ಫ್ಲಿಪ್ ಕಾರ್ಟ್ ಸೂಪರ್ ವ್ಯಾಲ್ಯೂ ವೀಕ್: ಅಚ್ಚರಿ ಬೆಲೆಗೆ‌ ಸ್ಮಾರ್ಟ್ ಫೋನ್

|

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಗೂಗಲ್ ಬಿಡುಗಡೆ ಮಾಡಿರುವ ಪಿಕ್ಸಲ್ 2 ಸ್ಮಾರ್ಟ್ ಫೋನ್ ಅತೀ ಕಡಿಮೆ ಬೆಲೆಗೆ ಫ್ಲಿಪ್ ಕಾರ್ಟ್ ನಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ. ಈಗಾಗಲೇ ಹಲವು ಸ್ಮಾರ್ಟ್ ಫೋನ್ ಗಳ ಮೇಲೆ ಬೊಂಬಾಟ್ ಆಫರ್ ಗಳನ್ನು ಲಾಂಚ್ ಮಾಡಿರುವ ಫ್ಲಿಪ್ ಕಾರ್ಟ್ ಪಿಕ್ಸಲ್ 2 ಸ್ಮಾರ್ಟ್ ಫೋನ್ ಅನ್ನು ಎಫೆಕ್ಟ್ ಟಿವ್ ಆಗಿ ರೂ.10,999 ಕ್ಕೆ ಮಾರಾಟ ಮಾಡುತ್ತಿದೆ ಎನ್ನಲಾಗಿದೆ.

ಫ್ಲಿಪ್ ಕಾರ್ಟ್ ಸೂಪರ್ ವ್ಯಾಲ್ಯೂ ವೀಕ್: ಅಚ್ಚರಿ ಬೆಲೆಗೆ‌ ಸ್ಮಾರ್ಟ್ ಫೋನ್

ಈ ಹಿನ್ನಲೆಯಲ್ಲಿ ನೀವು ಫ್ಲಿಪ್ ಕಾರ್ಟ್ ಸೂಪರ್ ವ್ಯಾಲ್ಯೂ ವೀಕ್ ನಲ್ಲಿ ರೂ.10,999ಕ್ಕೆ ಕೊಂಡುಕೊಳ್ಳುವುದು ಹೇಗೆ ಎಂಬುದನ್ನು ನಿಮಗೆ ತಿಳಿಸುವ ಪ್ರಯತ್ನವು ಇದಾಗಿದೆ. ಇದರಿಂದಾಗಿ ನೀವು ಅತೀ ಕಡಿಮೆ ಬೆಲೆಗೆ ಗೂಗಲ್ ಪಿಕ್ಸಲ್ 2 ಸ್ಮಾರ್ಟ್ ಫೋನ್ ಅನ್ನು ಪಡೆದುಕೊಳ್ಳಬಹುದಾಗಿದ್ದು, ಇದರೊಂದಿಗೆ ಇನ್ನು ಹಲವು ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿಯೂ ವ್ಯತ್ಯಾಸವನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಇಂದಿನ ಲೇಖನವು ನಿಮಗೆ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಲಿದೆ.

ಜೂನ್ 18 ರಿಂದ 24ರ ವರೆಗೆ:

ಜೂನ್ 18 ರಿಂದ 24ರ ವರೆಗೆ:

ಗೂಗಲ್ ಪಿಕ್ಸಲ್ 2 ಸ್ಮಾರ್ಟ್ ಫೋನ್ ಮಾರಾಟವಾಗಲಿರುವ ಫ್ಲಿಪ್ ಕಾರ್ಟ್ ಆರಂಭಿಸಿರುವ ಸೂಪರ್ ವ್ಯಾಲ್ಯೂ ವೀಕ್ 7 ದಿನಗಳ ಕಾಲ ಜಾರಿಯಲ್ಲಿರಲಿದ್ದು, ಸ್ಮಾರ್ಟ್ ಫೋನ್ ಕೊಳ್ಳುವವರಿಗೆ ಬೊಂಬಾಟ್ ಆಫರ್ ಗಳನ್ನು ನೀಡಲಿದೆ. ಐಫೋನ್ ಗಳು, ಶಿಯೋಮಿ ಫೋನ್ ಗಳು ಈ ಸೇಲ್ ನಲ್ಲಿ ಅತೀ ಕಡಿಮೆ ಬೆಲೆಗೆ ಮಾರಾಟವಾಗಲಿದೆ.

