Google Pixel 9 Launch Event: ಇಂದು ಹೊಸ ಫೋನ್, ವಾಚ್ ಬಿಡುಗಡೆ: ಇಲ್ಲಿ ಲೈವ್ ವೀಕ್ಷಿಸಿ
ಪ್ರಸಿದ್ಧ ಸ್ಮಾರ್ಟ್‌ಫೋನ್ ಕಂಪನಿಯಾಗಿರುವ ಗೂಗಲ್ (Google) ಮಾರುಕಟ್ಟೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಗೂಗಲ್ ಬಿಡುಗಡೆ ಮಾಡಿರುವಂತಹ ಸಾಧನಗಳು ಎಲ್ಲ ಪ್ರೀಮಿಯಂ ಸಾಧನಗಳಾಗಿದೆ. ಗೂಗಲ್ ಕಂಪನಿ ಈವರೆಗೆ ತನ್ನ ಸರಣಿಯಲ್ಲಿ ಬಹಳಷ್ಟು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದೀಗ, ತನ್ನ ಹೊಸ ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಗೂಗಲ್ ಪಿಕ್ಸೆಲ್ 9 ಸರಣಿ (Google Pixel 9), ಪಿಕ್ಸೆಲ್ ವಾಚ್ 3, ಪಿಕ್ಸೆಲ್ ಬಡ್ಸ್ ಪ್ರೊ 2 ಇಂದು ಬಿಡುಗಡೆಯಾಗುತ್ತಿದೆ. ಸಮಾರಂಭ ಯಾವಾಗ ಪ್ರಾರಂಭ? ಮತ್ತು ಲೈವ್ ಆಗಿ ವೀಕ್ಷಿಸುವುದು ಹೇಗೆ? ಎನ್ನುವುದನ್ನು ತಿಳಿಯೋಣ ಬನ್ನಿ.
ಹೌದು, ಗೂಗಲ್ ಇಂದು ತನ್ನ 'ಮೇಡ್ ಬೈ ಗೂಗಲ್' ಈವೆಂಟ್‌ನಲ್ಲಿ ಹೊಸ ಪಿಕ್ಸೆಲ್ 9 ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ. ಇದು 4 ಹೊಸ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರಬಹುದು. ಅವುಗಳೆಂದರೆ, Google Pixel 9, Google Pixel 9 Pro, Google Pixel 9 Pro XL ಮತ್ತು Google Pixel 9 Pro ಫೋಲ್ಡ್. ಜೊತೆಗೆ, ಗೂಗಲ್ ಪಿಕ್ಸೆಲ್ ವಾಚ್ 3, ಪಿಕ್ಸೆಲ್ ಬಡ್ಸ್ ಪ್ರೊ 2 ಸಹ ಲಾಂಚ್ ಆಗಲಿದೆ.

Google Pixel 9 ಲಾಂಚ್ ಈವೆಂಟ್: ಸಮಯ, ಲೈವ್ ವೀಕ್ಷಣೆ
ಕ್ಯಾಲಿಫೋರ್ನಿಯಾದಲ್ಲಿ ಇಂದು (ಆಗಸ್ಟ್ 13) ಮೇಡ್ ಬೈ ಗೂಗಲ್ ಈವೆಂಟ್‌ನಲ್ಲಿ ಪಿಕ್ಸೆಲ್ 9 ಸರಣಿಯನ್ನು ಅನಾವರಣಗೊಳಿಸಲಾಗುವುದು. ಭಾರತೀಯ ಕಾಲಮಾನದ ಪ್ರಕಾರ, ಈ ಕಾರ್ಯಕ್ರಮ ರಾತ್ರಿ 10:30 ರಿಂದ ಪ್ರಾರಂಭವಾಗುತ್ತದೆ. ಇದನ್ನು ಗೂಗಲ್‌ನ ಅಧಿಕೃತ ಯುಟ್ಯೂಬ್ ಚಾನೆಲ್ ಮತ್ತು ವೆಬ್‌ಸೈಟ್ ಮೂಲಕ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಕೆಳಗಿನ ಲಿಂಕ್ ಮೂಲಕ ನೀವು ಸಮಾರಂಭವನ್ನು ವೀಕ್ಷಿಸಬಹುದು.
