Google: ಧೂಳೆಬ್ಬಿಸಲು ಬರ್ತಿದೆ ದೈತ್ಯ ಫೋನ್! ಬೆಲೆ, ಫೀಚರ್ಸ್ ಲೀಕ್.. ಲಾಂಚ್ ಯಾವಾಗ?
ಗೂಗಲ್ (Google) ಕಂಪನಿಯ ಹೊಸ ಮೊಬೈಲ್ ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತಿದೆ. ಈ ಫೋನಿನ ಬಗ್ಗೆ ಸ್ಮಾರ್ಟ್‌ಫೋನ್ ಪ್ರಿಯರು ಸಹ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೌದು, ಗೂಗಲ್ ಪಿಕ್ಸೆಲ್ 9a (Google Pixel 9a) ಅನ್ನು 2025ರ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇನ್ನೂ ಸಾಕಷ್ಟು ಸಮಯ ಉಳಿದಿರುವಾಗಲೇ, ಗೂಗಲ್ ಪಿಕ್ಸೆಲ್ 9a ಫೋನಿನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಈ ಫೋನ್ ಗೂಗಲ್ ಪಿಕ್ಸೆಲ್ 8A ಗಿಂತ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಕಂಪನಿಯು ಗೂಗಲ್ ಪಿಕ್ಸೆಲ್ 9a ಅನ್ನು ಗೂಗಲ್ ಪಿಕ್ಸೆಲ್ 9 ಸರಣಿಯ ಮೊಬೈಲ್‌ಗಳಿಗಿಂತ ಮತ್ತಷ್ಟು ಭಿನ್ನವಾಗಿ ಪರಿಚಯಿಸಲಿದೆ. ಈಗಾಗಲೇ ಗೂಗಲ್ ಪಿಕ್ಸೆಲ್ 9a ಬೆಲೆ ಸೋರಿಕೆಯಾಗಿದೆ. ವರದಿಯ ಪ್ರಕಾರ, ಗೂಗಲ್ ಪಿಕ್ಸೆಲ್ 9a ಬೆಲೆ ಅಂದಾಜು 41,938.95 ರೂ. ($499) ಆಗಿರಲಿದೆ. ಇದು ಗೂಗಲ್ ಪಿಕ್ಸೆಲ್ 8a ಬೆಲೆಯಂತೆಯೇ ಇರುತ್ತದೆ. ಗೂಗಲ್ ಪಿಕ್ಸೆಲ್ 8a ಫೋನಿನ 8+128GB ರೂಪಾಂತರವನ್ನು ಭಾರತದಲ್ಲಿ 52,999 ರೂ.ಗೆ ಪರಿಚಯಿಸಲಾಗಿತ್ತು. ಮತ್ತು ಫೋನಿನ 8+256GB ರೂಪಾಂತರವನ್ನು 59,999 ರೂ.ಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಗೂಗಲ್ ಪಿಕ್ಸೆಲ್ 9a ವೈಶಿಷ್ಟ್ಯಗಳು (ಸೋರಿಕೆ)
ಡಿಸ್ಪ್ಲೇ ವಿವರ
ಗೂಗಲ್ ಪಿಕ್ಸೆಲ್ 9a ಮೊಬೈಲ್ 6.3 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಗೂಗಲ್ ಪಿಕ್ಸೆಲ್ 8a ಫೋನಿಗಿಂತ 0.2 ಇಂಚು ದೊಡ್ಡದಾಗಿದೆ. ಫೋನ್ ಗೂಗಲ್ ಪಿಕ್ಸೆಲ್ 9 ಮತ್ತು ಗೂಗಲ್ ಪಿಕ್ಸೆಲ್ 9 ಪ್ರೊ ಅನ್ನು ಹೋಲುತ್ತದೆ. ಡಿಸ್ಪ್ಲೇಯು 60-120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಗೂಗಲ್ ಪಿಕ್ಸೆಲ್ 9a ಅನ್ನು Tensor G4 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಇದು ಗೂಗಲ್ ಪಿಕ್ಸೆಲ್ 9 ಫೋನ್‌ಗಳಂತೆಯೇ ಪ್ರೊಸೆಸರ್ ಹೊಂದಿರಲಿದೆ. ಈ ಮೊಬೈಲ್ 8GB RAM ಮತ್ತು 128, 256GB ಸ್ಟೋರೇಜ್ ಒಳಗೊಂಡಿರಲಿದೆ. ಗೂಗಲ್ ಪಿಕ್ಸೆಲ್ 8a ಮತ್ತು ಗೂಗಲ್ ಪಿಕ್ಸೆಲ್ 9 ಫೋನಿನಂತೆಯೇ ಇರಲಿದೆ.
