ಗೂಗಲ್ ಪಿಕ್ಸೆಲ್ 8 ಸರಣಿ ಕ್ಯಾಮೆರಾ ಫೀಚರ್ಸ್ ಬಹಿರಂಗ! ಅಬ್ಬಾ ಏನಿದು ಹೊಸತನ!
ಗೂಗಲ್ ಕಂಪೆನಿಯ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆಯಿದೆ. ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಮತ್ತು ಕ್ಯಾಮೆರಾ ಫೀಚರ್ಸ್‌ಗಳು ತುಂಬಾನೆ ಗಮನಸೆಳೆದಿವೆ. ಸದ್ಯ ಗೂಗಲ್ ಪಿಕ್ಸೆಲ್ 8 ಸರಣಿ ಈ ವರ್ಷದ ಕೊನೆಯಲ್ಲಿ ಎಂಟ್ರಿ ನೀಡುವ ಸಾದ್ಯತೆಯಿದೆ. ಆದರೆ ಮೊದಲ ಬಾರಿಗೆ ಗೂಗಲ್ ಪಿಕ್ಸೆಲ್ 8 ಸರಣಿಯ ಕ್ಯಾಮೆರಾ ಫೀಚರ್ಸ್ ಸೋರಿಕೆಯಾಗಿದೆ.
ಹೌದು, ಗೂಗಲ್ ಪಿಕ್ಸೆಲ್ 8 ಸರಣಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಇದರ ಕ್ಯಾಮೆರಾ ವಿನ್ಯಾಸ ಹಾಗೂ ಫೀಚರ್ಸ್ ಬಗ್ಗೆ ಸಾಕಷ್ಟು ಭರವಸೆಯನ್ನಿಡಲಾಗಿದೆ. ಅದರಂತೆ ಇದೀಗ ಆನ್‌ಲೈನ್‌ನಲ್ಲಿ ಗೂಗಲ್ ಪಿಕ್ಸೆಲ್ 8 ಸರಣಿಯ ಕ್ಯಾಮೆರಾ ವಿವರಗಳು ಬಹಿರಂಗವಾಗಿದೆ. ಇದರ ಆಧಾರದ ಮೇಲೆ ಪಿಕ್ಸೆಲ್ 8 ಸರಣಿ ಕ್ಯಾಮೆರಾಗಳ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಡಲಾಗಿದೆ. ಹಾಗಾದ್ರೆ ಗೂಗಲ್ ಪಿಕ್ಸೆಲ್ 8 ಸರಣಿ ಕ್ಯಾಮೆರಾ ಫೀಚರ್ಸ್ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಪಿಕ್ಸೆಲ್ 8 ಸರಣಿಯಲ್ಲಿ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್‌ಗಳು ಬರಲಿವೆ. ಅದರಂತೆ ಪಿಕ್ಸೆಲ್ 8 ಸರಣಿಯು ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಬರಲಿದೆ. ಇದರಲ್ಲಿ ಈ ಸರಣಿ ಸ್ಮಾರ್ಟ್‌ಫೋನ್‌ಗಳ ಪ್ರಾಥಮಿಕ ಕ್ಯಾಮೆರಾ 50ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ GN2 ಕ್ಯಾಮೆರಾ ಸೆನ್ಸಾರ್ ಹೊಂದಿರಲಿದೆ ಎಂದು ಹೇಳಲಾಗಿದೆ. ಇನ್ನು ಬಿಗ್ ಸೆನ್ಸಾರ್ GN1 ಗಿಂತ 35% ಹೆಚ್ಚು ಬೆಳಕನ್ನು ಸೆರೆಹಿಡಿಯಲು ಸಹಾಯ ಮಾಡಲಿದೆ ಎಂದು ವರದಿಯಾಗಿದೆ. ಇನ್ನು ಪಿಕ್ಸೆಲ್ 8 ಸರಣಿಯಲ್ಲಿನ ಅಲ್ಟ್ರಾ-ವೈಡ್ ಕ್ಯಾಮೆರಾದಲ್ಲಿ ಅನೇಕ ಬದಲಾವಣೆಗಳು ಬರಲಿವೆ ಎಂದು ನಿರೀಕ್ಷಿಸಲಾಗಿದೆ.
