Google Pay: ನಾಳೆಯಿಂದ ಗೂಗಲ್ ಪೇ ಸ್ಥಗಿತ: ಭಾರತದ ಗ್ರಾಹಕರ ಕತೆ ಏನು?
ಇಂದು ವಿಶ್ವವೇ ಡಿಜಿಟಲೀಕರಣಗೊಂಡಿದೆ. ಈಗ ಎಲ್ಲಿ ನೋಡಿದ್ರೂ ಯುಪಿಐ ಪೇಮೆಂಟ್ ಹೆಚ್ಚು. ಎಲ್ಲರ ಮೊಬೈಲ್‌ನಲ್ಲಿ ಈ ಗೂಗಲ್ ಪೇ (Google Pay) ಇದ್ದೇ ಇರುತ್ತೆ. ಆದರೆ, ನಾಳೆಯಿಂದ ಇಲ್ಲಿ ಈ ಗೂಗಲ್ ಪೇ ಕೆಲಸ ಮಾಡಲ್ಲ! ಹೌದು, Google Pay ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಈ ಡಿಜಿಟಲ್ ವ್ಯಾಲೆಟ್ ಬಳಕೆಯನ್ನು ಈ ದೇಶಗಳಲ್ಲಿ ಜೂನ್ 4 ರಿಂದ (ನಾಳೆಯಿಂದ) ನಿಲ್ಲಿಸಲಾಗುತ್ತಿದೆ. Google ತನ್ನ ಪಾವತಿ ಸೇವೆಗಳನ್ನು ಸುವ್ಯವಸ್ಥಿತಗೊಳಿಸಲು ಈ ನಿರ್ಧಾರ ತೆಗೆದುಕೊಂಡಿದೆ. ಇದು Googleನ ಕಡೆಯಿಂದ ದೊಡ್ಡ ಹೆಜ್ಜೆಯಾಗಿದೆ. ಹಾಗಿದ್ರೆ, ಯಾವ್ಯಾವ ದೇಶಗಳಲ್ಲಿ ಗೂಗಲ್ ಪೇ ಸ್ಥಗಿತಗೊಳ್ಳುತ್ತಿದೆ? ಇಲ್ಲಿದೆ ಮಾಹಿತಿ.
ಹೌದು, USನಲ್ಲಿ Google Pay ತನ್ನ ಸೇವೆಯನ್ನು ಸ್ಥಗಿತಗೊಳಿಸುತ್ತದೆ. ಟೆಕ್ ದೈತ್ಯ ತನ್ನ ಬ್ಲಾಗ್‌ನಲ್ಲಿ ಜೂನ್ 4 ರವರೆಗೆ ಅಮೆರಿಕನ್ನರು ಹಣ ವರ್ಗಾವಣೆ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಜೂನ್ 4ರ ನಂತರ Google ತನ್ನ Google Pay ಅಪ್ಲಿಕೇಶನ್‌ನ US ಆವೃತ್ತಿಯನ್ನು ಮುಚ್ಚುತ್ತದೆ. ಜೂನ್ 4ರ ನಂತರ ಬಳಕೆದಾರರು Google Wallet ಮೂಲಕ ಪಾವತಿಸಲು ಸಾಧ್ಯವಾಗುತ್ತದೆ. ಇದು USನಲ್ಲಿನ ಯಾವುದೇ ಅಪ್ಲಿಕೇಶನ್‌ಗಿಂತ ಐದು ಪಟ್ಟು ಹೆಚ್ಚು ಬಳಕೆಯಾಗುತ್ತಿದೆ.

ಯುಪಿಐ ಪಾವತಿ ವ್ಯವಸ್ಥೆ ಇದೀಗ ಜನರ ಜೀವನವನ್ನು ಸುಲಭಗೊಳಿಸಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ Google Pay ಸರ್ವೀಸ್ ಲಭ್ಯವಿದೆ. ಜಿ ಪೇ ಮೂಲಕ ಪಾವತಿ, ರೀಚಾರ್ಜ್ ಸೇರಿದಂತೆ ಹಲವು ಸೇವೆಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಮಧ್ಯೆ, ನಾಳೆಯಿಂದ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಗೂಗಲ್ ಪೇ ಸೇವೆ ಸ್ಥಗಿತಗೊಳ್ಳುತ್ತಿದೆ. ಇದರ ಬದಲಾಗಿ Google Wallet ಆ್ಯಪ್ ಸೇವೆ ಆರಂಭಗೊಂಡಿದೆ. Google Pay ಬಳಕೆದಾರರು ಗೂಗಲ್ ವಾಲೆಟ್ ಬಳಸುವಂತೆ ಸೂಚಿಸಲಾಗಿದೆ.
ಗೂಗಲ್ ಪೇ ಸ್ಥಗಿತ ಏಕೆ?
