Google Pay: ಬಳಕೆದಾರರಿಗೆ ಬಿಗ್ ಶಾಕ್! ಈ ಪಾವತಿಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಂತೆ!
ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದಾದ ಗೂಗಲ್ ಪೇ ತನ್ನ ಬಳಕೆದಾರರಿಗೆ ಬಿಗ್ ಶಾಕ್ ನೀಡಿದೆ. 60 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದುವ ಮೂಲಕ ಭಾರತದಲ್ಲಿ ಎರಡನೇ ಅತಿದೊಡ್ಡ ಪಾವತಿ ಅಪ್ಲಿಕೇಶನ್ ಆಗಿದೆ. Google Pay ಅಪ್ಲಿಕೇಶನ್ P2M ಮತ್ತು P2P ಆಧಾರದ ಮೇಲೆ UPI ವಹಿವಾಟುಗಳಿಗೆ ಹೆಸರುವಾಸಿಯಾಗಿದೆ.
ಹೌದು, Google Pay ಅಪ್ಲಿಕೇಶನ್ ಮೂಲಕ ಮೊಬೈಲ್ ರೀಚಾರ್ಜ್ ಮಾಡುವ ಬಳಕೆದಾರರು ಈ ಸುದ್ದಿಯನ್ನು ಗಮನಿಸಲೇಬೇಕು. ಇಲ್ಲಿಯ ತನಕ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ರೀಚಾರ್ಜ್ ಸೇವೆ ನೀಡುತ್ತಿದ್ದ ಗೂಗಲ್ ಪೇ ಇದೀಗ ಶುಲ್ಕ ವಿಧಿಸಲು ಮುಂದಾಗಿದೆ. ಹಾಗಾದ್ರೆ ಗೂಗಲ್ ಪೇ ರೀಚಾರ್ಜ್ ವಿಚಾರದಲ್ಲಿ ಏನೆಲ್ಲಾ ಬದಲಾವಣೆ ಮಾಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Google Pay ಅಪ್ಲಿಕೇಶನ್ ಮೂಲಕ ಹಣ ವರ್ಗಾವಣೆ ಮಾತ್ರವಲ್ಲದೆ, ವಿದ್ಯುತ್ ಬಿಲ್, ಮೊಬೈಲ್, DTH, ನೀರು, ಗ್ಯಾಸ್ ಸಿಲಿಂಡರ್ ಬಿಲ್ ಪಾವತಿಗಳನ್ನು ಮಾಡಬಹುದು. ಅಲ್ಲದೆ ನಿಮ್ಮ ಮೊಬೈಲ್ ನಂಬರ್ ರೀಚಾರ್ಜ್‌ಗಳನ್ನು ಸಹ ಬೆಂಬಲಿಸುತ್ತದೆ. ಈ ಎಲ್ಲಾ ಬಿಲ್ ಪಾವತಿಗಳನ್ನು ಮಾಡುವುದಕ್ಕೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಗೂಗಲ್ ವಿಧಿಸಿರಲಿಲ್ಲ. ಆದರೆ ಇದೀಗ ಗೂಗಲ್ ಪೇ ತನ್ನ ಬಳಕೆದಾರರಿಗೆ ಮೊಬೈಲ್ ರೀಚಾರ್ಜ್‌ಗಳಲ್ಲಿ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದೆ.
ಇಷ್ಟು ದಿನ ಗೂಗಲ್ ಪೇ ಮೂಲಕ ರೀಚಾರ್ಜ್ ಮಾಡಿದರೆ ಯಾವುದೇ ರೀತಿಯ ಶುಲ್ಕ ವಿಧಿಸುತ್ತಿರಲಿಲ್ಲ. ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಸೇವೆಯು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿತ್ತ. ಆದರೆ ಇದೀಗ ಗೂಗಲ್ ಪೇ ಶುಲ್ಕ ವಿಧಿಸುವ ಮೂಲಕ ಆದಾಯವನ್ನು ಗಳಿಸುವುದಕ್ಕೆ ಗೂಗಲ್ ಮುಂದಾಗಿದೆ.

