿಂಡಿ, ತಿನಿಸಿಗಾಗಿ ಪಾವತಿ ಮಾಡುವವರಿಗೆ ಸೂಕ್ತವಾಗಿದೆ. ಹಾಗಾದ್ರೆ ಗೂಗಲ್‌ ಪೇ ಅಲ್ಲಿ UPI ಲೈಟ್ ಬಳಕೆ ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಪೇ ಬಳಕೆದಾರರೇ ಇಲ್ಲಿ ಗಮನಿಸಿ! ಹಣ ಕಳುಹಿಸಲು ಇಲ್ಲಿದೆ ಹೊಸ ಆಯ್ಕೆ!

ಗೂಗಲ್‌ ಪೇ UPI ಲೈಟ್ ಡಿಜಿಟಲ್‌ ಪಾವತಿಯನ್ನು ವೇಗ ಹಾಗೂ ಸುಲಭಗೊಳಿಸಲಿದೆ. ಆದರೆ ಇದರಲ್ಲಿ ನೀವು ಕೇವಲ ಸಣ್ಣ ಮೊತ್ತದ ಹಣವನ್ನು ಮಾತ್ರವನ್ನು ಪಾವತಿಸಲು ಸಾಧ್ಯವಾಗಲಿದೆ. ಗೂಗಲ್‌ ಪೇ UPI ಲೈಟ್ ಅಲ್ಲಿ ನೀವು ಪಿನ್‌ ನಮೂದಿಸಿದೆ 200ರೂ.ಗಳನ್ನು ಪಾವತಿಸಬಹುದಾಗಿದೆ. ಅಷ್ಟೇ ಅಲ್ಲ UPI PIN ಅಲ್ಲಿ ಹಣ ಪಾವತಿಸುವಾಗ ನೀವು ಸಿಂಗಲ್‌ ಟ್ಯಾಪ್‌ನಲ್ಲಿ ವಹಿವಾಟುಗಳನ್ನು ನಡೆಸಬಹುದಾಗಿದೆ. ಇದಕ್ಕಾಗಿ LITE ಅಕೌಂಟ್‌ ಅನ್ನು ಬಳಕೆದಾರರ ಬ್ಯಾಂಕ್‌ ಅಕೌಂಟ್‌ಗೆ ಲಿಂಕ್‌ ಮಾಡಲಾಗುತ್ತದೆ ಎನ್ನಲಾಗಿದೆ.

ಇನ್ನು ಗೂಗಲ್‌ ಯುಪಿಐ ಲೈಟ್‌ ಅಕೌಂಟ್‌ನಲ್ಲಿ ದಿನಕ್ಕೆ ಎರಡು ಬಾರಿ 2,000ರೂ. ವರೆಗೆ ಲೋಡ್ ಮಾಡಬಹುದಾಗಿದೆ. ಇದರಲ್ಲಿ ನೀವು ಒಂದು ಭಾರಿಗೆ 200ರೂ.ತನಕ ತ್ವರಿತ UPI ವಹಿವಾಟುಗಳನ್ನು ನಡೆಸಲು ಸಾಧ್ಯವಾಗಲಿದೆ. UPI ಲೈಟ್‌ ಫೀಚರ್ಸ್‌ ಈಗಾಗಲೇ Paytm ಮತ್ತು PhonePe ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಇನ್ನು ಗೂಗಲ್‌ಪೇ ಯುಪಿಐ ಲೈಟ್‌ 15 ಬ್ಯಾಂಕ್‌ಗಳನ್ನು ಬೆಂಬಲಿಸಲಿದೆ.

ಗೂಗಲ್‌ ಪೇ ಬಳಕೆದಾರರೇ ಇಲ್ಲಿ ಗಮನಿಸಿ! ಹಣ ಕಳುಹಿಸಲು ಇಲ್ಲಿದೆ ಹೊಸ ಆಯ್ಕೆ!

