ಗೂಗಲ್ ಪೇನಿಂದ ಹೊಸ ಫೀಚರ್ಸ್ ಲಾಂಚ್! ಶಾಪಿಂಗ್ ಮಾಡಿದ್ರೆ ಭರ್ಜರಿ ಆಫರ್!
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಯುಪಿಐ ಪಾವತಿಯನ್ನು ಒಳಗೊಂಡಿರುವ ಹಲವು ಅಪ್ಲಿಕೇಶನ್‌ಗಳು ಇದಕ್ಕೆ ಅವಕಾಶ ನೀಡಿವೆ. ಇನ್ನು ಡಿಜಿಟಲ್ ಪೇಮೆಂಟ್ ಆಪ್ಸ್‌ಗಳಲ್ಲಿ ಗೂಗಲ್ ಪೇ ಲೀಡಿಂಗ್‌ನಲ್ಲಿದ್ದು, ಹೆಚ್ಚು ಬಳಕೆದಾರರನ್ನು ಹೊಂದಿದೆ. ಕೆಲವು ಟ್ರಾನ್ಸಾಕ್ಶನ್‌ಗೆ ರಿವಾರ್ಡ್ ಸ್ಕ್ರಾಚ್ ಕಾರ್ಡ್ ನೀಡುವ ಮೂಲಕ ಗ್ರಾಹಕರನ್ನು ಸೆಳೆದಿದೆ. ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕವು ಅಥವಾ ಮೊಬೈಲ್ ನಂಬರ್ ನಮೂದಿಸುವ ಮೂಲಕ ಸುಲಭವಾಗಿ ಹಣ ಟ್ರಾನ್ಸ್‌ಫರ್ ಮಾಡಬಹುದಾಗಿದೆ.

ಹೌದು, ಗೂಗಲ್ ಪೇ ಭಾರತದಲ್ಲಿ ಮುಂಚೂಣಿಯಲ್ಲಿರುವ ಡಿಜಿಟಲ್ ಪೇಮೆಂಟ್ ಆಪ್‌ಗಳಲ್ಲಿ ಒಂದಾಗಿದೆ. ಅಲ್ಲದೆ ಒಂದೇ ಸೂರಿನಡಿ ಹತ್ತು ಹಲವು ಅನುಕೂಲಗಳನ್ನು ಹೊಂದಿರುವ ಗೂಗಲ್ ಪೇ ಅತ್ಯುತ್ತಮ ಆಪ್ ಆಗಿ ಗುರುತಿಸಿಕೊಂಡಿದೆ. ಸದ್ಯ ಇದೀಗ ಹೊಸ ಪರ್ಸನಲೈಸ್ಡ್ ಫೀಚರ್ಸ್ ಅನ್ನು ಪರಿಚಯಿಸಲು ಗೂಗಲ್ ಪೇ ಸಜ್ಜಾಗಿದೆ. ಇದು ಸಂಬಂಧಿತ ವ್ಯವಹಾರಗಳು ಮತ್ತು ಉತ್ತಮ ಶಿಫಾರಸುಗಳನ್ನು ನೀಡುತ್ತದೆ. ಇನ್ನುಳಿದಂತೆ ಈ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್ ಪೇ ಭಾರತೀಯ ಬಳಕೆದಾರರಿಗೆ ಪರ್ಸನಲೈಸ್ಡ್ ಫೀಚರ್ಸ್ ಅನ್ನು ಪರಿಚಯಿಸಲು ಮುಂದಾಗಿದೆ. ಈ ಫೀಚರ್ಸ್ ಅನ್ನು ಸಕ್ರಿಯಗೊಳಿಸಿದರೆ, ನಿಮ್ಮ ವಹಿವಾಟಿನ ಇತಿಹಾಸ, ನಿಮ್ಮ ಪಾವತಿ ಪ್ರಕಾರಗಳು ಮತ್ತು ಇತರ ಡೇಟಾದಂತಹ ಸೂಕ್ಷ್ಮ ಮಾಹಿತಿಯನ್ನು ಪಡದುಕೊಳ್ಳುವ ಅವಕಾಶವನ್ನು ನೀಡಲಿದೆ. ಹೊಸ "ಪರ್ಸನಲೈಸಷನ್ ವಿಥ್ ಗೂಗಲ್ ಪೇ" ಫೀಚರ್ಸ್ ನಿಮ್ಮ ಶಾಪಿಂಗ್ ಮತ್ತು ಇತರ ಆದ್ಯತೆಗಳ ಆಧಾರದ ಮೇಲೆ ಸಂಬಂಧಿತ ಆಫರ್‌ಗಳನ್ನು ಸಹ ನೀಡಲಿದೆ. ನೀವು ಈ ಫೀಚರ್ಸ್ ಅನ್ನು ಆನ್ ಮಾಡಿದರೆ, ನೀವು ಆಗಾಗ್ಗೆ ಶಾಪಿಂಗ್ ಮಾಡುವ ಸ್ಥಳಗಳಿಂದ ನಿಮಗೆ ಆಫರ್‌ಗಳು ಸಿಗುತ್ತವೆ. ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಲ್ಲಿ ಈ ಫೀಚರ್ಸ್ ಅನ್ನು ಯಾವುದೇ ಸಮಯದಲ್ಲಿ ಟಾಗಲ್ ಮಾಡಬಹುದು.

