ಗೂಗಲ್‌ ಪೇ ಬಳಸುವವರಿಗೆ ಬಿಗ್‌ ಶಾಕ್‌! ಹೊಸ ನಿಯಮದಲ್ಲಿ ಏನಿದೆ?

|

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿಯೂ ಕೂಡ ಯುಪಿಐ ಪಾವತಿ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇವುಗಳಲ್ಲಿ ಗೂಗಲ್‌ಪೇ ಅಪ್ಲಿಕೇಶನ್‌ ಕೂಡ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಗತನ್ನ ಆಕರ್ಷಕ ಕ್ಯಾಶ್‌ಬ್ಯಾಕ್‌ ಆಫರ್‌ ಮೂಲಕ ಹೆಚ್ಚಿನ ಬಳಕೆದಾರರನ್ನು ಸೆಳೆದಿದೆ. ಸದ್ಯ ಇದೀಗ ಗೂಗಲ್‌ ಪೇ ಭಾರತದಲ್ಲಿ ಹೊಸ ಪಾವತಿ ನಿಯಮಗಳನ್ನು ಜಾರಿಗೊಳಿಸಿದೆ. ವಹಿವಾಟು ಮಿತಿ ಸೇರಿದಂತೆ, ದೈನಂದಿನ ಗರಿಷ್ಟ ವಹಿವಾಟುಗಳಲ್ಲಿ ಹೊಸ ಮಿತಿಯನ್ನು ವಿಧಿಸಿದೆ.

ಯುಪಿಐ

ಹೌದು, ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ ಗೂಗಲ್‌ಪೇ 2022ರಲ್ಲಿ ಹೊಸ ವಹಿವಾಟು ಮಿತಿಯನ್ನು ಘೋಷಿಸಿದೆ. ಹೊಸ ವಹಿವಾಟು ಮಿತಿ ಅನ್ವಯ ಇನ್ಮುಂದೆ ನೀವು ದೈನಂದಿ ಹತ್ತು ಗರಿಷ್ಠ ವಹಿವಾಟುಗಳನ್ನು ಮಾತ್ರ ನಡೆಸಲು ಸಾದ್ಯವಾಗಲಿದೆ. ಒಂದು ದಿನದಲ್ಲಿ ಒಂದು ಲಕ್ಷ ರೂ.ಗಳ ತನಕ ಪಾವತಿ ಮಾಡುವುದಕ್ಕೆ ಅನುಮತಿಸಲಿದೆ. ಹಾಗಾದ್ರೆ ಗೂಗಲ್‌ ಪೇ 2022ರಲ್ಲಿ ಜಾರಿಗೊಳಿಸಿರುವ ಹೊಸ ವಹಿವಾಟು ಮಿತಿ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌ ಪೇ

ಗೂಗಲ್‌ ಪೇ ಅಪ್ಲಿಕೇಶನ್‌ ಮೂಲಕ ಹಣ ಕಳುಹಿಸುವವರು ಇನ್ಮುಂದೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಏಕೆಂದರೆ ಇನ್ಮುಂದೆ ಗೂಗಲ್‌ ಪೇ ನಲ್ಲಿ ದೈನಂದಿನ ಹತ್ತ ಗರಿಷ್ಠ ವಹಿವಾಟುಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಹತ್ತು ಗರಿಷ್ಠ ವಹಿವಾಟು ಮೀರಿದ ನಂತರ ಮರುದಿನವರೆಗೂ ನೀವು ಯಾರಿಗೂ ಹಣ ಪಾವತಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ನೀವು ಪ್ರತನಿತ್ಯ ಒಂದು ಲಕ್ಷ ರೂ.ವರೆಗೆ ಮಾತ್ರ ಹಣ ಸೆಂಡ್‌ ಮಾಡಬಹುದು. ಜೊತೆಗೆ ಒಂದು ದಿನದಲ್ಲಿ ಬಳಕೆದಾರರು 2,000 ರೂ.ಗಳ ತನಕ ಮನಿ ರಿಕ್ವೆಸ್ಟ್‌ ಕಳುಹಿಸುವುದಕ್ಕೆ ಅವಕಾಶ ನೀಡಲಾಗಿದೆ.

ಗೂಗಲ್‌

ಇದಲ್ಲದೆ ಗೂಗಲ್‌ ಪೇ ವಿಧಿಸಿರುವ ವಹಿವಾಟು ಮಿತಿಗಳಲ್ಲದೆ ಕೆಲ ಬ್ಯಾಂಕ್‌ಗಳು ಕೂಡ ಹಣ ವರ್ಗಾವಣೆ ಮಿತಿಯನ್ನು ಹೊಂದಿವೆ. ಅದರಂತೆ ಕೆಲವು ಬ್ಯಾಂಕ್‌ ಖಾತೆ ಹೊಂದಿರುವ ಬಳಕೆದಾರರು ಒಂದೇ ದಿನದಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ಮಾತ್ರ ಕಳುಹಿಸಲು ಅವಕಾಶ ಸಿಗಲಿದೆ. ನೀವು ನಿಮ್ಮ ಖಾತೆಯಲ್ಲಿ ಸಾಕಷ್ಟು ಹಣವನ್ನು ಹೊಂದಿದ್ದರೂ ಸಹ, UPI ಮೂಲಕ ಕಳುಹಿಸಬಹುದಾದ ದೈನಂದಿನ ಮಿತಿಗಿಂತ ಅಧಿಕ ಹಣ ಸೆಂಡ್‌ ಆಗುವುದಿಲ್ಲ. ಪ್ರತಿ ಬ್ಯಾಂಕ್ ಕೂಡ ವಿಭಿನ್ನವಾದ ರೀತಿಯ UPI ವಹಿವಾಟು ಮಿತಿಯನ್ನು ಹೊಂದಿವೆ. ಅದರಂತೆ 5,000ರೂ.ಗಳಿಂದ ಹಿಡಿದು 1,00,000 ಲಕ್ಷದ ತನಕ ಮಿತಿಯನ್ನು ಪಡೆದುಕೊಂಡಿವೆ.