Google Pixel 9 ಸರಣಿ
- Google Pixel 9
- Google Pixel 9 Pro
- Google Pixel 9 Pro XL
- Google Pixel 9 Pro Fold
ಗೂಗಲ್ ಪಿಕ್ಸೆಲ್ 9 ಸರಣಿಯು ಅತ್ಯಂತ ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಿರಲಿದೆ. ಇದು 6.3 ಇಂಚಿನ ಡಿಸ್ಲ್ಪೇಯನ್ನು ಹೊಂದಿರಲಿದೆ. ಇದರಲ್ಲಿ, ಹಿಂದಿನ ಪ್ಯಾನೆಲ್‌ನಲ್ಲಿ ಡ್ಯುಯಲ್ ರಿಯಲ್ ಕ್ಯಾಮೆರಾ ಸೆಟಪ್ ಕಂಡುಬರಲಿದೆ. ಇದಲ್ಲದೆ ಗೂಗಲ್ ಪಿಕ್ಸೆಲ್ 9 ಪ್ರೊನಲ್ಲಿ 6.3 ಇಂಚಿನ ಡಿಸ್ಪ್ಲೇಯನ್ನು ಸಹ ಕಾಣಬಹುದು. ಇದು ಹಿಂದಿನ ಪ್ಯಾನೆಲ್‌ನಲ್ಲಿ ಟ್ರಿಪಲ್ ರಿಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ.
ಆದರೆ, ಪಿಕ್ಸೆಲ್ 9 ಪ್ರೊ XL 6.8 ಇಂಚಿನ ದೊಡ್ಡ ಡಿಸ್ಲ್ಪೇಯನ್ನು ಹೊಂದಿರಲಿದೆ. ಇದು ಈವರೆಗಿನ ಅತಿದೊಡ್ಡ ನಾನ್-ಫೋಲ್ಡಿಂಗ್ ಸ್ಮಾರ್ಟ್‌ಫೋನ್ ಆಗಿದೆ. ಇದು ದೊಡ್ಡ ಬ್ಯಾಟರಿ ಬ್ಯಾಕಪ್ ಸಹ ಹೊಂದಿರುತ್ತದೆ. ಇದರ ಹಲವು ಫೀಚರ್ಸ್‌ಗಳು ಗೂಗಲ್ ಪಿಕ್ಸೆಲ್ 9 ಪ್ರೋ ನಂತೆಯೇ ಇರುತ್ತವೆ.
Google Pixel 9 Pro Fold ಕೂಡ ಬಿಡುಗಡೆ
ಕಂಪನಿಯು ಗೂಗಲ್ ಪಿಕ್ಸೆಲ್ 9 ಪ್ರೊ ಫೋಲ್ಡ್ ಅನ್ನು ಸಹ ಬಿಡುಗಡೆ ಮಾಡಬಹುದು. ಇದು ಕಂಪನಿಯ ಇತ್ತೀಚಿನ ಮತ್ತು ಸುಧಾರಿತ ಫೋಲ್ಡಬಲ್ ಫೋನ್ ಆಗಿರುತ್ತದೆ. ಗೂಗಲ್ ಪಿಕ್ಸೆಲ್ 9 ಪ್ರೊ XL ನಂತಹ ಫೀಚರ್ಸ್‌ಗಳನ್ನು ಇದರಲ್ಲಿ ಕಾಣಬಹುದು. ಇದು 8 ಇಂಚಿನ ಪ್ರಾಥಮಿಕ ಡಿಸ್ಲ್ಪೇಯನ್ನು ಮತ್ತು 6.3 ಇಂಚಿನ ಕವರ್ ಡಿಸ್ಪ್ಲೇಯನ್ನು ಹೊಂದಿರಲಿದೆ.
ಕ್ಯಾಮೆರಾ ಸೆಟಪ್
ಗೂಗಲ್ ಪಿಕ್ಸೆಲ್ 9 ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಲಭ್ಯವಿರುತ್ತದೆ. ಇದು 50MP ವೈಡ್ ಆಂಗಲ್ ಮತ್ತು 48 MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ನ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುತ್ತದೆ. ಗೂಗಲ್ ಪಿಕ್ಸೆಲ್ 9
ಪ್ರೊ ಮತ್ತು ಗೂಗಲ್ ಪಿಕ್ಸೆಲ್ 9 ಪ್ರೊ XL 48 MP ಟೆಲಿಫೋಟೋ ಹೆಚ್ಚುವರಿ ಪಡೆಯುತ್ತದೆ. ಗೂಗಲ್ ಸ್ಟೋರ್‌ನಲ್ಲಿ ಪಟ್ಟಿ ಮಾಡಲಾದ ವಿವರಗಳ ಪ್ರಕಾರ, ಕಂಪನಿಯು ಕ್ಯಾಪ್ಸುಲ್ ವಿನ್ಯಾಸದಲ್ಲಿ ಕ್ಯಾಮೆರಾ ಬಂಪ್ ಅಳವಡಿಸಿದೆ.