ಇನ್ನು ಪಿಕ್ಸೆಲ್ 8 ಪ್ರೊ ಫೋನ್‌ನ ಅಲ್ಟ್ರಾ-ವೈಡ್ ಕ್ಯಾಮೆರಾ ಹೊಸತನದಿಂದ ಕೂಡಿರಲಿದೆ. ಅದರಂತೆ ಫೋನ್ 12MP IMX386 ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಆನ್‌ಲೈನ್‌ನಲ್ಲಿ ಮಾಹಿತಿ ಬಹಿರಂಗವಾಗಿದೆ. ಜೊತೆಗೆ ಗೂಗಲ್ ಪಿಕ್ಸೆಲ್ 8 ಪ್ರೊ ಮಾದರಿಯು 64MP ಸೋನಿ IMX787 ಸೆನ್ಸಾರ್‌ನೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಇದಲ್ಲದೆ ಈ ಫೋನ್‌ನ ಟೆಲಿಫೋಟೋ ಕ್ಯಾಮೆರಾ 48MP ಸ್ಯಾಮ್‌ಸಂಗ್ GN5 ಸೆನ್ಸಾರ್ ಇರಲಿದೆ ಎಂದು ಹೇಳಲಾಗಿದೆ. ಇದರಿಂದ 5x ಆಪ್ಟಿಕಲ್ ಜೂಮ್‌ವರೆಗೆ ಶೂಟ್ ಮಾಡಬಹುದು ಎಂದು ಹೇಳಲಾಗಿದೆ. ಇನ್ನು 11ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ 3J1 ಫ್ರಂಟ್ ಕ್ಯಾಮೆರಾ ಸೆನ್ಸಾರ್ ಇರುತ್ತದೆ ಎನ್ನಲಾಗಿದೆ.
ಗೂಗಲ್ ಪಿಕ್ಸೆಲ್ 8 ಸರಣಿ ಸ್ಮಾರ್ಟ್‌ಫೋನ್‌ಗಳಲ್ಲಿ ಪಿಕ್ಸೆಲ್ 8 ಪ್ರೊ ಮಾದರಿಯ ಅಡ್ವಾನ್ಸ್ಡ್ ಟೈಂ-ಆಫ್-ಫ್ಲೈಟ್ ಸೆನ್ಸಾರ್ ಹೊಂದಿರಲಿದೆ ಎಂದು ವರದಿಯಾಗಿದೆ. ಇದು ವೇಗವಾಗಿ ಆಟೋಫೋಕಸ್‌ಗೆ ಕಾರಣವಾಗುತ್ತದೆ. ಅಲ್ಲದೆ, 8 ಪ್ರೊ ಹಿಂಭಾಗದ ಕ್ಯಾಮೆರಾ ಸೆನ್ಸಾರ್‌ಗಳ ಪಕ್ಕದಲ್ಲಿ ಹೊಸ ಥರ್ಮಾಮೀಟರ್ ಅನ್ನು ಸಹ ಅಳವಡಿಸಲಾಗಿದೆ. ಇದು ಕ್ಯಾಮೆರಾ ಅಥವಾ ತಾಪಮಾನವನ್ನು ಅಳೆಯುವ ಕೆಲಸ ಮಾಡಲಿದೆ.

ಈ ಸ್ಮಾರ್ಟ್‌ಫೋನ್‌ನ ಕ್ಯಾಂಎರಾ ಕೇಂದ್ರಿತ ಸಾಫ್ಟ್‌ವೇರ್ ಅಪ್ಡೇಟ್ ವಿಚಾರಗಳಿಗೆ ಸಂಬಂಧಿಸಿದಂತೆ ಇದರಲ್ಲಿ ''ಸೆಗ್ಮೆಂಟೇಶನ್ AWB" ಫೀಚರ್ಸ್ ಅನ್ನು ನೀಡಲಾಗಿದೆ. ಈ ಫೀಚರ್ಸ್ AI ಅನ್ನು ಬಳಸಿಕೊಂಡು ದೃಶ್ಯವನ್ನು ವಿವಿಧ ಭಾಗಗಳಾಗಿ ವಿಭಜಿಸುವ ಕಾರ್ಯಮಾಡಲಿದೆ. ನಂತರ ಚಿತ್ರದ ನಿರ್ದಿಷ್ಟ ಭಾಗಗಳಿಗೆ ವಿಭಿನ್ನ ಸ್ಟೋರೇಜ್‌ನಲ್ಲಿ ಆಯ್ಕೆಮಾಡುವ ಕಾರ್ಯ ಮಾಡಲಿದೆ.
ಇನ್ನು ಸ್ಮಾರ್ಟ್‌ಫೋನಿನ "ಅಡಾಪ್ಟಿವ್ ಟಾರ್ಚ್" ಎನ್ನುವುದು ಹೊಸ ಫೀಚರ್ಸ್ ಆಗಿದೆ. ಇದು ವಿಶ್ಯುಯಲ್ ಮತ್ತು ಇತರ ಇನ್‌ಪುಟ್‌ಗಳ ಆಧಾರದ ಮೇಲೆ ಫ್ಲ್ಯಾಷ್ ತೀವ್ರತೆಯನ್ನು ಕ್ರಿಯಾತ್ಮಕವಾಗಿ ಸರಿಹೊಂದಿಸುತ್ತದೆ. ಅಲ್ಲದೆ ಸಿನಿಮೀಯ ಮೋಡ್‌ಗಾಗಿ ವೀಡಿಯೊ ಬೊಕೆ ಬ್ಲರ್ ಲೆವೆಲ್ ಆಯ್ಕೆಯನ್ನು ಕೂಡ ಸೇರಿಸಬಹುದಾಗಿದೆ. ಸದ್ಯ ಈ ಮಾಹಿತಿಯು ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಮಾಹಿತಿಗೆ ಸಂಬಂಧಿಸಿದೆ.


Click it and Unblock the Notifications








