ಗೂಗಲ್ ಪಿಕ್ಸಲ್ 2 XL ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯ
ಗೂಗಲ್ ಹೊಸದಾಗಿ ಬಿಡುಗಡೆ ಮಾಡಿರುವ ಪಿಕ್ಸಲ್ 2 XL ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಫ್ಲಿಪ್ ಕಾರ್ಟಿನಲ್ಲಿ ಈ ಫೋನ್ ಎಕ್ಸ್ ಕ್ಲೂಸಿವ್ ಆಗಿ ಸೇಲ್ ಆಗುತ್ತಿದೆ. ಇದೇ ತಿಂಗಳ ಆರಂಭದಲ್ಲಿ ಪಿಕ್ಸಲ್ 2 ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

64GB ಆವೃತ್ತಿಯ ಪಿಕ್ಸಲ್ 2 XL ಸ್ಮಾರ್ಟ್ ಫೋನ್ ರೂ. 73,000ಕ್ಕೆ ದೊರೆಯುತ್ತಿದ್ದು, ಇದೇ ಮಾದರಿಯಲ್ಲಿ 128GB ಮಾದರಿಯ ಆವೃತ್ತಿಯ ಫೋನ್ ರೂ. 82,000ಕ್ಕೆ ಫ್ಲಿಪ್ ಕಾರ್ಟಿನಲ್ಲಿ ಲಭ್ಯವಿದೆ. ಐಫೋನ್ X ನಂತರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿಯಾದ ಎರಡನೇ ಫೋನ್ ಎನ್ನುವ ಖ್ಯಾತಿಗೆ ಪಿಕ್ಸಲ್ 2 XL ಸ್ಮಾರ್ಟ್ ಫೋನ್ ಪಾತ್ರವಾಗಿದೆ.
ಪಿಕ್ಸಲ್ 2 XL ಸ್ಮಾರ್ಟ್ ಫೋನ್ ಬ್ಲಾಕ್ ಮತ್ತು ಬ್ಲಾಕ್ ಆಂಡ್ ವೈಟ್ ಬಣ್ಣಗಳಲ್ಲಿ ಲಾಂಚ್ ಆಗಿದ್ದು, ಆದರೆ ಫ್ಲಿಪ್ ಕಾರ್ಟ್ ಬ್ಲಾಕ್ ಆವೃತ್ತಿಯನ್ನು ಮಾತ್ರವೇ ಮಾರಾಟ ಮಾಡುತ್ತಿದೆ. ಇದಲ್ಲದೇ ಈ ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ಆಫರ್ ಗಳನ್ನು ಘೋಷಣೆ ಮಾಡಿದೆ ಎನ್ನಲಾಗಿದೆ.
ಗ್ರಾಹಕರು ತಮ್ಮ ಹಳೇಯ ಫೋನ್ ಮೇಲೆ ರೂ. 20,000 ದ ವರೆಗೆ ಕಡಿತವನ್ನು ಪಡೆಯಬಹುದು. ಎಕ್ಸ್ ಚೇಂಜ್ ಪಡೆದರೆ ಹೆಚ್ಚವರಿ ರೂ.7100 ಕಡಿತವನ್ನು ನೀಡಲಾಗುವುದು. ಇದಲ್ಲದೇ HDFC ಕಾರ್ಡ್ ಬಳಕೆದಾರರಿಗೆ ರೂ.8000 ಕ್ಯಾಷ್ ಬ್ಯಾಕ್ ಸಹ ದೊರೆಯಲಿದೆ. ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ 5% ಕ್ಯಾಷ್ ಬ್ಯಾಕ್ ದೊರೆಯಲಿದೆ.


Click it and Unblock the Notifications








