ಫ್ಲಿಪ್‌ಕಾರ್ಟ್ 'ಸೂಪರ್ ವ್ಯಾಲ್ಯೂ ವೀಕ್' ಸೇಲ್ ಆರಂಭ!..10,999 ರೂ.ಗೆ ಗೂಗಲ್ ಪಿಕ್ಸೆಲ್ 2 ಆಫರ್!!
ಭಾರತದ ಅತಿ ದೊಡ್ಡ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಈಗ ಮತ್ತೊಂದು ಬಿಗ್ ಸೇಲ್ ಅನ್ನು ಆಯೋಜಿಸಿದೆ. 'ಸೂಪರ್ ವ್ಯಾಲ್ಯೂ ವೀಕ್' ಹೆಸರಿನಲ್ಲಿ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಬೈಬ್ಯಾಕ್ ಆಫರ್ ಅನ್ನು ಫ್ಲಿಪ್‌ಕಾರ್ಟ್ ನೀಡಿದ್ದು, ಇದೇ 18ನೇ ತಾರೀಖಿನಿಂದ 23ನೇ ತಾರೀಖಿನವರೆಗೂ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ಆಫರ್ ಘೋಷಿಸಿದೆ.!
'ಸೂಪರ್ ವ್ಯಾಲ್ಯೂ ವೀಕ್' ಮಾರಾಟದಲ್ಲಿ ತಿಳಿಸಿರುವ ಯಾವುದೇ ಸ್ಮಾರ್ಟ್‌ಫೋನ್ ಖರೀದಿಸಿದರೂ ಅದರ ಬೆಲೆ ಶೇ.80ರಷ್ಟು ಬೈಬ್ಯಾಕ್ ಪಡೆಯುವ ಆಫರ್ ಅನ್ನು ಫ್ಲಿಪ್‌ಕಾರ್ಟ್ ನೀಡಿದೆ. 70 ಸಾವಿರ ಬೆಲೆಯ ಗೂಗಲ್ ಪಿಕ್ಸೆಲ್ 2 (128 ಜಿಬಿ) ಸ್ಮಾರ್ಟ್‌ಫೋನ್ ಅನ್ನು 10,999 ರೂ.ಗೆ ನೀಡುವುದಾಗಿ ಫ್ಲಿಪ್‌ಕಾರ್ಟ್ ತನ್ನ ವ್ಯಾಲ್ಯೂ ವೀಕ್ ಆಫರ್‌ನಲ್ಲಿ ಜಾಹಿರಾತು ನೀಡಿದೆ. !

ಹಾಗಾದರೆ, ಇದೇ 18 ನೇ ತಾರೀಖಿನಿಂದ 23 ನೇ ತಾರೀಖಿನವರೆಗೂ ಆಯೋಜಿನೆಯಾಗಿರುವ ಫ್ಲಿಪ್‌ಕಾರ್ಟ್ 'ಸೂಪರ್ ವ್ಯಾಲ್ಯೂ ವೀಕ್' ಆಫರ್ ಹೇಗಿದೆ? ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ವ್ಯಾಲ್ಯೂ ವೀಕ್ ಆಫರ್ ಬೈಬ್ಯಾಕ್ ಆಫರ್ ನೀಡಿದೆ. ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಅಂಶಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

'ಸೂಪರ್ ವ್ಯಾಲ್ಯೂ ವೀಕ್' ಸೇಲ್!
'ಸೂಪರ್ ವ್ಯಾಲ್ಯೂ ವೀಕ್' ಮಾರಾಟದಲ್ಲಿ ತಿಳಿಸಿರುವ ಯಾವುದೇ ಸ್ಮಾರ್ಟ್‌ಫೋನ್ ಖರೀದಿಸಿದರೂ ಅದರ ಬೆಲೆ ಶೇ.80ರಷ್ಟು ಬೈಬ್ಯಾಕ್ ಪಡೆಯುವ ಆಫರ್ ಇದಾಗಿದೆ. ಇದರರ್ಥ ಫ್ಲಿಪ್‌ಕಾರ್ಟ್‌ನಲ್ಲಿ 70 ಸಾವಿರ ಬೆಲೆಯ ಗೂಗಲ್ ಪಿಕ್ಸೆಲ್ 2 ಸ್ಮಾರ್ಟ್‌ಫೋನ್ ಖರೀದಿಸಿದರೆ ಸುಮಾರು 59,000 ಮರುಖರೀದಿಯ ಮೌಲ್ಯವನ್ನು ಒದಗಿಸುತ್ತಿದೆ.

ಅಷ್ಟಕ್ಕೂ ಬೈಬ್ಯಾಕ್ ಎಂದರೇನು?
10,999 ರೂ.ಗೆ ಗೂಗಲ್ ಪಿಕ್ಸೆಲ್ 2 ಖರೀದಿಸಿ ಎಂದು ಜಾಹಿರಾತು ನೀಡಿರುವುದು ಬಹುತಕರಿಗೆ ಕನ್‌ಫ್ಯೂಸ್ ಆಗಿದೆ. ಹಾಗಾಗಿ, ಇದು ನಿಮಗೆ ತಿಳಿದಿರಲಿ. ಒಂದು ಸ್ಮಾರ್ಟ್‌ಫೋನ್ ಅನ್ನು ಖರೀದಿಸಿದ ನಂತರ ಒಂದು ಸಮಯದೊಳಗೆ ಅದನ್ನು ವಾಪಸ್ ಮಾಡಿದರೆ ಅದಕ್ಕೆ ವಾಪಸ್ ನೀಡುವ ಮರುಖರೀದಿಯ ಹಣಕ್ಕೆ ಬೈ ಬ್ಯಾಕ್ ಆಫರ್ ಎಂದು ಕರೆಯಲಾಗುತ್ತದೆ.

