ಸ್ವಾತಂತ್ರೋತ್ಸವದ ಗಿಫ್ಟ್.. ಆಗಸ್ಟ್ 13ರಂದು Googleನ ಹೊಸ ಫೋನ್, ವಾಚ್ ಲಾಂಚ್: ಮಸ್ತ್ ಫೀಚರ್!
ಗೂಗಲ್ ಪಿಕ್ಸಲ್ ಫೋನ್ ಮತ್ತು ವಾಚ್ ಖರೀದಿಗೆ ಎದುರು ನೋಡುತ್ತಿರುವ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ಗೂಗಲ್ ಸಜ್ಜಾಗಿದೆ. ಹೌದು, ಗೂಗಲ್ ಪಿಕ್ಸೆಲ್ 9 ಸರಣಿ ಮತ್ತು ಪಿಕ್ಸೆಲ್ ವಾಚ್ 3 ಖರೀದಿಗೆ ಅದೆಷ್ಟೋ ಜನರು ಕಾದು ಕುಳಿತಿದ್ದಾರೆ. ಈ ನೂತನ ಮೊಬೈಲ್ ಮತ್ತು ವಾಚ್ ಆಗಸ್ಟ್ 13ರಂದು ಗ್ರಾಹಕರ ಕೈ ಸೇರಲಿದೆ. ಈ ಫೋನ್ ಮತ್ತು ವಾಚ್ ಅನ್ನು ಗ್ರಾಹಕರು ತನ್ನ ಜೇಬಿಗೆ ಹೊರ ಆಗದಂತೆ ಖರೀದಿಸಬಹುದು. ಗೂಗಲ್ ಪಿಕ್ಸೆಲ್ 9 ಸರಣಿಯಲ್ಲಿ ಹೊಸತೇನಿದೆ? ಮತ್ತು ಲಭ್ಯತೆ ಬಗ್ಗೆ ತಿಳಿಯೋಣ ಬನ್ನಿ.
ಗೂಗಲ್ ಕಂಪನಿಯ ಪಿಕ್ಸೆಲ್ ವಾಚ್ 3 ಮತ್ತು ಪಿಕ್ಸೆಲ್ 9 ಸರಣಿಯ ಸ್ಮಾರ್ಟ್‌ಫೋನ್ ಬಗ್ಗೆ ಮೊಬೈಲ್ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಇದೆ. ಈಗಾಗಲೇ ಫೋನ್ ಬಗ್ಗೆ ಕೆಲವು ಮಾಹಿತಿಗಳು ಲೀಕ್ ಆಗಿವೆ. ಈ ಮಧ್ಯೆಯೇ ಗೂಗಲ್ ಪಿಕ್ಸೆಲ್ ವಾಚ್ 3 ವಿನ್ಯಾಸ ಸೋರಿಕೆಯಾಗಿದೆ. ಗ್ರಾಹಕರು ಬಿಡುಗಡೆ ದಿನಾಂಕವನ್ನು ಎದುರು ನೋಡುತ್ತಿದ್ದಾರೆ. ಈ ಸ್ಮಾರ್ಟ್‌ವಾಚ್ ಮತ್ತು ಫೋನ್ ಪ್ರಮುಖ ಫೀಚರ್ಸ್‌ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಆಗಸ್ಟ್ 13, 2024 ರಂದು ಪಿಕ್ಸೆಲ್ 9 ಸರಣಿ ಮತ್ತು ಪಿಕ್ಸೆಲ್ ವಾಚ್ 3 ಅನ್ನು ಅನಾವರಣಗೊಳಿಸುವುದಾಗಿ Google ಘೋಷಿಸಿದೆ. ಈ ಪ್ರಕಟಣೆಯಂತೆ ಅಕ್ಟೋಬರ್ ತಿಂಗಳ ಬಿಡುಗಡೆ ವೇಳಾಪಟ್ಟಿಗಿಂತ ಎರಡು ತಿಂಗಳ ಹಿಂದೆ ಬರುತ್ತದೆ. ಈವೆಂಟ್ ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿರುವ Googleನ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ.
Google Pixel 9 ಸರಣಿಯಲ್ಲಿ ಹೊಸತೇನಿದೆ?
ಗೂಗಲ್ ಪಿಕ್ಸೆಲ್ 9 ಶ್ರೇಣಿಯು ನಾಲ್ಕು ಮಾದರಿಗಳನ್ನು ಹೊಂದಿರುತ್ತದೆ. Google Pixel 9, Google Pixel 9 Pro, Google Pixel 9 Pro XL ಮತ್ತು Google Pixel 9 Pro Fold ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಎಲ್ಲಾ ಪಿಕ್ಸೆಲ್ 9 ಮಾದರಿಗಳು ಮುಂದಿನ ಪೀಳಿಗೆಯ Tensor G4 ಪ್ರೊಸೆಸರ್ ಹೊಂದಿರದೆ. ಇದು ಸುಗಮ ಕಾರ್ಯಕ್ಷಮತೆ ಮತ್ತು ಸುಧಾರಿತ AI ಸಾಮರ್ಥ್ಯಗಳನ್ನು ದೃಢಪಡಿಸುತ್ತದೆ. Pixel 9 Pro XL 16GB RAM ನೊಂದಿಗೆ ಬರಬಹುದು.
- Google Pixel 9: ಈ ಮೂಲ ಮಾದರಿಯು 6.03-ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ.
- Google Pixel 9 Pro: ಇದು ಸ್ವಲ್ಪ ದೊಡ್ಡದಾಗಿದೆ. Pixel 9 Pro 6.3-ಇಂಚಿನ ಡಿಸ್ಲ್ಪೇಯೊಂದಿಗೆ ಬರುತ್ತದೆ.