ರೂ.70000ದ ಫೋನ್:

ರೂ.70000ದ ಫೋನ್:

ಗೂಗಲ್ ಪಿಕ್ಸಲ್ 2 ಸ್ಮಾರ್ಟ್ ಫೋನ್ ರೂ.70 ಸಾವಿರಕ್ಕೆ ಮಾರಾಟವಾಗುತ್ತಿದ್ದು, ಫ್ಲಿಪ್ ಕಾರ್ಟಿನಲ್ಲಿ ನೀವು ಈ ಸ್ಮಾರ್ಟ್ ಫೋನ್ ಅನ್ನು ರೂ.10,999ಕ್ಕೆ ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ಬೈ ಬ್ಯಾಕ್ ಗ್ಯಾರೆಂಟಿಯನ್ನು ಫ್ಲಿಪ್ ಕಾರ್ಟ್ ನೀಡಲಿದೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಸಂಪೂರ್ಣ ಮಾಹಿತಿಯೂ ಮುಂದಿನಂತೆ ಇದೆ.

ರೂ.42000ವರೆಗೆ ಎಕ್ಸ್ ಚೇಂಜ್ ಆಫರ್:

ರೂ.42000ವರೆಗೆ ಎಕ್ಸ್ ಚೇಂಜ್ ಆಫರ್:

ರೂ.70000ಕ್ಕೆ ಮಾರಾಟವಾಗಲಿರುವ ಗೂಗಲ್ ಪಿಕ್ಸಲ್ 2 ಸ್ಮಾರ್ಟ್ ಫೋನ್ ಮೇಲೆ ಫ್ಲಿಪ್ ಕಾರ್ಟ್ ರೂ.42000ದ ವರೆಗೂ ಎಕ್ಸ್ ಚೇಂಚ್ ಆಫರ್ ನೀಡಿದ್ದು, ನಿಮ್ಮ ಹಳೇಯ ಸ್ಮಾರ್ಟ್ ಫೋನ್ ಅನ್ನು ರೂ.42000ದ ವರೆಗೂ ಫ್ಲಿಪ್ ಕಾರ್ಟ್ ಖರೀದಿ ಮಾಡಿ, ನಿಮಗೆ ಹೊಸ ಫೋನ್ ಅನ್ನು ರೂ.10,999ಕ್ಕೆ ಮಾರಾಟವಾಗಲಿದೆ.

ಇದಲ್ಲದೇ ಡಿಸ್ಕೌಂಟ್:

ಇದಲ್ಲದೇ ಡಿಸ್ಕೌಂಟ್:

ಗೂಗಲ್ ಪಿಕ್ಸಲ್ 2 ಸ್ಮಾರ್ಟ್ ಫೋನ್ ಸ್ಮಾರ್ಟ್ ಫೋನ್ ಮೇಲೆ ರೂ.9001 ರಷ್ಟು ಡಿಸ್ಕೌಂಟ್ ಅನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಗೂಗಲ್ ಪಿಕ್ಸಲ್ 2 ಸ್ಮಾರ್ಟ್ ಫೋನ್ ಬೆಲೆ ರೂ.60,999 ಆಗಲಿದ್ದು, ರೂ.42000 ಎಕ್ಸ್ ಚೇಂಜ್ ಸಹ ಸೇರಿದರೆ ಸ್ಮಾರ್ಟ್ ಫೋನ್ ಬೆಲೆ ಬೆಲೆ ಕಡಿಮೆ ಆಗಲಿದೆ.

ಕ್ಯಾಷ್ ಬ್ಯಾಕ್:

ಕ್ಯಾಷ್ ಬ್ಯಾಕ್:

ಇದರೊಂದಿಗೆ ರೂ.8000ಗಳಷ್ಟು ಕ್ಯಾಷ್ ಬ್ಯಾಕ್ ಆಫರ್ ನೀಡಿರುವ ಫ್ಲಿಪ್ ಕಾರ್ಟ್, HDFC ಕಾರ್ಡುದಾರರಿಗೆ ಈ ಆಫರ್ ಲಭ್ಯವಿದೆ ಎನ್ನಲಾಗಿದೆ. ಈ ಮೂರು ಆಫರ್ ಗಳನ್ನು ಒಟ್ಟಾಗಿ ಜೋಡಿಸಿದ ಸಂದರ್ಭದಲ್ಲಿ ರೂ.10,999ಕ್ಕೆ ಗೂಗಲ್ ಪಿಕ್ಸಲ್ 2 ಸ್ಮಾರ್ಟ್ ಫೋನ್ ಕೊಳ್ಳಬಹುದಾಗಿದೆ.

Best Mobiles in India

English summary
Google pixel 2 available at effective price of Rs 10,999

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X