Home
ಸುದ್ದಿಜಾಲ

ಗೂಗಲ್‌ ಪಿಕ್ಸೆಲ್‌ 5 ಸ್ಮಾರ್ಟ್‌ಫೋನ್‌ ಫೀಚರ್ಸ್‌ ಆನ್‌ಲೈನ್‌ನಲ್ಲಿ ಬಹಿರಂಗ!

ಗೂಗಲ್ ಪಿಕ್ಸೆಲ್ 5 ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ವರದಿ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಪಿಕ್ಸೆಲ್ 4A 5G ಮಾದರಿಯೊಂದಿಗೆ ಬಿಡುಗಡೆಯಾಗುವುದು ಖಚಿತವಾಗಿದೆ. ಸದ್ಯ ಗೂಗಲ್ ಪಿಕ್ಸೆಲ್ 4A ಸ್ಮಾರ್ಟ್‌ಫೋನ್‌ನ ವಿಶೇಷತೆ ಏನು ಅನ್ನೊದು ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಇನ್ನು ಈ ಫೋನ್‌ ಅಂಚುಗಳು ಮತ್ತು ಬಟನ್ ಪ್ಲೇಸ್‌ಮೆಂಟ್ ವಿಶೇಷತೆಯ ಬಗ್ಗೆ ಸೋರಿಕಯಾಗಿದ್ದು, ಉತ್ತಮ ವಿನ್ಯಾಶವನ್ನ ಹೊಂದಿದೆ. ಆದರೆ ಇದರ ಹೊರತಾಗಿ, ಪಿಕ್ಸೆಲ್ 5 ಸ್ಮಾರ್ಟ್‌ಫೋನ್‌ ಕೂಡ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎನ್ನಲಾಗಿದೆ.

ಗೂಗಲ್‌

ಹೌದು, ಟೆಕ್‌ ದೈತ್ಯ ಎನಿಸಿಕೊಂಡಿರುವ ಗೂಗಲ್‌ ತನ್ನ ಗೂಗಲ್‌ ಪಿಕ್ಸೆಲ್‌ 4A, 5 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಈ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆಯನ್ನ ಹೊಂದಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಇನ್ನು ಯಾವುದೇ ಆಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದರೂ ಇವುಗಳ ವಿನ್ಯಾಸ ಹಾಗೂ ವಿಶೇಷ ಫೀಚರ್ಸ್‌ಳ ಬಗ್ಗೆ ಮಾಹಿತಿ ಸೋರಿಕೆಯಾಗಿದೆ. ಲಭ್ಯ ಮಾಹಿತಿ ಪ್ರಕಾರ ಪಿಕ್ಸೆಲ್ 5 ಪಂಚ್ ಹೋಲ್‌ ಡಿಸ್‌ಪ್ಲೇ ಹಾಗೂ ಅಪ್ ಫ್ರಂಟ್ ಮತ್ತು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿರುವ ಸಾದ್ಯತೆ ಇದೆ ಎನ್ನಲಾಗಿದೆ. ಇನ್ನುಳಿದ ವಿಶೇಷತೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಪಿಕ್ಸೆಲ್ 5

ಸದ್ಯ ಬಿಡುಗಡೆಗೆ ಸಿದ್ದವಿರುವ ಪಿಕ್ಸೆಲ್ 5 ಉತ್ತಮ-ಗುಣಮಟ್ಟದ ಫೀಚರ್ಸ್‌ಗಳನ್ನ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ ಆಕರ್ಷಕ ವಿನ್ಯಾಶವನ್ನ ಹೊಂದಿದ್ದು, ಈ ಫೋನ್ ಮೇಲಿನ ಎಡ ಮೂಲೆಯಲ್ಲಿ ಇರಿಸಲಾಗಿರುವ ಕಟೌಟ್‌ನೊಂದಿಗೆ ಪಂಚ್-ಹೋಲ್‌ ಡಿಸ್‌ಪ್ಲೇ ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಪಿಕ್ಸೆಲ್ 5 ಸ್ಮಾರ್ಟ್‌ಫೋನ್‌ 5.7 ರಿಂದ 5.8-ಇಂಚಿನ ಡಿಸ್ಪ್ಲೇಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಪ್ರೊಸೆಸರ್‌

ಇನ್ನು ಪಿಕ್ಸೆಲ್ 5 ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 765G SoC ಪ್ರೊಸೆಸರ್‌ ಹೊಂದಿರಲಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ವರದಿಯಾಗಿದೆ. ಹಾಗೇಯೇ ಪಿಕ್ಸೆಲ್ 5 128GB ಸಂಗ್ರಹ ಸಾಮರ್ಥ್ಯವನ್ನು ಹೊಂದಿರಬಹುದು ಎನ್ನಲಾಗಿದೆ. ಜೊತೆಗೆ ಪಿಕ್ಸೆಲ್ 5 ಡ್ಯುಯಲ್ ರಿಯರ್ ಕ್ಯಾಮೆರಾಗಳೊಂದಿಗೆ ಚದರ ಆಕಾರದ ಮಾಡ್ಯೂಲ್ ಒಳಗೆ ಇಡಲಾಗಿದೆ ಎಂದು ವರದಿಯಾಗಿದೆ. ಈ ಮಾಡ್ಯೂಲ್ ಅನ್ನು ಹಿಂದಿನ ಫಲಕದ ಮೇಲಿನ ಎಡ ಮೂಲೆಯಲ್ಲಿ ಇರಿಸಲಾಗಿದೆ. ಎರಡು ಇಮೇಜ್ ಸೆನ್ಸರ್‌ಗಳು ಫ್ಲ್ಯಾಷ್ ಮತ್ತು ಮತ್ತೊಂದು ಸೆನ್ಸಾರ್‌ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.

ಸ್ಮಾರ್ಟ್‌ಫೋನ್‌

ಅಲ್ಲದೆ ಪಿಕ್ಸೆಲ್ 5 ಸ್ಮಾರ್ಟ್‌ಫೋನ್‌ ರಿಯರ್‌ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಹೊಂದಿರಬಹುದು ಇಲ್ಲವೆ ಅನ್ನೊದ್ನ ಇನ್ನು ಸಹ ಲಭ್ಯವಾಗಿಲ್ಲ. ಆದರೆ ಪಿಕ್ಸೆಲ್ 5 ನಲ್ಲಿ ವಿಶಿಷ್ಟವಾದ ಹೊಳೆಯುವ ಬ್ಯಾಕ್ ಪ್ಯಾನಲ್ ಫಿನಿಶ್ ಸಹ ಇದೆ, ಇದು ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಇರಬಹುದು ಎನ್ನುವ ನಿರೀಕ್ಷೆ ಹುಟ್ಟು ಹಾಕಿದೆ. ಇದಲ್ಲದೆ ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಸ್ಪೀಕರ್ ಗ್ರಿಲ್ಸ್ ಅನ್ನು ಕೆಳ ಅಂಚಿನಲ್ಲಿ ಗುರುತಿಸಲಾಗಿದೆ, ಆದರೆ ಸಿಮ್ ಟ್ರೇ ಸ್ಲಾಟ್ ಡಿವೈಸ್‌ನ ಎಡ ತುದಿಯಲ್ಲಿರುತ್ತದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Pixel 5 is tipped to feature a 5.7 to 5.8-inch display.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+