ಮೊಬೈಲ್ ರೀಚಾರ್ಜ್‌ಗಳಿಗೆ ಗೂಗಲ್ ಪೇ ಶುಲ್ಕ ಹೇಗೆ ವಿಧಿಸುತ್ತಿದೆ?
Google Pay ಮೊಬೈಲ್ ರೀಚಾರ್ಜ್‌ಗಳಲ್ಲಿ ಹೆಚ್ಚುವರಿ ಶುಲ್ಕ ವಿಧಿಸುತ್ತಿರುವುದರ ಬಗ್ಗೆ ಯಾವುದೇ ಪ್ರಕಟಣೆ ನೀಡಿಲ್ಲ. ಆದರೆ ಅಂಕುಶ್ ಎಂಬ ಬಳಕೆದಾರರು ವರದಿ ಮಾಡಿರುವಂತೆ ಅವರು 749ರೂ ಜಿಯೋ ರೀಚಾರ್ಜ್ ಮಾಡಿದ ನಂತರ ಹೆಚ್ಚುವರಿ ಶುಲ್ಕವಾಗಿ 3ರೂ ಗಳನ್ನು ಕಡಿತ ಮಾಡಲಾಗಿದೆ. ಅಂಕುಶ್ ಅವರು ದೇಸಿಡೈಮ್ ಫೋರಮ್‌ಗಳಲ್ಲಿ ಈ ಸಮಸ್ಯೆಯನ್ನು ವರದಿ ಮಾಡಿದ್ದಾರೆ. ಈ ಮೂಲಕ ಗೂಗಲ್ ಪೇ ಅಲ್ಲಿ ಮೊಬೈಲ್ ರೀಚಾರ್ಜ್ ಮಾಡುವುದಕ್ಕೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿರುವುದು ಪಕ್ಕಾ ಆಗಿದೆ.
ಅನುಕೂಲಕರ ಶುಲ್ಕದ ಹೆಸರಿನಲ್ಲಿ ಗೂಗಲ್ ಪೇ ಬಿಗ್ ಶಾಕ್
301ರೂ ಕ್ಕಿಂತ ಹೆಚ್ಚಿನ ಎಲ್ಲಾ ರೀಚಾರ್ಜ್‌ಗಳಿಗೆ ಅನುಕೂಲಕರ ಶುಲ್ಕವಾಗಿ 3ರೂ ಕಡಿತಗೊಳಿಸುತ್ತಿರುವುದು ಗಮನಕ್ಕೆ ಬಂದಿದೆ. ಸದ್ಯ Google Pay ಈ ಶುಲ್ಕವನ್ನು ಮೊಬೈಲ್ ರೀಚಾರ್ಜ್‌ಗಳಲ್ಲಿ ಮಾತ್ರ ವಿಧಿಸುತ್ತಿದೆ. ವಿದ್ಯುತ್ ಬಿಲ್ ಪಾವತಿಗಳಂತಹ ಇತರ ವಹಿವಾಟುಗಳು ಉಚಿತವಾಗಿಯೇ ಮುಂದುವರಿಯುತ್ತವೆ.
ಹಾಗಂತ ಮೊಬೈಲ್ ರೀಚಾರ್ಜ್‌ಗಳಲ್ಲಿ ಹೆಚ್ಚುವರಿ ಶುಲ್ಕ ವಿಧಿಸುತ್ತಿರುವುದರಲ್ಲಿ ಗೂಗಲ್ ಪೇ ಮೊದಲೇನಲ್ಲ. ಈಗಾಗಲೇ ಫೋನ್‌ಪೇ ಮತ್ತು ಪೇಟಿಎಂ ಮೊಬೈಲ್ ಅಪ್ಲಿಕೇಶನ್‌ಗಳು ಕೂಡ ಮೊಬೈಲ್ ರೀಚಾರ್ಜ್‌ಗಳಿಗಾಗಿ ಬಳಕೆದಾರರಿಗೆ ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿವೆ. ಸದ್ಯ ಈ ಹೊಸ ಅನುಕೂಲಕರ ಶುಲ್ಕ ಬದಲಾವಣೆಯ ಬಗ್ಗೆ ಗೂಗಲ್ ಪೇ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ನವೆಂಬರ್ 10, 2023 ರಿಂದಲೇ ಗೂಗಲ್ ತನ್ನ ಸೇವಾ ನಿಯಮಗಳನ್ನು ಅಪ್ಡೇಟ್ ಮಾಡಿರುವುದು ಗಮನಕ್ಕೆ ಬಂದಿದೆ.

ಆದರೆ ಈ ಬದಲಾವಣೆಯನ್ನು ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ನಿಧಾನವಾಗಿ ಪರಿಚಯಿಸುವ ನಿರೀಕ್ಷೆಯಿದೆ. ಆದರಿಂದ ನೀವು ಈ ರೀತಿಯ ಹೆಚ್ಚುವರಿ ಶುಲ್ಕಗಳನ್ನು ನೀಡುವುದಕ್ಕೆ ಇಷ್ಟಪಡದಿದ್ದರೆ ನಿಮ್ಮ ನಿರ್ದಿಷ್ಟ ಟೆಲಿಕಾಂ ಆಪರೇಟರ್‌ನ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕವೇ ನೇರವಾಗಿ ರೀಚಾರ್ಜ್ ಮಾಡುವುದು ಉತ್ತಮವಾಗಿದೆ.


Click it and Unblock the Notifications








