Home
ಸುದ್ದಿಜಾಲ

Google: ಏ.16ಕ್ಕೆ ಫಸ್ಟ್ ಸೇಲ್.. 3000 ಕ್ಯಾಶ್‌ಬ್ಯಾಕ್.. ಲಕ್ಷುರಿ ಫೀಚರ್ಸ್‌.. ಬೆಲೆ ಎಷ್ಟು ಗೊತ್ತಾ?

ಟೆಕ್ ದೈತ್ಯ ಗೂಗಲ್ ಇತ್ತೀಚೆಗೆ ಹೊಸ ಮೊಬೈಲ್ ಪರಿಚಯಿಸಿದೆ. ಇದು ಗೂಗಲ್ ಪಿಕ್ಸೆಲ್ 9 ಸರಣಿಯ ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಿದೆ. ಹೌದು, ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 9a (Google Pixel 9a) ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಯಾಗಿದೆ. ಅಂದಹಾಗೆ, ಈ ನೂತನ ಮೊಬೈಲ್ ಏಪ್ರಿಲ್ 16 ರಂದು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಬನ್ನಿ, ಈ ಫೋನಿನ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಗೂಗಲ್ ಪಿಕ್ಸೆಲ್ 9a ಫೋನ್ ಈ ಹಿಂದೆ ಬಿಡುಗಡೆಯಾಗಿದ್ದ ಮಾದರಿಗಳನ್ನು ಹೋಲುತ್ತದೆ. ಆದರೂ, ಇತ್ತೀಚಿನ ವಿಭಿನ್ನ ವಿನ್ಯಾಸದೊಂದಿಗೆ ಬರುತ್ತದೆ. ವಿಶೇಷವೆಂದರೆ, ಕಂಪನಿಯು ಈ ಫೋನಿನ ಕ್ಯಾಮೆರಾ ಮಾಡ್ಯೂಲ್ ಬದಲಾಯಿಸಲಾಗಿದೆ. ಇದು ಗೂಗಲ್ ಟೆನ್ಸರ್ G4 ಪ್ರೊಸೆಸರ್ ಹೊಂದಿದೆ. ಹಾಗೆಯೇ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಈ ಸ್ಮಾರ್ಟ್‌ಫೋನ್ 6.3 ಇಂಚಿನ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 5,100mAh ಸಾಮರ್ಥ್ಯದ ಬ್ಯಾಟರಿಮತ್ತು 33W ವೈರ್ಡ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಏ.16ಕ್ಕೆ Google Pixel 9a ಸೇಲ್.. 3000 ರಿಯಾಯಿತಿ.. ಬೆಲೆ, ವಿಶೇಷತೆಗಳೇನು?

ಗೂಗಲ್ ಪಿಕ್ಸೆಲ್ 9a ಬೆಲೆ ಮತ್ತು ಆಫರ್

ಗೂಗಲ್ ಪಿಕ್ಸೆಲ್ 9a 8GB RAM + 128GB ಸ್ಟೋರೇಜ್ ರೂಪಾಂತರದಲ್ಲಿ ಮಾರಾಟವಾಗಲಿದೆ. ಈ ಫೋನಿನ ಬೆಲೆ 49,999 ರೂ. ಆಗಿದೆ. ಈ ಮೊಬೈಲ್ ಮೂರು ಬಣ್ಣಗಳ ಆಯ್ಕೆಯಲ್ಲಿ ಬರುತ್ತದೆ. ನೀವು ಅಬ್ಸಿಡಿಯನ್, ಪಿಂಗಾಣಿ ಮತ್ತು ಐರಿಸ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. ನೀವು ಏಪ್ರಿಲ್ 16 ರಿಂದ ಫ್ಲಿಪ್‌ಕಾರ್ಟ್ ಮತ್ತು ಇತರೆಚಿಲ್ಲರೆ ಪಾಲುದಾರರ ಮೂಲಕ ಪಿಕ್ಸೆಲ್ 9a ಅನ್ನು ಖರೀದಿಸಬಹುದು.

