ಗೂಗಲ್ ಪಿಕ್ಸೆಲ್ ಬಡ್ಸ್ ಇಯರ್‌ಫೋನ್ ಖರೀದಿಗೆ ಲಭ್ಯ!
ಟೆಕ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಜೊತೆ ಇಯರ್‌ಫೋನ್ ಕೊಡುವುದನ್ನ ಈಗಾಗಲೇ ಸ್ಟಾಪ್ ಮಾಡಲಾಗಿದೆ. ನಿಮಗೆಲ್ಲಾ ತಿಳಿದಿರುವಂತೆ ನೀವು ಹೊಸ ಸ್ಮಾರ್ಟ್‌ಫೋನ್ ಕೊಂಡಾಗ ನಿಮಗೆ ಯಾವುದೇ ರೀತಿಯ ಇಯರ್‌ಫೋನ್ ಲಬ್ಯವಾಗುವುದಿಲ್ಲ. ಆದರೆ ಗ್ರಾಹಕರು ಮಾತ್ರ ತಮಗೆ ಇಷ್ಟವಾದ ಬ್ರ್ಯಾಂಡ್‌ಗಳ ಇಯರ್‌ಫೋನ್‌ಗಳನ್ನ ಕೊಂಡುಕೊಳ್ಳುತ್ತಾರೆ. ಈಗಾಗಲೇ ಹಲವು ಕಂಪೆನಿಗಳ ವೈವಿಧ್ಯಮಯ ಇಯರ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸದ್ಯ ಇದೀಗ ಗೂಗಲ್ ತನ್ನ ಎರಡನೇ ತಲೆಮಾರಿನ ಇಯರ್ ಬಡ್ಸ್‌ಗಳನ್ನ ಮಾರಾಟಕ್ಕೆ ಲಭ್ಯವಿದೆ ಎಂದು ಹೇಳಿದೆ.

ಹೌದು, ಟೆಕ್ ಲೋಕದ ಪ್ರಖ್ಯಾತ ಕಂಪೆನಿ ಗೂಗಲ್ ತನ್ನ ಎರಡನೇ ತಲೆಮಾರಿನ ಪಿಕ್ಸೆಲ್ ಬಡ್ಸ್ ಈಗ ಯುಎಸ್ ಮಾರುಕಟ್ಟೆಯಲ್ಲಿ ಖರೀದಿಸಲು ಲಭ್ಯವಿದೆ ಎಂದು ಘೋಷಿಸಿದೆ. ಹಾಗೇ ನೊಡಿದ್ರೆ ಸರ್ಚ್ ದೈತ್ಯ ತನ್ನ ಹೊಸ ಪಿಕ್ಸೆಲ್ ಬಡ್ಸ್ ಅನ್ನು ಅಕ್ಟೋಬರ್ 2019 ರಲ್ಲಿ ಬಿಡುಗಡೆ ಮಾಡಿತ್ತು. ಈ ಅವಧಿಯಲ್ಲಿ ಗೂಗಲ್ ಪಿಕ್ಸೆಲ್ 4 ಸರಣಿಯೊಂದಿಗೆ ಅನಾವರಣಗೊಳಿಸಿತು. ಈಗ, ಗೂಗಲ್‌ನ ಟ್ರೂ ವಾಯರ್‌ಲೆಸ್ ಸ್ಟಿರಿಯೊ ಇಯರ್‌ಫೋನ್‌ಗಳು ಮಾರಾಟಕ್ಕೆ ಲಭ್ಯವಿದೆ ಎಂದು ಘೋಷಿಸಿದೆ.

ಆದರೆ, ಈ ಹೊಸ ಜೋಡಿ ವಾಯರ್‌ಲೆಸ್ ಇಯರ್‌ಫೋನ್‌ಗಳು ಮುಂದಿನ ತಿಂಗಳುಗಳಲ್ಲಿ ಇತರೆ ದೇಶಗಳಲ್ಲೂ ಮಾರಾಟಕ್ಕೆ ಲಬ್ಯವಾಗಲಿವೆ ಎನ್ನಲಾಗ್ತಿದೆ. ಇನ್ನು ಈ ಎರಡನೇ ತಲೆಮಾರಿನ ವಾಯರ್‌ಲೆಸ್ ಇಯರ್‌ಬಡ್ ಉತ್ತಮ ವಿನ್ಯಾಸ ಹೊಂದಿದ್ದು, ಆಡಿಯೊ ಅನುಭವದಲ್ಲಿ ಉತ್ತಮ ಅನುಭವ ನೀಡಲಿದೆ ಎನ್ನಲಾಗಿದೆ. ಇದಲ್ಲದೆ ಬಳಕೆದಾರರು ಒಂದು ಸಮಯದಲ್ಲಿ ಒಂದು ಇಯರ್‌ಬಡ್ ಅನ್ನು ರಿಂಗ್ ಮಾಡಬಹುದು, ಎಡ ಅಥವಾ ಬಲ ಇಯರ್‌ಬಡ್ ಅನ್ನು ಕಂಡುಹಿಡಿಯುವಲ್ಲಿ ಗಮನಹರಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