ಗೂಗಲ್‌ಪೇ ಅಲ್ಲಿ UPI ಲೈಟ್ ಅನ್ನು ಸಕ್ರಿಯಗೊಳಿಸುವುದು ಹೇಗೆ?
* ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಗೂಗಲ್‌ಪೇ ಅಪ್ಲಿಕೇಶನ್‌ ತೆರೆಯಿರಿ
* ಇದೀಗ ಸ್ಕ್ರಿನ್‌ ಮೇಲಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್‌ ಮಾಡಿ
* ನಂತರ ನಿಮ್ಮ ಪ್ರೊಫೈಲ್ ಪೇಜ್‌ನಲ್ಲಿ "UPI LITE" ಆಕ್ಟಿವಿಟಿ ಆಯ್ಕೆಯನ್ನು ಹುಡುಕಲು ಕೆಳಗೆ ಸ್ಕ್ರಾಲ್ ಮಾಡಿ, ಇದೀಗ ಅದರ ಮೇಲೆ ಟ್ಯಾಪ್ ಮಾಡಿ.
* ಇದರಲ್ಲಿ UPI LITE ಕುರಿತು ಸೂಚನೆಗಳು ಮತ್ತು ವಿವರಗಳ ಹೊಸ ಪರದೆ ಕಾಣಿಸಲಿದೆ
* ಅದರಲ್ಲಿ ಒದಗಿಸಿದ ಮಾಹಿತಿಯನ್ನು ಓದಿರಿ
* ನಂತರ UPI LITE ಅನ್ನು ಸಕ್ರಿಯಗೊಳಿಸಲು ಆಯ್ಕೆಯನ್ನು ಟ್ಯಾಪ್ ಮಾಡಿ.
* ನಿಮ್ಮ ಬ್ಯಾಂಕ್ ಅಕೌಂಟ್‌ ಅನ್ನು ಲಿಂಕ್ ಮಾಡುವ ಪ್ರಕ್ರಿಯೆಯನ್ನು ನೀಡಲಿದೆ
* ನಂತರ ನಿಮಗೆ ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ ಮತ್ತು ಸೂಚಿಸಿದಂತೆ ಅಗತ್ಯ ಮಾಹಿತಿಯನ್ನು ಒದಗಿಸಿ.
* ಇದೀಗ UPI LITE ಅನ್ನು ಯಶಸ್ವಿಯಾಗಿ ಸಕ್ರಿಯಗೊಳಿಸಲಾಗಿದೆ ಎಂದು ಸೂಚಿಸುವ ಸಂದೇಶ ಕಾಣಿಸಲಿದೆ
* ನಂತರ ನೀವು ನಿಮ್ಮ UPI LITE ಖಾತೆಗೆ ಹಣವನ್ನು ಸೇರಿಸಬಹುದು.
* ಇದೀಗ ಗೂಗಲ್‌ ಪ್ಲೇ ಅಪ್ಲಿಕೇಶನ್‌ ತೆರೆಯಿರಿ
* ನಂತರ UPI LITE ವಿಭಾಗ ತೆರೆಯಿರಿ
* ನೀವು ಬಯಸಿದ ಮೊತ್ತವನ್ನು ನಮೂದಿಸಲು ಆಯ್ಕೆಯನ್ನು ಟ್ಯಾಪ್ ಮಾಡಿ,
* ಗರಿಷ್ಠ 2000ರೂ. ವರೆಗೆ ಹಣವನ್ನು ಸೇರಿಸಬಹುದಾಗಿದೆ
* ಇದೀಗ ಹಣವನ್ನು ನಿಮ್ಮ UPI LITE ಖಾತೆಯ ಬ್ಯಾಲೆನ್ಸ್‌ಗೆ ಸೇರಿಸಬಹುದಾಗಿದೆ.

Best Mobiles in India

English summary
Google Pay has introduced UPI Lite on its platform: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+