ಪಾವತಿ ವ್ಯವಸ್ಥೆಗಳು ಸಂಪೂರ್ಣ ಡಿಜಿಟಲ್. ಗೂಗಲ್ ಪೇ ಆ್ಯಪ್ ಕಾರ್ಯಾಚರಣೆಯಲ್ಲಿ ಇನ್ನಷ್ಟು ಸರಳ ಫೀಚರ್‌ಗಳನ್ನು ಅಳವಡಿಸುವ ಹಿನ್ನೆಲೆಯಲ್ಲಿ Google Pay ಸ್ಥಗಿತಗೊಳಿಸಲಾಗುತ್ತಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಗೂಗಲ್ ಪೇ ಆ್ಯಪ್ ಸ್ಥಗಿತವಾದರೂ, ಈಗ ಗ್ರಾಹಕರು ಗೂಗಲ್ ವ್ಯಾಲೆಟ್ ಮೂಲಕ ವಹಿವಾಟು ನಡೆಸಬಹುದಾಗಿದೆ ಎಂದು ತಿಳಿಸಿದೆ. ಗೂಗಲ್ ವ್ಯಾಲೆಟ್‌ಗೆ ಗೂಗಲ್ ಪೇ ಫೀಚರ್‌ಗಳನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇಲ್ಲವೇ ಹೊಸ ಆ್ಯಪ್ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಭಾರತದ ಗ್ರಾಹಕರ ಕತೆ ಏನು?
Google Pay ಸೇವೆ ಸ್ಥಗಿತಗೊಳ್ಳುತ್ತಿದೆ ಎಂಬ ಸುದ್ದಿಯು ಭಾರತದ ಗ್ರಾಹಕರಲ್ಲಿ ಚಿಂತೆ ಉಂಟುಮಾಡಿದೆ. ಕಾರಣ, ಭಾರತದಲ್ಲಿ ಗೂಗಲ್ ಪೇ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಭಾರತ ಮತ್ತು ಸಿಂಗಾಪುರ ದೇಶದಲ್ಲಿ ಗೂಗಲ್ ಪೇ ಸೇವೆ ಸ್ಥಗಿತಗೊಳ್ಳುವುದಿಲ್ಲ. ಈ ದೇಶಗಳಲ್ಲಿ Google Pay ಸ್ಟಾಂಡ್‌ಲೋನ್ ಆ್ಯಪ್ ಆಗಿ ಮುಂದುವರಿಯಲಿದೆ. ಗ್ರಾಹಕರು ಎಂದಿನಂತೇ Google Pay ಸೇವೆಯನ್ನು ಬಳಸಿಕೊಳ್ಳಬಹುದು. ಬೇರೆ ದೇಶಗಳಲ್ಲಿ ಗೂಗಲ್ ಪೇ ಸ್ಥಗಿತಗೊಳ್ಳುತ್ತಿರುವ ಯಾವುದೇ ಪರಿಣಾಮ ಭಾರತಕ್ಕೆ ತಟ್ಟುವುದಿಲ್ಲ. ಭಾರತದಲ್ಲಿ ಗೂಗಲ್ ಪೇ ಹಾಗೂ ಗೂಗಲ್ ವಾಲೆಟ್ ಎರಡೂ ಕಾರ್ಯನಿರ್ವಹಿಸಲಿದೆ.
ಭಾರತದಲ್ಲಿ ಮುಂದುವರಿಸಲು ಕಾರಣವೇನು?
ಭಾರತ ಹಾಗೂ ಸಿಂಗಾಪುರದಲ್ಲಿ ಕೋಟ್ಯಂತರ ಜನ Google Pay ಆ್ಯಪ್ ಬಳಸುತ್ತಿದ್ದಾರೆ. ಹೀಗಾಗಿ, ಎರಡೂ ದೇಶಗಳಲ್ಲಿ ಆ್ಯಪ್ ಕಾರ್ಯಾಚರಣೆ ಮುಂದುವರಿಯಲಿದೆ. ಗ್ರಾಹಕರು ಎಂದಿನಂತೆ Google Pay ಮೂಲಕ ಹಣ ಪಾವತಿ, ವರ್ಗಾವಣೆ ಮಾಡಬಹುದಾಗಿದೆ. ಈ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಗೂಗಲ್ ವ್ಯಾಲೆಟ್ (Google Wallet) ಮೂಲಕವೂ ಅಮೆರಿಕದಲ್ಲಿ ಗ್ರಾಹಕರು ಹಣ ವರ್ಗಾವಣೆ, ಕ್ರೆಡಿಟ್ ಕಾರ್ಡ್ ಅಟ್ಯಾಚ್ ಸೇರಿ ಹಲವು ಸೌಲಭ್ಯಗಳಿವೆ.
ಇನ್ನೂ, ಅಮೆರಿಕದಲ್ಲಿ (USA) ಇದೀಗ ಜನರು (ಬಳಕೆದಾರರು) ಗೂಗಲ್ ಪೇ (Google Pay) ನಿಂದ ಗೂಗಲ್ ವಾಲೆಟ್ (Google Wallet) ಕಡೆ ಮುಖ ಮಾಡಿದ್ದಾರೆ. ನಾಳೆಯಿಂದ (ಜೂನ್ 4ರಿಂದ) ಸ್ಥಗಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದೀಗ ಬಳಕೆದಾರರು ಗೂಗಲ್ ವಾಲೆಟ್ ಆ್ಯಪ್ ಡೌನ್ಲೋಡ್ ಮಾಡಿ ರಿಜಿಸ್ಟರ್ಡ್ ಮಾಡುತ್ತಿದ್ದಾರೆ. ಗೂಗಲ್ ಪೇ ಬಳಕೆ ಮಾಡುತ್ತಿರುವ ಗ್ರಾಹಕರು ಸುಲಭವಾಗಿ ಗೂಗಲ್ ವಾಲೆಟ್ ಖಾತೆಗೆ ಬದಲಾವಣೆ ಮಾಡಬಹುದು.
ಗಿಜ್‌ಬಾಟ್ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








