Home
ಸುದ್ದಿಜಾಲ

ಅಕ್ಟೋಬರ್ ನಲ್ಲಿ ಬಿಡುಗಡೆಗೊಳ್ಳಲಿದೆ ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ 3XL

By Gizbot Bureau

ಗೂಗಲ್ ಕಂಪೆನಿಯು ಮುಂದಿನ ಜನಾಂಗಕ್ಕೆ ಹೊಂದುವಂತ ಪಿಕ್ಸಲ್ ಲೈನ್ ಅಪ್ ಸ್ಮಾರ್ಟ್ ಫೋನ್ ಗಳ ತಯಾರಿಕೆಗೆ ಹೆಚ್ಚು ಒತ್ತು ನೀಡುತ್ತಿದೆ. ದಿನದಿಂದ ದಿನಕ್ಕೆ ಜನರ ನಿರೀಕ್ಷೆಗಳೂ ಹೆಚ್ಚುತ್ತಿದೆ ಮತ್ತು ಫೋನಿನ ಬಗ್ಗೆ ಜನರಿಗಿರುವ ಆಸೆಗಳು ಅತಿಯಾಗುತ್ತಿದೆ. ಒಂದಕ್ಕಿಂತ ಒಂದು ಭಿನ್ನವಾಗಿರುವ ಫೋನ್ ಗಳನ್ನು ಜನರು ಆಯ್ಕೆಮಾಡಿಕೊಳ್ಳಲು ಇಚ್ಛಿಸುತ್ತಿದ್ದಾರೆ ಮತ್ತು ಅದಕ್ಕೆ ತಕ್ಕಂತೆ ಕಂಪೆನಿಗಳೂ ಕೂಡ ಜಿದ್ದಿಗೆ ಬಿದ್ದವರಂತೆ ತಮ್ಮ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದ್ದಾರೆ.

ಅಕ್ಟೋಬರ್ ನಲ್ಲಿ ಬಿಡುಗಡೆಗೊಳ್ಳಲಿದೆ ಗೂಗಲ್ ಪಿಕ್ಸಲ್ 3 ಮತ್ತು ಪಿಕ್ಸಲ್ 3XL


ಇದರ ಪ್ರಯತ್ನ ಎಂಬಂತೆ, ಒಂದು ವರದಿಯ ಪ್ರಕಾರ ಈ ವರ್ಷದ ಅಕ್ಟೋಬರ್ ನಲ್ಲಿ ಗೂಗಲ್ ನ ಪಿಕ್ಸಲ್ 3 ಮತ್ತು ಪಿಕ್ಸಲ್ 3XL ಫೋನ್ ಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿವೆ. ಬ್ಲೂಮ್ ಬರ್ಗ್ ವರದಿಯಂತೆ ಗೂಗಲ್ ಕಂಪೆನಿಯು ಈ ವರ್ಷ ಎರಡೇ ಫೋನ್ ಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದ್ದು, ಆದರೆ ಆಪಲ್ 3 ಫೋನ್ ಗಳನ್ನು ಬಿಡುಗಡೆಗೊಳಿಸಲು ಪ್ಲಾನ್ ಮಾಡಿದೆ. ಹಾಗಂತ ಅವರಿಗೆ ಕಾಂಪಿಟೇಷನ್ ಕೊಡುವ ಉದ್ದೇಶ ಗೂಗಲ್ ಗೆ ಇಲ್ಲವಂತೆ. ದೊಡ್ಡ ಸ್ಕ್ರೀನಿನ ಪಿಕ್ಸಲ್ 3XL ಎಡ್ಜ್-ಟು-ಎಡ್ಜ್ ಪರದೆಯನ್ನು ಹೊಂದಿದೆ. ಐಫೋನ್ ಎಕ್ಸ್ ಗೆ ಇದು ಕಾಂಪಿಟೇಷನ್ ನೀಡಲೂ ಬಹುದು.

ಸ್ಮಾರ್ಟ್ ಫೋನಿನ ಬದಿಯಲ್ಲಿ ಕಿರಿದಾದ ಅಂಚು ಇದೆ ಆದರೆ ಕೆಳಭಾಗದಲ್ಲಿ ದಪ್ಪವಾದ ಅಂಚಿನ ಗಲ್ಲ ಹಾಗೆಯೇ ಇರುತ್ತೆ. ಇತ್ತೀಚೆಗೆ ಬಿಡುಗಡೆಗೊಂಡ ಐಫೋನ್ ಎಕ್ಸ್ ನಂತೆ ಪಿಕ್ಸಲ್ 3 ಎಕ್ಸ್ ಎಲ್ ನಲ್ಲೂ ನಾಚ್ ಇರುತ್ತೆ.ಆದರೆ ಪಿಕ್ಸಲ್ 3 ಯಲ್ಲಿ ನಾಚ್ ಚಿಕ್ಕದಾಗಿರುತ್ತೆ ಮತ್ತು ಅದನ್ನು ಈಗಲೇ ಗುರುತಿಸಬಹುದಾಗಿದೆ. ಆಂಡ್ರಾಯ್ಡ್ ಪಿ ಡೆವಲಪರ್ ಮುನ್ನೋಟ ಕಾರ್ಯಕ್ರಮದಲ್ಲಿ ಮುಂಬರುವ ಡಿವೈಸ್ ಗಳಲ್ಲಿ ನಾಚ್ ಹೇಗಿರಬೇಕು ಎಂಬ ಬಗ್ಗೆ ಸಾಕಷ್ಟು ಉಪಾಯ ಗಳನ್ನು ಮಾಡಿರುವ ಬಗ್ಗೆ ಕಂಪೆನಿ ಗುಟ್ಟು ಬಿಟ್ಟುಕೊಟ್ಟಿದೆ

ಆಪಲ್ ಲಾಂಚ್ ಆದ ಒಂದು ತಿಂಗಳ ನಂತರ ಗೂಗಲ್ ಪಿಕ್ಸಲ್ ಫೋನ್ ಕೂಡ ಮಾರುಕಟ್ಟೆಗೆ ಬರಲಿದೆ. ಯುಎಸ್ ನ ವೆರಿಝಾನ್ ನಲ್ಲಿ ಡಿವೈಸ್ ಮೊದಲು ಬಿಡಗಡೆಗೊಳ್ಳಲಿದ್ದು, ಫಾಕ್ಸ್ ಕಾನ್ ಕಂಪೆನಿಯ ಜೊತೆ ಫೋನ್ ಗಳ ತಯಾರಿಕೆಗಾಗಿ ಕಂಪೆನಿಯು ಸದ್ಯ ಮಾತುಕತೆಯಲ್ಲಿ ತೊಡಗಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಬ್ಲೂಮ್ ಬರ್ಗ್ ವರದಿ ಹೇಳುವಂತೆ ಗೂಗಲ್ ಡುಯಲ್ ಕ್ಯಾಮರಾ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಕೇವಲ ಸಿಂಗಲ್ ಕ್ಯಾಮರಾಗೆ ಅಂಟಿಕೊಂಡಿದೆ. ಆದರೆ ಡುಯಲ್ ಸೆಲ್ಫೀ ಕ್ಯಾಮರಾವನ್ನು ಪಿಕ್ಸಲ್ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸಲು ಕಂಪೆನಿ ಚಿಂತನೆ ನಡೆಸಿದೆ.

Best Mobiles in India

English summary
Google Pixel 3 XL is believed to feature an edge-to-edge display with a thicker bottom bezel. It is said that the device will have a notch on top the display just like the iPhone X and dual selfie cameras housed inside the notch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+