ಗೂಗಲ್ ಪಿಕ್ಸೆಲ್ 2 ಆಗಲಿದೆ ಸ್ನ್ಯಾಪ್ಡ್ರ್ಯಾಗನ್ 836 ಬಳಸುವ ಮೊದಲ ಡಿವೈಸ್

ಕ್ವಾಲ್ಕಮ್ ಸ್ನ್ಯಾಪ್ಡ್ರ್ಯಾಗನ್ 836 ಕ್ವಾಲ್ಕಮ್ ಸ್ನ್ಯಾಪ್ಡ್ರ್ಯಾಗನ್ 835 SoCಯ ಮುಂದುವರೆದ ಆವೃತ್ತಿ ಆಗಿದೆ. ಸ್ನ್ಯಾಪ್ಡ್ರ್ಯಾಗನ್ 836 SoC ಬಳಸುವ ಮೊದಲ ಡಿವೈಸ್ ಗೂಗಲ್ ಪಿಕ್ಸೆಲ್ 2 ಆಗಲಿದೆ.

By Tejaswini P G
|

ಕ್ವಾಲ್ಕಮ್ ಸ್ನ್ಯಾಪ್ಡ್ರ್ಯಾಗನ್ 836 SoC ಕುರಿತು ಇತ್ತೀಚಿಗಿನ ದಿನಗಳಲ್ಲಿ ತುಂಬ ಮಾತು ಕೇಳಿ ಬರುತ್ತಿದೆ.ಈ ವರ್ಷ ಬಿಡುಗಡೆಯಾದ ಬಹುತೇಕ ಫ್ಲ್ಯಾಗ್ಶಿಪ್ ಮೊಬೈಲ್ಗಳಲ್ಲಿ ಬಳಸಿರುವ ಕ್ವಾಲ್ಕಮ್ ಸ್ನ್ಯಾಪ್ಡ್ರ್ಯಾಗನ್ 835 SoCಯ ಮುಂದುವರೆದ ಆವೃತ್ತಿ ಇದಾಗಿದೆ.

ಗೂಗಲ್ ಪಿಕ್ಸೆಲ್ 2 ಆಗಲಿದೆ ಸ್ನ್ಯಾಪ್ಡ್ರ್ಯಾಗನ್ 836 ಬಳಸುವ ಮೊದಲ ಡಿವೈಸ್

ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಸ್ನ್ಯಾಪ್ಡ್ರ್ಯಾಗನ್ 835ರಲ್ಲಿ ಬಳಸಿರುವ CPU ಹಾಗೂ GPUಗಳನ್ನೇ ಇಲ್ಲಿಯೂ ಬಳಸಲಾಗಿದೆ. ಆದರೆ ಸ್ನ್ಯಾಪ್ಡ್ರ್ಯಾಗನ್ 836ರ ವೇಗ ಸ್ನ್ಯಾಪ್ಡ್ರ್ಯಾಗನ್ 835ಕ್ಕಿಂತ ಹಚ್ಚಿದ್ದು,ಇದೇ ಕಾರಣದಿಂದ ಸ್ನ್ಯಾಪ್ಡ್ರ್ಯಾಗನ್ 836 ಚಿಪ್ಸೆಟ್ ಸ್ನ್ಯಾಪ್ಡ್ರ್ಯಾಗನ್ 835ಕ್ಕಿಂತ ಶಕ್ತಿಶಾಲಿ ಎನಿಸಿದೆ.

ಕೆಲ ಸಮಯದ ಹಿಂದೆ ಆಗಸ್ಟ್ 23ರಂದು ಬಿಡುಗಡೆಯಾಗಲಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಈ ಚಿಪ್ಸೆಟ್ ಅನ್ನು ಬಳಸುವ ಮೊದಲ ಮೊಬೈಲ್ ಆಗಲಿದೆ ಎಂಬ ಮಾತು ಕೇಳಿಬರುತ್ತಿತ್ತು. ಆದರೆ 'ಫುಡ್ಝಿಲ್ಲಾ' ವೆಬ್ಸೈಟ್ ನ ವರದಿಯೊಂದರ ಪ್ರಕಾರ ಸ್ನ್ಯಾಪ್ಡ್ರ್ಯಾಗನ್ 836 SoC ಬಳಸುವ ಮೊದಲ ಡಿವೈಸ್ ಗೂಗಲ್ ಪಿಕ್ಸೆಲ್ 2 ಆಗಲಿದೆ.