ಕ್ಯಾಮೆರಾ ಸೆಟಪ್
ಮುಂಬರುವ ಹೊಸ ಮೊಬೈಲ್ ಗೂಗಲ್ ಪಿಕ್ಸೆಲ್ ಪ್ರೊ ಫೋಲ್ಡ್ ನಂತೆಯೇ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದು 48 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುತ್ತದೆ ಎಂದು ಹೇಳಲಾಗಿದೆ. ಆದರೆ, ಗೂಗಲ್ ಪಿಕ್ಸೆಲ್ 8a ಮೊಬೈಲ್ 64 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಮಾಹಿತಿಯ ಪ್ರಕಾರ, ಗೂಗಲ್ ಪಿಕ್ಸೆಲ್ 9a ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು ಗೂಗಲ್ ಪಿಕ್ಸೆಲ್ 8a ಫೋನಿನ 4,492mAh ಬ್ಯಾಟರಿಗಿಂತ ಶೇ.11.31 ರಷ್ಟು ಹೆಚ್ಚಿರಲಿದೆ. ನೀವು, ಉತ್ತಮ ಬ್ಯಾಟರಿ ಬ್ಯಾಕಪ್ ಪಡೆಯಬಹುದು ಎಂದು ಹೇಳಲಾಗಿದೆ. ಗೂಗಲ್ ಪಿಕ್ಸೆಲ್ ಪ್ರೊ XL ಇನ್ನೂ ದೊಡ್ಡದಾದ 5,060mAh ಬ್ಯಾಟರಿಯನ್ನು ಹೊಂದಿದೆ. ಈ ಪೋನ್ 18W ವೈರ್ಡ್ ಮತ್ತು 7.5W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ. ಇದು ಕಂಪನಿಯ ದೊಡ್ಡ ಮಾದರಿಗಳಿಗಿಂತ ಚಿಕ್ಕದಾಗಿ ಕಾಣುತ್ತದೆ.
ಇತರೆ ವೈಶಿಷ್ಟ್ಯಗಳು
ಗೂಗಲ್ ಪಿಕ್ಸೆಲ್ 9a ಫೋನ್ ದೊಡ್ಡ ಡಿಸ್ಪ್ಲೇ ಹೊರತಾಗಿಯೂ, ಗೂಗಲ್ ಪಿಕ್ಸೆಲ್ 8a ಮೊಬೈಲ್‌ಗಿಂದ ಹೆಚ್ಚು ಭಿನ್ನವಾಗಿರಬಹುದು. ಇದು 8.9 ಎಂಎಂ ದಪ್ಪ ಮತ್ತು ತೂಕದಲ್ಲಿ 2 ಗ್ರಾಂ (186g) ಹಗುರವಾಗಿರುತ್ತದೆ. ಇದು ಗೂಗಲ್ ಪಿಕ್ಸೆಲ್ ಸರಣಿಯ ಇತರೆ ಫೋನ್‌ಗಳಂತೆ IP68 ರೇಟಿಂಗ್ ಅನ್ನು ಪಡೆದಿರಲಿದೆ. ಗೂಗಲ್ ಪಿಕ್ಸೆಲ್ 8a ಮೊಬೈಲ್ IP67 ರೇಟಿಂಗ್ ಅನ್ನು ಹೊಂದಿದೆ. ಈ ಮೊಬೈಲ್ 1.5 ಮೀಟರ್ ಆಳದ ನೀರಿನಲ್ಲಿ 30 ನಿಮಿಷಗಳವರೆಗೆ ಇದ್ದರೂ ಏನು ಆಗುವುದಿಲ್ಲ.


Click it and Unblock the Notifications








