Home
ಸುದ್ದಿಜಾಲ

Pixel 10 Pro Fold ಬಾಳಿಕೆ ಪರೀಕ್ಷೆಯಲ್ಲಿ ಫೋನ್‌ ಸ್ಫೋಟ!..ವೀಡಿಯೊ ನೋಡಿ!

ಗೂಗಲ್‌ನ ಇತ್ತೀಚಿನ ಫೋಲ್ಡೇಬಲ್ ಸ್ಮಾರ್ಟ್‌ಫೋನ್ Pixel 10 Pro Fold ಮಾರುಕಟ್ಟೆಗೆ ಬಿಡುಗಡೆಯಾದಗಿನಿಂದ ಸುದ್ದಿಯಲ್ಲಿದೆ.ಕಂಪನಿಯು ಈ ಸಾಧನವನ್ನು "ಅತ್ಯಂತ ಬಾಳಿಕೆ ಬರುವ ಫೋಲ್ಡೇಬಲ್‌ಗಳಲ್ಲಿ ಒಂದಾಗಿದೆ" ಎಂದು ಘೋಷಿಸಿದ್ದಲ್ಲದೆ, IP68 ಧೂಳು ಮತ್ತು ನೀರಿನ ಪ್ರತಿರೋಧ ರೇಟಿಂಗ್ ಹೊಂದಿರುವ ಮೊದಲ ಫೋಲ್ಡೇಬಲ್ ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಆದರೆ ಈ Pixel 10 Pro Fold ಬಾಳಿಕೆ ಕುರಿತು ಗೂಗಲ್‌ನ ಭರವಸೆಯನ್ನು ಜನಪ್ರಿಯ ಯೂಟ್ಯೂಬರ್ JerryRigsEverything ಅವರ ಬಾಳಿಕೆ ಪರೀಕ್ಷೆಯು (Bend Test) ಸಂಪೂರ್ಣವಾಗಿ ಪ್ರಶ್ನಿಸಿದೆ.!

ಹೌದು, ಬೆಂಡ್ ಟೆಸ್ಟ್‌ ಪರೀಕ್ಷೆಗಾಗಿ ಜನಪ್ರಿಯ ಯೂಟ್ಯೂಬರ್ JerryRigsEverything ಅವರು Pixel 10 Pro Fold ಅನ್ನು ಬಾಗಿಸುವಪರೀಕ್ಷೆಗೆ ಒಳಪಡಿಸಿರುವ ವೀಡಿಯೊವನ್ನು ಪ್ರಕಟಿಸಿದ್ದಾರೆ. ಈ ವೀಡಿಯೋದಲ್ಲಿ ನಾವು ನೋಡುವಂತೆ, Pixel 10 Pro Fold ಅನ್ನು ಬಾಗಿಸಿ ಪರೀಕ್ಷಿಸುವಾಗ ಆಘಾತಕಾರಿ ಘಟನೆ ನಡೆದಿದೆ. ಫೋನ್‌ನ ಒಂದು ಆಂಟೆನಾ ಲೈನ್‌ ಬಾಗಿದ ಕ್ಷಣದಲ್ಲೇ ಫೋನ್ ಸಿಡಿಯಲು ಪ್ರಾರಂಭಿಸಿದ ಬೆಂಕಿಗೆ ಆಹುತಿಯಾಯಿತು. ಈ ಅನಿರೀಕ್ಷಿತ ಘಟನೆಯು ಆ ಯೂಟ್ಯೂಬರ್ ಸ್ಟುಡಿಯೋದಲ್ಲಿ ಹೊಗೆ ಮತ್ತು ಫೈರ್ ಅಲರಾಂ ಎಚ್ಚರಿಕೆಗಳನ್ನು ನೀಡಿತು.!

JerryRigsEverything ಯೂಟ್ಯೂಬರ್ ವಿಶ್ಲೇಷಣೆಯ ಪ್ರಕಾರ, Pixel 10 Pro Fold ಪೋನ್ ಅನ್ನು ಬಾಗಿದಾಗ ಅದರ ಒಳಗಿನ ಸರ್ಕ್ಯೂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಇದರ ಪರಿಣಾಮವಾಗಿ ಫೋನ್ ಬೆಂಕಿಗೆ ತುತ್ತಾಯಿತು ಎಂದು ಹೇಳಿದ್ದಾರೆ. ಕಳೆದ ಹತ್ತು ವರ್ಷಗಳ ತಮ್ಮ ಬಾಳಿಕೆ ಪರೀಕ್ಷೆಗಳ ಇತಿಹಾಸದಲ್ಲಿ, ಈ ರೀತಿಯಾಗಿ ಸ್ಫೋಟಗೊಂಡ ಫೋನ್ ಕಾಣುವುದು ಇದೇ ಮೊದಲು ಎಂದು ಅವರು ಹೇಳಿದ್ದಾರೆ. ಈ ಘಟನೆಯ ನಂತರ JerryRigsEverything ಅವರು Pixel 10 Pro Fold ಅನ್ನು "ಅತ್ಯಂತ ದುರ್ಬಲವಾದ ಫೋಲ್ಡಿಂಗ್ ಫೋನ್" ಎಂದು ಕರೆದಿದ್ದಾರೆ.