ಕಳೆದ ವರ್ಷದಂತೆ ಈ ವರ್ಷದ ಉತ್ತರಾರ್ಧದಲ್ಲಿ ಬಿಡುಗಡೆಯಾಗುವ ಹೊಸ ಫ್ಲ್ಯಾಗ್ಶಿಪ್ ಮೊಬೈಲ್ಗಳು ಸ್ನ್ಯಾಪ್ಡ್ರ್ಯಾಗನ್ 836 ಅನ್ನು ಬಳಸುವ ಸಾಧ್ಯತೆಯಿದೆ.2016ರಲ್ಲಿ ಸ್ನ್ಯಾಪ್ಡ್ರ್ಯಾಗನ್ 821 ಅನ್ನು ಸ್ನ್ಯಾಪ್ಡ್ರ್ಯಾಗನ್ 820ರ ಸುಧಾರಿತ ಆವೃತ್ತಿಯಾಗಿ ಬಿಡುಗಡೆ ಮಾಡಿದ್ದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು.

ಕ್ಸಿಯೋಮಿ ಮಿ ಮಿಕ್ಸ್, ಮಿ ನೋಟ್ 3, ಮಿ 6ಸ್ ಮೊದಲಾದ ಮೊಬೈಲ್ಗಳು ಈ ಪ್ಲ್ಯಾಟ್ಫಾರ್ಮ್ ಅನ್ನು ಬಳಸುವ ಸಾಧ್ಯತೆಯಿದೆ.ಒನ್ ಪ್ಲಸ್ ಕಂಪೆನಿಯು ಒನ್ ಪ್ಲಸ್ 3ಟಿ ಗೆ ಮಾಡಿದಂತೆ ಒನ್ ಪ್ಲಸ್ 5 ಗೂ ಹೊಸ ಚಿಪ್ಸೆಟ್ ಬಳಸಿ ಹೊಸ ಆವೃತ್ತಿಯೊಂದನ್ನು ಹೊರತರುವ ಸಾಧ್ಯತೆಯಿದೆ. ಆದರೆ ಈ ಕುರಿತು ಯಾವುದೇ ಮಾಹಿತಿ ಮಾರುಕಟ್ಟೆಯಲ್ಲಿ ಕೇಳಿಬರುತ್ತಿಲ್ಲ.

ಈ ವರ್ಷ ಇನ್ನುಮುಂದೆ ಬರಲಿರುವ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ಗಳಿಗೆ ಸ್ನ್ಯಾಪ್ಡ್ರ್ಯಾಗನ್ 836 ಸೂಕ್ತವಾಗಿದೆ ಎಂಬ ವರದಿಗಳಿದ್ದರೂ,ಸ್ನ್ಯಾಪ್ಡ್ರ್ಯಾಗನ್ 836 ಚಿಪ್ಸೆಟ್ನ ಬೆಂಚ್ಮಾರ್ಕ್ ಲಿಸ್ಟಿಂಗ್ ಎಲ್ಲೂ ಕಾಣಸಿಗುತ್ತಿಲ್ಲ. ಆದರೆ ಸ್ನ್ಯಾಪ್ಡ್ರ್ಯಾಗನ್ 840 ಹಾಗೂ 845 SoC ಹಲವಾರು ಬೆಂಚ್ಮಾರ್ಕ್ ಸೈಟ್ಗಳಲ್ಲಿ ಈಗಾಗಲೇ ಕಾಣಸಿಗುತ್ತಿವೆ.ಸ್ನ್ಯಾಪ್ಡ್ರ್ಯಾಗನ್ 840 2018ರ ಬಹುತೇಕ ಫ್ಲ್ಯಾಗ್ಶಿಪ್ ಮೊಬೈಲ್ಗಳಲ್ಲಿ ಬಳಕೆಯಾಗಲಿದೆ ಎಂಬ ಸುದ್ದಿ ಇದೆ. ಹಾಗೆಯೇ ಗ್ಯಾಲೆಕ್ಸಿ 9 ಸ್ನ್ಯಾಪ್ಡ್ರ್ಯಾಗನ್ 840 SoC ಹೊಂದುವ ಮೊದಲ ಮೊಬೈಲ್ ಆಗಲಿದೆ.

Best Mobiles in India

English summary
Google Pixel 2 is likely to be the first device to be powered by the upgraded Qualcomm Snapdragon 836 SoC.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X