ಟೆನ್ಸರ್ ಜಿ4 ಪ್ರೊಸೆಸರ್ ಬಳಕೆ
ಗೂಗಲ್ ಪಿಕ್ಸೆಲ್ 9 ಸರಣಿಯಲ್ಲಿ ಬಿಡುಗಡೆಯಾದ ಎಲ್ಲಾ ನಾಲ್ಕು ಸಾಧನಗಳಲ್ಲಿ ಟೆನ್ಸರ್ ಜಿ4 ಚಿಪ್‌ಸೆಟ್ ಅನ್ನು ಬಳಸಲಾಗುತ್ತದೆ. ಗೂಗಲ್‌ನ 8GB RAM ಅನ್ನು ಅಳವಡಿಸಲಾಗುವುದು. ಆದರೆ, ಇತರ ಸಾಧನಗಳು 16GB RAM ಅನ್ನು ಒಳಗೊಂಡಿರಬಹುದು.
ಇಂದೇ ಗೂಗಲ್ ಪಿಕ್ಸೆಲ್ ವಾಚ್ 3 ಲಾಂಚ್
ಗೂಗಲ್ ಪಿಕ್ಸೆಲ್ ವಾಚ್ 3ನ ಡಿಸೈನ್ ಬಗ್ಗೆ ಹೇಳುವುದಾದರೆ, ಅನೇಕ ಸಣ್ಣ ಅಪ್ಡೇಟ್‌ಗಳನ್ನು ಕಾಣಬಹುದು. ಈ ಬಾರಿ ಹೊಸ ಚಿಪ್ ಮತ್ತು ಬ್ಯಾಟರಿ ಬಾಳಿಕೆ ಸುಧಾರಿಸಬಹುದು. ಇಂದು ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ವಾಚ್‌ನಲ್ಲಿ ಆರೋಗ್ಯ ಮತ್ತು ಫಿಟ್‌ನೆಸ್ ಸಂಬಂಧಿತ ಹಲವು ಫೀಚರ್ಸ್‌ಗಳನ್ನು ಕಾಣಬಹುದು. ಇದು 41mm ಮತ್ತು 45mm ಎರಡು ಗಾತ್ರಗಳೊಂದಿಗೆ ಬರವಹುದು.
ಆಂಡ್ರಾಯ್ಡ್ ಅಥಾರಿಟಿಯ ವರದಿಗಳ ಪ್ರಕಾರ, ಗೂಗಲ್ ಪಿಕ್ಸೆಲ್ 9 ಸರಣಿಯಲ್ಲಿ ಹೊಸ ಫೀಚರ್ಸ್ ಅನ್ನು ಕಾಣಬಹುದು. ಅದನ್ನು 'ಆಡ್ ಮಿ' ಎಂದು ಹೆಸರಿಸಲಾಗುತ್ತದೆ. ಇದರ ಸಹಾಯದಿಂದ, ನೀವು ಫೋಟೋವನ್ನು ತೆಗೆದುಕೊಂಡ ನಂತರವೂ ಬೇರೆಯವರನ್ನು ಸೇರಿಸಲು ಸಾಧ್ಯವಾಗುತ್ತದೆ. ಹೆಚ್ಚುವರಿಯಾಗಿ, ಗೂಗಲ್ ಪಿಕ್ಸೆಲ್ ಸ್ಟುಡಿಯೋವನ್ನು ಸಹ ಪರಿಚಯಿಸಲಾಗುವುದು. ಇದು ಎಐ (AI) ಇಮೇಜ್ ಜನರೇಷನ್ ಸಾಧನವಾಗಿದೆ.
ಗೂಗಲ್ ಪಿಕ್ಸೆಲ್ 9 ಸರಣಿಯ ಲಭ್ಯತೆ
Google Pixel 9 ಸರಣಿಯು US ನಲ್ಲಿ ಆಗಸ್ಟ್ 13 ರಂದು ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆಗಸ್ಟ್ 14 ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ ಎಂದು Google ಇಂಡಿಯಾ ಎಕ್ಸ್ (ಹಿಂದಿನ ಪೋಸ್ಟ್) ನಲ್ಲಿ ದೃಢಪಡಿಸಿದೆ.


Click it and Unblock the Notifications