ಈ ಹೊಸ ಫೀಚರ್ಸ್ ಕುರಿತಂತೆ ಟೆಕ್ ದೈತ್ಯ ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಈ ಫೀಚರ್ಸ್ ಅನ್ನು ಘೋಷಿಸಿದೆ. ಇದು ಮುಂದಿನ ವಾರದಿಂದ ಭಾರತದಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಲಭ್ಯವಾಗಲಿದೆ ಎಂದು ಖಚಿತಪಡಿಸಿದೆ. ಬಳಕೆದಾರರು Google Pay ನ ಮುಂದಿನ ಆವೃತ್ತಿಗೆ ಅಪ್‌ಗ್ರೇಡ್ ಮಾಡಿದ ತಕ್ಷಣ, ಕಂಟ್ರೋಲ್ ಅನ್ನು ಆನ್ ಅಥವಾ ಆಫ್ ಮಾಡಲು ಬಯಸುತ್ತಾರೆಯೇ ಎಂದು ಆಯ್ಕೆ ಮಾಡಲು ಕೇಳಲಾಗುತ್ತದೆ. ಈ ಫೀಚರ್ಸ್ ಅನ್ನು ಆಫ್ ಮಾಡುವುದರಿಂದ ನೀವು ಸೇವೆಯನ್ನು ಬಳಸುವುದನ್ನು ನಿರ್ಬಂಧಿಸುವುದಿಲ್ಲ. ಜೊತೆಗೆ ನೀವು ಇನ್ನೂ ಸಂಪರ್ಕವಿಲ್ಲದ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.

ಇನ್ನು ನೀವು ಫೀಚರ್ಸ್ ಅನ್ನು ಆನ್ ಮಾಡಿದರೆ, ನಿಮ್ಮ ಟ್ರಾನ್ಸಕ್ಷನ್ ಹಿಸ್ಟರಿ, ಸಂಬಂಧಿತ ಕೊಡುಗೆಗಳು ಮತ್ತು ನೀವು ಖರೀದಿಸಿದ ಸ್ಥಳ, ಟ್ರಾನ್ಸಿಟ್ ಮತ್ತು ಲಾಯಲ್ಟಿ ಕಾರ್ಡ್‌ಗಳಂತಹ ವಿಷಯಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇದಲ್ಲದೆ, ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ವೈಯಕ್ತಿಕ ವ್ಯವಹಾರಗಳು ಮತ್ತು ಚಟುವಟಿಕೆಯನ್ನು Google Pay ನಲ್ಲಿನ ವೈಯಕ್ತೀಕರಣಕ್ಕಾಗಿ ಹೇಗೆ ಬಳಸಲಾಗುತ್ತದೆ ಎಂಬುದನ್ನು ಸಹ ನೀವು ನಿರ್ವಹಿಸಲು ಸಾಧ್ಯವಾಗುತ್ತದೆ. ನಿಮ್ಮ Google Pay ಅನುಭವವನ್ನುಪರ್ಸನಲೈಸ್ಡ್ ಮಾಡಲು ಬಯಸದ ವೈಯಕ್ತಿಕ ವ್ಯವಹಾರಗಳು ಮತ್ತು ಚಟುವಟಿಕೆ ದಾಖಲೆಗಳನ್ನು ಇಲ್ಲಿ ನೀವು ವೀಕ್ಷಿಸಬಹುದು ಮತ್ತು ಡಿಲೀಟ್ ಮಾಡಬಹುದಾಗಿದೆ.


Click it and Unblock the Notifications