ಗೂಗಲ್‌ ಪೇ

ಗೂಗಲ್‌ ಪೇ ದೈನಂದಿನ ವಹಿವಾಟು ಮಿತಿ ಮುಗಿದ ನಂತರ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ NEFT ಮೂಲಕ ಹಣ ವರ್ಗಾವಣೆ ವಿಧಾನಗಳನ್ನು ಆಯ್ಕೆ ಮಾಡಲು ಸಾಧ್ಯವಿದೆ. ಆದರೆ ನಿಮ್ಮ ದೈನಂದಿನ ವಹಿವಾಟು ಮಿತಿಯನ್ನು ಹೆಚ್ಚಿಸಬೇಕಾದರೆ ನೀವು ಗೂಗಲ್‌ ಪೇ ಕಸ್ಟಮರ್‌ ಕೇರ್‌ ಗೆ ಇಮೇಲ್ ಕಳುಹಿಸಲು ಅವಕಾಶ ನೀಡಲಾಗಿದೆ.

Google Pay ನಲ್ಲಿ ಇಮೇಲ್ ID ಅನ್ನು ಬದಲಾಯಿಸುವುದು ಹೇಗೆ?

Google Pay ನಲ್ಲಿ ಇಮೇಲ್ ID ಅನ್ನು ಬದಲಾಯಿಸುವುದು ಹೇಗೆ?

ಹಂತ 1: ಸೆಟ್ಟಿಂಗ್ಸ್‌ ಅಪ್ಲಿಕೇಶನ್ ತೆರೆಯಿರಿ> ಅಪ್ಲಿಕೇಶನ್‌ಗಳು> ಮ್ಯಾನೇಜ್‌ ಆಪ್ಸ್‌ > ಗೂಗಲ್ ಪೇ ತೆರೆಯಿರಿ

ಹಂತ 2: ಕ್ಲಿಯರ್‌ ಡೇಟಾ ಆಯ್ಕೆಯನ್ನು ಆರಿಸಿ. ನಿಮ್ಮ ಫೋನ್‌ಗೆ ಅನುಗುಣವಾಗಿ ಈ ಹಂತವು ಬದಲಾಗಬಹುದು ಎಂಬುದನ್ನು ಗಮನಿಸಿ.

ಹಂತ 3: ಡೇಟಾವನ್ನು ತೆರವುಗೊಳಿಸಿದ ನಂತರ Google Pay ಅಪ್ಲಿಕೇಶನ್ ತೆರೆಯಿರಿ. ಇಲ್ಲಿ, Google Pay ಅಪ್ಲಿಕೇಶನ್ ಅನ್ನು ಮೊದಲಿನಿಂದಲೂ ಬಳಸಲು ನಿಮಗೆ ಅವಕಾಶ ಸಿಗುತ್ತದೆ. ಪ್ರಾರಂಭಿಸಲು, ನಿಮ್ಮ ಬ್ಯಾಂಕಿನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕಾಗಿದೆ.

ಹಂತ 4: ಮುಂದೆ, ನಿಮ್ಮ ಫೋನ್ ಸ್ವಯಂಚಾಲಿತವಾಗಿ ನಿಮ್ಮ Google Pay ಖಾತೆಗೆ ಸಂಪರ್ಕಗೊಂಡಿರುವ Gmail ವಿಳಾಸಗಳನ್ನು ತೋರಿಸುತ್ತದೆ. ನೀವು ಅದನ್ನು ಬದಲಾಯಿಸಲು ಬಯಸಿದರೆ, ಅದನ್ನು ಮಾಡಲು ಇಲ್ಲಿ ಅವಕಾಶ ದೊರೆಯಲಿದೆ.

ಹಂತ 5:ಇಲ್ಲಿ ಎಡಿಟ್‌ ಬಟನ್ ಆಯ್ಕೆಮಾಡಿ ಮತ್ತು ಇಮೇಲ್ ಐಡಿ ಬದಲಾಯಿಸಿ. Change Google Account' > Add Account > enter the new email ID.
ಈ ಮೂಲಕ ನಿಮ್ಮ ಗೂಗಲ್‌ ಪೇ ಖಾತೆಯಲ್ಲಿ ಇಮೇಲ್‌ ಐಡಿಯನ್ನು ಬದಲಾಯಿಸಬಹುದಾಗಿದೆ.

Most Read Articles
Best Mobiles in India

English summary
Google Pay lets users transfer money to a person or merchant in real-time.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X