ಗೂಗಲ್ ಫೋಟೋಸ್‌ನಲ್ಲಿ ಹೊಸ ಅಪ್ಡೇಟ್ ಪರಿಚಯಿಸಿದ ಗೂಗಲ್!
ಟೆಕ್ ದೈತ್ಯ ಗೂಗಲ್ ಬಳಕೆದಾರರಿಗೆ ಹಲವು ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಗೂಗಲ್ ಪೋಟೋಸ್ ಅಪ್ಲಿಕೇಶನ್ ಕೂಡ ಒಂದಾಗಿದೆ. ಆದರೆ ಕಳೆದ ವರ್ಷ ನವೆಂಬರ್‌ನಲ್ಲಿ ಗೂಗಲ್ ತನ್ನ ಪೋಟೋಸ್ ಅಪ್ಲಿಕೇಶನ್ ಬಳಕೆದಾರರಿಗೆ ಉಚಿತ ಸ್ಟೋರೇಜ್ ಅವಕಾಶವನ್ನು ಸ್ಟಾಪ್ ಮಾಡುವುದಾಗಿ ಹೇಳಿತ್ತು. ಅಲ್ಲದೆ ಈ ಹೊಸ ನೀತಿ ಜೂನ್ 1, 2021ರಿಂದ ಜಾರಿಗೆ ತರುವುದಾಗಿ ಹೇಳಿಕೊಂಡಿತ್ತು. ಇದೀಗ ಬಳಕೆದಾರರಿಗೆ ಸ್ಪೇಸ್ ಅನ್ನು ಫ್ರೀ ಮಾಡುವುದಕ್ಕೆ ಸಹಾಯ ಮಾಡಲು ಕೆಲವು ಡಿವೈಸ್‌ಗಳನ್ನು ಪರಿಚಯಿಸಿದೆ.

ಹೌದು, ಗೂಗಲ್ ತನ್ನ ಗೂಗಲ್ ಫೋಟೋಸ್ ಸ್ಟೋರೇಜ್ ಅನ್ನು ತೆಗೆದುಹಾಕುವುದಕ್ಕೂಮೊದಲು ಬಳಕೆದಾರರಿಗೆ ಹೊಸ ಅಪ್ಡೇಟ್‌ಗಳನ್ನು ಪರಿಚಯಿಸಿದೆ. ಇನ್ನು ಗೂಗಲ್ ಫೋಟೋಸ್ ಬಳಕೆದಾರರಿಗೆ ಉತ್ತಮ-ಗುಣಮಟ್ಟದ ಫೋಟೋಗಳಲ್ಲಿ ಸೆಟ್ಟಿಂಗ್‌ಗಳನ್ನು ಇರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇದೇ ಕಾರಣಕ್ಕೆ ಬಳಕೆದಾರರಿಗೆ ಈ ಸ್ಟೋರೇಜ್ ತೊರೆಯುವಾಗ ಬೇಸರವಾಗದಂತೆ ಮಾಡುವುದಕ್ಕೆ ಹೊಸ ಅಪ್ಡೇಟ್‌ಗಳನ್ನು ಪರಿಚಯಿಸಿದೆ ಅದು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್ ಹೊಸ ಸ್ಟೋರೇಜ್ ನೀತಿಯನ್ನು ಘೋಷಿಸುವ ಮೊದಲು, ಬಳಕೆದಾರರು ತಮ್ಮ ಶೇಖರಣಾ ಮಿತಿಯ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕೆಲವು ಹೊಸ ಅಪ್ಡೇಟ್‌ಗಳನ್ನು ಗೂಗಲ್ ಹಂಚಿಕೊಂಡಿದೆ. ಸದ್ಯ ಗೂಗಲ್ ಹೊಸ ವಿಮರ್ಶೆ ಡಿವೈಸ್‌ನ್ನು ಸೇರಿಸಿದ್ದು ಅದು ಬಳಕೆದಾರರಿಗೆ ಅನಗತ್ಯ ಅಥವಾ ಮಸುಕಾದ ಚಿತ್ರಗಳನ್ನು ತೊಡೆದುಹಾಕಲು ಅನುವು ಮಾಡಿಕೊಡುತ್ತದೆ. ಈ ಟೂಲ್ ಬ್ಲರ್ ಇಮೇಜ್ ಅಥವಾ ವೀಡಿಯೊಗಳನ್ನು ಹೈಲೈಟ್ ಮಾಡುತ್ತದೆ, ಸ್ಕ್ರೀನ್‌ಶಾಟ್‌ಗಳು ಮತ್ತು ದೊಡ್ಡ ವೀಡಿಯೊಗಳು ಅನಗತ್ಯವಾಗಿ ಸಾಕಷ್ಟು ಜಾಗವನ್ನು ತಿನ್ನುತ್ತವೆ ಅವುಗಳನ್ನು ಗುರುತಿಸಲು ಸಹಾಯ ಮಾಡಲಿದೆ.

