ಗೂಗಲ್ ಪೋಟೋಸ್ ನಲ್ಲಿ ಬಂತು ಲೋಕೇಷನ್ ಎಡಿಟಿಂಗ್..!
ಸದ್ಯ ಗೂಗಲ್ ನಲ್ಲಿರುವ ಸೇವೆಗಳಲ್ಲಿ ಅತ್ಯಂತ ಉತ್ಕೃಷ್ಟವಾದದ್ದು ಅಂದರೆ ಅದು ಗೂಗಲ್ ಫೋಟೋಸ್.. ಬಳಕೆದಾರರಿಗೆ ಉತ್ತಮ ಅನುಭವ ನೀಡುವ ಉದ್ದೇಶದಿಂದ ಈ ಹುಡುಕಾಟದ ಸೇವೆ ದಿನದಿಂದ ದಿನಕ್ಕೆ ಹೆಚ್ಚು ಏಳಿಗೆ ಹೊಂದುತ್ತಿದೆ. ಸದ್ಯ ಗೂಗಲ್ ಮೌನವಾಗಿಯೇ ಗೂಗಲ್ ಫೋಟೋ ವೆಬ್ ವರ್ಷನ್ ಗೆ ಹೊಸದೊಂದು ವೈಶಿಷ್ಟ್ಯವನ್ನು ಸೇರಿಸಿದೆ. ಅದುವೇ ಲೋಕೇಷನ್ ಎಡಿಟಿಂಗ್ ವೈಶಿಷ್ಟ್ಯ.
ಗೂಗಲ್ ಫೋಟೋಸ್ ಬಳಕೆದಾರರಿಗೆ ಲೋಕೇಷನ್ ಆಧರಿಸಿ ಫೋಟೋಗಳನ್ನು ಹುಡುಕಾಡಲು ಅವಕಾಶ ನೀಡುತ್ತೆ. ಆದರೆ ಕೆಲವು ಚಿತ್ರಗಳು ಸ್ಥಳದ ಮಾಹಿತಿಯ ಕೊರತೆಯನ್ನು ಎದುರಿಸುತ್ತಿರುತ್ತವೆ.


ಗೂಗಲ್ ಪೋಟೋ ಹುಡುಕಲು ನೆರವು
ಉದಾಹರಣೆಗೆ ಒಂದು ವೇಳೆ ನೀವು DSLR ಮೂಲಕ ಯಾವುದಾದರೂ ಚಿತ್ರವನ್ನು ಗೂಗಲ್ ಗೆ ಇಂಪೋರ್ಟ್ ಮಾಡಿದರೆ, ನೀವು ಎಲ್ಲಿಂದ ಅಪ್ ಲೋಡ್ ಮಾಡಿದ್ದೀರೋ ಆ ಲೋಕೇಷನ್ ಗೂಗಲ್ ಫೋಟೋದಲ್ಲಿ ಅಪ್ ಲೋಡ್ ಆಗುತ್ತದೆ. ಆದರೆ ಸದ್ಯ ಸೇರಿಸುವ ವೈಶಿಷ್ಟ್ಯದ ಮುಖಾಂತರ ನೀವು ಆ ಫೋಟೋದ ನಿಜವಾದ ಸ್ಥಳವನ್ನು ವೆಬ್ ನಲ್ಲಿ ಎಡಿಟ್ ಮಾಡಬಹುದಾಗಿದೆ. ಇದು ಮುಂದೆ ಭವಿಷ್ಯದಲ್ಲಿ ನಿಮಗೆ ಗೂಗಲ್ ಫೋಟೋ ಹುಡುಕಾಡಲು ಬಹಳ ನೆರವು ನೀಡುತ್ತದೆ.


ವೆಬ್ ವರ್ಷನ್ ಗೆ ಮಾತ್ರ ಸಿಮೀತ
ವೆಬ್ ಇಂಟರ್ ಫೇಸ್ ನಲ್ಲಿ ಬಳಕೆದಾರರು ಚಿತ್ರದ ಸ್ಥಳದ ಮಾಹಿತಿಯನ್ನು ಮಾನುವಲ್ ಆಗಿ ಬದಲಿಸಲೂ ಕೂಡ ಅವಕಾಶವಿರುತ್ತದೆ. ಸದ್ಯ ಈ ವೈಶಿಷ್ಟ್ಯವು ಗೂಗಲ್ ಫೋಟೋಸ್ ನ ವೆಬ್ ವರ್ಷನ್ ಗೆ ಮಾತ್ರ ಸೀಮಿತವಾಗಿದ್ದು, ಯಾವಾಗ ಗೂಗಲ್ ಈ ಅಪ್ಲಿಕೇಷನ್ ನ್ನು ಎಲ್ಲಾ ಕಡೆ ಬಿಡುಗಡೆಗೊಳಿಸುತ್ತದೆ ಎಂಬ ಬಗ್ಗೆ ಖಚಿತ ಮಾಹಿತಿಯನ್ನು ಹೊರ ಹಾಕಿಲ್ಲ.