ಕಂಪನಿಯು ಗೂಗಲ್ ಪಿಕ್ಸೆಲ್ 9a ಖರೀದಿಯ ಮೇಲೆ ಕೆಲವು ಆಫರ್ ಘೋಷಿಸಿದೆ. ನೀವು 3,000 ರೂ.ಗಳ ಕ್ಯಾಶ್‌ಬ್ಯಾಕ್ (ಸೀಮಿತ ಅವಧಿ) ಆಫರ್ ಪಡೆಯಬಹುದು. ಇದಲ್ಲದೆ, 24 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆಯ ಪ್ರಯೋಜನ ಪಡೆಯಬಹುದು. ಇದು ಎಚ್‌ಡಿಎಫ್‌ಸಿ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್ ಮತ್ತು ಬಜಾಜ್ ಫಿನ್‌ಸರ್ವ್ ಸೇರಿದಂತೆ ಆಯ್ದ ಬ್ಯಾಂಕಿಂಗ್ ಮೇಲೆ ಲಭ್ಯವಿದೆ.

ಗೂಗಲ್ ಪಿಕ್ಸೆಲ್ 9a ವೈಶಿಷ್ಟ್ಯಗಳು

ಗೂಗಲ್ ಪಿಕ್ಸೆಲ್ 9a ಫೋನ್ 6.3 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 2,424 × 1,080 ಪಿಕ್ಸೆಲ್‌ ರೆಸಲ್ಯೂಶನ್‌ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, ಎಚ್‌ಡಿಆರ್ ಬೆಂಬಲ, 1800 ನಿಟ್ಸ್‌ ಎಚ್‌ಡಿಆರ್ ಮತ್ತು 2,700 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಈ ಮೊಬೈಲ್ ಗೂಗಲ್ ಟೆನ್ಸರ್ G4 ಪ್ರೊಸೆಸರ್ ಹೊಂದಿದೆ. ಇದನ್ನು ಟೈಟಾನ್ M2 ಭದ್ರತಾ ಪ್ರೊಸೆಸರ್ ಜೊತೆಗೆ ಚಿಪ್‌ನೊಂದಿಗೆ ಜೋಡಿಸಲಾಗಿದೆ. ಇದು ಆಂಡ್ರಾಯ್ಡ್‌ 15 ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ. ಏಳು ವರ್ಷಗಳ ಓಎಸ್, ಭದ್ರತೆ ಮತ್ತು ಪಿಕ್ಸೆಲ್ ಡ್ರಾಪ್ ನವೀಕರಣಗಳೊಂದಿಗೆ ಬರುತ್ತದೆ.

ಗೂಗಲ್ ಪಿಕ್ಸೆಲ್ 9a ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದು OIS ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ 13 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್‌ಫೋನ್ 8x ವರೆಗೆ ಸೂಪರ್ ರೆಸಲ್ಯೂಷನ್ ಜೂಮ್, 0.5 ನಲ್ಲಿ ಆಪ್ಟಿಕಲ್ ಗುಣಮಟ್ಟ, 4K ವಿಡಿಯೋ ರೆಕಾರ್ಡಿಂಗ್‌ನೊಂದಿಗೆ ಬರುತ್ತದೆ.

ಗೂಗಲ್ ಪಿಕ್ಸೆಲ್ 9a ಮೊಬೈಲ್ 5,100mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ವೈರ್ಡ್ ಮತ್ತು 7.5W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಗೂಗಲ್ ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಹಾಗೆಯೇ ಸ್ಟೀರಿಯೊ ಸ್ಪೀಕರ್‌ಗಳು, ಕಾರು ಅಪಘಾತ ಪತ್ತೆ ವೈಶಿಷ್ಟ್ಯಗ ಒಳಗೊಂಡಿದೆ. ಇದರೊಂದಿಗೆ ವೈ-ಫೈ 6E, ಎನ್‌ಎಫ್‌ಸಿ ಮತ್ತು eSIM ಬೆಂಬಲವನ್ನು ಸಹ ಪಡೆದಿದೆ.

Best Mobiles in India

English summary
Google Pixel 9a Will Go on Sale in India from April 16 via Flipkart: Check Price, offers and Specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+