ಇನ್ನು ಈ ಉಪಕರಣವನ್ನು ಪಡೆಯಲು, ಖಾತೆ ಸೆಟ್ಟಿಂಗ್‌ಗಳಿಗೆ ಹೋಗಿ ನಂತರ ಬ್ಯಾಕಪ್ ಮತ್ತು ಸೆಟ್ಟಿಂಗ್‌ಗಳನ್ನು ಸಿಂಕ್ ಮಾಡಿ. ನಿಮ್ಮ ಫೋಲ್ಡರ್‌ಗಳಿಂದ ನೀವು ಅಳಿಸಲು ಬಯಸುವ ಫೈಲ್‌ಗಳ ಪ್ರಕಾರಗಳನ್ನು ನೋಡಲು ಸ್ಟೋರೇಜ್ ಮ್ಯಾನೇಜರ್ ಟ್ಯಾಪ್ ಮಾಡಿ. ಜಾಗವನ್ನು ಮುಕ್ತಗೊಳಿಸಲು ನೀವು ಎಲ್ಲಾ ಚಿತ್ರಗಳನ್ನು ಏಕಕಾಲದಲ್ಲಿ ಆಯ್ಕೆ ಮಾಡಬಹುದು. ಸ್ಟೋರೇಜ್ ಮ್ಯಾನೇಜರ್ ಅಪ್ಲಿಕೇಶನ್ ಬಳಕೆದಾರರಿಗೆ ಅವರ ಸೆಟ್ಟಿಂಗ್‌ಗಳು ಮತ್ತು ಬಳಕೆಯ ಆಧಾರದ ಮೇಲೆ ಶೇಖರಣಾ ಮಿತಿಯನ್ನು ತಲುಪಿದರೆ ನಿಮಗೆ ಅದರ ಅಂದಾಜು ಮಿತಿಯನ್ನು ತಿಳಿಸುತ್ತದೆ.

ಗೂಗಲ್‌ನ ಅಂದಾಜಿನ ಪ್ರಕಾರ, ಶೇಕಡಾ 80 ಕ್ಕಿಂತ ಹೆಚ್ಚು ಬಳಕೆದಾರರು ಸರಿಸುಮಾರು ಮೂರು ವರ್ಷಗಳ ನೆನಪುಗಳನ್ನು ಉತ್ತಮ ಗುಣಮಟ್ಟದ 15ಜಿಬಿ ಸಂಗ್ರಹದೊಂದಿಗೆ ಉತ್ತಮ ಗುಣಮಟ್ಟದಲ್ಲಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಅಪ್ಲಿಕೇಶನ್‌ನಲ್ಲಿನ ಇಮೇಲ್‌ಗಳು ಮತ್ತು ಅಧಿಸೂಚನೆಗಳ ಮೂಲಕ ಶೇಖರಣಾ ಮಿತಿಯನ್ನು ಸಮೀಪಿಸುತ್ತಿರುವಾಗ ಗೂಗಲ್ ಬಳಕೆದಾರರಿಗೆ ತಿಳಿಸುತ್ತದೆ. ಇದಲ್ಲದೆ ಗೂಗಲ್ ನಿಮ್ಮ ಚಿತ್ರಗಳನ್ನು "ಉತ್ತಮ-ಗುಣಮಟ್ಟದ ಫೋಟೋಗಳು" ಎಂದು ಕರೆಯುವುದಿಲ್ಲ, ಅದನ್ನು ಸ್ಟೋರೇಜ್ ಸೇವರ್ ಎಂದು ಮರುಹೆಸರಿಸುತ್ತಿದೆ, ಅದು ಶೀಘ್ರದಲ್ಲೇ ಅಪ್ಲಿಕೇಶನ್‌ನಲ್ಲಿ ಕಾಣಿಸಿಕೊಳ್ಳುವ ಸಾದ್ಯತೆ ಇದೆ.


Click it and Unblock the Notifications