- Google Pixel 9 Pro XL: ಈ ಮೊಬೈಲ್ ಸ್ಟ್ಯಾಂಡರ್ಡ್ ಫೋನ್‌ಗಳಲ್ಲಿ ದೊಡ್ಡದಾಗಿದೆ. Pixel 9 Pro XL 6.7-ಇಂಚಿನ ಡಿಸ್ಪ್ಲೇ ಮತ್ತು 16GB RAM ಅನ್ನು ಹೊಂದಿರುತ್ತದೆ.
- Google Pixel 9 Fold: ಈ ಫೋಲ್ಡಬಲ್ ರೂಪಾಂತರವು 6.4-ಇಂಚಿನ ಹೊರಗಿನ ಡಿಸ್ಲ್ಪೇ ಮತ್ತು 7.9-ಇಂಚಿನ ಒಳಗಿನ ಮಡಿಸಬಹುದಾದ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಹಿಂದಿನ ಪಿಕ್ಸೆಲ್ ಫೋಲ್ಡ್‌ನ 7.6-ಇಂಚಿನ ಒಳಗಿನ ಡಿಸ್ಪ್ಲೇ ಮತ್ತು 5.8-ಇಂಚಿನ ಹೊರಗಿನ ಡಿಸ್ಪ್ಲೇಯಿಂದ ಅಪ್‌ಗ್ರೇಡ್ ಆಗಿದೆ.
ಗೂಗಲ್ ಪಿಕ್ಸೆಲ್ ವಾಚ್ 3 ನಿರೀಕ್ಷಿತ ಫೀಚರ್‌ಗಳು
Google Pixel Watch 3 ಈ ಹಿಂದೆ ಲಾಂಚ್ ಆಗಿರುವ ವಾಚ್‌ಗಳಲ್ಲಿ ಕಂಡುಬರುವ 1.2-ಇಂಚಿನ ಡಿಸ್ಲ್ಪೇ ಗಾತ್ರವನ್ನು ಹೊಂದಿರುವ ನಿರೀಕ್ಷೆಯಿದೆ. ಹೊಸ ಸೇರ್ಪಡೆ ಎಂದರೆ, ಪಿಕ್ಸೆಲ್ ವಾಚ್ 3 XL , ದೊಡ್ಡ 1.45-ಇಂಚಿನ ಡಿಸ್ಪ್ಲೇ ಮತ್ತು ದಪ್ಪವಾದ ಬಾಡಿಯನ್ನು 45mm x 45mm x 13.89mm ಅಳತೆಯನ್ನು ಹೊಂದಿರುತ್ತದೆ. ಎರಡೂ ಮಾದರಿಗಳು ದೊಡ್ಡ ಬ್ಯಾಟರಿ ಮತ್ತು ಪಿಂಗಾಣಿಯಂತಹ (Porcelain) ಹೊಸ ಬಣ್ಣದ ಆಯ್ಕೆಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.

307mAh ಬೊಂಬಾಟ್ ಬ್ಯಾಟರಿ
ಗೂಗಲ್ ಪಿಕ್ಸೆಲ್ ವಾಚ್ 3ಯು ಪಿಕ್ಸೆಲ್ ವಾಚ್ 2 (40.79x40.73x14 ಮಿಮೀ) ಗಿಂತ ಸ್ವಲ್ಪ ದಪ್ಪವಾಗಿರುತ್ತದೆ. ಈ ದಪ್ಪ ಹೆಚ್ಚಳಕ್ಕೆ ಕಾರಣ ಪಿಕ್ಸೆಲ್ ವಾಚ್ 3 ಸ್ವಲ್ಪ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ. ಪಿಕ್ಸೆಲ್ ವಾಚ್ 3 DEKRA ಮತ್ತು ಸೇಫ್ಟಿ ಕೊರಿಯಾ ವೆಬ್‌ಸೈಟ್‌ನಲ್ಲಿ ಗುರುತಿಸಲಾಗಿದ್ದು, ಇದು 3 307mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯವನ್ನು ಹೊಂದಿರಬಹುದು. ಈ ಪಿಕ್ಸೆಲ್ ವಾಚ್ 2 ನಲ್ಲಿನ 304mAh ಬ್ಯಾಟರಿಗಿಂತ ಸ್ವಲ್ಪ ದೊಡ್ಡದಾಗಿರಲಿದೆ ಎಂದು ಹೇಳಲಾಗುತ್ತಿದೆ.
ಲಾಂಚ್ ಈವೆಂಟ್ ವೀಕ್ಷಿಸುವುದು ಹೇಗೆ?
ಪಿಕ್ಸೆಲ್ 9 ಸರಣಿಯ ಲಾಂಚ್ ಈವೆಂಟ್ 10 am PT (10:30 pm IST) ಕ್ಕೆ ಪ್ರಾರಂಭವಾಗುತ್ತದೆ. YouTube ಮತ್ತು Google Store ವೆಬ್‌ಸೈಟ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.
Pixel 9 ಸರಣಿಯ ಲಭ್ಯತೆ
Google Pixel 9 ಸರಣಿಯು US ನಲ್ಲಿ ಆಗಸ್ಟ್ 13 ರಂದು ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆಗಸ್ಟ್ 14 ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ ಎಂದು Google ಇಂಡಿಯಾ ಎಕ್ಸ್ (ಹಿಂದಿನ ಪೋಸ್ಟ್) ನಲ್ಲಿ ದೃಢಪಡಿಸಿದೆ.


Click it and Unblock the Notifications








