ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ XL 3 ಸ್ಮಾರ್ಟ್ ಫೋನ್ ಮಾಹಿತಿ ಲೀಕ್...!
ಈಗಾಗಲೇ ಜಾಗತಿಕ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ನೋಚ್ ಡಿಸ್ ಪ್ಲೇಯನ್ನು ಹೊಂದಿರುವ ಸ್ಮಾರ್ಟ್ ಫೋನ್ ಗಳ ಸಾಲಿಗೆ ಮತ್ತೊಂದು ಫೋನ್ ಸೇರ್ಪಡೆಯಾಗುತ್ತಿದೆ. ಇದೇ ಮಾದರಿಯಲ್ಲಿ ಗೂಗಲ್ ಬಿಡುಗಡೆ ಮಾಡಿರುವ ಪಿಕ್ಸಲ್ ಸ್ಮಾರ್ಟ್ ಫೋನ್ ಗಳ ಮುಂದಿನ ವೃತ್ತಿಯೂ ಬಿಡುಗಡೆಗೆ ಸಿದ್ದವಾಗಿದ್ದು, ಗೂಗಲ್ ಮತ್ತೊಂದು ಸರಣಿಯ ಸ್ಮಾರ್ಟ್ ಫೋನ್ ಗಳನ್ನ ಲಾಂಚ್ ಮಾಡುವ ಸನಿಹದಲ್ಲಿದೆ ಎನ್ನಲಾಗಿದೆ.

ಈಗಾಗಲೇ ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ XL 3 ಸ್ಮಾರ್ಟ್ ಫೋನ್ ಲಾಂಚ್ ಮಾಡಲು ಮುಂದಾಗಿದ್ದು, ಇವುಗಳ ಫೋಟೋ ಲೀಕ್ ಆಗಿದೆ, ಇದು ಮಾರುಕಟ್ಟೆಯಲ್ಲಿ ಸಂಚಲನವನ್ನು ಮೂಡಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಎಲ್ಲಾ ಸ್ಮಾರ್ಟ್ ಫೋನ್ ಗಳ ವಿಶೇಷತೆಯನ್ನು ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ XL 3 ಸ್ಮಾರ್ಟ್ ಫೋನ್ ಗಳು ಹೊಂದಿರಲಿದೆ ಎನ್ನಲಾಗಿದೆ.
19:9 ಡಿಸ್ ಪ್ಲೇ:
ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ XL 3 ಸ್ಮಾರ್ಟ್ ಫೋನಿನಲ್ಲಿ ಸದ್ಯ ಟ್ರೆಂಡ್ ಆಗಿರುವ 19:9 ಅನುಪಾತದ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಸಾಮಾನ್ಯ ಡಿಸ್ ಪ್ಲೇಗಿಂತಲೂ ಹೆಚ್ಚು ದೊಡ್ಡದಾಗಿದ್ದು, ಮುಂಭಾಗದಲ್ಲಿ ಐಫೋನ್ X ಮಾದರಿಯಲ್ಲಿ ನೋಚ್ ಅನ್ನು ನೀಡಲಾಗಿದೆ. ಇದರಿಂದಾಗಿ ಸ್ಮಾರ್ಟ್ ಫೋನ್ ಇನ್ನಷ್ಟು ಸುಂದರವಾಗಿ ಕಾಣಿಸುತ್ತಿದೆ.
ವೇಗದ ಪ್ರೋಸೆಸರ್:
ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ XL 3 ಸ್ಮಾರ್ಟ್ ಫೋನಿನಲ್ಲಿ ವೇಗದ ಪ್ರೋಸೆಸರ್ ಅನ್ನು ಅಳವಡಿಸಲಾಗಿದ್ದು, ಸ್ನಾಪ್ ಡ್ರಾಗನ್ 845 ಅನ್ನು ಕಾಣಬಹುದಾಗಿದೆ. 4 GB ಮತ್ತು 6 GB RAM ಆವೃತ್ತಿಯಲ್ಲಿ ಈ ಸ್ಮಾರ್ಟ್ ಫೋನ್ ಮಾರಾಟವಾಗಲಿದೆ. ಇದಲ್ಲದೇ 128 GB ,ಮತ್ತು 256 GB ಇಂಟರ್ನಲ್ ಮೆಮೊರಿಯನ್ನು ಅಳವಡಿಸಲಾಗಿದೆ.
ಸಿಂಗಲ್ ಕ್ಯಾಮೆರಾ:
ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಟ್ ಆಗಿರುವಂತಹ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಫಾಲೋ ಮಾಡದ ಗೂಗಲ್ , ತನ್ನ ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ XL 3 ಸ್ಮಾರ್ಟ್ ಫೋನಿನಲ್ಲಿ ಸಿಂಗಲ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ನೀಡಿದೆ. ಇದಲ್ಲದೇ ಡ್ಯುಯಲ್ ಟೋನ್ LED ಪ್ಲಾಷ್ ಲೈಟ್ ಅನ್ನು ನೀಡಿದೆ.
ವೈರ್ ಲೈಸ್ ಚಾರ್ಜಿಂಗ್:
ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರವೇ ಕಾಣಸಿಗುವಂತಹ ವೈರ್ ಲೈಸ್ ಚಾರ್ಜಿಂಗ್ ಆಯ್ಕೆಯನ್ನು ಮೊದಲ ಬಾರಿಗೆ ಗೂಗಲ್ ತನ್ನ ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ XL 3 ಸ್ಮಾರ್ಟ್ ಫೋನಿನಲ್ಲಿ ಅಳವಡಿಸಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಹೊಸ ಅವಕಾಶ ದೊರೆಯಲಿದೆ.
ಅಕ್ಟೋಬರ್ ನಲ್ಲಿ ಲಾಂಚ್:
ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ XL 3 ಸ್ಮಾರ್ಟ್ ಫೋನ್ ಈಗಾಗಲೇ ನಿರ್ಮಾಣದ ಹಂತದಲ್ಲಿದೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಗೂಗಲ್ ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ XL 3 ಸ್ಮಾರ್ಟ್ ಫೋನ್ ಲಾಂಚಿಗೆ ಮೂಹುರ್ತ ಫಿಕ್ಸ್ ಮಾಡಿಕೊಂಡಿದ್ದು, ಆಕ್ಟೋಬರ್ 4 ರಂದು ಲಾಂಚ್ ಮಾಡುವ ಸಾಧ್ಯತೆ ಹೆಚ್ಚಾಗಿದೆ.


Click it and Unblock the Notifications








