Home
ಸುದ್ದಿಜಾಲ

Google Pixel 9, Pixel 9 Pro XL ಪ್ರೀ ಬುಕಿಂಗ್ ಆರಂಭ: ಡಿಸ್ಕೌಂಟ್ ಎಷ್ಟು?

ಟೆಕ್ ದೈತ್ಯ ಗೂಗಲ್ ತನ್ನ ಬಹು ನಿರೀಕ್ಷಿತ ಗೂಗಲ್ ಪಿಕ್ಸೆಲ್ 9 (Google Pixel 9) ಸರಣಿಯನ್ನು ಬಿಡುಗಡೆ ಮಾಡಿದೆ. ಪಿಕ್ಸೆಲ್ 9 ಸರಣಿಯಲ್ಲಿ Pixel 9, Pixel 9 Pro, Pixel 9 Pro XL ಮತ್ತು Pixel 9 Pro ಫೋಲ್ಡ್ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆ ಲಭಿಸಿದೆ. ಅಂದಹಾಗೆ, ಇಂದಿನಿಂದ ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳ ಮುಂಗಡ ಬುಕ್ಕಿಂಗ್‌ ಪ್ರಾರಂಭವಾಗಿದೆ. ಇದರ ಬೆಲೆ ಮತ್ತು ಲಭ್ಯವಿರುವ ಬ್ಯಾಂಕ್ ಆಫರ್‌ಗಳು ಮತ್ತು ಡಿಸ್ಕೌಂಟ್‌ಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ನೀವು ಗೂಗಲ್‌ ಕಂಪನಿಯ ಈ ಹೊಸ ಫೋನನ್ನು ಖರೀದಿಸಲು ಬಯಸಿದರೆ, ಇದು ನಿಮಗೆ ಸೂಕ್ತವಾದ ಸಮಯವಾಗಿದೆ. ಇಂದಿನಿಂದ, ಗೂಗಲ್ ಪ್ರಿಯರು ಫ್ಲಿಪ್‌ಕಾರ್ಟ್‌ನಲ್ಲಿ ಪ್ರತ್ಯೇಕವಾಗಿ ಪಿಕ್ಸೆಲ್ 9 ಸರಣಿಯನ್ನು ಮುಂಗಡವಾಗಿ ಬುಕಿಂಗ್ ಮಾಡಬಹುದು. ಈ ಫೋನ್‌ಗಳ ಖರೀದಿ ಮೇಲೆ ವಿಶೇಷ ಬ್ಯಾಂಕ್ ರಿಯಾಯಿತಿಗಳು, ಎಕ್ಸ್‌ಚೇಂಜ್ ಆಫರ್‌ಗಳು ಮತ್ತು ನೋ ಕಾಸ್ಟ್ EMI ಸೌಲಭ್ಯ ಪಡೆಯಬಹುದು.

Google Pixel 9, Pixel 9 Pro XL ಪ್ರೀ ಬುಕಿಂಗ್ ಆರಂಭ: ಡಿಸ್ಕೌಂಟ್ ಎಷ್ಟು?

ಗೂಗಲ್ ಪಿಕ್ಸೆಲ್ 9 (Google Pixel 9) ಮತ್ತು ಗೂಗಲ್ ಪಿಕ್ಸೆಲ್ ಪ್ರೊ XL (Google Pixel 9 Pro XL) ಫೋನ್‌ಗಳು ಮಾತ್ರ ಮುಂಗಡ ಆರ್ಡರ್‌ಗಳಿಗೆ ಲಭ್ಯವಿದೆ. ಆದರೆ, Pixel 9 Pro ಮತ್ತು Pixel 9 Pro ಫೋಲ್ಡ್ ಮುಂಬರುವ ದಿನಗಳಲ್ಲಿ ಖರೀದಗೆ ಲಭ್ಯವಿರುತ್ತದೆ. Flipkart ಸಹ ಈ ಫೋನಿನ ಮುಂಗಡ ಬುಕಿಂಗ್ ಮೇಲೆ ಆಫರ್‌ ನೀಡುತ್ತಿದೆ. ಈ ಮೂಲಕ ಗ್ರಾಹಕರು ಹೊಸ ಗೂಗಲ್ ಫ್ಲ್ಯಾಗ್‌ಶಿಪ್ ಫೋನ್‌ಗಳನ್ನು ಆಕರ್ಷಕ ಬೆಲೆಯಲ್ಲಿ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.

ಗೂಗಲ್ ಪಿಕ್ಸೆಲ್ 9 ಪ್ರೀ ಬುಕಿಂಗ್

ಗೂಗಲ್ ಪಿಕ್ಸೆಲ್ 9 ಮತ್ತು ಗೂಗಲ್ ಪಿಕ್ಸೆಲ್ ಪ್ರೊ XL ಫೋನಿನ ಮುಂಗಡ ಬುಕ್ಕಿಂಗ್ ಈಗಾಗಲೇ (ಆಗಸ್ಟ್ 14 ಮಧ್ಯಾಹ್ನ 12 ಗಂಟೆಗೆ) ಪ್ರಾರಂಭವಾಗಿದೆ. ಗೂಗಲ್ ಪಿಕ್ಸೆಲ್ 9 ಫೋನ್ 12GB ಮತ್ತು 256GB ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಿದೆ. ಇದರ ಬೆಲೆ 79,999 ರೂ. ಆಗಿದೆ.