10,999 ರೂ.ಗೆ ಗೂಗಲ್ ಪಿಕ್ಸೆಲ್ 2?
ಫ್ಲಿಪ್‌ಕಾರ್ಟ್ ತನ್ನ 'ಸೂಪರ್ ವ್ಯಾಲ್ಯೂ ವೀಕ್' ಸೇಲ್‌ನಲ್ಲಿ ಜಾಹಿರಾತು ನೀಡಿರುವಂತೆ 10,999 ರೂಪಾಯಿಗೆ ಗೂಗಲ್ ಪಿಕ್ಸೆಲ್ 2 ಲಭ್ಯವಿದೆ. 70 ಸಾವಿರ ಬೆಲೆಯ ಈ ಫೋನ್ ಮೇಲೆ8 ಸಾವಿರ ಫ್ಲಾಟ್ ಡಿಸ್ಕೌಂಟ್ ಮತ್ತು ಹೆಚ್‌ಡಿಎಫ್‌ಸಿ ಬಳಕೆದಾರರಿಗೆ 8000 ಡಿಸ್ಕೌಂಟ್ಸ್ ಹಾಗೂ 8 ತಿಂಗಳ ಅವಧಿಗೆ 42 ಸಾವಿರ ಬೈ ಬ್ಯಾಕ್ ಅಫರ್ ಅನ್ನು ಘೋಷಿಸಿದೆ.

ಪೋನ್ ಪ್ರಿಯರಿಗೆ ಬೆಸ್ಟ್ ಆಫರ್!
ಫ್ಲಿಪಾಕಾರ್ಟ್ ಘೋಷಿಸಿಕೊಂಡಿರುವಂತೆ ಗೂಗಲ್ ಪಿಕ್ಸೆಲ್ 2 ಫೋನಿನ ವ್ಯಾಲ್ಯೂ 10,999 ರೂ. ಆಗಲಿದೆ. ನೀವು ಈ ಫೋನಿಗೆ 52 ಸಾವಿರ ರೂಪಾಯಿ ಹಣ ಪಾವತಿಸಿ ಖರೀದಿಸಬೇಕಾಗುತ್ತದೆ. ನಂತರ 8 ತಿಂಗಳ ಒಳಗಾಗಿ ಫೋನ್ ವಾಪಸ್ ಮಾಡಿದರೆ 42 ಸಾವಿರ ಹಣವನ್ನು ಫ್ಲಿಪ್‌ಕಾರ್ಟ್ ನಿಮಗೆ ಭರಿಸಲಿದೆ. ಹಾಗಾಗಿ, ಫೋನ್ ಅನ್ನು ಬದಲಾಯಿಸುತ್ತಿರುವವರಿಗೆ ಇದು ಬೆಸ್ಟ್ ಆಫರ್ ಆಗಿದೆ.

ಯಾವ ಯಾವ ಫೋನ್‌ಗಳ ಮೇಲೆ ಆಫರ್?
ಪಿಕ್ಸೆಲ್ 2 ಮತ್ತು ಮೋಟೋ ಎಕ್ಸ್ 4 ಜೊತೆಗೆ ಹಲವು ಫೋನ್‌ಗಳಿಗೆ ಮರುಖರೀದಿಯ ಗ್ಯಾರಂಟಿಯನ್ನು ಫ್ಲಿಪ್‌ಕಾರ್ಟ್ ನೀಡುತ್ತಿದೆ. ಮೋಟೊ ಜಿ 6 ಪ್ಲೇ 5100 ರೂ., ಐಪ್ಯಾಡ್ ಎಕ್ಸ್ 40,915 ರೂ, ಮೋಟೊ Z2 ಫೋರ್ಸ್ 24,000 ರೂ, ರೆಡ್ಮಿ ನೋಟ್ 5 5,600 ರೂ ಸ್ಮಾರ್ಟ್‌ಪೋನ್‌ಗಳು ಮರುಖರೀದಿಯೊಂದಿಗೆ ಈ ಆಫರ್‌ನಲ್ಲಿ ಲಭ್ಯವಿದೆ.

ಫೋನ್ ಖರೀದಿಸಲು ಎಚ್ಚರಿಕೆ ಮುಖ್ಯ!
ಸೂಪರ್ ವ್ಯಾಲ್ಯೂ ವೀಕ್' ಸೇಲ್‌ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವುದಕ್ಕಿಂತ ಮುನ್ನ ಎಚ್ಚರಿಕೆಯನ್ನು ವಹಿಸಬೇಕಾಗಿದೆ. ಇಲ್ಲಿ ನೀವು ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಫ್ಲಿಪ್‌ಕಾರ್ಟ್ ಮರುಖರೀದಿಯ ಖಾತರಿ ನೀತಿ ಏನು? ಮರುಖರೀದಿಯ ಗ್ಯಾರಂಟಿ ಏನು ಎಂಬುದನ್ನು ತಿಳಿಯುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದಲ್ಲಿ ಬೈಬ್ಯಾಕ್ ಹಣ ನಿಮಗೆ ಸಿಗದೇ ಇರಬಹುದು.


Click it and Unblock the Notifications