ಗೂಗಲ್ ಫೋಟೋಸ್ ಎಡಿಟ್ ಮಾಡಲು ಏನು ಮಾಡಬೇಕು?
ಚಿತ್ರದ ಸ್ಥಳವನ್ನು ನೀವೂ ಕೂಡ ಎಡಿಟ್ ಮಾಡಲು ಬಯಸುತ್ತೀರಾದ್ರೆ, ಮೊದಲು ಗೂಗಲ್ ಫೋಟೋಸ್ ವೆಬ್ ವರ್ಷನ್ ತೆರೆಯಿರಿ ಮತ್ತು ಇನ್ಫೋ ಟ್ಯಾಬ್ ನ್ನು ಹಿಟ್ ಮಾಡಿ( ಐ ಅಕ್ಷರವು ಬಿಳಿಯ ವೃತ್ತದಲ್ಲಿರುತ್ತದೆ) .ಇನ್ಫೋ ಟ್ಯಾಬ್ ನ್ನು ಪ್ರೆಸ್ ಮಾಡಿದಾಗ, ಚಿತ್ರದ ಸಂಪೂರ್ಣ ವಿವರವು ತೆರೆದುಕೊಳ್ಳುತ್ತದೆ..ಉದಾಹರಣೆಗೆ ದಿನಾಂಕ, ಯಾವಾಗ ಈ ಫೋಟೋವನ್ನು ತೆಗೆಯಲಾಗಿದೆ?, ಚಿತ್ರದ ಹೆಸರು, ಯಾವ ಡಿವೈಸ್ ನಲ್ಲಿ ಚಿತ್ರವನ್ನು ಕ್ಯಾಪ್ಚರ್ ಮಾಡಲಾಗಿದೆ, ಮತ್ತು ಕೊನೆಯದಾಗಿ ಸ್ಥಳದ ಮಾಹಿತಿಯೂ ಒಳಗೊಂಡಿರುತ್ತದೆ.

ನಿಖರ ಸ್ಥಳದ ಮಾಹಿತಿ
ಈಗ ಲೊಕೇಷನ್ ಟ್ಯಾಬ್ ನಲ್ಲಿ ಎಡಿಟ್ ಐಕಾನ್ ಆಯ್ಕೆ ಇರುತ್ತದೆ. ಇದು ಮೊದಲು ಇರಲಿಲ್ಲ. ಒಂದು ಚಿತ್ರಕ್ಕೆ ನಿಖರವಾದ ಸ್ಥಳದ ಮಾಹಿತಿಯನ್ನು ನೀಡುವ ಉದ್ದೇಶದಿಂದ ಈ ಎಡಿಟ್ ಆಯ್ಕೆಯನ್ನು ನೀಡಲಾಗಿದೆ. ಒಂದು ವೇಳೆ ಚಿತ್ರಕ್ಕೆ ಯಾವುದೇ ಲೊಕೇಷನ್ ಮಾಹಿತಿಯೇ ಇಲ್ಲದಿದ್ದರೆ, ಎರಡು ಆಯ್ಕೆಗಳಿರುತ್ತದೆ . ಒಂದು "what's an estimated location,' ಮತ್ತು ‘edit location.' ಇದರ ಮೂಲಕ ನೀವು ನಿಖರವಾದ ಫೋಟೋದ ಸ್ಥಳವನ್ನು ಗೂಗಲ್ ಫೋಟೋಸ್ ಗೆ ಸೇರಿಸಬಹುದಾಗಿದೆ.

ಉತ್ತಮ ಫೀಚರ್
ಈಗಾಗಲೇ ತಿಳಿಸಿರುವಂತೆ, ಈ ವೈಶಿಷ್ಟ್ಯವು ಅತ್ಯಂತ ಸೂಕ್ತ ರೀತಿಯಲ್ಲಿ ಲೋಕೇಷನ್ ಅಥವಾ ಸ್ಥಳವನ್ನು ಆಧರಿಸಿ ಚಿತ್ರವನ್ನು ಆರಿಸಲು ಮತ್ತು ಹುಡುಕಾಡಲು ನೆರವಾಗುವಂತೆ ಮಾಡುತ್ತದೆ. ಹಲವಾರು ವರ್ಷಗಳಿಂದ ಅನೇಕ ಗೂಗಲ್ ಬಳಕೆದಾರರು ಈ ವೈಶಿಷ್ಟ್ಯವನ್ನು ಸೇರಿಸುವಂತೆ ಒತ್ತಾಯಿಸಿದ್ದರು. ಅಂತೂ ಈಗ ಆ ಕಾಲ ಕೂಡಿ ಬಂದಿದೆ. ಮೌನವಾಗಿಯೇ ಗೂಗಲ್ ಈ ವೈಶಿಷ್ಟ್ಯವನ್ನು ತನ್ನೊಡಲಲ್ಲಿ ಸೇರಿಸಿದೆ. ಗೂಗಲ್ ಫೋಟೋಸ್ ಅಪ್ಲಿಕೇಷನ್ ಗೆ ಈ ವೈಶಿಷ್ಟ್ಯವು ಬಹಳ ಸಹಾಯಹಸ್ತ ನೀಡುತ್ತೆ.


Click it and Unblock the Notifications