ನೀವು ಫ್ಲಿಪ್‌ಕಾರ್ಟ್ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ನಾನ್-ಇಎಂಐ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಿಂದ ಇಎಂಐ ವಹಿವಾಟುಗಳ ಮೇಲೆ 4,000 ರೂ.ಗಳ ಡಿಸ್ಕೌಂಟ್ ಪಡೆಯಬಹುದು. ಮತ್ತು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ನೀಡುತ್ತಿದೆ. ನೀವು 6,667 ರೂ.ಗಳ ಮಾಸಿಕ ನೋ ಕಾಸ್ಟ್ ಇಎಂಐ ಜೊತೆಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ 1,000 ರೂ. ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು.

ಗೂಗಲ್ ಪಿಕ್ಸೆಲ್ ಪ್ರೊ XL ಪ್ರೀ ಬುಕಿಂಗ್

ಗೂಗಲ್ ಪಿಕ್ಸೆಲ್ ಪ್ರೊ XL ಫೋನ್ ಬೆಲೆ 1,39,999 ರೂ. ಇದೆ. ಈ ಫೋನಿನ ಖರೀದಿ ಮೇಲೆ ಹಲವು ಡಿಸ್ಕೌಂಟ್ ಮತ್ತು ಬ್ಯಾಂಕ್ ಆಫರ್‌ಗಳನ್ನು ನೀಡಲಾಗುತ್ತದೆ. ನೀವು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಇಎಂಐ ಅಲ್ಲದ ಮತ್ತು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಇಎಂಐ ವಹಿವಾಟುಗಳೊಂದಿಗೆ ಈ ಆಫರ್‌ಗಳನ್ನು ಪಡೆಯಬಹುದು. ಇದಲ್ಲದೇ, ಫ್ಲಿಪ್‌ಕಾರ್ಟ್ 11,667 ರೂ.ಗಳ ಮಾಸಿಕ ಇಎಂಐಯೊಂದಿಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ 2,000 ರೂ.ಗಳ ಡಿಸ್ಕೌಂಟ್ ನೀಡುತ್ತಿದೆ.

ಗೂಗಲ್ ಪಿಕ್ಸೆಲ್ 9 ಫೀಚರ್ಸ್‌

ಈ ಪೋನ್ 6.3 ಇಂಚಿನ ಸೂಪರ್ ಆಕ್ಟುವಾ ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 1080x2424 ರೆಸಲ್ಯೂಶನ್, 2700 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಹೊಂದಿದೆ. ಇದು ಟೆನ್ಸರ್ ಜಿ4 ಪ್ರೊಸೆಸರ್‌, 12GB RAM, 256GB ಸ್ಟೋರೇಜ್‌ ಒಳಗೊಂಡಿದೆ. ಇದರಲ್ಲಿ 50MP ಪ್ರಾಥಮಿಕ (OIS), 48MP ಅಲ್ಟ್ರಾ-ವೈಡ್ ಮತ್ತು 10.5MP ಫ್ರಂಟ್ ಕ್ಯಾಮೆರಾ ಇದೆ. 4700mAh ಬ್ಯಾಟರಿ ಮತ್ತು 45W ಚಾರ್ಜಿಂಗ್ ಸೌಲಭ್ಯವಿದೆ.

ಗೂಗಲ್ ಪಿಕ್ಸೆಲ್ ಪ್ರೊ XL ಫೀಚರ್ಸ್‌

ಇದು 6.8 ಇಂಚಿನ ಸೂಪರ್ ಆಕ್ಟುವಾ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್, 1344x2992 ರೆಸಲ್ಯೂಶನ್, 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಹೊಂದಿದೆ. ಇದು ಟೆನ್ಸರ್ ಜಿ4 ಪ್ರೊಸೆಸರ್‌,16GB RAM, 256GB ಮತ್ತು 512GB ಸ್ಟೋರೇಜ್‌ ಒಳಗೊಂಡಿದೆ. ಇದರಲ್ಲಿ 50MP ಪ್ರಾಥಮಿಕ (OIS), 48MP ಅಲ್ಟ್ರಾ-ವೈಡ್, 48MP ಟೆಲಿಫೋಟೋ(OIS) ಮತ್ತು 42MP ಫ್ರಂಟ್ ಕ್ಯಾಮೆರಾ ಇದೆ. 5060mAh ಬ್ಯಾಟರಿ ಮತ್ತು 45W ಚಾರ್ಜಿಂಗ್ ಸೌಲಭ್ಯವಿದೆ.

Best Mobiles in India

English summary
Google Pixel 9 Series Pre-booking Starts on Flipkart: Check Price, Offers, Discounts and more Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+