Pixel 10 Pro Fold ಬಾಳಿಕೆ ಪರೀಕ್ಷೆಯಲ್ಲಿ ಫೋನ್‌ ಸ್ಫೋಟ!..ವೀಡಿಯೊ ನೋಡಿ!
Photo credit: JerryRigsEverything

ಈ ಯೂಟ್ಯೂಬರ್ ಪ್ರಕಾರ ಈ ಸ್ಫೋಟಕ್ಕೆ ಮುಖ್ಯ ಕಾರಣ ಆಂಟೆನಾ ಲೈನ್‌ಗಳ ವಿನ್ಯಾಸದ ದೋಷ ಎಂದಿದ್ದಾರೆ. ಈ ಹಿಂದಿನ Pixel 9 Pro Fold ಮತ್ತು ಮೂಲ Pixel Fold ಮಾದರಿಗಳಲ್ಲಿಯೂ ಇದೇ ವಿನ್ಯಾಸದ ಸಮಸ್ಯೆ ಇತ್ತು, ಆದರೂ ಆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿರಲಿಲ್ಲ. ಗೂಗಲ್ ಈ ವರ್ಷವೂ ಅದೇ ವಿನ್ಯಾಸವನ್ನು ಮುಂದುವರಿಸಿರುವುದನ್ನು ಗಂಭೀರ ದೋಷ ಎಂದು ಆರೋಪಿಸಿದ್ದಾರೆ. "Pixel 10 Fold ಅನ್ನು ಅತ್ಯಂತ ಬಾಳಿಕೆ ಬರುವ ಫೋನ್ ಎಂದು ಕರೆಯುವುದು ತಂತ್ರಜ್ಞಾನ ಉತ್ಸಾಹಿಗಳಿಗೆ ಮಾಡಿದ ಅವಮಾನ" ಎಂದು ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಾರೆ.

ಈ ವಿಡಿಯೋಗೆ ಗೂಗಲ್ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ತಜ್ಞರು ಈ ಘಟನೆಯು ವಿನ್ಯಾಸದ ದೋಷಕ್ಕೆ ನಿಖರ ಸಾಕ್ಷಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. iFixit ಸಂಸ್ಥೆಯ ಎಲಿಜಬೆತ್ ಚೇಂಬರ್ಲೇನ್ ಅವರು The Verge ಗೆ ನೀಡಿದ ಹೇಳಿಕೆಯಲ್ಲಿ, "ಪರೀಕ್ಷೆ ಮಾಡುವ ಮೊದಲು ಬ್ಯಾಟರಿಯನ್ನು 25% ಕ್ಕಿಂತ ಕಡಿಮೆ ಮಟ್ಟಕ್ಕೆ ಡಿಸ್ಚಾರ್ಜ್ ಮಾಡುವುದು ಅತ್ಯಂತ ಸುರಕ್ಷಿತ ಕ್ರಮ" ಎಂದು ತಿಳಿಸಿದ್ದಾರೆ. ಹೊಸ ಫೋನ್‌ಗಳು ಸಾಮಾನ್ಯವಾಗಿ 60% ಕ್ಕಿಂತ ಹೆಚ್ಚು ಚಾರ್ಜ್‌ನೊಂದಿಗೆ ಬರುತ್ತವೆ. ಈ ವೇಳೆ ಪರೀಕ್ಷೆ ನಡೆಸಿದರೆ ಬೆಂಕಿ ಸಂಭವಿಸುವ ಸಾಧ್ಯತೆ ಹೆಚ್ಚಿರಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಯೂಟ್ಯೂಬ್ನಲ್ಲಿ ಜನಪ್ರಿಯ ಕಾಮೆಂಟ್‌ಗಳು ಮತ್ತು ಚರ್ಚೆಗಳು
ಗೂಗಲ್ Pixel 10 Pro Fold ಸ್ಫೋಟಗೊಂಡ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕಾಮೆಂಟ್ ವಿಭಾಗದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಓರ್ವ ಬಳಕೆದಾರರ, ಇದು ಅತ್ಯಂತ ಅನಿರೀಕ್ಷಿತ ಘಟನೆ. ಆದರೆ ಆಂಟೆನಾ ಲೈನ್‌ಗಳನ್ನು ಅದೇ ಸ್ಥಳದಲ್ಲಿ ಇಟ್ಟ ಗೂಗಲ್‌ನ ವಿನ್ಯಾಸ ಪ್ರಶ್ನಾರ್ಹ ಎಂದು ಕಾಮೆಂಟ್ ಮಾಡಿದ್ದರೆ, ಮತ್ತೋರ್ವರು "ಗೂಗಲ್ ನಿಜಕ್ಕೂ ಬಾಳಿಕೆ ಪರೀಕ್ಷೆ ನಡೆಸಿದೆಯೇ? ಈ ಘಟನೆ ಭಯಾನಕ." ಎಂದಿದ್ದಾರೆ. ಒಟ್ಟಾಋಏಐಅಘೀ, ಈ ಘಟನೆಯು ಫೋಲ್ಡೇಬಲ್ ತಂತ್ರಜ್ಞಾನದಲ್ಲಿ ಸುರಕ್ಷತೆ ಮತ್ತು ವಿನ್ಯಾಸದ ಮಾನದಂಡಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಗೂಗಲ್ ಶೀಘ್ರದಲ್ಲೇ ಈ ಕುರಿತು ಅಧಿಕೃತ ಪ್ರತಿಕ್ರಿಯೆ ನೀಡುವ ನಿರೀಕ್ಷೆಯಿದೆ. ಕಾದು ನೋಡೋಣ ಅಲ್ಲವೇ?

Best Mobiles in India

English summary
The Pixel 10 Pro Fold couldn’t survive a standard durability test, catching fire during stress testing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+