ಇದಲ್ಲದೆ ಈ ಇಯರ್ ಬಡ್ಸ್ ಅನ್ನು ಬಳಕೆದಾರರ ಕೈಗಳು ಟಚ್ ಮಾಡಿದ ತಕ್ಷಣ ತನ್ನ ರಿಂಗಿಂಗ್ ಅನ್ನು ನಿಲ್ಲಿಸುತ್ತದೆ. ಅಲ್ಲದೆ ಟ್ ಮೂಲಕ ತನ್ನ ಮ್ಯೂಸಿಕ್ ಅನ್ನು ಮುಂದುವರೆಸಲಿದೆ ಎಂದು ಹೇಳಲಾಗ್ತಿದೆ. ಜೊತೆಗೆ ಈ ವಾಯರ್‌ಲೆಸ್ ಇಯರ್ ಬಡ್‌ಗಳು ಹೊಸ ಫೀಚರ್ಸ್‌ಗಳನ್ನ ಹೊಂದಿದ್ದು, ಇನ್ನಷ್ಟು ಉತ್ತಮಗೊಳಿಸುವ ಭರವಸೆಯನ್ನ ಗೂಗಲ್ ನೀಡಿದೆ. ಜೊತೆಗೆ "ನಿಮಗೆ ಸ್ಪಷ್ಟವಾದ ಕರೆಗಳನ್ನು ನೀಡಲು, ಗದ್ದಲದ ಮತ್ತು ಗಾಳಿಯ ವಾತಾವರಣದಲ್ಲಿಯೂ ಸಹ, ಪಿಕ್ಸೆಲ್ ಬಡ್ಸ್ ಬೀಮ್‌ಆರ್ಮಿಂಗ್ ಮೈಕ್‌ಗಳಿಂದ ಸಿಗ್ನಲ್‌ಗಳನ್ನು ಪತ್ತೆ ಮಾಡುವ ವಿಶೇಷ ಸೆನ್ಸಾರ್ ಅನ್ನು ಒಳಗೊಂಡಿದೆ ಎನ್ನಲಾಗಿದೆ.

ಇನ್ನು ಈ ಪಿಕ್ಸೆಲ್ ಬಡ್ಸ್ ಬೆಲೆ $179, ಆಗಿದ್ದು, ಇದು ಭಾರತದಲ್ಲಿ ಸುಮಾರು 13,640 ರೂ. ಬೆಲೆಯನ್ನ ಹೊಂದಿದೆ. ಇನ್ನು ಗೂಗಲ್ ಈ ಇಯರ್‌ಫೋನ್‌ಗಳನ್ನು ಕೇವಲ ಒಂದು ಬಣ್ಣದ ಆಯ್ಕೆಯಲ್ಲಿ ಮಾರಾಟ ಮಾಡುತ್ತಿದ್ದು, ಸದ್ಯ ಇದು ವೈಟ್ ಕಲರ್‌ನಲ್ಲಿ ಲಬ್ಯವಿದೆ. ಮುಂಬರುವ ದಿನಗಳಲ್ಲಿ ಆಲ್ಮೋಸ್ಟ್ ಬ್ಲ್ಯಾಕ್, ಕ್ವೈಟ್ ಮಿಂಟ್, ಮತ್ತು ಓಹ್ ಸೋ ಆರೆಂಜ್ ಸೇರಿದಂತೆ ಇತರ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿವೆ ಎಂದು ಹೇಳಲಾಗ್ತಿದೆ. ಸದ್ಯ ಗೂಗಲ್ ಪಿಕ್ಸೆಲ್ ಬಡ್ಸ್ ಗೂಗಲ್ ಸ್ಟೋರ್ ಮೂಲಕ ಖರೀದಿಸಲು ಲಭ್ಯವಿದೆ.


Click it and Unblock the Notifications








